ದೇಶ

ಪ್ರಧಾನಿ ಮೋದಿ:ಜಾತಿ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ!

ಬಿಹಾರ ಸರ್ಕಾರವು ಬಿಡುಗಡೆ ಮಾಡಿರುವ ಜಾತಿ ಗಣತಿಯ ವರದಿ ರಾಜಕೀಯ ವಿವಾದವನ್ನು ಸೃಷ್ಟಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿರವರು ಪ್ರತಿಪಕ್ಷಗಳು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಯಾವುದೇ ಪಕ್ಷ ಅಥವಾ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ್ದಾರೆ.
ಜಾತಿಯ ಹೆಸರಿನಲ್ಲಿ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ.ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಪ್ರಯತ್ನವನ್ನು ಪಾಪ ಎಂದು ಮೋದಿಯವರು ಬಣ್ಣಿಸಿದ್ದಾರೆ. ಕೆಲವರು ದೇಶದ ಪ್ರಗತಿ ಹಾಗೂ ಅಭಿವೃದ್ಧಿಯನ್ನು ದ್ವೇಷಿಸುತ್ತಾರೆ,ಚಿಂತನೆ ಇಲ್ಲದವರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.ಅವರು ಕೇವಲ ತಮ್ಮ ಭವಿಷ್ಯವನ್ನು ಮಾತ್ರ ನೋಡುತ್ತಿದ್ದಾರೆ.
ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆ ನಡೆಸುತ್ತಿದ್ದ ಬಿಹಾರ ಸರ್ಕಾರ ಅಂತಿಮ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ಪ್ರಕಾರ, ಒಟ್ಟು 13,07,25,310 ಜನಸಂಖ್ಯೆ,ಇದ್ದು OBC,EBC,ವರ್ಗದಲ್ಲಿ 63 ಪ್ರತಿಶತದಷ್ಟು ಜನರನ್ನು ಹೊಂದಿದೆ.
ಪ್ರತಿಪಕ್ಷಗಳಿಗೆ ಯಾವುದೇ ಮುಂದಾಲೋಚನೆ, ದೇಶದ ಬಗ್ಗೆ ಚಿಂತನೆಯಾಗಲೀ, ಮಾರ್ಗಸೂಚಿಯಾಗಲೀ ಇಲ್ಲ. ಬಿಜೆಪಿ ನೇತೃತ್ವದಡಿಯಲ್ಲಿ ದೇಶದ ಪ್ರಗತಿಯನ್ನು ಅವರು ಇಷ್ಟಪಡುವುದಿಲ್ಲ, ಜಾಗತಿಕ ವೇದಿಕೆಯಲ್ಲಿ ದೇಶವನ್ನು ಹೊಗಳುವುದು ಅವರಿಗೆ ಇಷ್ಟವಿಲ್ಲ, ಇಡೀ ವಿಶ್ವವೇ ಭಾರತದ ಕೀರ್ತಿಯನ್ನು ಹಾಡಿ ಹೊಗಳುತ್ತಿದೆ ಎಂದು ಹೇಳಿದರು.

Trending

Exit mobile version