ಬೆಂಗಳೂರು
ಪ್ರದೀಪ್ ಈಶ್ವರ್‌ಗೆ ಶಾಕ್ ಎಂಎಲ್‌ಎ ವಿರುದ್ಧ ದೂರು

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧೦ರಲ್ಲಿ ಭಾಗಿಯಾಗಿರುವುದನ್ನು ವಿರೋಧಿಸಿ ವಿಧಾನಸಭಾ ಸ್ಪೀಕರ್‌ಗೆ ದೂರು ಸಲ್ಲಿಕೆಯಾಗಿದೆ, ನಿನ್ನೆಯಿಂದ ಬಿಗ್‌ಬಾಸ್ ಸೀಸನ್ ೧೦ ಪ್ರಾರಂಭವಾಗಿದ್ದು ಈ ರಿಯಾಲಿಟಿ ಶೋನಲ್ಲಿ ಚಿಕ್ಕಬಳ್ಳಾಪುರ ಶಾಸಕರು ದಿಢೀರ್ ಎಂಟ್ರಿ ಕೊಟ್ಟಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ, ಇದರಲ್ಲಿ ಪ್ರದೀಪ್ ಈಶ್ವರ್ ಅವರು ತಾನು ಕೂಡ ಸ್ಪರ್ಧಿ ಎಂದು ಹೇಳಿದ್ದರು, ಇವುರ ಬಿಗ್‌ಬಾಸ್ ಮನೆಗೆ ಪ್ರವೇಶಿಸಿರುವುದಕ್ಕೆ ಸಾರ್ವಜಿನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ, ಈ ವಿಚಾರವಾಗಿ ಪ್ರದೀಪ್ ಈಶ್ವರ್ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ಸಿ ಎಂ ಶಿವಕುಮಾರ್ ಎಂಬುವವರು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರಿಗೆ ದೂರು ಸಲ್ಲಿಸಿದ್ದಾರೆ, ದೂರಿನಲ್ಲಿ ಒಬ್ಬ ಶಾಸಕರು ಹೀಗೆ ಮಾಡೋದು ಸರಿಯಲ್ಲ, ಅವರು ಒಬ್ಬ ಜವಬ್ದಾರಿಯುತ ವ್ಯಕ್ತಿ, ಕೂಡಲೇ ಅವರನ್ನು ಶಾಸಕ ಸ್ಧಾನದಿಂದ ವಜಾ ಮಾಡಬೇಕು ಎಂದು ಆಗ್ರರಹಿಸಿದ್ದಾರೆ,
ಬಿಗ್‌ಬಾಸ್‌ನಿಂದ ಹೊರಬರದೇ ಹೋದರೆ ನಾವು ಬಿಗ್‌ಬಾಸ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ, ನಾನು ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ ಕೊಡಲೇ ಪ್ರದೀಪ್ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು,
ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಈ ವಿಚಾರವಗಿ ವಿರೋಧ ವ್ಯಕ್ತಪಡಿಸಿ ವ್ಯಂಗ್ಯವಾಡಿದ್ದಾರೆ, ಒಬ್ಬ ಶಾಸಕ ಬಿಗ್ ಬಾಸ್‌ಗೆ ಹೋಗಿ ಕುಣಿದಾಡ್ತಿರುವ ವಿಷಯ ಇಡೀ ರಾಜ್ಯದಲ್ಲಿ ಎಲ್ಲೂ ಆಗಿಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು,