ಸೋಶಿಯಲ್ ಮೀಡಿಯಾ
ಮದ್ಯದೊರೆ ವಿಜಯ್ ಮಲ್ಯ ಮಗ ಸಿದ್ಧಾರ್ಥ್ ನಿಶ್ಚಿತಾರ್ಥ!

ಭಾರತದ ಖ್ಯಾತ ಉದ್ಯಮಿ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ಅವರು ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ರೊಂದಿಗೆ ವಿಶಿಷ್ಟವಾದ ಹ್ಯಾಲೋವೀನ್ ಆಚರಣೆ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಸಿದ್ಧಾರ್ಥ್ ಸ್ವತಃ ಈ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಮುದ್ದಾದ ಜೋಡಿಗೆ ಫಾಲೋವರ್ಸ್ ಹಾಗೂ ಸ್ನೇಹಿತರು ಶುಭಾಶಯ ಕೋರಿದ್ದಾರೆ.ನವೆಂಬರ್ 1 ರಂದು ಸಿದ್ಧಾರ್ಥ್ ತಮ್ಮ Instagram ನಲ್ಲಿ ತಮ್ಮ ಗೆಳತಿ ಜಾಸ್ಮಿನ್ ಅವರೊಂದಿಗೆ ನಿಶ್ಚಿತಾರ್ಥದ ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಸಿದ್ಧಾರ್ಥ ತನ್ನ ಮೊಣಕಾಲು ಊರಿ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡುತ್ತಿರುವುದನ್ನ ಕಾಣಬಹುದು.ಹ್ಯಾಲೋವೀನ್ ಟ್ರೆಂಡ್‌ನೊಂದಿಗೆ ವಿಜಯ್ ಮಲ್ಯ ಮಗ ಕುಂಬಳಕಾಯಿಯ ಉಡುಪನ್ನು ಧರಿಸಿದ್ದರು ಮತ್ತು ಅವರ ಗೆಳತಿ ಜಾಸ್ಮಿನ್ ಮಾಟಗಾತಿ ಉಡುಗೆಯನ್ನು ಧರಿಸಿದ್ದರು. ಎರಡನೇ ಫೋಟೋದಲ್ಲಿ ಈ ಜೋಡಿ ಪರಸ್ಪರ ಪೋಸ್ ನೀಡುತ್ತಿರುವಾಗ ಜಾಸ್ಮಿನ್ ತನ್ನ ನಿಶ್ಚಿತಾರ್ಥದ ಉಂಗುರವನ್ನು ತೋರಿಸುತ್ತಿದ್ದಾರೆ.ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಸಿದ್ಧಾರ್ಥ ” ನೀನು ನನ್ನೊಂದಿಗೆ ಈಗ ಶಾಶ್ವತವಾಗಿ ಸಿಲುಕಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. I love u my juppet ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನನ್ನ ಪ್ರಪೋಸ್ ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.ಜಾಸ್ಮಿನ್ ಕೂಡ ತನ್ನ ವಜ್ರದ ಉಂಗುರವನ್ನು ಪ್ರದರ್ಶಿಸುವ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಪೋಸ್ಟ್ ನಲ್ಲಿ “ಎಂದೆಂದಿಗೂ” ನಿಮ್ಮ ಜೊತೆ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.ಸಿದ್ದಾರ್ಥ್ ಮಲ್ಯ ಹಾಗೂ ಜಾಸ್ಮಿನ್ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದು, ಶಾಶ್ವತವಾಗಿ ದಂಪತಿಗಳಾಗಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರು ಜೊತೆಯಾಗಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.