Connect with us

ಆರೋಗ್ಯ

ಅಂತರ ಜಿಲ್ಲಾ ಹಂದಿ ಸಂಚಾರ ಸಂಪೂರ್ಣ ನಿಷೇಧ! ಜಾರಿಯಲ್ಲಿರುವ ಹೊಸ ಆದೇಶ

ಗುವಾಹಟಿ (ಅಸ್ಸಾಂ): ಅಸ್ಸಾಂ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ (ASF) ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಅಂತರ ಜಿಲ್ಲೆ ಹಂದಿ ಸಾಗಾಟಕ್ಕೆ ತಕ್ಷಣದಿಂದಲೇ ನಿಷೇಧ ವಿಧಿಸುವ ಆದೇಶ ಹೊರಡಿಸಿದೆ.

ಪಶುಸಂಗೋಪನಾ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಏಳು ಜಿಲ್ಲೆಗಳಲ್ಲಿ ಜ್ವರದ ಪ್ರಮಾಣ ಅತ್ಯಧಿಕವಾಗಿದ್ದು, ಹಂದಿಗಳ ಮಾರಾಟಕ್ಕೂ ನಿಷೇಧ ಜಾರಿಯಲ್ಲಿರಲಿದೆ. ಧೇಮಾಜಿ, ಕಮ್ರೂಪ್, ಲಖಿಂಪುರ, ಶಿವಸಾಗರ್, ದರ್ರಾಂಗ್, ಜೋರ್ಹತ್ ಮತ್ತು ದಿಬ್ರುಗಢ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಆಫ್ರಿಕನ್ ಹಂದಿ ಜ್ವರವು ಶೇ.100 ಕ್ಕೆ ಸಮಾನ ಮರಣ ಪ್ರಮಾಣ ಹೊಂದಿದ್ದು, ಹಂದಿ ಸಾಕಣೆ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಜನವರಿಯಿಂದಲೇ ರಾಜ್ಯಾದ್ಯಂತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಿಗೆ ವೈರಸ್ ಹರಡಿರುವುದು ವರದಿಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಮಾತ್ರವೇ 84 ಸೋಂಕು ಕೇಂದ್ರಗಳನ್ನು ಗುರುತಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ, ಪ್ರಾಣಿಗಳಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 2009ರ ಪ್ರಕಾರ ನಿಷೇಧ ಜಾರಿಗೊಳಿಸಲಾಗಿದೆ.

ಅಲ್ಲದೆ, ಮುಂದಿನ ಸೂಚನೆ ಬರುವವರೆಗೆ ಜೀವಂತ ಹಂದಿಗಳ ಅಂತರ ಜಿಲ್ಲಾ ಸಂಚಾರ ಸಂಪೂರ್ಣ ನಿಷೇಧವಾಗಿರಲಿದೆ ಎನ್ನಲಾಗಿದೆ.

ಕೇರಳದಲ್ಲಿ ಬುಗಿಲೆದ್ದ ಪ್ರಕರಣಗಳು

ಈ ತಿಂಗಳ ಆರಂಭದಲ್ಲಿ ಕೇರಳದ ಕೊಡಂಚೇರಿ ಪ್ರದೇಶದ ಹಂದಿ ಫಾರ್ಮ್‌ನಲ್ಲಿ 37 ಹಂದಿಗಳು ಸಾವಿಗೀಡಾದವು. ಮಾದರಿಗಳನ್ನು ಭೋಪಾಲ್‌ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗ ಸಂಸ್ಥೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಆಫ್ರಿಕನ್ ಹಂದಿ ಜ್ವರವೇ ಸಾವಿಗೆ ಕಾರಣ ಎಂದು ದೃಢಪಟ್ಟಿತು.

ಕೋಯಿಕ್ಕೋಡ್ ಜಿಲ್ಲೆಯಲ್ಲಿ ಹೆಚ್ಚಿನ ಹಂದಿ ಸಾಕಾಣೆ ಪ್ರದೇಶಗಳಿಗೆ ಪಶುಸಂಗೋಪನಾ ಇಲಾಖೆ ಭೇಟಿ ನೀಡಿ, ತುರ್ತು ಮಾರ್ಗಸೂಚಿಗಳನ್ನು ನೀಡಿದೆ.

ಆಫ್ರಿಕನ್ ಹಂದಿ ಜ್ವರವು ಭಾರತದಲ್ಲಿ ಮೊದಲ ಬಾರಿಗೆ 2021ರಲ್ಲಿ ಮಿಜೋರಾಂನಲ್ಲಿ ಕಾಣಿಸಿಕೊಂಡಿತ್ತು. ಇದು ಸಾವಿನ ಪ್ರಮಾಣ ಅತ್ಯಧಿಕವಾಗಿರುವ ಹೆಮೊರಾಜಿಕ್ ವೈರಲ್ ಜ್ವರವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

LIFE STYLE ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ?

ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ನಾವು ಅನೇಕ ಸಣ್ಣ ಅಭ್ಯಾಸಗಳನ್ನು ಗಮನಿಸದೆ ನಿರ್ಲಕ್ಷಿಸುತ್ತೇವೆ. ಅದರಲ್ಲಿ ಪ್ರಮುಖವಾದುದು ನಿಂತುಕೊಂಡು ನೀರು ಕುಡಿಯುವ ಅಭ್ಯಾಸ. ಕಚೇರಿಯಾಗಲಿ, ಮನೆಯಲ್ಲಾಗಲಿ ಅಥವಾ ಹೊರಗಡೆ ಇದ್ದಾಗಲೂ ಜನರು ನಿಂತೆಯೇ ನೀರು ಕುಡಿಯುತ್ತಾರೆ. ಆದರೆ ಈ ಸಣ್ಣ ಅಭ್ಯಾಸವೇ ಭವಿಷ್ಯದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಆಯುರ್ವೇದದ ಎಚ್ಚರಿಕೆ.

ನಾವು ಕುಳಿತುಕೊಂಡು ನೀರು ಕುಡಿದಾಗ ದೇಹವು ಅದನ್ನು ನಿಧಾನವಾಗಿ ಹೀರಿಕೊಳ್ಳಲು ಅವಕಾಶ ದೊರಕುತ್ತದೆ. ಇದರಿಂದ ನೀರು ದೇಹದ ಅಂಗಾಂಗಗಳಿಗೆ ಸಮರ್ಪಕವಾಗಿ ವಿತರಣೆ ಆಗುತ್ತದೆ. ಆದರೆ ನಿಂತುಕೊಂಡು ನೀರು ಕುಡಿಯುವಾಗ ನೀರು ವೇಗವಾಗಿ ಹೊಟ್ಟೆಗೆ ಸೇರುತ್ತದೆ. ಇದರಿಂದ ದೇಹವು ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದೆ, ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ಆಯುರ್ವೇದದ ಪ್ರಕಾರ, ನಿಂತು ನೀರು ಕುಡಿಯುವುದರಿಂದ ದೇಹದ ನೀರಿನ ಸಮತೋಲನ ಹಾಳಾಗುತ್ತದೆ. ಪರಿಣಾಮವಾಗಿ ನೀರು ಕೀಲುಗಳು ಮತ್ತು ಮೊಣಕಾಲುಗಳ ಸುತ್ತ ಸಂಗ್ರಹವಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮೊಣಕಾಲು ನೋವು, ಕೀಲು ಬಿಗಿತ ಮತ್ತು ಸಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇನ್ನೂ, ನಿಂತು ನೀರು ಕುಡಿಯುವುದರಿಂದ ನೀರು ಸರಿಯಾಗಿ ಶೋಧನೆ ಆಗದೆ ನೇರವಾಗಿ ಮೂತ್ರಪಿಂಡಗಳಿಗೆ ತಲುಪುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.

ಜೀರ್ಣಕ್ರಿಯೆ ಹದಗೆಡುವುದರಿಂದ ಗ್ಯಾಸ್, ಆಮ್ಲೀಯತೆ, ಎದೆಯುರಿ, ಮಲಬದ್ಧತೆ ಹಾಗೂ ಹೊಟ್ಟೆ ಭಾರವಾದ ಅನುಭವ ಉಂಟಾಗುತ್ತದೆ. ದೇಹವು ನೀರನ್ನು ಸರಿಯಾಗಿ ಬಳಸಿಕೊಳ್ಳದಾಗ ಶಕ್ತಿ ಕುಂಠಿತವಾಗುತ್ತದೆ ಮತ್ತು ವ್ಯಕ್ತಿಗೆ ನಿರಂತರ ದಣಿವು ಹಾಗೂ ಆಲಸ್ಯ ಕಾಣಿಸಿಕೊಳ್ಳುತ್ತದೆ.

ಆರೋಗ್ಯವಾಗಿರಲು ಬಯಸಿದರೆ ಯಾವಾಗಲೂ ಆರಾಮವಾಗಿ ಕುಳಿತು, ನಿಧಾನವಾಗಿ ನೀರು ಕುಡಿಯಬೇಕು. ತುಂಬಾ ತಣ್ಣನೆಯ ನೀರನ್ನು ತಪ್ಪಿಸಿ, ಕೋಣೆಯ ಉಷ್ಣಾಂಶದ ನೀರನ್ನು ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

Blog

ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ ಯುವಕ ಬಲಿ

ಶಿವಮೊಗ್ಗ, ಜನವರಿ 29: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಸಿ ತೋಟ ಗ್ರಾಮದಲ್ಲಿ ಮಂಗನ ಕಾಯಿಲೆ (KFD – Kyasanur Forest Disease) ಸೋಂಕಿಗೆ ಮತ್ತೊಂದು ಬಲಿ ಬಿದ್ದಿದೆ. 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಸಸಿ ತೋಟ ನಿವಾಸಿ ಕಿಶೋರ್ ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ಅವರಿಗೆ ತೀವ್ರ ಜ್ವರ, ತಲೆನೋವು, ದೇಹದ ನೋವು ಸೇರಿದಂತೆ ಮಂಗನ ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಜ್ವರ ತಗ್ಗದೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.

ರೋಗಲಕ್ಷಣಗಳು ಉಲ್ಬಣಗೊಂಡ ಹಿನ್ನೆಲೆ ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಕಿಶೋರ್ ಚಿಕಿತ್ಸೆಗೇ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಘಟನೆ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ತೀರ್ಥಹಳ್ಳಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮಂಗನ ಕಾಯಿಲೆ ಟಿಕ್‌ (Tick) ಮೂಲಕ ಹರಡುವ ಸೋಂಕಾಗಿರುವುದರಿಂದ ಅರಣ್ಯ ಪ್ರದೇಶಕ್ಕೆ ತೆರಳುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅರಣ್ಯ ಅಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಮತ್ತು ಅರಣ್ಯಕ್ಕೆ ಹೋಗುವ ಕೂಲಿ ಕಾರ್ಮಿಕರು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಜ್ವರ, ತಲೆನೋವು, ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

Continue Reading

ಆರೋಗ್ಯ

EGG HEALTH BENIFITS : ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಏನು ಲಾಭ?

ಆರೋಗ್ಯ ಡೆಸ್ಕ್: ಮೊಟ್ಟೆ (Egg) ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಲಭ್ಯವಿರುವ ಆಹಾರಗಳಲ್ಲಿ ಒಂದಾಗಿದೆ. ಆದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಎಂಬ ಗೊಂದಲ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಅತಿಯಾದ ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ ಸರಿಯಾದ ಪ್ರಮಾಣ ತಿಳಿದುಕೊಳ್ಳುವುದು ಬಹಳ ಮುಖ್ಯ.

ಹಾರ್ವರ್ಡ್ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳೊಂದಿಗೆ ಕಾರ್ಯನಿರ್ವಹಿಸುವ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಅನ್ನು ಹೊಂದಿದ್ದು, ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿವೆ. ಇದರಿಂದ ಸ್ನಾಯುಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಜಿಮ್‌ಗೆ ಹೋಗುವವರಿಗೆ ಇದು ಅತ್ಯುತ್ತಮ ಮತ್ತು ಕಡಿಮೆ ವೆಚ್ಚದ ಆಹಾರವಾಗಿದೆ.

ಡಾ. ಸೇಥಿ ಅವರು ಹಸಿ ಮೊಟ್ಟೆ ಸೇವನೆ ತಪ್ಪಿಸಬೇಕು ಎಂದು ಎಚ್ಚರಿಸಿದ್ದಾರೆ. ಹಸಿ ಮೊಟ್ಟೆಗಳಿಂದ ಸಾಲ್ಮೊನೆಲ್ಲಾ ಸೋಂಕಿನ ಅಪಾಯವಿದ್ದು, ಬೇಯಿಸಿದ ಮೊಟ್ಟೆಗಳಲ್ಲಿ ಇರುವ ಪ್ರೋಟೀನ್ ದೇಹಕ್ಕೆ ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಮೊಟ್ಟೆಗಳು ವಿಟಮಿನ್ ಎ, ಡಿ, ಇ, ಬಿ12 ಹಾಗೂ ಕಬ್ಬಿಣ, ಸೆಲೆನಿಯಮ್, ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣುಗಳ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ವಯಸ್ಸಿನ ಪರಿಣಾಮದಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಸಾಮಾನ್ಯವಾಗಿ, ಪ್ರತಿದಿನ 1 ರಿಂದ 2 ಮೊಟ್ಟೆಗಳನ್ನು ಸೇವಿಸುವುದು ಹೆಚ್ಚಿನ ಜನರಿಗೆ ಸುರಕ್ಷಿತ ಎಂದು ಡಾ. ಸೌರಭ್ ಸೇಥಿ ಹೇಳಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವಿಸಿದರೆ ತೂಕ ನಿಯಂತ್ರಣ, ಹೃದಯ ಆರೋಗ್ಯ ಮತ್ತು ಒಟ್ಟಾರೆ ದೈಹಿಕ ಕ್ಷೇಮಕ್ಕೆ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Continue Reading

Trending