Connect with us

ಆರೋಗ್ಯ

ಪೂರ್ವೋತ್ತನಾಸನ

Published

on

ಪೂರ್ವೋತ್ತನಾಸನ

ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಭುಜ, ಬೆನ್ನು ನೋವು ಹಾಗೂ ಕುತ್ತಿಗೆ ನೋವು ತುಂಬಾನೇ ಸಾಮಾನ್ಯವಾಗಿ ಬಿಟ್ಟಿದೆ. ಕಚೇರಿ, ಮನೆಯಲ್ಲಿ ಕೆಲಸ ಮಾಡುವವರನ್ನು ಸೇರಿ ಸಾಮಾನ್ಯವಾಗಿ ಇತ್ತೀಚೆಗೆ ಈ ಭುಜ, ಕತ್ತು,ಬೆನ್ನು ನೋವು ಜನರನ್ನು ಬಹಳ ಕಾಡುವಂತದ್ದು. ಬಿಡುವಿಲ್ಲದ ಕೆಲಸದಲ್ಲಿ ಸಣ್ಣ-ಪುಟ್ಟ ದೈನಂದಿನ ವ್ಯಾಯಾಮವನ್ನೂ ಸಹ ಕೆಲವರು ಬಿಟ್ಟು ಬಿಟ್ಟಿದ್ದಾರೆ. ಜಡ ಜೀವನಶೈಲಿ ಯಾವಾಗಲೂ ಅನಾರೋಗ್ಯಕರವಾದದ್ದು. ಬಿಡುವಿಲ್ಲದ ಕೆಲಸದ ಮಧ್ಯದಲ್ಲಿಯೂ ಎದ್ದು ಸ್ವಲ್ಪ ಹೊತ್ತು ಓಡಾಡುವ, ಕೈ ಕಾಲು, ಕತ್ತನ್ನು ಆಡಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯಾವುದೇ ದೈಹಿಕ ವ್ಯಾಯಾಮ ಇಲ್ಲದ ಜನರಲ್ಲಿ ಸ್ನಾಯು ಸಮಸ್ಯೆ ಹೆಚ್ಚು ಕಂಡುಬರುತ್ತಿದೆ. ಅದರಲ್ಲೂ ವಿಶೇಷವಾಗಿ ಭುಜ, ಬೆನ್ನು ಮತ್ತು ಕೋರ್ ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ಪೂರ್ವೋತ್ತನಾಸನ ಭಂಗಿಯು ಆರಂಭಿಕರಿಗೆ ಉತ್ತಮ ಯೋಗದ ಆಸನವಾಗಿದೆ ಎನ್ನುತ್ತಾರೆ. ಇದು “ಭುಜ, ಕೋರ್ ಮತ್ತು ಬೆನ್ನುಮೂಳೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಶರೀರದ ಮುಂಭಾಗವನ್ನು ಹಿಗ್ಗಿಸಲ್ಪಡುವ ಈ ಭಂಗಿಗೆ ಪೂರ್ವೋತ್ತಾನಾಸನ ಎಂದು ಹೆಸರು.

ಪೂರ್ವೋತ್ತನಾಸನ ಮಾಡುವ ವಿಧಾನ:
⦁ ಮೊದಲಿಗೆ ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ.
⦁ ಎರಡೂ ಹಸ್ತಗಳನ್ನು ಪೃಷ್ಠದ ಹಿಂದೆ ನೆಲಕ್ಕೆ ಊರಿ ಸೊಂಟವನ್ನು ಮೇಲಕ್ಕೆ ಎತ್ತಿ.
⦁ ಅಂಗಾಲನ್ನು ಸಂಪೂರ್ಣವಾಗಿ ನೆಲಕ್ಕೆ ಒತ್ತಿ.
⦁ ಗದ್ದವನ್ನು ಎದೆಯ ಕಡೆಗೂ, ನಾಭಿಯನ್ನು ಒಳಗೆಳೆದು ಎದೆಯ ನೇರಕ್ಕೆ ತೆಗೆದುಕೊಳ್ಳಿ.
⦁ ಈ ಸ್ಥಿತಿಯಲ್ಲಿ ಉಸಿರಾಟ ಕ್ರಿಯೆ ಸಹಜವಾಗಿರಲಿ..

ಪೂರ್ವೋತ್ತನಾಸನ ಅನುಕೂಲಗಳು:
⦁ ಈ ಭಂಗಿಯು ಆರಂಭಿಕರಿಗೆ ಉತ್ತಮ ಯೋಗದ ಆಸನವಾಗಿದೆ ಎನ್ನುತ್ತಾರೆ.
⦁ ಇದು “ಭುಜ, ಕೋರ್ ಮತ್ತು ಬೆನ್ನುಮೂಳೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
⦁ ಇದು ಸಮತೋಲನ ಮತ್ತು ಭಂಗಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
⦁ ಮನಸ್ಸಿನ ಮೇಲೆ ಅತ್ಯಂತ ಪರಿಣಾಮ ಬೀರುತ್ತದೆ .
⦁ ಈ ಆಸನ ಮಾಡುವುದರಿಂದ ಮನಸ್ಸು ಶಾಂತವಾಗಿ ಎನಿಸುತ್ತದೆ.
⦁ ಈ ಆಸನ ಮಾಡುವುದರಿಂದ ಎದೆಯ ಭಾಗ ಹಿಗ್ಗಲ್ಪಡುವುದು.
⦁ ತೊಡೆ ಮತ್ತು ನಾಭಿಯ ಭಾಗದ ಕೊಬ್ಬಿನಾಂಶ ಕರಗುವುದು.
⦁ ಗೂನು ಬೆನ್ನು ನಿವಾರಣೆಯಾಗಿ ಬೆನ್ನಿನ ಭಾಗಕ್ಕೆ ಚೈತನ್ಯ ಬರುವುದು.

ಎಚ್ಚರಿಕೆ:
ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿದ್ದರೆ, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಮಣಿಕಟ್ಟುಗಳು, ಭುಜಗಳು ಮತ್ತು ಬೆನ್ನಿನ ಯಾವುದೇ ಗಾಯಗಳಿಂದ ಬಳಲುತ್ತಿದ್ದರೆ ಈ ಆಸನವನ್ನು ಅಭ್ಯಾಸ ಮಾಡಬಾರದು

ಆರೋಗ್ಯ

ಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?

Published

on

ಬೆಂಗಳೂರು: ಮೂತ್ರಪಿಂಡದ ಕಲ್ಲು (Kidney Stone) ಮೂತ್ರಕೋಶಕ್ಕೆ ತಲುಪಿದ ಬಳಿಕ ಸುಲಭವಾಗಿ ಹೊರಹೋಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕೆಲವೊಮ್ಮೆ ಈ ಕಲ್ಲುಗಳು ಮೂತ್ರಕೋಶದಲ್ಲೇ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ 4–5 ಮಿಮೀ ಗಾತ್ರದ ಕಲ್ಲುಗಳು ಸಹಜವಾಗಿ ಮೂತ್ರದ ಮೂಲಕ ಹೊರಹೋಗುತ್ತವೆ. ಆದರೆ 7 ಮಿಮೀಗಿಂತ ದೊಡ್ಡದಾದ ಅಥವಾ ಅಸಮ ಆಕಾರ ಹೊಂದಿರುವ ಕಲ್ಲುಗಳು ಮೂತ್ರನಾಳದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಕೆಳ ಹೊಟ್ಟೆ ನೋವು, ಮೂತ್ರ ವಿಸರ್ಜನೆ ವೇಳೆ ಉರಿ, ಮೂತ್ರದಲ್ಲಿ ರಕ್ತ ಹಾಗೂ ದುರ್ವಾಸನೆ ಕಾಣಿಸಬಹುದು.

ಮೂತ್ರಕೋಶ ಸರಿಯಾಗಿ ಖಾಲಿಯಾಗದಿರುವುದು ಕೂಡ ಪ್ರಮುಖ ಕಾರಣ. ಮೂತ್ರದ ಹರಿವು ಕಡಿಮೆಯಾಗುವ ಸ್ಥಿತಿ ಅಥವಾ ವೃದ್ಧರಾದ ಪುರುಷರಲ್ಲಿ ಕಾಣಿಸುವ ಪ್ರಾಸ್ಟೇಟ್ ವಿಸ್ತರಣೆ (BPH) ಸಮಸ್ಯೆಯಿಂದ ಕಲ್ಲುಗಳು ಸಿಲುಕಿಕೊಳ್ಳಬಹುದು. ಜೊತೆಗೆ ಮಧುಮೇಹ ಅಥವಾ ನರ ಸಮಸ್ಯೆಗಳೂ ಪರಿಣಾಮ ಬೀರುತ್ತವೆ.

ಕಲ್ಲುಗಳು ಹೆಚ್ಚು ಕಾಲ ಸಿಲುಕಿಕೊಂಡಿದ್ದರೆ ಸೋಂಕು (UTI), ಮೂತ್ರ ಧಾರಣ ತೊಂದರೆ ಹಾಗೂ ಮೂತ್ರಕೋಶದ ಉರಿಯೂತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಜ್ವರ, ತೀವ್ರ ನೋವು, ಮೂತ್ರವಿಸರ್ಜನೆ ಅಸಾಧ್ಯತೆ ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.

ತಜ್ಞರ ಪ್ರಕಾರ, ಸಾಕಷ್ಟು ನೀರು ಕುಡಿಯುವುದು, ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. “ಡಬಲ್ ವಾಯ್ಡ್” ಎಂಬ ವಿಧಾನವು ಮೂತ್ರಕೋಶ ಸಂಪೂರ್ಣ ಖಾಲಿಯಾಗಲು ಸಹಕಾರಿಯಾಗುತ್ತದೆ.

ಒಟ್ಟಿನಲ್ಲಿ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿರ್ಲಕ್ಷಿಸದೇ ಆರಂಭಿಕ ಲಕ್ಷಣಗಳಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.

Note: This information is provided by Dr. Venkatswamy and the Hosasuddi.in health team. Before publishing, Hosasuddi.in follows medical guidelines and expert advice.

Continue Reading

ಆರೋಗ್ಯ

ಮಧುಮೇಹ-ಬೊಜ್ಜಿಗೆ GLP-1 ಔಷಧ: ಪ್ರಯೋಜನದ ಜೊತೆ ಅಪಾಯವೂ!

Published

on

ನವದೆಹಲಿ: ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ GLP-1 ಔಷಧಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಎಚ್ಚರಿಕೆ ನೀಡಿದೆ. ಈ ಔಷಧಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಆರೋಗ್ಯ ಇಲಾಖೆ ಹೇಳುವಂತೆ, GLP-1 ಔಷಧಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಕಾರಿ. ಆದರೆ ವಾಕರಿಕೆ, ವಾಂತಿ ಮುಂತಾದ ಸಾಮಾನ್ಯ ಅಡ್ಡಪರಿಣಾಮಗಳಿಂದ ಹಿಡಿದು ಮೂತ್ರಪಿಂಡ ಹಾನಿ, ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಕರುಳಿನ ಅಡಚಣೆಗಳಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.

Type 2 Diabetes ಮತ್ತು Obesity ಹೊಂದಿರುವವರು ಈ ಔಷಧಗಳನ್ನು ಕಡ್ಡಾಯವಾಗಿ ನೋಂದಾಯಿತ ವೈದ್ಯರ ಮೇಲ್ವಿಚಾರಣೆಯಲ್ಲೇ ಬಳಸಬೇಕು ಎಂದು ಸೂಚಿಸಲಾಗಿದೆ. ಅನಧಿಕೃತ ಮಾರಾಟ ಮತ್ತು ಮೇಲ್ವಿಚಾರಣೆಯಿಲ್ಲದ ಬಳಕೆಯನ್ನು ತಡೆಯಲು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿಸಲಾಗಿದೆ.

ಸಚಿವಾಲಯದ ಪ್ರಕಾರ, ಹೆಚ್ಚಿನ ತೂಕ, ವ್ಯಾಯಾಮದ ಕೊರತೆ ಮತ್ತು ಹೆಚ್ಚು ಸಕ್ಕರೆ ಸೇವನೆ ಟೈಪ್ 2 ಮಧುಮೇಹದ ಪ್ರಮುಖ ಕಾರಣಗಳಾಗಿವೆ. ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಈ ರೋಗವನ್ನು ತಡೆಗಟ್ಟಬಹುದು.

Continue Reading

ಆರೋಗ್ಯ

ಜಂಕ್ ಫುಡ್ ಬೇಡ! ಹಣ್ಣುಗಳಿಂದ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಿ

Published

on

ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ತೂಕ ಇಳಿಸುವುದು ಎಷ್ಟು ಕಷ್ಟವೋ, ಅತಿಯಾಗಿ ಸಪೂರ ಮೈಕಟ್ಟು ಹೊಂದಿರುವವರಿಗೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಸವಾಲಾಗಿದೆ. ತೂಕ ಹೆಚ್ಚಿಸುವುದು ಎಂದರೆ ಕೇವಲ ಕೊಬ್ಬು ಹೆಚ್ಚಿಸುವುದಲ್ಲ; ಬದಲಾಗಿ ದೇಹದಲ್ಲಿ ಸದೃಢ ಸ್ನಾಯುಗಳ (ಮಸಲ್ಸ್) ವೃದ್ಧಿ ಮುಖ್ಯ.

ಜಂಕ್ ಫುಡ್‌ಗಳಿಗೆ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ ವಿಧಾನವಾಗಿದೆ. ಕೆಲವು ಹಣ್ಣುಗಳು ದೇಹಕ್ಕೆ ಅಗತ್ಯ ಕ್ಯಾಲರಿ, ಪೋಷಕಾಂಶಗಳನ್ನು ನೀಡುವುದರ ಮೂಲಕ ತೂಕ ಹೆಚ್ಚಿಸಲು ಸಹಾಯ ಮಾಡುತ್ತವೆ.

ಬಾಳೆಹಣ್ಣು (Banana): ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ತೂಕ ಹೆಚ್ಚಿಸಲು ಪರಿಣಾಮಕಾರಿ. ದಿನಕ್ಕೆ 2–3 ಬಾಳೆಹಣ್ಣು ತಿನ್ನುವುದು ಅಥವಾ ಹಾಲಿನೊಂದಿಗೆ ಬನಾನಾ ಶೇಕ್ ಸೇವಿಸುವುದು ವೇಗವಾಗಿ ಫಲ ನೀಡುತ್ತದೆ.

ಅವಕಾಡೋ (Avocado): ಆರೋಗ್ಯಕರ ಕೊಬ್ಬಿನ ಮೂಲವಾಗಿರುವ ಈ ಹಣ್ಣು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ತೂಕವನ್ನು ಸಮತೋಲನದಿಂದ ಹೆಚ್ಚಿಸುತ್ತದೆ.

ಮಾವಿನ ಹಣ್ಣು (Mango): ನೈಸರ್ಗಿಕ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲರಿಗಳಿಂದ ಕೂಡಿದ ಮಾವಿನ ಹಣ್ಣು ತೂಕ ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಒಣಹಣ್ಣುಗಳು (Dry Fruits): ಅಂಜೂರ, ಖರ್ಜೂರ, ಒಣ ದ್ರಾಕ್ಷಿ ಮುಂತಾದವು ತೂಕ ಹೆಚ್ಚಿಸಲು ಅತ್ಯುತ್ತಮ. ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಿದರೆ ಹೆಚ್ಚು ಲಾಭಕರ.

ಇದಲ್ಲದೆ ಸಪೋಟ, ಹಲಸಿನ ಹಣ್ಣುಗಳೂ ಸಹ ಸಹಾಯಕ. ಆದರೆ ಕೇವಲ ಆಹಾರ ಸೇವನೆ ಸಾಕಾಗುವುದಿಲ್ಲ; ಲಘು ವ್ಯಾಯಾಮ ಮತ್ತು ಯೋಗಾಭ್ಯಾಸದಿಂದ ಆಹಾರ ಸ್ನಾಯುವಾಗಿ ಪರಿವರ್ತನೆಗೊಳ್ಳಲು ಸಹಾಯವಾಗುತ್ತದೆ.

ನಿಯಮಿತ ಆಹಾರ ಮತ್ತು ತಾಳ್ಮೆಯೊಂದಿಗೆ ಈ ಕ್ರಮ ಪಾಲಿಸಿದರೆ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳುವುದು ಸಾಧ್ಯ. ಈ ಮಾಹಿತಿಯನ್ನು ಆರೋಗ್ಯ ತಜ್ಞರು ಹಂಚಿಕೊಂಡಿದ್ದು, ಅದರ ಆಧಾರದ ಮೇಲೆ ಹೊಸ ಸುದ್ದಿ (Hosasuddi) ತಂಡವು ಈ ಲೇಖನವನ್ನು ಪ್ರಕಟಿಸಿದೆ.

Continue Reading

Trending