ದೇಶ
ನಾಳೆ ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ (ಅ.26) ಐಐಎಂ ಬೆಂಗಳೂರಿನ ಸ್ಥಾಪನಾ ಸುವರ್ಣ ಮಹೋತ್ಸವ ಸಪ್ತಾಹ ಆಚರಣೆ ಗೆ ಚಾಲನೆ ನೀಡಲಿದ್ದಾರೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ ಅ.26 ಸುವರ್ಣ ಮಹೋತ್ಸವ ಆಚರಣೆಗ ಚಾಲನೆ ನೀಡಿ ಮಾತನಾಡಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಐಐಎಂ ಬಿ ಕ್ಯಾಂಪಸ್ ಕುರಿತ ಪುಸ್ತಕ ಬಿಡುಗಡೆ ಮತ್ತು ಐಐಎಂಬಿ ಕುರಿತಾದ ಸಾಕ್ಷ್ಯಚಿತ್ರವನ್ನೂ ಪ್ರದರ್ಶಿಸಲಾಗುತ್ತದೆ ಎಂದು ಐಐಎಂ ಬೆಂಗಳೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐಐಎಂ ಬಿಯ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ಹಳೆಯ ವಿದ್ಯಾರ್ಥಿಗಳು ಭಾಗವಹಿಸುವ 50 ಗಂಟೆಗಳ ಗೋಲ್ಡನ್ ಜುಬಿಲಿ ರಿಲೇ ವಾಕಥಾನ್ ‘ಸ್ವರ್ಣ ತ್ವರಣ’ ಗೆ ಡಿಜಿಟಲ್ ಆಗಿ ಚಾಲನೆ ನೀಡಲಿದ್ದಾರೆ.ಕರ್ನಾಟಕದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯಿಂದ ಹೆಚ್ಎಎಲ್ ಏರ್ಪೋರ್ಟ್ಗೆ ನಾಳೆ ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಐಐಎಂ ಸಂಸ್ಥಾಪನಾ ಉದ್ಘಾಟಿಸಲಿದ್ದು, 6.05ಕ್ಕೆ ಬೆಂಗಳೂರಿನಿಂದ ಚೆನ್ನೈಗೆ ತೆರಳಲಿದ್ದಾರೆ.