Connect with us

ದೇಶ

ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನಿಡುವುದು ಶುಭದಾಯಕ ಗೊತ್ತೇ?

Published

on

ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನಿಡುವುದು ಶುಭದಾಯಕ ಗೊತ್ತೇ
ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನಿಡುವುದು ಶುಭದಾಯಕ ಗೊತ್ತೇ

ಕರ್ಪೂರದ ಬಳಕೆ ಭಾರತೀಯರಲ್ಲಿ ಸಾಮಾನ್ಯ. ಕರ್ಪೂರದ ಪರಿಮಳ ಆಘ್ರಾಣಿಸಿದರೆ ಸಾಕು ನಮ್ಮಲ್ಲಿ ದೈವಿಕ ಭಾವ, ಭಕ್ತಿ ಒಳಗಿನಿಂದ ಜಾಗೃತವಾಗುತ್ತದೆ. ದೇವರಿಗೆ ಆರತಿ ಮಾಡುವಾಗ ಕರ್ಪೂರದಲ್ಲಿ ಮಾಡುತ್ತೇವೆ. ಇಂತಹ ಕರ್ಪೂರ ನಕಾರಾತ್ಮಕ ಶಕ್ತಿಯನ್ನು ದೂರ ಇರಿಸಿ ಸಕಾರಾತ್ಮಕತೆಯನ್ನು ಪಸರಿಸುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲ, ಕರ್ಪೂರವೆಂದರೆ ಶುಭದಾಯಕ ಎಂಬ ಅಗಾಧ ನಂಬಿಕೆಯೂ ಹಿಂದಿನಿಂದಲೇ ಬೆಳೆದು ಬಂದಿದೆ. ಹೀಗಾಗಿಯೇ ಹಲವರು, ದೇವರ ಕೋಣೆಯಲ್ಲಿ ಅಷ್ಟೇ ಅಲ್ಲ, ಮನೆಯ ಹಲವು ಜಾಗಗಳಲ್ಲಿ ಕರ್ಪೂರವನ್ನು ಇಡುವ ರೂಢಿ ಮಾಡಿಕೊಂಡಿರುತ್ತಾರೆ. ಹಾಗಾದರೆ ಬನ್ನಿ, ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನು ಇಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ ಎಂಬುದನ್ನು ನೋಡೋಣ.

ಕರ್ಪೂರವನ್ನಿಡಲು ಪ್ರಶಸ್ತವಾದ ಸ್ಥಳ ಎಂದರೆ ಅದು ಪೂಜೆ ಮಾಡುವ ಕೋಣೆ. ನಿಮ್ಮ ಮನೆಯಲ್ಲೊಂದು ಪೂಜೆ, ಧ್ಯಾನದ ಕೋಣೆ ಇದ್ದರೆ, ಅಲ್ಲಿ ಪುಡಿ ಮಾಡಿದ ಕರ್ಪೂರವನ್ನು ಇಟ್ಟುಕೊಳ್ಳುವುದು ಶುಭದಾಯಕ ಎಂದು ನಂಬಲಾಗುತ್ತದೆ. ನೀವು ಪೂಜೆಯ ಸಂದರ್ಭ ಇದನ್ನು ಹೊತ್ತಿಸಿಕೊಳ್ಳಬಹುದು, ಅಥವಾ ಶುಭ ಸಂದರ್ಭಗಳಲ್ಲಿಯೂ ಕರ್ಪೂರದ ದೀಪ ಹಚ್ಚಬಹುದು.

  1. ಕೆಲವು ಮಂದಿ ಪುಡಿ ಮಾಡಿದ ಕರ್ಪೂರವನ್ನು ತಮ್ಮ ಕಾರಿನಲ್ಲಿ ಅಥವಾ ತಾವು ಓಡಾಡುವ ವಾಹನದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇದರರ್ಥ ಪ್ರಯಾಣ ಶುಭವಾಗಲಿ ಹಾಗೂ ಎಲ್ಲನಕಾರಾತ್ಮಕ ಶಕ್ತಿಯನ್ನು ಕರ್ಪೂರವು ಹೀರಿಕೊಳ್ಳಲಿ ಎಂದು.
  2. ಕೆಲವರು ತಮ್ಮ ಸ್ನಾನದ ಮನೆ ಅಥವಾ ಬಾತ್ರೂಂನಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಸದಾ ತಾಜಾ ಗಾಳಿ ಸೂಸುತ್ತಿರಲು ಹಾಗೂ ಎಲ್ಲ ಕೆಟ್ಟ ವಾಸನೆಯನ್ನು ಕರ್ಪೂರವು ಹೀರಿಕೊಂಡು ಆ ಕೋಣೆಯನ್ನು ಉತ್ತಮ ಪರಿಮಳದಾಯಕವನ್ನಾಗಿ ಪರಿವರ್ತಿಸಲು ಕರ್ಪೂರದ ಮೊರೆ ಹೋಗುತ್ತಾರೆ.
  3. ಅಡುಗೆ ಮನೆ ಎಂದರೆ ಮನೆಯೊಂದರ ಹೃದಯ ಭಾಗವಿದ್ದಂತೆ. ನಮಗೆ ನಿತ್ಯವೂ ಬೇಕಾಗುವ ಆಹಾರ ತಯಾರಾಗುವುದೇ ಅಡುಗೆ ಮನೆಯಲ್ಲಿ. ಹಾಗಾಗಿ ಎಲ್ಲ ಕೋಣೆಗಳಿಗಿಂತ ಹೆಚ್ಚು ಮಹತ್ವ ನಾವು ಅಡುಗೆ ಕೋಣೆಗೆ ನೀಡುತ್ತೇವೆ. ಕೆಲವು ಮಂದಿ ಹೀಗಾಗಿ ಕರ್ಪೂರವನ್ನು ಅಡುಗೆ ಕೋಣೆಯಲ್ಲಿಡಲು ಬಯಸುತ್ತಾರೆ. ಯಾಕೆಂದರೆ, ತಾವು ಮಾಡುವ ಅಡುಗೆಯ ಮೂಲಕ ಸಕಾರಾತ್ಮಕ ಪರಿಣಾಮಗಳು ಆಗಲಿ ಎಂಬ ಉದ್ದೇಶ ಇಲ್ಲಿ ಅಡಗಿದೆ. ಆದರೆ ಸೇಫ್ ಆಗಿ ಬೆಂಕಿ ಇರುವೆಡೆಯಿಂದ ದೂರದಲ್ಲಿಡಲು ಮರೆಯಬೇಡಿ.
  4. ನಿಮ್ಮ ಮನೆಯಲ್ಲಿ ಓದಿಗಾಗಿ ಅಂತಲೇ ಒಂದು ಕೋಣೆ ಇದ್ದರೆ ಅಲ್ಲಿಯೂ ಇಡಬಹುದು. ಒಳ್ಳೆಯ ವಿದ್ಯೆ ತಲೆಗೆ ಹತ್ತಲು, ಏಕಾಗ್ರತೆಗೆ ಹಾಗೂ ಶ್ರದ್ಧೆಗಾಗಿ ಕರ್ಪೂರವನ್ನು ಓದಿನ ಕೋಣೆಯಲ್ಲೂ ಇಡಬಹುದು.
  5. ಮಕ್ಕಳ ಕೋಣೆಯಲ್ಲಿಯೂ ಇಡುವುದು ಒಳ್ಳೆಯದನ್ನೇ ತರುತ್ತದೆ. ಮಕ್ಕಳ ಮೇಲಾಗುವ ನಕಾರಾತ್ಮಕ ಪ್ರಭಾವಗಳನ್ನು ಇದು ದೂರ ಇರಿಸಿ ಮಕ್ಕಳನ್ನು ಆರೋಗ್ಯವಾಗಿರಿಸುತ್ತದೆ ಎಂಬ ನಂಬಿಕೆಯಿದೆ.
  6. ಮನೆಯ ದ್ವಾರದಲ್ಲಿಯೂ ಕರ್ಪೂರ ಇಡುವ ಕ್ರಮವಿದೆ. ಮನೆಗೆ ಕೆಟ್ಟ ಶಕ್ತಿಗಳು ಪ್ರವೇಶಿಸದೆ, ಮನೆಯಲ್ಲಿ ಒಳ್ಳೆಯ ಸಕಾರಾತ್ಮಕ ಬೆಳವಣಿಗೆ ಆಗುತ್ತಿರಲಿ ಎಂಬುದು ಇದರ ಆಶಯ.
  7. ಬಾಲ್ಕನಿಯಲ್ಲೇ ಪುಟಾಣಿ ಗಾರ್ಡನ್ ಇದ್ದರೆ, ಅಥವಾ ಮನೆಯೊಳಗೆ ಪಾಟ್ಗಳಲ್ಲಿ ಗಿಡಗಳನ್ನಿಟ್ಟಿದ್ದರೆ, ಅವುಗಳ ಬೇರಿನ ಸಮೀಪವೂ ಈ ಕರ್ಪೂರವನ್ನಿಡಬಹುದು. ಇದು ಶುಭವಷ್ಟೇ ಅಲ್ಲ, ಗಿಡಗಳಿಗೆ ನೈಸರ್ಗಿಕ ಫಲವತ್ತತೆಯನ್ನೂ ನೀಡುತ್ತದೆ.
Continue Reading

ದೇಶ

Indian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!

Published

on

By

ಭಾರತದಲ್ಲಿ ಮದುವೆ ಎಂದರೆ ಸಂಭ್ರಮ, ಸಂಪ್ರದಾಯ ಮತ್ತು ಅದ್ಧೂರಿತನದ ಮಿಶ್ರಣ. ಇತ್ತೀಚಿನ ದಿನಗಳಲ್ಲಿ ನವ ಜೋಡಿಗಳು ತಮ್ಮ ವಿವಾಹವನ್ನು ವಿಭಿನ್ನವಾಗಿ ಆಚರಿಸಲು ಹೊಸ ಹೊಸ ಆಲೋಚನೆಗಳನ್ನು ಪ್ರಯತ್ನಿಸುತ್ತಿದ್ದಾರೆ. ಇದೀಗ ಅಂತಹದೇ ಒಂದು ವಿಶಿಷ್ಟ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಮಾರ್ವಾಡಿ ಕುಟುಂಬವೊಂದು Indian Railways ಸೇವೆಯನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡು ಮದುವೆ ಸಂಭ್ರಮವನ್ನು ಆಚರಿಸಿದೆ. ಸಾಮಾನ್ಯವಾಗಿ ಮದುವೆಗಾಗಿ ಬಸ್ ಅಥವಾ ಖಾಸಗಿ ವಾಹನಗಳನ್ನು ಬಳಸುವ ಬದಲು, ಈ ಕುಟುಂಬವು ರೈಲ್ವೆಯ Full Tariff Rate ಯೋಜನೆಯಡಿ ಇಡೀ ಕೋಚ್‌ನ್ನು ಕಾಯ್ದಿರಿಸಿದೆ.

ವೈರಲ್ ವಿಡಿಯೋದಲ್ಲಿ ವಧು-ವರರ ಕುಟುಂಬ ರೈಲ್ವೆ ನಿಲ್ದಾಣದಲ್ಲಿ ಸೇರಿ ಮೊದಲಿಗೆ ಕೇಕ್ ಕತ್ತರಿಸಿ ಸಂಭ್ರಮ ಆರಂಭಿಸುತ್ತದೆ. ಬಳಿಕ ರೈಲನ್ನು ತಳಿರು ತೋರಣ ಮತ್ತು ಹೂಗಳಿಂದ ಅಲಂಕರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ರೈಲಿನೊಳಗೆ ಮನೆಮಾತಿನಂತೆ ಆರಾಮದಾಯಕ ವ್ಯವಸ್ಥೆ ಮಾಡಿದ್ದು, ನೀರಿನ ಬಾಟಲಿ, ಬಾಳೆ ಎಲೆ, ಹೊಸ ಬಟ್ಟೆಗಳನ್ನು ಸಹ ಸಾಗಿಸಲಾಗಿದೆ.

ಹೆಣ್ಣು-ಗಂಡಿನ ಬಂಧುಗಳು ಸಾಲು ಸಾಲಾಗಿ ಕುಳಿತು ಸಂಭ್ರಮಿಸುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, “ಮಾರ್ವಾಡಿ ಮದುವೆ ಎಂದರೆ ಹೀಗಿರುತ್ತದೆ” ಎಂಬ ಶೀರ್ಷಿಕೆಯಲ್ಲಿ ಹಂಚಲಾಗಿದೆ.

ಈ ಹೊಸ ಐಡಿಯಾವನ್ನು ಹಲವರು ಶ್ಲಾಘಿಸಿದ್ದು, ಕಡಿಮೆ ವೆಚ್ಚದಲ್ಲಿ ಸುಲಭ ಪ್ರಯಾಣಕ್ಕೆ ಇದು ಉತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾರ್ವಜನಿಕ ಸಾರಿಗೆಯನ್ನು ಹೀಗೆ ಬಳಸುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.

Continue Reading

ದೇಶ

ಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್‌ಗಳಿಗೆ ಶಾಕ್

Published

on

By

ಗದಗ ಜಿಲ್ಲೆಯ ಮುದ್ರಣ ಉದ್ಯಮದ ಮೇಲೆ ಜಾಗತಿಕ ಬೆಳವಣಿಗೆಗಳ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದ್ದು, Iran War ಕರಿನೆರಳು ಮುದ್ರಣಕಾಶಿಯ ಮೇಲೂ ಆವರಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಪ್ರಿಂಟಿಂಗ್ ಪ್ರೆಸ್‌ಗಳು ಹಾಗೂ ಪ್ರಕಾಶಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ನೂರಾರು ಪ್ರಿಂಟಿಂಗ್ ಪ್ರೆಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕಾಗದ, ಇಂಕ್, ಪ್ಲೇಟ್ ಸೇರಿದಂತೆ ಅನೇಕ Petroleum Products ಆಧಾರಿತ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಉತ್ಪಾದನಾ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ಈಗಾಗಲೇ ಕಚ್ಚಾ ವಸ್ತುಗಳ ಮೇಲೆ GST ಶೇ.18ರಷ್ಟು ವಿಧಿಸಿರುವುದರಿಂದ ಸಂಕಷ್ಟದಲ್ಲಿದ್ದ ಮುದ್ರಣ ಕ್ಷೇತ್ರಕ್ಕೆ ಯುದ್ಧದ ಪರಿಣಾಮ ಮತ್ತಷ್ಟು ಹೊಡೆತ ನೀಡಿದೆ. ಒಂದು ಕ್ವಿಂಟಾಲ್ ಕಾಗದಕ್ಕೆ 8ರಿಂದ 10 ಸಾವಿರ ರೂಪಾಯಿ ಹೆಚ್ಚಳವಾಗಿದ್ದು, ಮುಂಗಡ ಬುಕ್ಕಿಂಗ್ ಮಾಡಿದರೂ ಸರಕು ವಿತರಣೆಯಲ್ಲಿ ವಿಳಂಬ ಉಂಟಾಗಿದೆ.

ಪಂಚಾಂಗ, ಕ್ಯಾಲೆಂಡರ್ ಹಾಗೂ ಪಠ್ಯಪುಸ್ತಕ ಮುದ್ರಣ ಮಾಡುವ ಪ್ರೆಸ್‌ಗಳಿಗೆ ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಕಚ್ಚಾವಸ್ತುಗಳ ಬೆಲೆ ಶೇ.20ರಿಂದ 40ರ ವರೆಗೆ ಏರಿಕೆಯಾಗಿದೆ.

ಮುದ್ರಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿನಿತ್ ಕುಮಾರ್ ಅವರ ಪ್ರಕಾರ, “ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿದರೆ ಮಾತ್ರ ಉದ್ಯಮ ಉಳಿಯುತ್ತದೆ, ಇಲ್ಲವಾದರೆ ಬಂದ್ ಭೀತಿ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.

ಮಧ್ಯಪ್ರಾಚ್ಯದಿಂದ ಆಮದಾಗುವ ಕಚ್ಚಾ ವಸ್ತುಗಳ ಕೊರತೆಯೊಂದಿಗೆ, ಕೂಲಿ ಕಾರ್ಮಿಕರಿಗೆ ಕೆಲಸವೂ ಕಡಿಮೆಯಾಗಿದ್ದು, ಮುದ್ರಣ ಉದ್ಯಮದಲ್ಲಿ ಭಾರೀ ಅನಿಶ್ಚಿತತೆ ಮೂಡಿದೆ.

Continue Reading

ದೇಶ

“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್‌ ಟಾಂಗ್‌, ದಾವಣಗೆರೆ ರಾಜಕೀಯ ಕುತೂಹಲ

Published

on

By

ದಾವಣಗೆರೆ ದಕ್ಷಿಣ ಉಪಚುನಾವಣೆ ರಾಜಕೀಯ ಕಣ ದಿನೇದಿನೇ ರಂಗೇರುತ್ತಿದ್ದು, ಸಚಿವ ಜಮೀರ್‌ ಅಹ್ಮದ್‌ ಖಾನ್ ಅವರ ಆಗಮನದಿಂದ ಹೊಸ ತಿರುವು ಪಡೆದುಕೊಂಡಿದೆ. ಹಲವು ದಿನಗಳಿಂದ ಮುಂದುವರಿದಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಅವರು ಕೊನೆಗೂ ದಾವಣಗೆರೆಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ.

ಟಿಕೆಟ್‌ ಹಂಚಿಕೆ ವೇಳೆ ಉಂಟಾದ ಗಲಾಟೆ ಸಂದರ್ಭದಲ್ಲಿ ಎಸ್‌ಎಸ್‌ ಮಲ್ಲಿಕಾರ್ಜುನ್ ಅವರು “ಯಾರ್ರಿ ಜಮೀರ್‌ ದಾವಣಗೆರೆ ಬಗ್ಗೆ ಮಾತನಾಡಲು” ಎಂದು ಹೇಳಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಜಮೀರ್‌ ಅಸಮಾಧಾನಗೊಂಡಿದ್ದರು.

ಆದರೆ ಇದೀಗ ರಾಜಕೀಯ ವಾತಾವರಣ ಬದಲಾಗಿದ್ದು, ಜಮೀರ್‌ ಅವರನ್ನು ಸ್ವತಃ ಮಲ್ಲಿಕಾರ್ಜುನ್‌ ಅವರು ಸ್ವಾಗತಿಸಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್‌, “ನಾವಿಬ್ಬರೂ ಸ್ನೇಹಿತರು. ಯಾವುದೇ ಬೇಸರ ಇಲ್ಲ. ಸಿಟ್ಟಿನಲ್ಲಿ ಹೇಳಿದ ಮಾತು ಅಷ್ಟೇ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಅವರು ಪರೋಕ್ಷವಾಗಿ ಟಾಂಗ್ ಕೊಡುತ್ತಾ, “ನನ್ನ ಕ್ಷೇತ್ರ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನು ಸುಮ್ಮನೆ ಇರ್ತಿನಾ?” ಎಂದು ಪ್ರತಿಕ್ರಿಯೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್‌, “ಈಗ ಎಲ್ಲವೂ ಬಗೆಹರಿದಿದೆ. ನಾವು ಬಹಳ ವರ್ಷಗಳಿಂದ ಸ್ನೇಹಿತರು,” ಎಂದು ಹೇಳಿದರು.

ಈ ಬೆಳವಣಿಗೆ ದಾವಣಗೆರೆ ರಾಜಕೀಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದಂತೆ ಕಾಣುತ್ತಿದೆ.

Continue Reading

Trending