Dasara
ಮೈಸೂರು ದಸರಾ : ಕುಶಾಲತೋಪು ತಾಲೀಮು ಆರಂಭ, ಬೆದರಿದ ಸುಗ್ರೀವ, ಹಿರಣ್ಯ
ಬುಧವಾರದಂದು ಆನೆಗಳ ಮುಂದೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಿದ್ದು 2 ಆನೆಗಳು ಕೊಂಚ ಹೆದರಿದ್ದು ಬಿಟ್ಟರೆ ಉಳಿದಂತೆ ತಾಲೀಮು ಸಮರ್ಪಕವಾಗಿ ನೆರವೇರಿದೆ. ಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಆವರಣದಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ನಡೆಯಿತು. ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿನ ಕುಶಾಲತೋಪು ಸಿಡಿಸುವ ವೇಳೆ ಆನೆಗಳು ಅಶ್ವಗಳು ಬೆದರದಂತೆ ತಾಲೀಮು ನಡೆಸಲಾಗುತ್ತದೆ.ನಾಡ ಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಕಣೆ ಜಂಬೂ ಸವಾರಿ. ಈ ಜಂಬೂಸವಾರಿಯಲ್ಲಿ ಸಾಗುವ ಗಜಪಡೆಗಳ ತಾಲೀಮು ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತದೆ. ಇದೀಗ ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು ಯಶಸ್ವಿಯಾಗಿ ನಡೆದಿದೆ.ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೂ ಈ ತಾಲೀಮು ಮಾಡಿಸಲಾಗುತ್ತದೆ. ಶಬ್ದಗಳಿಗೆ ಆನೆಗಳು ಭಯಪಡದಂತೆ ಸಿಡಿಮದ್ದಿನ ಅಭ್ಯಾಸ ಮಾಡಿಸಲಾಗುತ್ತದೆಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಆವರಣದಲ್ಲಿ ತಾಲೀಮು ನಡೆಯಿತು. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿ ಅಭ್ಯಾಸ ಮಾಡಲಾಯಿತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ನಡೆಯಿತು. ತಾಲೀಮಿನಲ್ಲಿ 43 ಅಶ್ವಾರೋಹಿ ದಳ ಭಾಗವಹಿಸಿದ್ದವು.
ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋಪು ಸಿಡಿಸುವಾಗ ಹೊಮ್ಮುವ ಕಿವಿಗಡಚಿಕ್ಕುವ ಶಬ್ದಕ್ಕೆ ಕುದುರೆ, ಆನೆಗಳು ಬೆಚ್ಚದಂತೆ ಮಾಡಲು, ಪೂರ್ವಭ್ಯಾಸ ನೀಡುವುದು ವಾಡಿಕೆ. ಹಾಗಾಗಿ ಪ್ರತಿವರ್ಷ ಇದನ್ನು ಮಾಡಲಾಗುತ್ತದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಕುಶಾಲುತೋಪು ತಾಲೀಮಿನಲ್ಲಿ ಭಾಗಿಯಾಗಿದ್ದವು. ಸುಗ್ರೀವ ಹಾಗೂ ಹಿರಣ್ಯ ಆನೆಗಳು ಬೆದರಿದವು. ಮುನ್ನೆಚ್ಚರಿಕೆಯಾಗಿ ಆನೆ ಎರಡು ಕಾಲುಗಳಿಗೆ ಸರಪಳಿ ಕಟ್ಟಿದ್ದರಿಂದ ಆನೆಗಳು ನಿಂತಲ್ಲೇ ಅಲುಗಾಡಿದವು. ಇನ್ನು ಸಿಡಿಮದ್ದು ತಾಲೀಮಿಗೆ ಅಶ್ವಗಳು ಹೆದರಿದ್ದು ಕಂಡು ಬಂದಿತು. ವಿಜಯದಶಮಿ ದಿನ ರಾಷ್ಟ್ರಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ ಬ್ಯಾರಲ್ ಅನ್ನು 21 ಬಾರಿ ಸ್ವಚ್ಛಗೊಳಿಸಿ, 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ.ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು
ಇನ್ನು ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು ನಡೆಯುತ್ತಿದೆ. ಕಳೆದೆರಡು ದಿನಗಳಿಂದ ಆರಂಭಗೊಂಡಿರುವ ಮರದ ಅಂಬಾರಿಯ ತಾಲೀಮು ಜಂಬೂಸವಾರಿಯ ಹಿಂದಿನ ದಿನದವರೆಗೆ ನಡೆಯಲಿದೆ. ಇದೀಗ ಪ್ರತಿದಿನ ಮರದ ಅಂಬಾರಿಯನ್ನು ಅಭಿಮನ್ಯು ಬೆನ್ನಿಗೆ ಕಟ್ಟಿ ತಾಲೀಮು ನಡೆಸುತ್ತಿದ್ದು, ಇದನ್ನು ನೈಪುಣ್ಯ ಹೊಂದಿದ ಮಾವುತರು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಲಾಗುತ್ತಿದೆ. ಮೊದಲ ದಿನವಾದ ಸೋಮವಾರ ಸಂಜೆ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 750 ಕೆಜಿ ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದೆ.ಸುಮಾರು 280 ಕೆ.ಜಿ ತೂಕದ ಮರದ ಅಂಬಾರಿ, 400 ಕೆ.ಜಿ ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 750ಕ್ಕೂ ಹೆಚ್ಚಿನ ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ 5 ಕಿ.ಮೀ ದೂರವನ್ನು ಯಶಸ್ವಿಯಾಗಿ ಪೂರೈಸಿದೆ. ಇನ್ನು ಅಭಿಮನ್ಯು ಮರದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮಿ, ವಿಜಯ ಸಾಥ್ ನೀಡಿವೆ. ಅಷ್ಟೇ ಅಲ್ಲದೆ ಗಂಡಾನೆಗಳಾದ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ರೋಹಿತ್, ಹೆಣ್ಣಾನೆಗಳಾದ ಲಕ್ಷ್ಮಿ, ಹಿರಣ್ಯಾ ಕೂಡ ಭಾಗವಹಿಸಿ ಗಮನಸೆಳೆದವು. ಮೊದಲ ದಿನ ಮಳೆಯಲ್ಲಿಯೇ ಗಜಪಡೆಯ ತಾಲೀಮು ನಡೆದಿದೆ
Blog
ಆಯುಧ ಪೂಜೆ ಮಹತ್ವ
ಆಯುಧ ಪೂಜೆಯ ಕಥೆ:
ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ಎಲ್ಲಾ ದೇವತೆಗಳು ತಮ್ಮಲ್ಲಿದ್ದ ಆಯುಧಗಳನ್ನು ದುರ್ಗಾ ದೇವಿಗೆ ನೀಡುತ್ತಾರೆ. ದೇವರುಗಳು ತಮ್ಮಲ್ಲಿದ್ದ ಆಯುಧಗಳನ್ನು ಮಾತ್ರವಲ್ಲ. ತಮ್ಮ ಎಲ್ಲಾ ಶಕ್ತಿಗಳನ್ನು ಕೂಡ ಒಟ್ಟುಗೂಡಿಸಿದಾಗ ದುರ್ಗಾ ದೇವಿಯು 10 ಕೈಗಳಿಂದ ಪ್ರಕಟಗೊಂಡಳು. ಅವಳು ತನ್ನ ಪ್ರತಿಯೊಂದು ಕೈಗಳಲ್ಲಿಯೂ ಆಯುಧವನ್ನು ಹಿಡಿದುಕೊಂಡಿದ್ದಳು. ಮಹಿಷಾಸುರನ ಸಂಹಾರಕ್ಕಾಗಿ ದುರ್ಗಾ ದೇವಿ ಮತ್ತು ಮಹಿಷಾಸುರನ ನಡುವೆ 9 ದಿನಗಳ ಸುದೀರ್ಘ ಯುದ್ಧ ನಡೆಯಿತು. ನಂತರ 10ನೇ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಯುದ್ಧ ಮುಗಿದ ನಂತರ ತಾಯಿಯ ಬಳಿಯಿದ್ದ ಎಲ್ಲಾ ಆಯುಧಗಳನ್ನು ಆಯಾ ದೇವರಿಗೆ ಒಪ್ಪಿಸಬೇಕಾಗಿತ್ತು. ಇದಕ್ಕೂ ಮುನ್ನ ಆ ಎಲ್ಲಾ ಆಯುಧಗಳನ್ನು ಶುದ್ಧಗೊಳಿಸುವುದು ತುಂಬಾನೇ ಅವಶ್ಯಕವಾಗಿತ್ತು. ಈ ಕಾರಣಕ್ಕಾಗಿ ದುರ್ಗಾ ದೇವಿಯು ಬಳಸಿದ್ದ ಎಲ್ಲಾ ಆಯುಧಗಳನ್ನು ಸ್ವಚ್ಛಗೊಳಿಸಿ ನಂತರ ಅವುಗಳನ್ನು ಪೂಜಿಸಿ ಆಯುಧಗಳನ್ನು ಹಿಂಪಡೆದುಕೊಂಡರು. ಇದರ ನೆನಪಿಗಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತದೆ.
ಆಯುಧ ಪೂಜೆಯು ದುರ್ಗಾ ದೇವಿಗೆ ಸಂಬಂಧಿಸಿದ ಪೂಜೆಯಾಗಿದೆ. ಇದನ್ನು ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ದಸರಾದ ಮೊದಲು ಆಯುಧ ಪೂಜೆಯಲ್ಲಿ ಆಯುಧಗಳು, ವಾದ್ಯಗಳು ಮತ್ತು ಉಪಕರಣಗಳನ್ನು ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಪ್ರಾಚೀನ ಕಾಲದಲ್ಲಿ, ಕ್ಷತ್ರಿಯರು ಯುದ್ಧಕ್ಕೆ ಹೋಗಲು ದಸರಾ ದಿನವನ್ನು ಆರಿಸಿಕೊಳ್ಳುತ್ತಿದ್ದರು, ಇದರಿಂದ ಅವರು ವಿಜಯದ ವರವನ್ನು ಪಡೆಯಬಹುದು ಎನ್ನುವ ನಂಬಿಕೆಯಿತ್ತು. ಇದಲ್ಲದೆ, ಪ್ರಾಚೀನ ಕಾಲದಲ್ಲಿ, ಬ್ರಾಹ್ಮಣರು ಸಹ ದಸರಾ ದಿನದಂದು ಜ್ಞಾನವನ್ನು ಪಡೆಯಲು ತಮ್ಮ ಮನೆಯಿಂದ ಹೊರಗೆ ಬರುತ್ತಿದ್ದರು ಮತ್ತು ವ್ಯಾಪಾರ ವರ್ಗದವರು ಸಹ ದಸರಾ ದಿನದಂದು ತಮ್ಮ ವ್ಯವಹಾರವನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ಪರಿಗಣಿಸಿದ್ದರು. ಇದೇ ಕಾರಣಕ್ಕೆ ದಸರಾಕ್ಕೂ ಮುನ್ನ ಆಯುಧ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.
ಈ ದಿನ ನಾವು ಬಳಸುವ ಪ್ರತಿಯೊಂದು ಆಯುಧಗಳನ್ನು ಅಥವಾ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಶುದ್ಧಗೊಳಿಸಿ ಪೂಜಿಸಲಾಗುತ್ತದೆ. ಕೆಲವು ಭಕ್ತರು ದೇವಿಯ ಆಶೀರ್ವಾದ ಪಡೆಯಲು ತಮ್ಮ ವಿಜಯದ ಸಾಧನೆಗಳನ್ನು ಅಂದರೆ ತಮ್ಮ ಸಾಧನಗಳನ್ನು ದೇವಿಯ ಮುಂದೆ ಇಡುತ್ತಾರೆ. ಶಾಸ್ತ್ರಪೂಜೆಯ ದಿನದಂದು ಪುಸ್ತಕಗಳನ್ನು, ಪೆನ್ನುಗಳು, ಚಾಕುಗಳು, ಕತ್ತರಿಗಳು, ಸಂಗೀತ ಉಪಕರಣಗಳು, ಕರಕುಶಲ ವಸ್ತುಗಳು ಮುಂತಾದ ಚಿಕ್ಕ ವಸ್ತುಗಳಿಂದ ಹಿಡಿದು ದೊಡ್ಡ ಯಂತ್ರಗಳು, ವಾಹನಗಳು, ಬಸ್ಸುಗಳು ಇತ್ಯಾದಿಗಳನ್ನು ಪೂಜಿಸುತ್ತಾರೆ. ಕೆಲವರು ಬ್ರಾಹ್ಮಾಣರ ಸಹಾಯದಿಂದ ಪೂಜೆಯನ್ನು ಮಾಡಿದರೆ, ಇನ್ನು ಕೆಲವರು ತಾವೇ ಸ್ವತಃ ಪೂಜೆಯನ್ನು ಮಾಡುತ್ತಾರೆ.
Dasara
ನವರಾತ್ರಿ 3ನೇ ದಿನ ಚಂದ್ರಘಂಟಾ ದೇವಿಯ ಆರಾಧನೆ
ಹಿಂದೂ ಧರ್ಮದಲ್ಲಿ, ಚಂದ್ರಘಂಟಾ ಮಹಾದೇವಿಯ ಮೂರನೇ ನವದುರ್ಗೆಯ ಅಂಶವಾಗಿದೆ. ಅವಳ ಹೆಸರು ಚಂದ್ರ – ಘಂಟಾ, ಅಂದರೆ “ಗಂಟೆಯ ಆಕಾರದ ಅರ್ಧ ಚಂದ್ರನನ್ನು ಹೊಂದಿರುವವಳು.” ಅವಳ ಮೂರನೇ ಕಣ್ಣು ಯಾವಾಗಲೂ ತೆರೆದಿರುತ್ತದೆ ಮತ್ತು ಅವಳು ಯಾವಾಗಲೂ ರಾಕ್ಷಸರ ವಿರುದ್ಧ ಯುದ್ಧಕ್ಕೆ ಸಿದ್ಧಳಾಗಿರುತ್ತಾಳೆ. ಆಕೆಯನ್ನು ಚಂದ್ರಖಂಡ, ಚಂಡಿಕಾ ಅಥವಾ ರಣಚಂಡಿ ಎಂದೂ ಕರೆಯುತ್ತಾರೆ.
ತಾಯಿ ಪಾರ್ವತಿಯ ಚಂದ್ರಘಂಟಾ ರೂಪಕ್ಕೆ ಕಾರಣ:ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲಳಾಗುತ್ತಾಳೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
ಚಂದ್ರಘಂಟಾ ತಾಯಿಗೆ ಮಂತ್ರ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
ನವದುರ್ಗೆಯಲ್ಲಿ ರೌದ್ರಸ್ವರೂಪದವಳಾಗಿ ರಾಕ್ಷಸವಧೆ ಮಾಡಿ, ಮಾತೃಹೃದಯದವಳಾಗಿ ನಮ್ಮನ್ನು ರಕ್ಷಿಸುವವಳು ಚಂದ್ರಘಂಟಾ ದೇವಿ. ಈಕೆಯ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗುತ್ತವೆ.ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ನವದುರ್ಗೆಯಲ್ಲಿ ರೌದ್ರಸ್ವರೂಪದವಳಾಗಿ ರಾಕ್ಷಸವಧೆ ಮಾಡಿ, ಮಾತೃಹೃದಯದವಳಾಗಿ ನಮ್ಮನ್ನು ರಕ್ಷಿಸುವವಳು ಚಂದ್ರಘಂಟಾ ದೇವಿ. ಈಕೆಯ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗುತ್ತವೆ.ಇವಳ ಈ ಸ್ವರೂಪವು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದಲೇ ಇವಳನ್ನ ಚಂದ್ರಘಂಟಾದೇವಿ ಎಂದು ಕರೆಯಲಾಗುತ್ತದೆ.ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆ ಪಾರ್ವತಿ , ಶಿವನ ಪತ್ನಿ, ದುರ್ಗೆಯ ಹಲವು ಸ್ವರೂಪಗಳಲ್ಲಿ ಒಬ್ಬಳು ಹಾಗೂ ದುರ್ಗಾಮಾತೆಯ ವೈವಾಹಿಕ ಅವತಾರ. ದುರ್ಗಾ ಮಾತೆಯ ರೌದ್ರಸ್ವರೂಪಳಾಗಿರುವವಳು ಈಕೆ. ದುಷ್ಟಶಕ್ತಿಗಳಿಗೆ ಈಕೆ ಸಿಂಹಸ್ವಪ್ನ. ಆದರೆ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು. ಚಂದ್ರಘಂಟೆಯ ಮೂರನೇ ಕಣ್ಣು ಸದಾ ತೆರೆದೇ ಇರುತ್ತದೆ. ಯಾವುದೇ ಸಮಯದಲ್ಲಿಯೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.ಚಂದ್ರಘಂಟೆಯು ಶುಕ್ರ ಗ್ರಹದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ . ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಕಂಡುಬರದು.
ಚಂದ್ರಘಂಟೆಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ. ಕೆಂಪು ಬಣ್ಣದ ಬಟ್ಟೆಯ ಅಲಂಕಾರ ಮಾಡಿ. ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟೆಯನ್ನು ಪ್ರಾರ್ಥಿಸಿ.ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುವುದು. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು ಹಾಗಾಗಿ ಚಂದ್ರಘಂಟೆಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆ ಶುದ್ಧಿಯಾಗುವುದು.
Dasara
ಅರಮನೆಯಲ್ಲಿ ಯದುವೀರ್ ಒಡೆಯರ್ ದರ್ಬಾರ್
ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾದವು. 6ರಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಗಣಪತಿ ಹೋಮ ಸೇರಿದಂತೆ ಹಲವು ಹೋಮಗಳು ನೆರವೇರಿದವು.ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯದುವೀರ್, ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದರು. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು. ಇದಾದ ನಂತರ ಸಿಂಹಾಸನಾರೂಢರಾದರು.ಬೆಳಗ್ಗೆ 7.05ರಿಂದ 07.45ರ ನಡುವೆ ಯದುವೀರ್ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಅವರಿಗೆ ಕಂಕಣ ಧಾರಣೆಯಾಯಿತು. ಇದಕ್ಕೂ ಮೊದಲು ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಗೋವಿಗೆ ಆನೆ ಬಾಗಿಲಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನವರಾತ್ರಿಯ ಪೂಜೆಗಳು ರಾಜ ಪರಂಪರೆಯಂತೆ ನೆರವೇರಿದವು.
8ನೇ ಬಾರಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು. ರಾಜ ಪೋಷಾಕು ಧಿರಿಸಿನಲ್ಲಿ ಅವರು ದರ್ಬಾರ್ ಹಾಲ್ ಪ್ರವೇಶಿಸುತ್ತಿದ್ದಂತೆ ಬಹು ಪರಾಕ್ ಕೂಗಲಾಯಿತು.ಖಾಸಗಿ ದರ್ಬಾರ್ ನಲ್ಲಿ ಮಹಾರಾಜ, ಮಂತ್ರಿ, ಸೇನಾಧಿಪತಿ ಹಾಗೂ ವಾದ್ಯ ವೃಂದದವರು ಇರುತ್ತಾರೆ. ಪ್ರಜೆಗಳು ಈ ದರ್ಬಾರಿನಲ್ಲಿ ಭಾಗಿಯಾಗುತ್ತಾರೆ. ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರ್ ಮಾದರಿಯಲ್ಲೇ ಇಂದಿಗೂ ದಸರಾ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಿಕೊಂಡು ಬರುತ್ತಿದ್ದಾರೆ.
-
ದೇಶ21 hours ago“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
-
ದೇಶ21 hours agoಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್ಗಳಿಗೆ ಶಾಕ್
-
ಚುನಾವಣೆ3 hours agoDavangere By Election 2026 : 25 ಅಭ್ಯರ್ಥಿಗಳ ಕಣ: ಮುಸ್ಲಿಂ ಅಭ್ಯರ್ಥಿಗಳೇ ಗೇಮ್ಚೇಂಜರ್?
-
ದೇಶ4 hours agoX ನಲ್ಲಿ ವೈರಲ್ ಆದ CA ಕಥೆ: ನಂಬಲೇಬೇಕಾ ಅಥವಾ ಕೇವಲ ಕಥೆಯಾ?
-
ಚುನಾವಣೆ4 hours agoಎಐಎಡಿಎಂಕೆ vs ಡಿಎಂಕೆ: ಸೀಟ್ ಶೇರಿಂಗ್ನಲ್ಲಿ ಭಾರಿ ಪೈಪೋಟಿ
-
ದೇಶ22 hours ago‘I Love My Daughter’ ಟೀ ಶರ್ಟ್ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
-
ದೇಶ6 hours agoತಾಲಿಬಾನ್ ವಿರುದ್ಧ ಪಾಕಿಸ್ತಾನದ ಆಪರೇಷನ್: ನೂರಾರು ಉಗ್ರರು ಸಾವು
-
ದೇಶ20 hours agoಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ
