ದೇಶ

ಹಮಾಸ್‌ ಗಳನ್ನು ಈ ಭೂಮಿಯಿಂದ ಅಳಸಿ ಹಾಕುತ್ತೇವೆ ಇಸ್ರೇಲ್‌ ಶಪಥ

ಹಮಾಸ್‌ ಗಳನ್ನು ಈ ಭೂಮಿಯಿಂದ ಅಳಸಿ ಹಾಕುತ್ತೇವೆ – ಇಸ್ರೇಲ್‌ ಶಪಥ

ಟೆಲ್‌ ಅವಿವ್‌/ ಗಾಜಾ :  ಪ್ಯಾಲೆಸ್ತೇನ್‌ ನಡೆಸಿದ್ದ ಧಿಡೀರ್‌ ದಾಳಿಯಿಂದ ದಿಘ್ಮೂಢಗೊಂಡಿದ್ದ ಇಸ್ರೇಲ್‌ ಈಗ ಹಮಾಸ್‌ ಉಗ್ರರಿಗೆ ಸೂಕ್ತ ಪ್ರತ್ಯುತ್ಯರ ಕೊಡಲು ಪ್ರಾರಂಭಿಸಿದೆ. ಬುಧವಾರ ಇಸ್ರೇಲ್‌ ನಡೆಸಿದ ಸತತ ದಾಳಿಯಿಂದಾಗಿ ಪ್ಯಾಲೆಸ್ತೇನ್‌ನ ಗಾಜಾದಲ್ಲಿ ಹಲವು ಕಟ್ಟಡಗಳು ನಾಮಾವಶೇಷ ಗೊಂಡಿದೆ.  ಹಮಾಸ್‌ ಉಗ್ರರನ್ನು ಈ ಭೂಮಿಯಿಂದ ಅಳಿಸಿ ಹಾಕುತ್ತೇವೆ ಎಂದು ಇಸ್ರೇಲ್‌ ಶಪಥ ಕೈಗೊಂಡಿದೆ. 

ಇಸ್ರೇಲ್‌ನಲ್ಲಿ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1200 ಕ್ಕೆ ಮುಟ್ಟಿದ್ದು, ಗಾಯಗೊಂಡವರ ಪ್ರಮಾಣವೂ ಸಹ 2900 ಕ್ಕೆ ಏರಿಕೆಯಾಗಿದೆ. ಹಮಾಸ್‌ ಉಗ್ರರ ಬಣದಲ್ಲಿಯೂ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಬುಧವಾರ ತಡರಾತ್ರಿಯ ವರದಿಯಂತೆ 5339 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 

ಹಮಾಸ್‌ ಉಗ್ರರು ಇಸ್ರೇಲ್‌ ನಾಗರಿಕರನ್ನು ಅಪಹರಣ ಮಾಡಿ ಕ್ರೂರವಾಗಿ ಸಾಮೂಹಿಕ ಶಿರಚ್ಛೇದ ಮಾಡುತ್ತಿದ್ದು, ಈ ವಿಡಿಯೋಗಳನ್ನು ಹರಿಬಿಡುವ ಮೂಲಕ ಇಸ್ರೇಲಿಗರ ಆತ್ಮಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಿದೆ. ಈ ಕುರಿತು ಸ್ವತಃ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಹಮಾಸ್‌ ವಶದಲ್ಲಿರುವ ನಾಗರಿಕರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. 

Trending

Exit mobile version