Connect with us

ಬೆಂಗಳೂರು

ಶಿವರಾತ್ರಿ ಸಂಭ್ರಮ: ಹನುಮಂತನಗರ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೃತ್ಯ ರೂಪಕ, ಜಾಗರಣೆ

ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ Mahadeshwara Swamy Temple Hanumanthanagarನಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಸಂಭ್ರಮ ಕಂಗೊಳಿಸಿತು. ಶಿವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಹಾಗೂ ಶಿಷ್ಯವೃಂದದಿಂದ “ಶ್ರೀ ಮಂಜುನಾಥ ಚರಿತೆ” ನೃತ್ಯ ರೂಪಕ ಮತ್ತು ಭರತನಾಟ್ಯ ಸಂಗೀತ ಪ್ರದರ್ಶನ ಮನಸೆಳೆಯಿತು.

ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ Ravi Subramanya ಭಾಗವಹಿಸಿ ನೃತ್ಯ ಕಲಾವಿದರನ್ನು ಸನ್ಮಾನಿಸಿದರು. ಭಕ್ತಿಪರ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮ ಭಕ್ತರಲ್ಲಿ ವಿಶೇಷ ಆನಂದ ಮೂಡಿಸಿತು.

ರಾತ್ರಿ ಪೂರ್ತಿ ದೇವಸ್ಥಾನದಲ್ಲಿ ಭಕ್ತಾದಿಗಳು “ಹರ ಹರ ಮಹಾದೇವ” ಜಪ ಮಾಡುತ್ತ ಜಾಗರಣೆ ನಡೆಸಿದರು. ಶಿವಭಕ್ತರ ಭಜನೆ, ಧ್ಯಾನ ಮತ್ತು ಆರಾಧನೆಯಿಂದ ದೇವಸ್ಥಾನ ಪ್ರದೇಶ ಭಕ್ತಿರಸದ ಮೇಳವಾಗಿ ಪರಿಣಮಿಸಿತು.

ಇದೇ ಸಂದರ್ಭದಲ್ಲಿ “ಐಬಿಎಂ ಫ್ಯಾಮಿಲಿ” ಎಂಬ ಸ್ನೇಹಕೂಟದಿಂದ ಭಕ್ತಾದಿಗಳಿಗೆ 3,000ಕ್ಕೂ ಹೆಚ್ಚು ಕಾಫಿ ಮತ್ತು ಬಿಸ್ಕೆಟ್ ವಿತರಿಸಿ ಸೇವಾಭಾವ ತೋರಿಸಲಾಯಿತು. ಉತ್ಸವದಲ್ಲಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು.

ಬೆಂಗಳೂರು

ನಾಯಕತ್ವ ಗೊಂದಲಕ್ಕೆ ಸಮಯ ಬಂದಾಗ ಉತ್ತರ : B. K. Hariprasad

ಬೆಂಗಳೂರು: ಕಾಂಗ್ರೆಸ್ ನಾಯಕತ್ವ ಅಸಹಾಯಕವಲ್ಲ, ಸಮಯ ಸಂದರ್ಭ ಬಂದಾಗ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ B. K. Hariprasad ಹೇಳಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಯಕತ್ವದಲ್ಲಿ ಯಾವುದೇ ಗೊಂದಲ ಇಲ್ಲ, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

D. K. Shivakumar ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರನ್ನು ಬಂಡೆ ಎಂದು ಕರೆಯುವುದಕ್ಕಿಂತ ಇಂಜಿನ್ ಎಂದು ಕರೆಯಬೇಕು. ರೈಲು ಹತ್ತಿರ ಬಂದಾಗ ಜೋರಾಗಿ ಕೂಗುವಂತೆ, ಶಿವಕುಮಾರ್ ಬಂದಾಗ ಆರ್ಭಟ ಆಗುತ್ತದೆ ಎಂದು ಅವರು ಹೇಳಿದರು. ನಾಯಕತ್ವ ಬದಲಾವಣೆ ವಿಚಾರವನ್ನು ಪಕ್ಷದ ಅಧ್ಯಕ್ಷ Mallikarjun Kharge ತೀರ್ಮಾನಿಸಬೇಕು. “ಯಾವುದೇ ವಾಹನ ಎರಡು ಟ್ರ್ಯಾಕ್‌ಗಳಲ್ಲಿ ಹೋಗಲು ಸಾಧ್ಯವಿಲ್ಲ. ಸರ್ಕಾರದಲ್ಲಿ Siddaramaiah ಮುಂದಿರುತ್ತಾರೆ; ಪಕ್ಷದಲ್ಲಿ ಡಿಕೆ ಶಿವಕುಮಾರ್ ಮುಂದಿರುತ್ತಾರೆ” ಎಂದು ಹೇಳಿದರು.

ಹೈಕಮಾಂಡ್ ನಾಯಕರು ಅಸಹಾಯಕರಲ್ಲ. Sonia Gandhi, ಖರ್ಗೆ ಹಾಗೂ Rahul Gandhi ಅವರಿಗೆ ಎಲ್ಲಾ ವಿಚಾರಗಳು ತಿಳಿದಿವೆ. ಸಮಯ ಬಂದಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮಗೆ ರಾಷ್ಟ್ರಗೀತೆಯೇ ಮುಖ್ಯ

ವಂದೇಮಾತರಂಗೆ ವಿರೋಧವಿಲ್ಲ. ಆದರೆ ರಾಷ್ಟ್ರಗೀತೆಗೆ ಅಪಮಾನವಾಗಬಾರದು ಎಂದರು. “ಜನಗಣಮನ” ದೇಶದ ಎಲ್ಲ ಭಾಗಗಳನ್ನು ಒಳಗೊಂಡಿದೆ ಎಂದು Rabindranath Tagore ರಚಿಸಿದ ರಾಷ್ಟ್ರಗೀತೆಯ ಮಹತ್ವವನ್ನು ಉಲ್ಲೇಖಿಸಿದರು. ವಂದೇಮಾತರಂ ‘ಆನಂದ್ ಮಠ’ದ ಪ್ರಾರ್ಥನೆ ಎಂದು ಅಭಿಪ್ರಾಯಪಟ್ಟ ಅವರು, ಮೊದಲು ವಂದೇಮಾತರಂ ಬಳಿಕ ರಾಷ್ಟ್ರಗೀತೆ ಹಾಡುವುದು ಅಪಮಾನಕ್ಕೆ ಸಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು. M. S. Golwalkar ಕುರಿತು ಸಹ ಟೀಕೆ ಮಾಡಿದರು.

Continue Reading

ಅಪರಾಧ

BENGALURU : ಅರ್ಧಂಬರ್ಧ ರಸ್ತೆ ಕೆಲಸಕ್ಕೆ ಬೆಲೆ ಕಟ್ಟಿದ ಪುಟ್ಟ ಜೀವ

ಬೆಂಗಳೂರು: ರಾಜ್ಯದಲ್ಲಿ ರಸ್ತೆ ದುರಸ್ತಿ ವಿಳಂಬ, ಅವೈಜ್ಞಾನಿಕ ಹಂಪ್‌ಗಳು ಮತ್ತು ಭಾರೀ ಗುಂಡಿಗಳಿಂದಾಗಿ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿರುವ ದುರ್ಘಟನೆಗಳು ಆತಂಕ ಮೂಡಿಸಿವೆ.

ನಗರದ Mahadevapura ಪ್ರದೇಶದಲ್ಲಿ ರಸ್ತೆ ಕಾಮಗಾರಿ ವಿಳಂಬವೇ ಎರಡು ವರ್ಷದ ಕಂದಮ್ಮ ತ್ರಿಶೂಲ್ ಜೀವ ಕಳೆದುಕೊಳ್ಳಲು ಕಾರಣವಾಗಿದೆ. ಬೈಕ್‌ನಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಕೆಳಗೆ ಬಿದ್ದಿದ್ದು, ತಲೆ ಮೇಲೆ ಕಾರು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಗೆ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿ, ಅರ್ಧಂಬರ್ಧ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

ಇನ್ನೊಂದೆಡೆ, Adugodiಯ ಬಾಷ್ ಕಂಪನಿ ರಸ್ತೆಯಲ್ಲಿ ಭಾರೀ ಗುಂಡಿ ಕಾರಣವಾಗಿ 49 ವರ್ಷದ ಅಮಲಾ ಮೃತಪಟ್ಟಿದ್ದಾರೆ. ಗುಂಡಿಯಿಂದಾಗಿ ಆಯಾ ತಪ್ಪಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಹಿಂದಿನಿಂದ ಬಂದ ಟಿಪ್ಪರ್ ಹರಿದು ದುರಂತ ಸಂಭವಿಸಿದೆ.

ಅತ್ತ Shivamoggaಯ ಎಲ್ಬಿಎಸ್ ನಗರ ಫ್ಲೈಓವರ್‌ನಲ್ಲಿ ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ ಮತ್ತೊಬ್ಬ ಯುವಕನ ಜೀವ ಪಡೆದುಕೊಂಡಿದೆ. ಹಂಪ್ ಕಾಣದೆ ಬೈಕ್‌ನಲ್ಲಿ ಬಿದ್ದ 35 ವರ್ಷದ ಉಲ್ಲಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದಲ್ಲಿ ರಸ್ತೆ ಸುರಕ್ಷತೆ ಪ್ರಶ್ನಾರ್ಥಕವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Continue Reading

ಅಪರಾಧ

RAJA RAJA RAJESHWARI NAGAR : ಬ್ಯಾರಿಕೇಡ್ ನಡುವೆ ಸಂಭ್ರಮ, ಅಭಿಮಾನಿಗೆ ಕಪಾಳಮೋಕ್ಷ

ಬೆಂಗಳೂರು, ಫೆ.16: ನಟ Darshan Thoogudeepa ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ಜೈಲಲ್ಲಿದ್ದರೂ ಅಭಿಮಾನಿಗಳ ಸಂಭ್ರಮಕ್ಕೆ ಕಡಿವಾಣ ಬಿದ್ದಿಲ್ಲ. ಆರ್‌ಆರ್ ನಗರದಲ್ಲಿರುವ ನಿವಾಸದ ಬಳಿ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದು, ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ನಿಯಂತ್ರಿಸಿದ್ದಾರೆ. ಈ ವೇಳೆ ಒಬ್ಬ ಅಭಿಮಾನಿ ಅತಿರೇಕದ ವರ್ತನೆ ತೋರಿದ ಕಾರಣಕ್ಕೆ ಪೊಲೀಸ್ ಅಧಿಕಾರಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ಚಿತ್ರದುರ್ಗದ Renukaswamy ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಈ ಬಾರಿಯ ಜನ್ಮದಿನವನ್ನು ಜೈಲಲ್ಲೇ ಆಚರಿಸುತ್ತಿದ್ದಾರೆ. ಆದರೂ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ‘ಬಾಸ್’ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಸಿನಿತಾರೆಯರಿಂದ ಶುಭಾಶಯಗಳ ಸುರಿಮಳೆ

ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ Vijayalakshmi Darshan ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಜೊತೆಗೆ Rakshita Prem, Anusha Rai, Yashas Surya, Chikkanna, Abhishek Ambareesh, Dhanveer Gowda ಹಾಗೂ Rachita Ram ಸೇರಿದಂತೆ ಹಲವು ಸಿನಿ ತಾರೆಯರು ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.

ಜೈಲುವಾಸದಲ್ಲಿದ್ದರೂ ದರ್ಶನ್ ಮೇಲಿನ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ ಎಂಬುದು ಇಂದಿನ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

Continue Reading

Trending