Connect with us

ದೇಶ

ರಾಜ್ಯದಲ್ಲಿ 1000 ಕೋಟಿ ರೂ. ಲಂಚ ಸಂಗ್ರಹ; ಬಿಜೆಪಿ ಗಂಭೀರ ಆರೋಪ

Published

on

ರಾಜ್ಯದಲ್ಲಿ 1000 ಕೋಟಿ ರೂ ಲಂಚ ಸಂಗ್ರಹ ಬಿಜೆಪಿ ಗಂಭೀರ ಆರೋಪ
ರಾಜ್ಯದಲ್ಲಿ 1000 ಕೋಟಿ ರೂ ಲಂಚ ಸಂಗ್ರಹ ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ರಾಜ್ಯ ಸರ್ಕಾರ ಇದುವರೆಗೆ ಒಂದು ಸಾವಿರ ಕೋಟಿ ರೂ. ಲಂಚ ಸಂಗ್ರಹ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ರಾಜ್ಯದಲ್ಲಿ ಶಿವಾನಂದ ಪಾಟೀಲ್, ಡಿ.ಕೆ. ಶಿವಕುಮಾರ್ , ಬೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ, ಇತರ ಸಚಿವರು ಹಣ ಸಂಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಣದ ವಹಿವಾಟು ನಡೆಯುತ್ತಿದೆ. ಇದೆಲ್ಲದರ ಕುರಿತು ಸಿಬಿಐ- ಇಡಿ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕರ್ನಾಟಕದಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ಸಿಕ್ಕಿದ 94 ಕೋಟಿ ನಗದು ಮತ್ತು 8 ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, ಒಟ್ಟಾರೆಯಾಗಿ 102 ಕೋಟಿ ರೂ. ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ. 1 ಸಾವಿರ ಕೋಟಿ ರೂ. ಸಂಗ್ರಹಿಸಿದ ಮಾಹಿತಿ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ 251ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಕುರಿತು ಒಂದು ಪೈಸೆ ಪರಿಹಾರ ನೀಡಿಲ್ಲ. ಬರ, ಬಿಸಿಲಿನಿಂದ ರಾಜ್ಯದ ಸಂಪೂರ್ಣ ಬೆಳೆ ನಾಶವಾಗಿದೆ; ಕರೆಂಟಿಲ್ಲದೆ ನೀರಾವರಿ ಬೆಳೆಯೂ ನಾಶವಾಗಿದೆ. ಇದರ ಬಗ್ಗೆಯೂ ಪರಿಹಾರ ಕೊಡುತ್ತಿಲ್ಲ. ಪ್ರತಿದಿನ ಕಾವೇರಿ ನೀರನ್ನು ಹರಿಸುತ್ತಿದ್ದಾರೆ. ಅದನ್ನು ನಿಲ್ಲಿಸಿಲ್ಲ; ಕರ್ನಾಟಕವು ಪೂರ್ತಿ ಎಟಿಎಂ ಆಗಿದೆʼʼ ಎಂದು ರವಿಕುಮಾರ್ ಅವರು ದೂರಿದರು. ತಮಿಳುನಾಡಿಗೆ ಕಾವೇರಿ ನೀರು ಮತ್ತು ಪಂಚರಾಜ್ಯಗಳಿಗೆ ಹಣದ ಹರಿವು ನಿರಂತರವಾಗಿ ಸಾಗಿದೆ ಎಂದು ಅವರು ಆಕ್ಷೇಪಿಸಿದರು.
ಅಬಕಾರಿ, ಕೈಗಾರಿಕಾ ವಲಯ, ಎಲ್ಲ ಪೊಲೀಸ್ ಠಾಣೆಗಳಿಗೆ ಕಲೆಕ್ಷನ್ ಗುರಿ ಕೊಟ್ಟಿದ್ದಾರೆ. ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿ ಅಧಿಕಾರಿಗಳ ವರ್ಗಾವಣೆ ವೇಳೆ ಹಣ ಪಡೆದಿದ್ದಾರೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿ ವರ್ಗಾವಣೆಗೆ ಕನಿಷ್ಠ 1ರಿಂದ 3 ಕೋಟಿ ಲಂಚ ಪಡೆದಿದ್ದಾರೆʼʼ ಎಂದು ರವಿ ಕುಮಾರ್ ಆರೋಪಿಸಿದರು.
ʻʻನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿ ಬೆಂಗಳೂರಿನಲ್ಲಿ ವಿಪರೀತ ಹಣ ಸಂಗ್ರಹಿಸಿದ್ದಾರೆ. ಅಂಥ ಸಾವಿರಾರು ಕೋಟಿ ಹಣವನ್ನು ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅದರಲ್ಲಿ ಎಷ್ಟು ಕಳುಹಿಸುತ್ತಾರೆ; ಎಷ್ಟು ಜೇಬಿಗೆ ಇಳಿಸುತ್ತಾರೆ ಎಂಬುದರ ತನಿಖೆಯೂ ಆಗಬೇಕಿದೆʼʼ ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.
ʻʻನಿನ್ನೆ ಮತ್ತು ಮೊನ್ನೆ ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಸೇರಿ 117ಕ್ಕೂ ಹೆಚ್ಚು ಕಡೆ ಬಿಜೆಪಿ ಹೋರಾಟ ಮಾಡಿದೆ. ನಮ್ಮ ಹೋರಾಟ ಮುಂದುವರೆಯಲಿದೆ. ತನಿಖೆಗೆ ಕೊಡುವವರೆಗೆ ಹೋರಾಟ ಮುಂದುವರೆಯುತ್ತದೆʼʼ ಎಂದು ರವಿಕುಮಾರ್ ಪ್ರಕಟಿಸಿದರು.

ದೇಶ

ಬಿಹಾರ ರಾಜಕೀಯದಲ್ಲಿ ಭಾರಿ ಟ್ವಿಸ್ಟ್: ನಾಮಪತ್ರದ ಮರುದಿನವೇ BJP ಅಭ್ಯರ್ಥಿ ಬದಲಾವಣೆ, ಪ್ರಶಾಂತ್ ಕಿಶೋರ್ ವಿರುದ್ಧ ಹೊಸ ಮುಖ!

Published

on

ನವದೆಹಲಿ: ಬಿಹಾರದ (Bihar) ಬ್ಯಾಂಕಿಪುರ (Bankipur Assembly) ವಿಧಾನಸಭಾ ಉಪಚುನಾವಣೆಯಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದೆ. ನಾಮಪತ್ರ ಸಲ್ಲಿಸಿದ ಕೇವಲ ಒಂದು ದಿನದ ಬಳಿಕವೇ ಭಾರತೀಯ ಜನತಾ ಪಕ್ಷ (BJP) ತನ್ನ ಅಭ್ಯರ್ಥಿಯನ್ನು ಬದಲಾಯಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಶುಕ್ರವಾರ ನೀರಜ್ ಕುಮಾರ್ ಸಿನ್ಹಾ (Neeraj Kumar Sinha) ಅವರನ್ನು ಬ್ಯಾಂಕಿಪುರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ. ಈ ಮೂಲಕ ಅವರು ಜನ ಸುರಾಜ್ ಪಕ್ಷದ (Jan Suraaj Party) ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಅಭಿಷೇಕ್ ಬಂಟಿ ಹಿಂದೆ ಸರಿದಿದ್ದು ಏಕೆ?

ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಅಭಿಷೇಕ್ ಬಂಟಿ (Abhishek Bunty) ಗುರುವಾರ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಸೇರಿದಂತೆ ಎನ್‌ಡಿಎ (NDA) ನಾಯಕರ ಸಮ್ಮುಖದಲ್ಲಿ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಶುಕ್ರವಾರ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಸರಾವಗಿ ಅವರಿಗೆ ಪತ್ರ ಬರೆದು “ವೈಯಕ್ತಿಕ ಕಾರಣಗಳಿಂದ” ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಂತರ ನಡೆದ ಸುದ್ದಿಗೋಷ್ಠಿಯಲ್ಲೂ ಇದೇ ಕಾರಣವನ್ನು ಪುನರುಚ್ಚರಿಸಿದ ಅವರು ಭಾವುಕರಾಗಿರುವುದು ಗಮನ ಸೆಳೆಯಿತು.

ಅಭ್ಯರ್ಥಿ ಬದಲಾವಣೆಯ ಹಿಂದಿನ ಕಾರಣವೇನು?

ಮೂಲಗಳ ಪ್ರಕಾರ, ಅಭಿಷೇಕ್ ಬಂಟಿ ಅವರ ತಂದೆ ರವೀಂದ್ರ ಪ್ರಸಾದ್ ಅವರು ಪ್ರಸಿದ್ಧ ಮೇವು ಹಗರಣ (Fodder Scam) ಪ್ರಕರಣದಲ್ಲಿ ಆರ್‌ಜೆಡಿ (RJD) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಆರೋಪಿಯಾಗಿ ಶಿಕ್ಷೆಗೆ ಗುರಿಯಾಗಿದ್ದರು.

2022ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಲಾಲು ಯಾದವ್ ಸೇರಿದಂತೆ 75 ಮಂದಿಯನ್ನು ದೋಷಿಗಳೆಂದು ಘೋಷಿಸಿತ್ತು. ಆ ವೇಳೆ ಮಗಧ್ ಕೆಮಿಕಲ್ ಕಾರ್ಪೊರೇಷನ್‌ನ ವ್ಯವಸ್ಥಾಪಕರಾಗಿದ್ದ ರವೀಂದ್ರ ಪ್ರಸಾದ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸುಮಾರು ₹139 ಕೋಟಿ ಮೌಲ್ಯದ ಮೇವು ಹಗರಣ ಪ್ರಕರಣದಲ್ಲಿ ಸಿಬಿಐ 2001ರಿಂದ 2003ರ ನಡುವೆ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿತ್ತು.

ಪ್ರಶಾಂತ್ ಕಿಶೋರ್ ತಂತ್ರಕ್ಕೆ BJP ಪ್ರತಿತಂತ್ರ

ಬಿಜೆಪಿ ಮೂಲಗಳ ಪ್ರಕಾರ, ಪ್ರಶಾಂತ್ ಕಿಶೋರ್ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯವನ್ನಾಗಿಸಲು ಸಿದ್ಧತೆ ನಡೆಸಿದ್ದರು. ಇದು ಚುನಾವಣೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕದಿಂದ ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾನ್ಯ ಪಕ್ಷದ ಕಾರ್ಯಕರ್ತರಾಗಿರುವ ನೀರಜ್ ಕುಮಾರ್ ಸಿನ್ಹಾ ಅವರಿಗೆ ಟಿಕೆಟ್ ನೀಡಲಾಗಿದೆ.

ಬ್ಯಾಂಕಿಪುರದಲ್ಲಿ ಹೈವೋಲ್ಟೇಜ್ ಕದನ

ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನವೀನ್ (Nitin Nabin) ಅವರು ಬ್ಯಾಂಕಿಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.

1995ರಿಂದ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಪ್ರಶಾಂತ್ ಕಿಶೋರ್ ಕಣಕ್ಕಿಳಿದಿರುವುದರಿಂದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಬದಲಾವಣೆ ಈ ಚುನಾವಣೆಗೆ ಮತ್ತಷ್ಟು ರಂಗು ತುಂಬಿದೆ.

Continue Reading

ದೇಶ

Iran-ಅಮೆರಿಕ ಯುದ್ಧ ಆತಂಕ: ಮಂಗಳೂರಿನಲ್ಲಿ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ, ಭಾರತದ ಇಂಧನ ಭದ್ರತೆಗೆ ONGC ಮಹತ್ವದ ನಿರ್ಧಾರ

Published

on

ನವದೆಹಲಿ: ಇರಾನ್-ಅಮೆರಿಕ (Iran-USA War) ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ನಡುವೆಯೇ, ಭಾರತ ತನ್ನ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲೂ ತೈಲ ಕೊರತೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಮಂಗಳೂರಿನಲ್ಲಿ (Mangaluru) ಮತ್ತೊಂದು ಬೃಹತ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (Strategic Petroleum Reserve – SPR) ನಿರ್ಮಾಣಕ್ಕೆ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ತಾತ್ವಿಕ ಅನುಮೋದನೆ ನೀಡಿದೆ.

ಹೊಸದಾಗಿ ನಿರ್ಮಾಣವಾಗಲಿರುವ ಈ ಸಂಗ್ರಹಾಗಾರವು 1.75 MMT ಸಾಮರ್ಥ್ಯ ಹೊಂದಿದ್ದು, ದೇಶದ ತುರ್ತು ತೈಲ ಸಂಗ್ರಹ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ಸುಮಾರು 1.28 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸಬಹುದಾದ ಈ ಯೋಜನೆ, ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ಭಾರತದ ಇಂಧನ ಸುರಕ್ಷತೆಗೆ ದೊಡ್ಡ ಬಲವಾಗಲಿದೆ.

ಪ್ರಸ್ತುತ ಭಾರತದಲ್ಲಿ ಮಂಗಳೂರು, ಪಾದೂರು (ಉಡುಪಿ) ಹಾಗೂ ವಿಶಾಖಪಟ್ಟಣಂನಲ್ಲಿ ಒಟ್ಟು 5.33 MMT ಸಾಮರ್ಥ್ಯದ ಭೂಗತ ತೈಲ ಸಂಗ್ರಹಾಗಾರಗಳಿವೆ. ಈಗ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನಿರ್ಮಾಣವಾಗುವ ಈ ಯೋಜನೆಯಿಂದ ದೇಶದ ತುರ್ತು ತೈಲ ಬ್ಯಾಕಪ್ ಮತ್ತಷ್ಟು ಬಲಿಷ್ಠವಾಗಲಿದೆ.

ಇದುವರೆಗೆ ದೇಶದ ತುರ್ತು ತೈಲ ಸಂಗ್ರಹಾಗಾರಗಳನ್ನು Indian Strategic Petroleum Reserves Limited (ISPRL) ನಿರ್ಮಿಸುತ್ತಿತ್ತು. ಆದರೆ, ಮೊದಲ ಬಾರಿಗೆ ONGC ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಇಂತಹ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಮಂಗಳೂರಿನಲ್ಲಿ ಈಗಾಗಲೇ MRPL ಸಂಸ್ಥೆಯು ದಿನಕ್ಕೆ ಸುಮಾರು 3 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಶುದ್ಧೀಕರಿಸುವ ಸಾಮರ್ಥ್ಯದ ರಿಫೈನರಿ ಹೊಂದಿದೆ. ಹೊಸ ಸಂಗ್ರಹಾಗಾರವನ್ನು ಇದೇ ಮೂಲಸೌಕರ್ಯಕ್ಕೆ ಸಂಪರ್ಕಿಸುವ ಯೋಜನೆ ರೂಪಿಸಲಾಗಿದ್ದು, ವಾಣಿಜ್ಯ ಬಳಕೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ONGC ಕೋರಿದೆ.

MRPL ಷೇರುಗಳಲ್ಲಿ ಭಾರಿ ಏರಿಕೆ

ಈ ಘೋಷಣೆಯ ಬಳಿಕ ONGC ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಷೇರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ ಷೇರುಗಳು ಸುಮಾರು 9% (₹12.17) ಏರಿಕೆಯಾಗಿದ್ದು, ಮಾರುಕಟ್ಟೆ ತಜ್ಞರ ಪ್ರಕಾರ ₹165 ಮಟ್ಟ ದಾಟಿದರೆ ಮುಂದಿನ ದಿನಗಳಲ್ಲಿ ₹190 ರಿಂದ ₹200ರವರೆಗೆ ಏರಿಕೆ ಕಾಣುವ ಸಾಧ್ಯತೆಯಿದೆ.

ತುರ್ತು ತೈಲ ಸಂಗ್ರಹ ಏಕೆ ಅಗತ್ಯ?

ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿದೆ. ಯುದ್ಧ, ಜಾಗತಿಕ ಬಿಕ್ಕಟ್ಟು ಅಥವಾ ಪೂರೈಕೆ ವ್ಯತ್ಯಯದ ಸಂದರ್ಭದಲ್ಲಿ ದೇಶದಲ್ಲಿ ಇಂಧನ ಕೊರತೆ ಉಂಟಾಗದಂತೆ ತಡೆಯಲು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸ್ತುತ ಭಾರತದ ತುರ್ತು ತೈಲ ಸಂಗ್ರಹವು ಸುಮಾರು 9 ದಿನಗಳ ಅವಶ್ಯಕತೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಾಮರ್ಥ್ಯವನ್ನು 15 MMTಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ (IEA) ತನ್ನ ಸದಸ್ಯ ರಾಷ್ಟ್ರಗಳು ಕನಿಷ್ಠ 90 ದಿನಗಳ ತೈಲ ಸಂಗ್ರಹ ಹೊಂದಿರಬೇಕೆಂದು ಶಿಫಾರಸು ಮಾಡಿದೆ.

ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಈ ಹೊಸ ಯೋಜನೆ ಭವಿಷ್ಯದ ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Continue Reading

ದೇಶ

ಅಶೋಕ್ ರೈ ಕಂಬಳಕ್ಕೆ ಸಿದ್ಧ, ಯದುವೀರ್-ಪ್ರತಾಪ್ ಸಿಂಹ ವಿರೋಧ; ದಸರಾದಲ್ಲಿ ಹೊಸ ವಿವಾದ

Published

on

ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಸಿದ್ಧತೆಗಳು ಆರಂಭವಾಗುತ್ತಿದ್ದಂತೆಯೇ ಈ ಬಾರಿ ದಸರಾ ಕಾರ್ಯಕ್ರಮದಲ್ಲಿ ಕಂಬಳ (Kambala) ಆಯೋಜನೆ ಮಾಡುವ ವಿಚಾರ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಪುತ್ತೂರು ಶಾಸಕ ಅಶೋಕ್ ರೈ (Ashok Rai) ಕಂಬಳ ಆಯೋಜನೆಗೆ ಸಿದ್ಧತೆ ಆರಂಭಿಸಿರುವುದಾಗಿ ತಿಳಿಸಿದ್ದರೆ, ಮತ್ತೊಂದೆಡೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮಹೋತ್ಸವದ ಸಿದ್ಧತೆ ಕುರಿತು ಚರ್ಚೆ ನಡೆಯಿತು. ಆಗಸ್ಟ್ 26ರಂದು ಗಜಪಯಣ ಆರಂಭವಾಗಲಿದ್ದು, ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್ 21ರಂದು ವಿಜಯದಶಮಿಯಂದು ಮಧ್ಯಾಹ್ನ 4:10ಕ್ಕೆ ಮೀನಾ ಲಗ್ನದಲ್ಲಿ ಐತಿಹಾಸಿಕ ಜಂಬೂ ಸವಾರಿ ನಡೆಯಲಿದೆ.

ಸಭೆಯಲ್ಲಿ ಕಂಬಳ ಆಯೋಜನೆ ವಿಚಾರವೂ ಪ್ರಸ್ತಾಪವಾಗಿದ್ದು, ಅಂತಿಮ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅಶೋಕ್ ರೈ ಅವರ ಪ್ರಕಾರ, ಕಂಬಳ ಆಯೋಜನೆಗೆ ಸುಮಾರು ₹5 ರಿಂದ ₹6 ಕೋಟಿ ವೆಚ್ಚವಾಗಲಿದ್ದು, ಜುಲೈ 15ರಿಂದಲೇ ಸಿದ್ಧತೆ ಆರಂಭಿಸಲು ಯೋಜಿಸಲಾಗಿದೆ. ಕಂಬಳದ ಮೂಲಕ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಆದರೆ, ಯದುವೀರ್ ಒಡೆಯರ್ ದಸರಾದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ದಸರಾ, ಕಂಬಳ ಮತ್ತು ಇತರೆ ಜಾತ್ರೆಗಳಿಗೆ ತಮ್ಮದೇ ಆದ ವೈಶಿಷ್ಟ್ಯವಿದ್ದು, ಪ್ರತಿಯೊಂದು ಆಚರಣೆಯೂ ತನ್ನ ಸಾಂಪ್ರದಾಯಿಕ ಸ್ವರೂಪದಲ್ಲೇ ನಡೆಯಬೇಕು ಎಂದು ಹೇಳಿದ್ದಾರೆ. ಕಂಬಳದ ಬಗ್ಗೆ ವಿರೋಧವಿಲ್ಲದಿದ್ದರೂ ದಸರಾದ ಮೂಲ ಪರಂಪರೆಯಲ್ಲಿ ಬದಲಾವಣೆ ಬೇಡ ಎಂಬುದು ಅವರ ನಿಲುವಾಗಿದೆ.

Continue Reading

Trending