Connect with us

ದೇಶ

ಕೋಲಾರದಲ್ಲಿ ಟಾಟಾ–ಏರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಮೋದಿ–ಮ್ಯಾಕ್ರಾನ್ ಚಾಲನೆ

ಕೋಲಾರ, ಫೆಬ್ರವರಿ 16: ಚಿನ್ನದ ನಾಡು ಕೋಲಾರ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ–ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ನಾಳೆ (ಫೆ.17) ಸಂಜೆ 4.20ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಪ್ರಧಾನಿ Narendra Modi ಹಾಗೂ ಫ್ರಾನ್ಸ್ ಅಧ್ಯಕ್ಷ Emmanuel Macron ವರ್ಚುವಲ್ ಮೂಲಕ ಘಟಕವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ Rajnath Singh ಹಾಗೂ ಫ್ರಾನ್ಸ್ ರಕ್ಷಣಾ ಸಚಿವೆ Catherine Vautrin ಖುದ್ದಾಗಿ ವೇಮಗಲ್‌ಗೆ ಆಗಮಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಎಂ.ಆರ್. ರವಿ ಹಾಗೂ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ವರ್ಷಕ್ಕೆ 10 H125 ಹೆಲಿಕಾಪ್ಟರ್‌ಗಳು

Tata Advanced Systems Limited ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ನಿರ್ಮಿತ ಈ ಘಟಕವು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಜೋಡಣಾ ಕೇಂದ್ರ ಎನ್ನಲಾಗುತ್ತಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ 10 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಇದಕ್ಕಿದೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹೆಲಿಕಾಪ್ಟರ್‌ಗಳನ್ನೂ ಇಲ್ಲಿ ಜೋಡಿಸಲಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳಿವೆ.

ವೇಮಗಲ್ ಕೈಗಾರಿಕಾ ಪ್ರದೇಶವು Kempegowda International Airport ಹಾಗೂ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪದಲ್ಲಿರುವುದು ಸ್ಥಳ ಆಯ್ಕೆಗೆ ಪ್ರಮುಖ ಕಾರಣವಾಗಿದೆ. ಘಟಕ ಆರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಳವಾಗಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೊಸ ಉತ್ತೇಜನ ಸಿಗಲಿದೆ.

ದೇಶ

ವ್ಯಾಲೆಂಟೈನ್ಸ್ ಡೇ ನಿರಾಸೆ: ಬೆಂಗಳೂರಿನ ಬ್ರೂವರಿಯಲ್ಲಿ ಜೋಡಿಗಳ ದೀರ್ಘ ಸಾಲು ವೈರಲ್

ಬೆಂಗಳೂರು, ಫೆ.16: ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಫೆ.14ರಂದು ನಿರಾಸೆ ಎದುರಾಗಿದೆ. ಬೆಂಗಳೂರಿನ ಜನಪ್ರಿಯ ಬ್ರೂವರಿಯೊಂದರಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ಕಿಂಗ್ ಮಾಡಿದ್ದರಿಂದ ಜೋಡಿಗಳು ಗಂಟೆಗಳ ಕಾಲ ಹೊರಗೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಂ ಬಳಕೆದಾರ ಅಕ್ಷಯ್ ಕುಮಾವತ್ ಹಂಚಿಕೊಂಡಿರುವ ವಿಡಿಯೋದಲ್ಲಿ, “ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದಾಗ ಏನಾಗುತ್ತದೆ ನೋಡಿ” ಎಂಬ ಶೀರ್ಷಿಕೆ ನೀಡಲಾಗಿದೆ. ಸಂಜೆಯ ಚಳಿಯಲ್ಲಿ ನೂರಾರು ಜೋಡಿಗಳು ಮಳಿಗೆಯ ಹೊರಗೆ ಉದ್ದ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಟೇಬಲ್ ರಿಸರ್ವೇಶನ್ ಮಾಡಿಕೊಂಡಿದ್ದರೂ ಸೀಟು ಸಿಗದ ಕಾರಣ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ ₹2,000ರವರೆಗೆ ಕವರ್ ಚಾರ್ಜ್ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಇಷ್ಟೊಂದು ಹಣ ಪಾವತಿಸಿದರೂ ಸಮರ್ಪಕ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ಆರೋಪ. ಸೀಟು ಸಿಗದೆ ಹಿಂತಿರುಗಿದ ಕೆಲವರು ತಮ್ಮ ಹಣವನ್ನು ಮರಳಿ ಪಡೆಯಲು ಸಿಬ್ಬಂದಿಯೊಂದಿಗೆ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.

ಫೆಬ್ರವರಿ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಬ್ರೂವರಿ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಕೇವಲ ಸೋಶಿಯಲ್ ಮೀಡಿಯಾ ಹೈಪ್‌ಗಾಗಿ ಇಷ್ಟು ಕಷ್ಟ ಬೇಕೇ?” ಎಂದು ಕೆಲವರು ಪ್ರಶ್ನಿಸಿದರೆ, “ಮನೆಯಲ್ಲೇ ಉಳಿದವರೇ ಅದೃಷ್ಟವಂತರು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Continue Reading

ದೇಶ

ನೈನಾರ್ ಹೇಳಿಕೆಗೆ ತ್ರಿಶಾ ತಿರುಗೇಟು: “ಅಸಹ್ಯಕರ ಕಾಮೆಂಟ್ ನಿರೀಕ್ಷಿಸಿರಲಿಲ್ಲ”

ಚೆನ್ನೈ: “ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ” ಎಂದು ತಮಿಳು ನಟಿ Trisha Krishnan, ಬಿಜೆಪಿ ರಾಜ್ಯಾಧ್ಯಕ್ಷ Nainar Nagenthran ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಟ Vijay ಅವರ Tamilaga Vettri Kazhagam (TVK) ಪಕ್ಷವನ್ನು ಟೀಕಿಸುವ ವೇಳೆ ತ್ರಿಶಾ ಅವರ ಹೆಸರನ್ನು ಉಲ್ಲೇಖಿಸಿದ್ದ ನೈನಾರ್ ನಾಗೇಂದ್ರನ್ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ತ್ರಿಶಾ ತಮ್ಮ ವಕೀಲರ ಮೂಲಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಕೀಲರ ಹೇಳಿಕೆ ಏನು?

“ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಸಹ್ಯಕರ ಕಾಮೆಂಟ್‌ಗಳ ಬಗ್ಗೆ ಈ ಹೇಳಿಕೆ ನೀಡುತ್ತಿದ್ದೇವೆ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಹೇಳಿಕೆ ನಿರೀಕ್ಷಿಸಲಿಲ್ಲ. ನಮ್ಮ ಕಕ್ಷಿದಾರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ರಾಜಕೀಯ ವಿಚಾರಗಳಲ್ಲಿ ಅವರು ಯಾವಾಗಲೂ ತಟಸ್ಥ ನಿಲುವು ತೆಗೆದುಕೊಳ್ಳುತ್ತಾರೆ. ತ್ರಿಶಾ ಅವರನ್ನು ಕಲಾವಿದೆಯಾಗಿ ಮಾತ್ರ ಗುರುತಿಸಬೇಕು; ರಾಜಕೀಯ ಹೊಂದಾಣಿಕೆಗಳೊಂದಿಗೆ ಕೊಂಡೊಯ್ಯಬಾರದು” ಎಂದು ವಕೀಲರು ತಿಳಿಸಿದ್ದಾರೆ.

ವೈಯಕ್ತಿಕ ಜೀವನವನ್ನು ಸಾರ್ವಜನಿಕ ಚರ್ಚೆಗೆ ಎಳೆಯಬಾರದು. ಉನ್ನತ ಹುದ್ದೆಯವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

ನೈನಾರ್ ಹೇಳಿಕೆ ಏನು?

“ವಿಜಯ್ ಒಬ್ಬ ಉತ್ತಮ ನಟ, ಆದರೆ ರಾಜಕೀಯದಲ್ಲಿ ಅನುಭವ ಇಲ್ಲ. ರಾಜಕಾರಣ ಏನೆಂದು ತಿಳಿಯಬೇಕಾದರೆ ಮೊದಲು ಅವರ ಮತ್ತು ತ್ರಿಶಾ ಮನೆಯಿಂದ ಹೊರಬರಬೇಕು” ಎಂಬ ವಿವಾದಾತ್ಮಕ ಹೇಳಿಕೆಯನ್ನು ನೈನಾರ್ ನಾಗೇಂದ್ರನ್ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ.

Continue Reading

ಅಪರಾಧ

BENGALURU : ಅರ್ಧಂಬರ್ಧ ರಸ್ತೆ ಕೆಲಸಕ್ಕೆ ಬೆಲೆ ಕಟ್ಟಿದ ಪುಟ್ಟ ಜೀವ

ಬೆಂಗಳೂರು: ರಾಜ್ಯದಲ್ಲಿ ರಸ್ತೆ ದುರಸ್ತಿ ವಿಳಂಬ, ಅವೈಜ್ಞಾನಿಕ ಹಂಪ್‌ಗಳು ಮತ್ತು ಭಾರೀ ಗುಂಡಿಗಳಿಂದಾಗಿ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿರುವ ದುರ್ಘಟನೆಗಳು ಆತಂಕ ಮೂಡಿಸಿವೆ.

ನಗರದ Mahadevapura ಪ್ರದೇಶದಲ್ಲಿ ರಸ್ತೆ ಕಾಮಗಾರಿ ವಿಳಂಬವೇ ಎರಡು ವರ್ಷದ ಕಂದಮ್ಮ ತ್ರಿಶೂಲ್ ಜೀವ ಕಳೆದುಕೊಳ್ಳಲು ಕಾರಣವಾಗಿದೆ. ಬೈಕ್‌ನಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಕೆಳಗೆ ಬಿದ್ದಿದ್ದು, ತಲೆ ಮೇಲೆ ಕಾರು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಗೆ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿ, ಅರ್ಧಂಬರ್ಧ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

ಇನ್ನೊಂದೆಡೆ, Adugodiಯ ಬಾಷ್ ಕಂಪನಿ ರಸ್ತೆಯಲ್ಲಿ ಭಾರೀ ಗುಂಡಿ ಕಾರಣವಾಗಿ 49 ವರ್ಷದ ಅಮಲಾ ಮೃತಪಟ್ಟಿದ್ದಾರೆ. ಗುಂಡಿಯಿಂದಾಗಿ ಆಯಾ ತಪ್ಪಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಹಿಂದಿನಿಂದ ಬಂದ ಟಿಪ್ಪರ್ ಹರಿದು ದುರಂತ ಸಂಭವಿಸಿದೆ.

ಅತ್ತ Shivamoggaಯ ಎಲ್ಬಿಎಸ್ ನಗರ ಫ್ಲೈಓವರ್‌ನಲ್ಲಿ ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ ಮತ್ತೊಬ್ಬ ಯುವಕನ ಜೀವ ಪಡೆದುಕೊಂಡಿದೆ. ಹಂಪ್ ಕಾಣದೆ ಬೈಕ್‌ನಲ್ಲಿ ಬಿದ್ದ 35 ವರ್ಷದ ಉಲ್ಲಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದಲ್ಲಿ ರಸ್ತೆ ಸುರಕ್ಷತೆ ಪ್ರಶ್ನಾರ್ಥಕವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Continue Reading

Trending