Connect with us

ರಾಜಕೀಯ

ಡಿ.4 ರಿಂದ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಸಾಧ್ಯತೆ.

Published

on

ಡಿ.4 ರಿಂದ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಸಾಧ್ಯತೆ.

ಬೆಳಗಾವಿ: ವಿಧಾನ ಮಂಡಲಗಳ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರಕಾರ ಸಿದ್ಧತೆ ಆರಂಭಿಸಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂಬ ಪ್ರಶ್ನೆ ಜನರದ್ದು.ಬೆಳಗಾವಿಯಲ್ಲಿಸುವರ್ಣ ವಿಧಾನಸೌಧ ನಿರ್ಮಿಸಿದ ಉದ್ದೇಶದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ನೀಡುವುದು ಪ್ರಮುಖವಾದದ್ದು. ಆದರೆ, 11 ವರ್ಷಗಳಿಂದ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗೆಗಿನ ಚರ್ಚೆಯನ್ನೇ ಕಡೆಗಣಿಸಲಾಗುತ್ತಿದೆ.ಅಧಿವೇಶನದ ಮುಕ್ತಾಯದ ದಿನಗಳಲ್ಲಿ ಔಪಚಾರಿಕವೆಂಬಂತೆ ಒಂದೆರಡು ವಿಷಯ ಚರ್ಚೆಯಾಗುತ್ತದೆ ಹೊರತು ಗಂಭೀರವಾದ ಚರ್ಚೆ ಮತ್ತು ಸಮಸ್ಯೆಗಳ ಪರಿಹಾರದ ಪ್ರಯತ್ನ ನಡೆದೇ ಇಲ್ಲ. ಈ ಬಾರಿ ಡಿಸೆಂಬರ್‌ 4 ರಿಂದ 10 ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರವೇ ಈ ಬಾರಿಯ ಅಧಿವೇಶನದ ಆದ್ಯತೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಿಂದ ಬೆಳಗಾವಿ ಜಿಲ್ಲೆಯ ಜನರಿಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಅಧಿವೇಶನ ಪ್ರಾರಂಭವಾಗುವ 15 ದಿನ ಮೊದಲಿಂದ ಅಧಿವೇಶನ ಮುಗಿದು ಒಂದು ವಾರದವರೆಗೆ ಬೆಳಗಾವಿಯ ಸರಕಾರಿ ಕಚೇರಿಗಳು ಸಿಬ್ಬಂದಿ, ಅಧಿಕಾರಿಗಳಿಲ್ಲದೇ ಬಣಗುಡುತ್ತವೆ. ಬಹುತೇಕ ಅಧಿಕಾರಿ, ಸಿಬ್ಬಂದಿ ಅಧಿವೇಶನದ ಕರ್ತವ್ಯದಲ್ಲಿರುತ್ತಾರೆ. ಜನ ಸಾಮಾನ್ಯರ ಕಡತಗಳು ಮೂಲೆಗುಂಪಾಗಿರುತ್ತವೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರವಾದರೂ ಸಿಕ್ಕರೆ ಇಂಥ ವಿಷಯಗಳು ಗೌಣವಾಗುತ್ತವೆ ಎಂದು ಜಿಲ್ಲೆಯ ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.”ಈ ವರ್ಷ ಡಿ.4 ರಿಂದ 14 ರವರೆಗೆ ಅಧಿವೇಶನ ನಡೆಯುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈಗಾಗಲೇ ಪ್ರಾಥಮಿಕ ಹಂತದ ಸಿದ್ಧತೆಗಳನ್ನು ನಡೆಸಿದ್ದೇವೆ. ಅಧಿವೇಶನಕ್ಕೆ ಬರುವ ಅತಿಥಿಗಳ ವಸತಿ ವ್ಯವಸ್ಥೆಯ ಸಲುವಾಗಿ ಹೋಟೆಲ್‌ ಮಾಲೀಕರ ಸಭೆ ನಡೆಸಲಾಗಿದೆ. ವಾಹನಗಳ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಸಜ್ಜುಗೊಳಿಸಲಾಗುತ್ತಿದೆ. ಸರಕಾರದಿಂದ ಅಧಿಕೃತವಾಗಿ ಆದೇಶ ಬಂದ ಬಳಿಕ ಸಿದ್ಧತೆಯನ್ನು ಚುರುಕಾಗಿ ನಡೆಸಲಾಗುತ್ತದೆ,”ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ತಿಳಿಸಿದರು.

Continue Reading

ದೇಶ

“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್‌ ಟಾಂಗ್‌, ದಾವಣಗೆರೆ ರಾಜಕೀಯ ಕುತೂಹಲ

Published

on

By

ದಾವಣಗೆರೆ ದಕ್ಷಿಣ ಉಪಚುನಾವಣೆ ರಾಜಕೀಯ ಕಣ ದಿನೇದಿನೇ ರಂಗೇರುತ್ತಿದ್ದು, ಸಚಿವ ಜಮೀರ್‌ ಅಹ್ಮದ್‌ ಖಾನ್ ಅವರ ಆಗಮನದಿಂದ ಹೊಸ ತಿರುವು ಪಡೆದುಕೊಂಡಿದೆ. ಹಲವು ದಿನಗಳಿಂದ ಮುಂದುವರಿದಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಅವರು ಕೊನೆಗೂ ದಾವಣಗೆರೆಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ.

ಟಿಕೆಟ್‌ ಹಂಚಿಕೆ ವೇಳೆ ಉಂಟಾದ ಗಲಾಟೆ ಸಂದರ್ಭದಲ್ಲಿ ಎಸ್‌ಎಸ್‌ ಮಲ್ಲಿಕಾರ್ಜುನ್ ಅವರು “ಯಾರ್ರಿ ಜಮೀರ್‌ ದಾವಣಗೆರೆ ಬಗ್ಗೆ ಮಾತನಾಡಲು” ಎಂದು ಹೇಳಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಜಮೀರ್‌ ಅಸಮಾಧಾನಗೊಂಡಿದ್ದರು.

ಆದರೆ ಇದೀಗ ರಾಜಕೀಯ ವಾತಾವರಣ ಬದಲಾಗಿದ್ದು, ಜಮೀರ್‌ ಅವರನ್ನು ಸ್ವತಃ ಮಲ್ಲಿಕಾರ್ಜುನ್‌ ಅವರು ಸ್ವಾಗತಿಸಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್‌, “ನಾವಿಬ್ಬರೂ ಸ್ನೇಹಿತರು. ಯಾವುದೇ ಬೇಸರ ಇಲ್ಲ. ಸಿಟ್ಟಿನಲ್ಲಿ ಹೇಳಿದ ಮಾತು ಅಷ್ಟೇ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಅವರು ಪರೋಕ್ಷವಾಗಿ ಟಾಂಗ್ ಕೊಡುತ್ತಾ, “ನನ್ನ ಕ್ಷೇತ್ರ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನು ಸುಮ್ಮನೆ ಇರ್ತಿನಾ?” ಎಂದು ಪ್ರತಿಕ್ರಿಯೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್‌, “ಈಗ ಎಲ್ಲವೂ ಬಗೆಹರಿದಿದೆ. ನಾವು ಬಹಳ ವರ್ಷಗಳಿಂದ ಸ್ನೇಹಿತರು,” ಎಂದು ಹೇಳಿದರು.

ಈ ಬೆಳವಣಿಗೆ ದಾವಣಗೆರೆ ರಾಜಕೀಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದಂತೆ ಕಾಣುತ್ತಿದೆ.

Continue Reading

ದೇಶ

ಜಮೀರ್ ಅಹ್ಮದ್‌ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!

Published

on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರಿಯ ನಾಯಕನಾಗಿ ಹೊರಹೊಮ್ಮುತ್ತಿರುವ ವಸತಿ ಸಚಿವ Zameer Ahmed Khan ಅವರಿಗೆ ಎಐಸಿಸಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಅವರ ಪ್ರಭಾವವನ್ನು ಗಮನಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಸ್ತುತ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಜಮೀರ್ ಅಹ್ಮದ್, ರಾಜ್ಯದ ಉಪಚುನಾವಣೆಗಳ ಪ್ರಚಾರಕ್ಕೆ ಬರಲು ಸಾಧ್ಯವಾಗದೇ ಬ್ಯುಸಿಯಾಗಿದ್ದಾರೆ. ಕೇರಳದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಅಲ್ಲಿಯೇ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾಗವಹಿಸಲು ಜಮೀರ್ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಕೇರಳದ ಪ್ರಚಾರ ಕಾರ್ಯದಿಂದ ಬಿಡುವಿಲ್ಲ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ Siddaramaiah ಸೂಚನೆ ಇದ್ದರೂ, ಎಐಸಿಸಿ ನಾಯಕತ್ವದಿಂದಲೇ ತಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೂ ನಡುವೆ, ಎಐಸಿಸಿ ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನ ಸದಸ್ಯರಾಗಿ ಜಮೀರ್ ಅಹ್ಮದ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿಗೆ ಕೇರಳದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ನಾಯಕತ್ವದ ಮಟ್ಟದಲ್ಲೂ ಬದಲಾವಣೆ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ.

ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಈ ನೇಮಕಾತಿ ನಡೆದಿದ್ದು, ಜಮೀರ್ ಅವರ ಜನಪ್ರಿಯತೆ ದಿನೇದಿನೇ ಏರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲೂ ಉಪಚುನಾವಣೆಗಳ ನಡುವೆ ಅವರ ಗೈರುಹಾಜರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ಸೋಮಣ್ಣ ವಿರುದ್ಧ ಸಿಎಂ ಸಿಡಿತ: “ಕೆಲಸವಿಲ್ಲದ ಮಂತ್ರಿ!”

Published

on

By

ಬಾಗಲಕೋಟೆ: ಬಿಜೆಪಿ ನಾಯಕ V. Somanna ವಿರುದ್ಧ ಮುಖ್ಯಮಂತ್ರಿ Siddaramaiah ತೀವ್ರ ವಾಗ್ದಾಳಿ ನಡೆಸಿದ್ದು, “ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ, ಅವರಿಗೆ ಯಾವುದೇ ಕಡತ ಹೋಗುವುದಿಲ್ಲ” ಎಂದು ಟೀಕಿಸಿದರು.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ನಾವು ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯವಿಲ್ಲ” ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳ ಸ್ಥಾನ ಕುರಿತು ಬಿಜೆಪಿ ನಾಯಕರು ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ, ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದರು.

ಬಿಜೆಪಿಯ ಮೇಲೆ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, “ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಾತಿನಲ್ಲಿ ಸತ್ಯವಿಲ್ಲ, ನಡೆದಲ್ಲಿ ನಂಬಿಕೆ ಇಲ್ಲ” ಎಂದು ಟೀಕಿಸಿದರು. ಜೊತೆಗೆ, ಪಕ್ಷದಿಂದ ಉಚ್ಛಾಟನೆಯಾದ Basanagouda Patil Yatnal ಅವರನ್ನು ಮತ್ತೆ ಪ್ರಚಾರಕ್ಕೆ ಕರೆತಂದು ಬಳಸಿಕೊಳ್ಳುತ್ತಿರುವುದು ಬಿಜೆಪಿ ದ್ವಂದ್ವ ನೀತಿಗೆ ಉದಾಹರಣೆ ಎಂದು ಹೇಳಿದರು.

ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಮಾತನಾಡಿದ ಅವರು, “ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇವಲ ವಿತರಣೆಯನ್ನು ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ Narendra Modi ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂಬ ಹೇಳಿಕೆಯನ್ನೂ ನೀಡಿದರು.

ಇನ್ನೂ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, Rahul Gandhi, Sonia Gandhi, Mallikarjun Kharge ಮತ್ತು Priyanka Gandhi ಅವರೇ ಪಕ್ಷದ ಹೈಕಮಾಂಡ್ ಎಂದು ಹೇಳಿದರು.

ಒಟ್ಟಿನಲ್ಲಿ, ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.

Continue Reading

Trending