Connect with us

ದೇಶ

ಏರೋಬಿಕ್–ಅನರೋಬಿಕ್: ನಿಮ್ಮ ಫಿಟ್ನೆಸ್ ಗುರಿಗೆ ಯಾವುದು ಸೂಕ್ತ?

Published

on

ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಫಿಟ್ ಆಗಬೇಕು, ತೂಕ ಇಳಿಸಬೇಕು, ಹೃದಯ ಬಲಿಷ್ಠವಾಗಿರಬೇಕು ಎಂಬ ಗುರಿ ಹೊಂದಿರುತ್ತಾರೆ. ಆದರೆ ಯಾವ ವ್ಯಾಯಾಮವೇ ಉತ್ತಮ? ಜಿಮ್‌ಗೆ ಹೋಗೋಕ್ಕೆ ಸಮಯವಿಲ್ಲದವರು ಮತ್ತು ಮನೆಯಲ್ಲೇ ವ್ಯಾಯಾಮ ಮಾಡುತ್ತಾ ಫಲ ಕಾಣದವರು ಆಗಾಗ ಗೊಂದಲಕ್ಕೀಡಾಗುತ್ತಾರೆ. ಈ ಪ್ರಶ್ನೆಗೆ ತಜ್ಞರ ಹೇಳಿಕೆಯ ಪ್ರಕಾರ, ಏರೋಬಿಕ್ ಮತ್ತು ಅನರೋಬಿಕ್ ವ್ಯಾಯಾಮಗಳ ಸರಿಯಾದ ಆಯ್ಕೆ ದೇಹದ ಗುರಿ ಸಾಧನೆಗೆ ಮುಖ್ಯ.

ಏರೋಬಿಕ್ ವ್ಯಾಯಾಮಗಳು ಸಾಮಾನ್ಯವಾಗಿ ಕಾರ್ಡಿಯೊ ಎಂಬ ಹೆಸರಿನಿಂದ ಪರಿಚಿತ. ನಡಿಗೆ, ಜಾಗಿಂಗ್, ಈಜು, ಸೈಕ್ಲಿಂಗ್ ಹಾಗೂ ಮಧ್ಯಮ ತೀವ್ರತೆಯ ಫಿಟ್ನೆಸ್ ವ್ಯಾಯಾಮಗಳು ಇದರ ಭಾಗ. ಇವು ದೇಹದ ರಕ್ತಸಂಚರಣೆ ಹೆಚ್ಚಿಸುವುದರಿಂದ ಹೃದಯ, ಶ್ವಾಸಕೋಶ ಹಾಗೂ ಸ್ನಾಯುಗಳ ಸಾಮರ್ಥ್ಯ ವೃದ್ಧಿಸುತ್ತದೆ. ಮಧುಮೇಹಿಗಳು, ಹಿರಿಯರು, ಹೃದಯ ತೊಂದರೆ ಹೊಂದಿರುವರು, ಚಟುವಟಿಕೆ ಹೆಚ್ಚಿಸಿಕೊಳ್ಳಲು ಬಯಸುವರು ಎಲ್ಲರೂ ಸುಲಭವಾಗಿ ಮಾಡಬಹುದು. ರಕ್ತದ ಒತ್ತಡ ನಿಯಂತ್ರಣ, ರೋಗ ನಿರೋಧಕ ಶಕ್ತಿ ಹೆಚ್ಚಳ, ಶ್ವಾಸಕೋಶದ ಸಾಮರ್ಥ್ಯ ಸುಧಾರಣೆ ಹಾಗೂ ನಿಧಾನಗತಿಯಾದರೂ ಖಾಯಂ ತೂಕ ಇಳಿಕೆ ಇದರ ಪ್ರಮುಖ ಲಾಭಗಳು.

ಮತ್ತೊಂದೆಡೆ, ಅನರೋಬಿಕ್ ವ್ಯಾಯಾಮಗಳು ಹೆಚ್ಚು ತೀವ್ರತೆಯ ಚಟುವಟಿಕೆಗಳು. ಸ್ಕಿಪ್ಪಿಂಗ್, ಜಂಪಿಂಗ್, ವೇಟ್ ಟ್ರೈನಿಂಗ್, ಸ್ಪ್ರಿಂಟಿಂಗ್, ಪುಷ್‌ಅಪ್–ಪುಲ್‌ಅಪ್‌ಗಳನ್ನು ಒಳಗೊಂಡಿವೆ. ಇವು ದೇಹದ ಗ್ಲುಕೋಸ್ ಅನ್ನು ಶಕ್ತಿಯಾಗಿ ಪರಿವರ್ತಿಸಿ ಕಡಿಮೆ ಸಮಯದಲ್ಲೇ ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸುತ್ತವೆ. ವೇಗವಾಗಿ ತೂಕ ಇಳಿಸಬೇಕಿರುವವರು, ಸ್ನಾಯುಗಳನ್ನು ಬೆಳೆಸಬೇಕಿರುವವರು, ಕ್ರೀಡಾಪಟುಗಳು ಮತ್ತು ಗಟ್ಟಿ ಫಿಟ್ನೆಸ್ ಗುರಿ ಹೊಂದಿರುವವರಿಗೆ ಅನರೋಬಿಕ್ ಉತ್ತಮ. ಆದರೆ ತೀವ್ರತೆಯಾದ್ದರಿಂದ ವೈದ್ಯರು, ಫಿಸಿಯೊಥೆರಪಿಸ್ಟ್ ಅಥವಾ ಟ್ರೇನರ್ ಮಾರ್ಗದರ್ಶನ ಅಗತ್ಯ, ತಪ್ಪು ವಿಧಾನ ಗಾಯಕ್ಕೆ ಕಾರಣವಾಗಬಹುದು.

ಯಾವ ವ್ಯಾಯಾಮ ಯಾರಿಗೆ?
– ನಿಧಾನವಾಗಿಯಾದರೂ ಶಾಶ್ವತ ತೂಕ ಇಳಿಕೆ ಬಯಸುವವರಿಗೆ: ಏರೋಬಿಕ್
– ವೇಗವಾಗಿ ತೂಕ ಇಳಿಸಿ ಸ್ನಾಯು ಬೆಳೆಸಬೇಕು: ಅನರೋಬಿಕ್
– ಹೃದಯ ಆರೋಗ್ಯ ಸುಧಾರಣೆ: ಏರೋಬಿಕ್
– ಶಕ್ತಿ ಹೆಚ್ಚಿಸಿ ದೇಹ ಕಟ್ಟಿಂಗ್ ಬಯಸುವವರಿಗೆ: ಅನರೋಬಿಕ್
– ಹೊಸಬರು ಮತ್ತು ಹಿರಿಯರಿಗೆ: ಏರೋಬಿಕ್

ತಜ್ಞರ ಸಲಹೆ ಏನೆಂದರೆ — ದೇಹದ ಸಾಮರ್ಥ್ಯ, ವಯಸ್ಸು ಮತ್ತು ಗುರಿಯನ್ನು ಗಮನಿಸಿ ಏರೋಬಿಕ್ ಮತ್ತು ಅನರೋಬಿಕ್ ವ್ಯಾಯಾಮಗಳನ್ನು ಮಿಶ್ರಣವಾಗಿ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ.

Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!

Published

on

By

ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್‌ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್‌ಗಳನ್ನು ವಿತರಿಸಿತ್ತು.

ಆದರೆ, ಈ ಪಾಸ್‌ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.

ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಸಾಮಾನ್ಯ ಜನರು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್‌ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.

Continue Reading

ದೇಶ

ಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್

Published

on

By

ಮುಂಬೈನಲ್ಲಿ ನಡೆದ NMACC third anniversary ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ತಮ್ಮ ವೈಭವಶಾಲಿ ಸೀರೆ ಲುಕ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆಗೆ ಪ್ರತೀಕವಾಗಿರುವ ಅವರ ಶೈಲಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಶೇಷ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಅವರೊಂದಿಗೆ ಆಗಮಿಸಿದ ನೀತಾ, ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹೊನ್ನಿನ ನೂಲುಗಳಿಂದ ನೇಯ್ದ ಈ ಸೀರೆಗೆ ಮರೂನ್ ಕೆಂಪು ಅಂಚು ಹೆಚ್ಚುವರಿ ಶೋಭೆ ನೀಡಿತು.

ಈ ಸೀರೆ ಕೈಮಗ್ಗದಲ್ಲಿ ಪರಿಣಿತ ಕಲಾವಿದ ಆರ್. ವರಧನ್ ಅವರ ಕೈಚಳಕದಿಂದ ಮೂಡಿಬಂದಿದ್ದು, ಇದನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದೆ. ಜರಿ ಕಸೂತಿ ಮತ್ತು ನಯವಾದ ಮೇಲ್ಮೈ ಈ ಸೀರೆಗೆ ವಿಶೇಷ ಮೌಲ್ಯ ನೀಡಿದೆ.

ಆಭರಣಗಳ ವಿಷಯದಲ್ಲಿ ನೀತಾ ಅಂಬಾನಿ ಬರ್ಮಾ ರೂಬಿ ಅಲಂಕೃತ ಚಿನ್ನದ ಮಾವಿನ ಸರ ಹಾಗೂ ಬಸ್ರಾ ಮುತ್ತಿನ ಕರ್ಣಾಭರಣ ಧರಿಸಿ ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ.

ಕಾರ್ಯಕ್ರಮದ ವೇಳೆ ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿ, “ಸಂಖ್ಯೆ 3”ರ ಸಾಂಸ್ಕೃತಿಕ ಅರ್ಥವನ್ನು ತ್ರಿಮೂರ್ತಿ, ತ್ರಿದೇವಿ ಮತ್ತು ತ್ರಿವೇಣಿ ಸಂಗಮದ ಉದಾಹರಣೆಗಳ ಮೂಲಕ ವಿವರಿಸಿದರು.

ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯ ಹಸ್ತಕುಶಲತೆ ಮತ್ತು ಕಾಂಜೀವರಂ ಸೀರೆಗಳಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

ದೇಶ

ಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್‌ನಲ್ಲಿ ತಮಿಳುನಾಡಿನ ಕುವರಿ

Published

on

By

ಅಮೆರಿಕ ರಾಜಕೀಯದಲ್ಲಿ ಭಾರತೀಯರ ಪ್ರಭಾವ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ, ಈಗ ಮತ್ತೊಬ್ಬ ಭಾರತೀಯ ಮೂಲದ ಯುವತಿ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. ರಿನಿ ಸಂಪತ್ ಅವರು ವಾಷಿಂಗ್ಟನ್ ಡಿಸಿಯ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರಸ್ತುತ ವಾಷಿಂಗ್ಟನ್ ಡಿಸಿನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ, ರಿನಿ ಸಂಪತ್ ಪ್ರಾಥಮಿಕ ಮತಪತ್ರದಲ್ಲಿ ಕಾಣಿಸಿಕೊಂಡ ಮೊದಲ ದಕ್ಷಿಣ ಏಷ್ಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನ ಮೂಲದ 31 ವರ್ಷದ ರಿನಿ, ಏಳನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಹೋಗಿ, ಕಳೆದ ದಶಕಕ್ಕೂ ಹೆಚ್ಚು ಕಾಲ ಡಿಸಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಸರ್ಕಾರಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಅವರು, ತಮ್ಮ ಪ್ರಚಾರವನ್ನು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರೀಕರಿಸಿದ್ದಾರೆ.

“ಮೊದಲಿಗೆ ನಾನು ರಾಜಕಾರಣಿಯಲ್ಲ. ಯಾವುದೇ ಒಂದು ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ನಮ್ಮ ನಗರದ ಮೂಲಭೂತ ಸೇವೆಗಳನ್ನು ಸುಧಾರಿಸುವುದು ನನ್ನ ಗುರಿ,” ಎಂದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಡಿಸಿಯ ಮೇಯರ್ ಆಗಿ ಆಯ್ಕೆಯಾದರೆ, ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಸರಿಪಡಿಸುವುದು, ಪೊಟೊಮ್ಯಾಕ್ ನದಿಗೆ ಕೊಳಚೆನೀರು ಸೇರುವುದನ್ನು ತಡೆಯುವುದು ಹಾಗೂ ಜೀವನ ವೆಚ್ಚವನ್ನು ಕಡಿಮೆ ಮಾಡುವುದನ್ನು ಮೊದಲ ಆದ್ಯತೆಯಾಗಿ ಇಡುವುದಾಗಿ ಹೇಳಿದ್ದಾರೆ.

ರಿನಿ ಸಂಪತ್ ಸ್ಪರ್ಧೆ, ಅಮೆರಿಕ ರಾಜಕೀಯದಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸೂಚನೆಯಾಗಿದೆ.

Continue Reading

Trending