ಬೆಂಗಳೂರು
ಮೌನ ಪ್ರತಿಭಟನೆ ವಾಪಸ್ ಪಡೆದು ಡಿ.ಕೆ.ಸುರೇಶ್‍ಗೆ ಟಾಂಗ್ ಕೊಟ್ಟ ಮುನಿರತ್ನ
ನಾನು ನಿರ್ಮಾಣ ಮಾಡಿದ ಸಿನಿಮಾವನ್ನು ಡಿ ಕೆ ಸುರೇಶ್ ಅವರು ಬಾಕ್ಸ್‍ನಲ್ಲಿÀ್ರತೆಗೆದುಕೊಂಡು ಟೆಂಟ್‍ನಲ್ಲಿ ಹಾಕಿದ್ದಾರೆ ಎಂದು ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಟಾಂಗ್ ಕೊಟ್ಟರು. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನು ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಡೆಸುತ್ತಿದ್ದ ಮೌನ ಪ್ರತಿಭಟನೆ ವಾಪಸ್ ಪಡೆದ ನಂತರ ಅವರು ಮಾತನಾಡುತ್ತ ಮುನಿರತ್ನ ದೊಡ್ಡ ಸಿನಿಮಾ ನಿರ್ಮಾಪಕ ಏನೆಲ್ಲಾ ಸ್ಕ್ರಿಪ್ಟ್ ತಯಾರಿಸಿದ್ದಾರೋ ನೋಡೋಣ ಎಂಬ ಡಿ ಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ ನನ್ನ ಸಿನಿಮಾವನ್ನು ಬೇರೆ ಥಿಯೇಟರ್‍ಗೆ ಹಾಕಿದ್ದಾರೆ, 126 ಕೋಟಿ ರೂ ಅನುದಾನವನ್ನು ಬೇರೆ ಕ್ಷೇತ್ರಕ್ಕೆ ಅವರು ಹಂಚಿಕೆ ಮಾಡಿದ್ದಾರೆ ಎಂದರು,
ಎರಡು ಗಂಟೆಯವರೆಗೆ ನಾನು ಉಪವಾಸ ಸತ್ಯಾಗ್ರಹ ಮಾಡಬೇಕಿತ್ತು, ಅದರೆ ಯಡಿಯೂರಪ್ಪ ನನ್ನ ಜೊತೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ, ಹೀಗಾಗಿ ಉಪವಾಸ ಸತ್ಯಾಗ್ರಹ ಇಲ್ಲಿಗೆ ಕೈಬಿಡುತ್ತೇನೆ ಎಂದರು, ನಮ್ಮ ಕ್ಷೇತ್ರದಲ್ಲಿ ಗಾಂಜಾ ಮಾರಾಟ ಹೆಚ್ಚಾಗ್ತಿದೆ, ಪೊಲೀಸ್ ಅಧಿಕಾರಿಗಳ ಜೊತೆ ಸೆಲ್ಫಿ ತಗೋತಾರೆ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದರು, ನಾನು ಹೇಳಿದ ಕೆಲಸ ಆಗಿಲ್ಲ ಅಂದ್ರೆ ಎಂಪಿ ಹತ್ರ ಕಾಲ್ ಮಾಡಿಸ್ಲಾ ಅಥವಾ ಡಿಸಿಎಂ ಅವರಿಂದ ಫೋನ್ ಮಾಡಿಸ್ಲಾ ಅಂತ ಕೇಳ್ತಾರೆ, ನಾನು ಏನು ಮಾಡಲಿ? ಆರ್ ಆರ್ ನಗರ ಕ್ಷೇತ್ರದಲ್ಲಿ ಸೋತಿರುವ ಅಭ್ಯಾರ್ಥಿ ಏನೇ ಹೇಳಿದ್ರೂ ಕೆಲಸ ಆಗುತ್ತದೆ ಎಂದು ಕಿಡಿಕಾರಿದರು, ಕ್ಷೇತ್ರದಲ್ಲಿ ಮನೆ ಕಟ್ಟಲು ಪ್ಲಾನ್ ಸ್ಯಾಂಕ್ಷನ್‍ಗೆ ಇವರ ಅನುಮತಿ ಬೇಕು, ಮನೆ ಕಟ್ಟೋದಕ್ಕೆ ತಡೆ ಹಿಡಿಯುತ್ತಾರೆ, ಬಂದು ಮಾತನಾಡಿ ಅಮೇಲೆ ಮಾತನಾಡಿ ಎಂದು ವಾರ್ನಿಂಗ್ ಕೊಡ್ತಾರೆ ಎಂದು ದೂರಿದರು, ಯಶವಂತಪುರ ಕ್ಷೇತ್ರಕ್ಕೆ 40 ಕೋಟಿ ಕೊಟ್ಟವರು ನನಗೂ ಕೂಡ ಕೊಡಬಹುದಿತ್ತು, ಸಂಸದರಾದ ಡಿ ಕೆ ಸುರೇಶ್ ಕೊಡಿಸಬಹುದಿತ್ತು, ಸಂಸದರಾಗಿ ಅದು ಅವರ ಕರ್ತವ್ಯ, ಅದರೆ ಈ ಬಗ್ಗೆ ಡಿ ಕೆ ಸುರೇಶ್ ಒಂದು ಪತ್ರ ಕೂಡಾ ಬರೆದಿಲ್ಲ, ದಯವಿಟ್ಟು ಹಣ ವಾಪಸ್ ಕೊಡಿ ಎಂದು ನಾನು ಪತ್ರ ಬರೆದಿದ್ದೇನೆ, ನಿಮ್ಮ ಸಹೋದರರೆ ಉಸ್ತುವಾರಿ ಸಚಿವರು, ಅವರ ಬಳಿ ಮನವಿ ಮಾಡಬಹುದಿತ್ತು, ಅದರದೇ ಸರ್ಕಾರವಿದೆ, ಈಗ ಅಭಿವೃದ್ಧಿಯಾಗದೆ ಇನ್ಯಾವಾಗ ಮಾಡಲು ಸಾಧ್ಯ? ಎಲ್ಲಾ ಶಾಸಕರ ರೀತಿ ನನ್ನನ್ನೂ ನೋಡಿ ಎಂದು ಮನವಿ ಮಾಡಿದರು,