crcket

ಧರ್ಮಶಾಲಾದಲ್ಲಿ ಕೋಚ್ ರಾಹುಲ್ ದ್ರಾವಿಡ್ ಜೋತೆ ಟ್ರೆಕ್ಕಿಂಗ್:ಸತತ ಗೆಲುವಿನ ಬಳಿಕ ಟೀಮ್ ಇಂಡಿಯಾ ರಿಲ್ಯಾಕ್ಸ್ ಮೂಡ್

ಸತತ ಗೆಲುವಿನ ಬಳಿಕ ಟೀಮ್ ಇಂಡಿಯಾ ರಿಲ್ಯಾಕ್ಸ್ ಮೂಡ್

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ವಿಶ್ರಾಂತಿಯ ಮೊರೆ ಹೋಗಿದ್ದರು. ಸ್ವಲ್ಪ ವಿಶ್ರಾಂತಿ ಪಡೆದ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೆ ಭಾರತ ತಂಡವು ಮುಂಬರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಲಕ್ನೋಗೆ ತಲುಪಿದೆ. ವಿರಾಟ್ ಕೊಹ್ಲಿ ಅಕ್ಟೋಬರ್ 25 ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ವಿಮಾನದೊಳಗೆ ಕುಳಿತಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಆಗಲು ಪ್ರಕೃತಿ ನಡುವೆ ಸಮಯ ಕಳೆದಿದ್ದಾರೆ. ಟೀಮ್ ಇಂಡಿಯಾ ಸಿಬ್ಬಂದಿ ಟ್ರೆಕ್ಕಿಂಗ್ ಮೂಲಕ ಧರ್ಮಶಾಲಾದ ಪ್ರಕೃತಿಯನ್ನು ಎಂಜಾಯ್ ಮಾಡಿದ್ದಾರೆ. ಈ ಟ್ರೆಕ್ಕಿಂಗ್ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ Instagram ಖಾತೆಯಲ್ಲಿ ಹಂಚಿಕೊಂಡಿದೆ.

Trending

Exit mobile version