ಬಿಬಿಎಂಪಿ

ಗಮನಿಸಿ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಮೊತ್ತೊಂದು ಅವಕಾಶ

ಗಮನಿಸಿ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಮೊತ್ತೊಂದು ಅವಕಾಶ

ಬೆಂಗಳೂರು: ಬಿಪಿಎಲ್ ಚೀಟಿ ತಿದ್ದುಪಡಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೊಂದು ಅವಕಾಶವನ್ನು ನೀಡಿದೆ, ಹೆಸರು ತಿದ್ದುಪಡಿ ವಿಳಾಸ ಬದಲಾವಣೆ, ಸದಸ್ಯರ ಹೆಸರು ಸೇರ್ಪೆಡೆ ಸೇರಿದಂತೆ ಅಗತ್ಯ ಬದಲಾವಣೆಗೆ ಅವಕಾಶವನ್ನು ನೀಡಲಾಗಿದ್ದು ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ, ಗೃಹಲಕ್ಷ್ಮಿ ಅನ್ನಭಾಗ್ಯ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಹಣ ಜಮೆ ಆಗುವುದರಲ್ಲಿ ಸಮಸ್ಯ ಉಂಟಾಗುತ್ತಿರುವ ಹಿನ್ನೆಲೆ ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ, ಅಕ್ಟೋಬರ್ 5 ರಿಂದ 7ರವರೆಗೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸಾರ್ವಜನಿಕರು, ಅಕ್ಟೋಬರ್ 8 ರಿಂದ 10 ರವೆರೆಗೆ ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ,ಗದಗ, ಹಾಸನ, ಹಾವೇರಿ, ಉತ್ತರ ಕನ್ನಡ ಸೇರಿ 15 ಜಿಲ್ಲೆ ಸಾರ್ವಜನಿಕರು, ಅಕ್ಟೋಬರ್ 11 ರಿಂದ 13 ರವರೆಗೆ ಕುಲಬರ್ಗಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ ಶಿವಮೊಗ್ಗ ಸೇರಿ 14 ಜಿಲ್ಲೆಗಳ ಸಾರ್ವಜನಿಕರು ಬಿಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

Trending

Exit mobile version