Connect with us

ದೇಶ

ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ: ಭರತ್ ರೆಡ್ಡಿ–ಸತೀಶ್ ರೆಡ್ಡಿ ಬಂಧನಕ್ಕೆ ಶ್ರೀರಾಮುಲು ಆಗ್ರಹ

Published

on

ಬಳ್ಳಾರಿ: ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರ ಮನೆ ಮುಂದೆ ನಡೆದ ಗಲಾಟೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ (Bharat Reddy) ಹಾಗೂ ಸತೀಶ್ ರೆಡ್ಡಿ (Satish Reddy) ನೇರ ಕಾರಣಕರ್ತರು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು (B. Sriramulu) ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರನ್ನೂ ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ತಮ್ಮ ಗನ್‌ಮ್ಯಾನ್‌ಗೆ ಸೂಚನೆ ನೀಡಿ ಭರತ್ ರೆಡ್ಡಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದರು. ಭರತ್ ರೆಡ್ಡಿ ಸಾಕಷ್ಟು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ‘ಬಳ್ಳಾರಿಯನ್ನು ಸುಟ್ಟು ಹಾಕುತ್ತೇನೆ’ ಎಂದು ಹೇಳಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಈ ಪ್ರಕರಣದ ಮತ್ತೊಬ್ಬ ಮೂಲ ಆರೋಪಿ ಸತೀಶ್ ರೆಡ್ಡಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಅವರನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡು ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಶಾಸಕ ಭರತ್ ರೆಡ್ಡಿಯನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅರೆಸ್ಟ್ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯ ನಾಗರಿಕರು ಬರ್ತಡೇ ಸಮಯದಲ್ಲಿ ಮಚ್ಚು, ಲಾಂಗು ಹಿಡಿದು ರೀಲ್ಸ್ ಮಾಡಿದರೂ ತಕ್ಷಣ ಬಂಧನವಾಗುತ್ತದೆ. ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಲಾಗುತ್ತದೆ. ಗೃಹ ಸಚಿವರ ವಿರುದ್ಧ ಪ್ರತಿಭಟನೆ ಮಾಡಿದರೆ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತಾರೆ ಎಂದು ಸರ್ಕಾರದ ದ್ವಂದ್ವ ನೀತಿಯನ್ನು ಶ್ರೀರಾಮುಲು ಟೀಕಿಸಿದರು.

ಗಲಾಟೆ ಮಾಡಿದ್ದು ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯೇ ಆಗಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ತಹಸೀಲ್ದಾರ್ ಮೂಲಕ 33 ಜನರಿಗೆ 107 ನೋಟಿಸ್ ನೀಡಲಾಗಿದೆ. ಆದರೆ ಗಲಾಟೆಗೆ ನೇರ ಕಾರಣಕರ್ತರನ್ನು ಬಂಧಿಸದೇ ಸರ್ಕಾರ ಮೌನ ವಹಿಸಿದೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ದೇಶ

K. Govindraj ಸೇರಿ ಗಣ್ಯರಿಗೆ ಗೌರವ ಡಾಕ್ಟರೇಟ್ – ಬಿಸಿಯು ಘಟಿಕೋತ್ಸವ ಸಂಭ್ರಮ

Published

on

By

ಬೆಂಗಳೂರು: Bengaluru City University (ಬಿಸಿಯು) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಕುಲಾಧಿಪತಿಗಳಾದ Thawar Chand Gehlot ಚಾಲನೆ ನೀಡಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ Dr. Binay Kumar Das, Defence Research and Development Organisation (ಡಿಆರ್‌ಡಿಒ) ಮಹಾ ನಿರ್ದೇಶಕರು (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್) ಭಾಗವಹಿಸಿದ್ದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ Arjun Janya, ಕ್ರಿಕೆಟರ್ Venkatesh Prasad, ಶಿಕ್ಷಣ ತಜ್ಞ T. K. Narayanappa, ಎಂಎಲ್ಸಿ K. Govindaraj, ಶಿಕ್ಷಣ ಕ್ಷೇತ್ರದ Mohan Alva ಹಾಗೂ ಕೈಗಾರಿಕೋದ್ಯಮಿ Bava Mohammed Farooq ಅವರಿಗೆ ರಾಜ್ಯಪಾಲರು ಗೌರವಿಸಿದರು.

ಉಪ ಚುನಾವಣೆ ಪ್ರಚಾರದ ಹಿನ್ನೆಲೆ, ಉನ್ನತ ಶಿಕ್ಷಣ ಸಚಿವ Dr. C. N. Ashwath Narayan ಗೈರಾಗಿದ್ದರು.

ಘಟಿಕೋತ್ಸವದಲ್ಲಿ 73 ಪ್ರಥಮ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನವಾಗಿದ್ದು, 23 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಲಾಯಿತು.

ವಿಶೇಷವಾಗಿ, ಸ್ನೇಹಾ ಟಿ (ಎಂಎಸ್‌ಸಿ ರಸಾಯನಶಾಸ್ತ್ರ) 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಭಿಷೇಕ್ ಶ್ರೀರಾಮ್ (ಬಿಕಾಂ) 3 ಚಿನ್ನದ ಪದಕ, ದಿವ್ಯಶ್ರೀ ಎಸ್ (ಬಿಬಿಎ) 3 ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.

ಗೌರವ ಡಾಕ್ಟರೇಟ್ ಪಡೆದ ಬಳಿಕ Arjun Janya ಅವರು ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.

Continue Reading

ಚುನಾವಣೆ

TN 2026 ಟೀಸರ್‌ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ

Published

on

By

ಚೆನ್ನೈ: ಮುಂದಿನ ವಾರ ಬಿಡುಗಡೆಯಾಗಲಿರುವ ತಮಿಳು ಸಿನಿಮಾ TN 2026 – ತಂಗೈ ನಚ್ಚಥಿರಂ ಟೀಸರ್ ಏಪ್ರಿಲ್ 2ರಂದು ಬಿಡುಗಡೆಯಾದ ಬಳಿಕ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ನಟ Nataraj (Natti) ಅಭಿನಯಿಸಿರುವ “ಗೋಲ್ಡನ್ ಸ್ಟಾರ್ ಗುಲ್ಕಂದ್ ಕುಮಾರ್” ಎಂಬ ಪಾತ್ರ ರಾಜಕೀಯಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಟೀಸರ್ ವೈರಲ್ ಆದ ತಕ್ಷಣ, Tamilaga Vettri Kazhagam (ಟಿವಿಕೆ) ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ Vijay ಅವರನ್ನು ಗುರಿಯಾಗಿಸಿಕೊಂಡು ಟೀಸರ್ ರೂಪಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

ಟೀಸರ್‌ನಲ್ಲಿ ಗುಲ್ಕಂದ್ ಕುಮಾರ್ ಪಾತ್ರವು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ, ವಿಜಯ್ ಅವರಂತೆಯೇ ‘ಸಾಲ್ಟ್ ಅಂಡ್ ಪೆಪ್ಪರ್’ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಅವರ ನಡಿಗೆ ಮತ್ತು ಜನರತ್ತ ಕೈ ಬೀಸುವ ಶೈಲಿಯನ್ನು ಅನುಕರಿಸಿರುವುದು ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ನಟ Redin Kingsley ಅವರ ಪಾತ್ರವೊಂದು ವೇದಿಕೆಯಲ್ಲಿ “ಹೇ ಮೂವಿ-ಬಾಯ್…” ಎಂದು ಗೇಲಿ ಮಾಡುವ ಸಂಭಾಷಣೆ ಕೂಡ ಟೀಕೆಗೆ ಗುರಿಯಾಗಿದೆ.

ಟೀಸರ್ ಕೊನೆಯಲ್ಲಿ ಕೇಳಿಬರುವ “ಓಂ ಶಕ್ತಿ ಪರಾಶಕ್ತಿ” ಘೋಷಣೆ ಕೂಡ ವಿಜಯ್ ಇತ್ತೀಚೆಗೆ ರಾಜಕೀಯ ವೇದಿಕೆಯಲ್ಲಿ ಬಳಸಿದ ನುಡಿಗಟ್ಟನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ನಾಯಕ Aadhav Arjun, “ಇದು ವಿಜಯ್ ವರ್ಚಸ್ಸಿಗೆ ಧಕ್ಕೆ ತರಲು Dravida Munnetra Kazhagam (ಡಿಎಂಕೆ) ಮತ್ತು ಬಿಜೆಪಿ ಜಂಟಿಯಾಗಿ ನಡೆಸಿದ ಪಿತೂರಿ” ಎಂದು ಆರೋಪಿಸಿದ್ದಾರೆ. ಜನರು ಇಂತಹ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

Umapathy Ramaiah ನಿರ್ದೇಶನದ ಈ ಚಿತ್ರದಲ್ಲಿ Thambi Ramaiah, M. S. Bhaskar, Ilavarasu, Yashika Aannand ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಏಪ್ರಿಲ್ 10ರಂದು ಬಿಡುಗಡೆಯಾಗಲಿರುವ ಈ ಚಿತ್ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

ದೇಶ

ಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?

Published

on

ಬೆಂಗಳೂರು: ಹಳೆಯ ವಾಹನಗಳಿಗೆ ಹೈ ಸಿಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ, ಇದಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಇಂತಹ ಸುದ್ದಿಗಳು ಸುಳ್ಳು ಎಂದು ಹೇಳಿ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 50ರಡಿ, ಕೇಂದ್ರ ಸರ್ಕಾರವು 2018 ಡಿಸೆಂಬರ್ 4ರಂದು ಅಧಿಸೂಚನೆ ಹೊರಡಿಸಿದ್ದು, 2019 ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಅನುಸರಿಸಿ, ಕರ್ನಾಟಕ ಸರ್ಕಾರವು 2023 ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿ ರಾಜ್ಯದಲ್ಲಿಯೂ ಇದೇ ನಿಯಮವನ್ನು ಜಾರಿಗೆ ತಂದಿದೆ.

ಇದಕ್ಕೂ ನಡುವೆ, HSRP ಅಳವಡಿಕೆ ಸಂಬಂಧ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸರ್ಕಾರವು ಯಾವುದೇ ತರಾತುರಿ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ. ಆದರೆ, ಈ ಆದೇಶವು HSRP ಕಡ್ಡಾಯ ಆದೇಶವನ್ನು ರದ್ದುಪಡಿಸುವುದಿಲ್ಲ ಎಂಬುದು ಮುಖ್ಯ.

ಸಾರಿಗೆ ಇಲಾಖೆಯ ಪ್ರಕಾರ, ಹೈಕೋರ್ಟ್ ಆದೇಶದಿಂದ ಹೊಸ ಕ್ರಮಗಳನ್ನು ಕೈಗೊಳ್ಳಲು ಅಡ್ಡಿಯಿದ್ದರೂ, HSRP ಅಳವಡಿಕೆ ಕುರಿತ ಅಧಿಸೂಚನೆ ಇನ್ನೂ ಜಾರಿಯಲ್ಲಿಯೇ ಇದೆ. ಆದ್ದರಿಂದ, ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ವದಂತಿಗಳಿಂದ ಗೊಂದಲಕ್ಕೀಡಾಗಬಾರದು ಎಂದು ಸಾರಿಗೆ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Continue Reading

Trending