Connect with us

ರಾಜ್ಯ

ನಟ ಪ್ರಕಾಶ್ ರಾಜ್ ಶಿವಣ್ಣ ಕೇಳಿದ ಕ್ಷಮೆಗೆ ಸಿದ್ಧಾರ್ಥ್ ನೀಡಿದ ಪ್ರತಿಕ್ರಿಯೆ ಏನು

Published

on

ನಟ ಪ್ರಕಾಶ್ ರಾಜ್ ಶಿವಣ್ಣ ಕೇಳಿದ ಕ್ಷಮೆಗೆ ಸಿದ್ಧಾರ್ಥ್ ನೀಡಿದ ಪ್ರತಿಕ್ರಿಯೆ ಏನು
ನಟ ಪ್ರಕಾಶ್ ರಾಜ್ ಶಿವಣ್ಣ ಕೇಳಿದ ಕ್ಷಮೆಗೆ ಸಿದ್ಧಾರ್ಥ್ ನೀಡಿದ ಪ್ರತಿಕ್ರಿಯೆ ಏನು

ಚೆನ್ನೈ: ತಮಿಳು ನಟ ಸಿದ್ಧಾರ್ಥ್ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು, ಈ ವೇಳೆ ತಮಿಳುನಾಡಿಗೆ ಕಾವೇರಿ ನೀರುವ ಹಂಚಿಕೆ ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದವು, ಹೀಗಾಗಿ ಕೆಲ ಕನ್ನಡ ಪರ ಸಂಘಟನೆಗಳು ಸುದ್ದಿಗೋಷ್ಟಿಯನ್ನು ತಡೆದು ವಿರೋಧ ವ್ಯಕ್ತಪಡಿಸಿದರ, ಈ ಹಿನ್ನೆಲೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ,
ಈ ಕುರಿತು ಕಾರ್ಯಕ್ರಮಯೊಂದರಲ್ಲಿ ಮಾತನಾಡಿರುವ ಸಿದ್ಧಾರ್ಥ್ ಅವರ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಭಾರೀ ಪ್ರತಿಭಟನೆಗಳು ನಡೆದವು, ತಮಿಳು ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂತು, ಈ ಸಂದರ್ಭದಲ್ಲಿ ಎಸ್‍ಆರ್‍ವಿ ಥಿಯೇಟರ್‍ನಲ್ಲಿ ಸಿದ್ಧಾರ್ಥ್ ಸುದ್ದಿಗೋಷ್ಟಿ ಆಯೋಜನೆ ಮಾಡಿದರು, ಅವರು ನಟಿಸಿ ನಿರ್ಮಸಿರು ಚಿಕ್ಕು ಸಿನಿಮಾದ ಶೋ ಕೂಡ ಇತ್ತು, ಕನ್ನಡ ಪರ ಹೋರಾಟಗಾರರು ಸುದ್ದಿಗೋಷ್ಠಿಗೆ ಅಡಚಣೆ ಮಾಡಿದರು, ಹೀಗಾಗಿ ಸಿದ್ಧಾರ್ಥ್ ಅವರು ಅರ್ಧಕ್ಕೆ ಹೊರ ನಡೆದರು,
ಈ ಘಟನೆಯನ್ನು ಖಂಡಿಸಿ ಪ್ರಕಾಶ್ ರಾಜ್ ಸಿದ್ಧಾರ್ಥ್ ಗೆ ಕ್ಷಮೆಯಾಚಿಸಿದ್ದರು, ಅಲ್ಲದೆ ಶಿವರಾಜ್ ಕುಮಾರ್ ಕೂಡ ಕನ್ನಡಿಗರ ಪರವಾಗಿ ಕ್ಷೆಮೆಯಾಚಿಸಿದರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ಧಾರ್ಥ್ ಶಿವರಾಜ್ ಕುಮಾರ್ ಹಾಗೂ ಪ್ರಕಾಶ್ ರಾಜ್ ಅವರು ಕ್ಷೆಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಅದರೆ ಅವರು ಯಾವುದೇ ತಪ್ಪು ಮಾಡಿಲ್ಲ ಅವರಿಂದ ಯಾವುದೇ ರೀತಿಯ ತೊಂದರೆ ಕೂಡ ಆಗಿಲ್ಲ ಹೀಗಾಗಿ ಅವರು ಕ್ಷಮೆ ಕೇಳುವ ಅಗತ್ಯವೇ ಇರಲಿಲ್ಲ, ಅದರೂ ಅವರು ಕ್ಷಮೆ ಕೇಳಿದ್ದಾರೆ ಇದಕ್ಕೆ ಅವರ ಉದಾರತೆಯೇ ಕಾರಣ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ದೇಶ

‘ನೀಟ್ ಅಕ್ರಮಕ್ಕೆ ಮೋದಿ-ಧರ್ಮೇಂದ್ರ ಪ್ರಧಾನ್ ಹೊಣೆ’: CM ಸಿದ್ದರಾಮಯ್ಯ

Published

on

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ NEET ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ Narendra Modi ಹಾಗೂ ಕೇಂದ್ರ ಶಿಕ್ಷಣ ಸಚಿವ Dharmendra Pradhan ನೇರ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ Siddaramaiah ಒತ್ತಾಯಿಸಿದರು.

ಬೆಂಗಳೂರಿನ Freedom Park ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಈ ಹಿಂದೆ ರಾಜ್ಯಗಳು ತಮ್ಮದೇ CET ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದರು. ಆದರೆ 2016ರಲ್ಲಿ ಮೋದಿ ಸರ್ಕಾರ ಬಲವಂತವಾಗಿ NEET ಜಾರಿಗೆ ತಂದ ಬಳಿಕ ಅಕ್ರಮಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.

“ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ರಾಜ್ಯಗಳಿಗೆ ಸ್ವಾಯತ್ತತೆ ಇರಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಪರಿಣಾಮ ಇಂತಹ ಹಗರಣಗಳು ಮರುಕಳಿಸುತ್ತಿವೆ” ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ವರ್ಷವಿಡೀ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಪೇಪರ್ ಲೀಕ್ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಿಎಂ, “ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಬಿಜೆಪಿ ಆಡಳಿತದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನೂ ಉಲ್ಲೇಖಿಸಿದರು. “ದೇಶದ ಯುವಜನತೆ ಆಕ್ರೋಶದಲ್ಲಿದ್ದರೂ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ” ಎಂದು ಟೀಕಿಸಿದರು.

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Continue Reading

ದೇಶ

ಸಿ.ಟಿ. ರವಿ ಎದುರೇ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಭಾರೀ ಘರ್ಷಣೆ

Published

on

ಚಿಕ್ಕಮಗಳೂರು: ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ರಾಜಕೀಯ ಘರ್ಷಣೆ ಸಂಭವಿಸಿದ್ದು, ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ C. T. Ravi ಅವರ ಸಮ್ಮುಖದಲ್ಲೇ ಈ ಗಲಾಟೆ ನಡೆದಿರುವುದು ವಿಶೇಷ ಗಮನ ಸೆಳೆದಿದೆ.

ಸಿ.ಟಿ. ರವಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಉಭಯ ಪಕ್ಷಗಳ ಬೆಂಬಲಿಗರು ಪರಸ್ಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪರಿಸ್ಥಿತಿ ಕೈಮೀರಿದ ಪರಿಣಾಮ ತಳ್ಳಾಟ-ನೂಕಾಟ ನಡೆಯಿತು.

ಮಾತಿನ ವಾಗ್ವಾದ ಹೆಚ್ಚಾಗುತ್ತಿದ್ದಂತೆ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ಸಿ.ಟಿ. ರವಿ ಅವರ ಸಮ್ಮುಖದಲ್ಲೇ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು.

ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಯಾವುದೇ ಅನಾಹುತ ಸಂಭವಿಸದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಘರ್ಷಣೆಯಿಂದ ಕೆಲಕಾಲ ರಾಂಪುರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಜಕೀಯ ವೈಷಮ್ಯದ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲಾ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ನಿಗಾವಹಿಸಿದ್ದಾರೆ.

Continue Reading

ಕ್ರೀಡೆ

ಹಾಂಗ್ ಕಾಂಗ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಇಬ್ಬರು ಆಯ್ಕೆ

Published

on

ಬೆಂಗಳೂರು: ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್‌ಗೆ ಹೆಮ್ಮೆಯ ಕ್ಷಣ ಒದಗಿದ್ದು, ರಾಜ್ಯದ ಇಬ್ಬರು ಜಿಮ್ನಾಸ್ಟ್‌ಗಳು ಮತ್ತು ಇಬ್ಬರು ಕೋಚ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ 2ನೇ ಏಷ್ಯನ್ ಏಜ್ ಗ್ರೂಪ್ ಸ್ಪರ್ಧೆ ಹಾಗೂ 7ನೇ ಸೀನಿಯರ್ ಏಷ್ಯನ್ ಟ್ರಾಂಪೋಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತ ಪರ ಕಣಕ್ಕಿಳಿಯಲಿದ್ದಾರೆ.

Aavni Amit ಮಹಿಳಾ AG1 ವಿಭಾಗದಲ್ಲಿ ಮತ್ತು Satvik Gupta ಪುರುಷರ AG3 ವಿಭಾಗದಲ್ಲಿ ಭಾರತ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಕರ್ನಾಟಕದ ಕೋಚ್‌ಗಳಾದ Jitesh Chandran ಹಾಗೂ Basavaraj S. Tambur ಕೂಡ ಭಾರತೀಯ ತಂಡದೊಂದಿಗೆ ಹಾಂಗ್ ಕಾಂಗ್‌ಗೆ ತೆರಳಲಿದ್ದಾರೆ.

ಭಾರತೀಯ ತಂಡ ಮೇ 21ರಂದು ಹಾಂಗ್ ಕಾಂಗ್‌ಗೆ ಪ್ರಯಾಣ ಬೆಳೆಸಲಿದ್ದು, ಚಾಂಪಿಯನ್‌ಶಿಪ್ ಮುಗಿದ ಬಳಿಕ ಭಾರತಕ್ಕೆ ಮರಳಲಿದೆ. ಕರ್ನಾಟಕದ ಆಟಗಾರರು ಮತ್ತು ಕೋಚ್‌ಗಳ ಆಯ್ಕೆಗೆ ರಾಜ್ಯದ ಕ್ರೀಡಾ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ Dr. C. Prabhakar ಆಯ್ಕೆಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕದ ಪ್ರತಿಭೆಗಳು ಏಷ್ಯನ್ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ಶುಭ ಹಾರೈಸಿದರು.

ಈ ಆಯ್ಕೆ ಕರ್ನಾಟಕದ ಜಿಮ್ನಾಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.

Continue Reading

Trending