Connect with us

ಬೆಂಗಳೂರು

ಸಿದ್ದರಾಮಯ್ಯ ಮತ್ತೆ ತಪ್ಪು ಮಾಹಿತಿ ಹರಡಿದ್ದಾರೆ ತೇಜಸ್ವಿ ಸೂರ್ಯ

Published

on

ಸಿದ್ದರಾಮಯ್ಯ ಮತ್ತೆ ತಪ್ಪು ಮಾಹಿತಿ ಹರಡಿದ್ದಾರೆ ತೇಜಸ್ವಿ ಸೂರ್ಯ
ಸಿದ್ದರಾಮಯ್ಯ ಮತ್ತೆ ತಪ್ಪು ಮಾಹಿತಿ ಹರಡಿದ್ದಾರೆ ತೇಜಸ್ವಿ ಸೂರ್ಯ

ಬೆಂಗಳೂರು: ಅಪರೂಪದ ಕಾಯಿಲೆಗಳ ಔಷಧ ಬಗ್ಗೆ ಸಿಎಂ ಸಿದ್ದರಾಮಯ್ಯ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು, ರಾಜ್ಯದ 15 ತಿಂಗಳ ಮೌರ್ಯ ಎನ್ನುವ ಮಗುವೊಂದು ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದಾನೆ, ಈ ಮಗುವಿನ ಕಾಯಿಗಲೆಯ ಅಪರೂಪದ್ದಾಗಿದ್ದು ಚಿಕಿತ್ಸೆಗೆ ಬೇಕಾದ ಔಷಧವನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ, ಅದಕ್ಕೆ 17.5 ಕೋಟಿ ರೂ ಇರುವುದರಿಂದ ಔಷಧದ ಮೇಲಿನ ಅಮದು ಸುಂಕ ತೆಗೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಸಿದ್ದರಾಮಯ್ಯ ನಿನ್ನೆ ಮನವಿ ಮಾಡಿದ್ದರು, ಅದರೆ ಇಂದು ಈ ಟ್ವೀಟ್‍ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ,

ಟ್ವೀಟ್‍ನಲ್ಲಿ ಏನಿದೆ?
ಸಿಎಂ ಸಿದ್ದರಾಮಯ್ಯ ಅವರು ಮಗುವಿನ ಔಷಧಿ ವಿಚಾರಕ್ಕೆ ಸಂಬಂಧಿಸಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ, 2021 ರಲ್ಲಿ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ ಎಂಬ ಕಾಯಿಲೆಯ ಔಷಧಿ ಮೇಲಿನ ಅಮದು ಸುಂಕವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ, ಈ ಎಲ್ಲಾ ಮಾಹಿತಿ ಸಾರ್ವಜನಿಕ ವೇದಿಕೆಯಲ್ಲಿದೆ, ಸಿಎಂ ಕಚೇರಿ ಹೆಚ್ಚು ಜವಾಬ್ದಾರರಾಗಿರಬೇಕು ಇಂತಹ ಸೂಕ್ಷ್ಮ ವಿಷಯಗಳಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸಬಾರದು ಎಂದು ತಿಳಿಸಿದಿದ್ದಾರೆ,
ಒಂದು ವಾರದ ಹಿಂದೆ ನಾನು ಮೌರ್ಯ ಅವರನ್ನು ಭೇಟಿಯಾಗಿದ್ದೆ ಈ ವೇಳೆ ಕುಟುಂಬಕ್ಕೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದೇನೆ, ನಾನು ಮಗುವಿಗೆ ಪಿಎಂಎನ್‍ಆರ್‍ಫ್ ಅಡಿಯಲ್ಲಿ ಸಹಾಯಕ್ಕಾಗಿ ವಿನಂತಿಸಿದ್ದೇನೆ, ಕರ್ನಾಟಕದ ಸಿಎಂ ಕೂಡ ಸಿಎಂಆರ್‍ಎಫ್ ಮೂಲಕ ಮಗುವಿಗೆ ಸಹಾಯ ಮಾಡುವ ಸ್ಧಿತಿಯಲ್ಲಿದ್ದಾರೆ,
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜೀವಕ್ಕೆ ಸಂಬಂಧಿಸಿದ ವಿಚಾರದಲ್ಲಿ ರಾಜಕೀಯ ಮಾಡುವ ಬದಲು ಸಿಎಂ ಸಿಎಂರ್‍ಎಫ್ ಅಡಿಯಲ್ಲಿ ಸಾಕಷ್ಟು ಮೊತ್ತವನ್ನು ಮಂಜೂರು ಮಾಡಿದ್ದಾರೆ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದರು,

ದೇಶ

ಮದ್ಯಪ್ರಿಯರಿಂದ ಸರ್ಕಾರಕ್ಕೆ ಬಂಪರ್ ಆದಾಯ: ಬಿಯರ್ ಬೆಲೆ ಇಳಿಕೆ, ಮಾರಾಟ ಏರಿಕೆ

Published

on

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಆಲ್ಕೋಹಾಲ್ ಇನ್ ಬಿವರೇಜ್ (AIB)’ ಆಧಾರಿತ ಹೊಸ ತೆರಿಗೆ ವ್ಯವಸ್ಥೆಯು ಅಬಕಾರಿ ಇಲಾಖೆಯ ಆದಾಯದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಈ ಹೊಸ ನೀತಿಯ ಪರಿಣಾಮವಾಗಿ ಲಘು ಆಲ್ಕೋಹಾಲ್ ಹೊಂದಿರುವ ಬಿಯರ್‌ಗಳ ಮಾರಾಟ ಹೆಚ್ಚಾಗಿದ್ದು, ಸರ್ಕಾರದ ಆದಾಯವೂ ಹೊಸ ದಾಖಲೆ ಬರೆದಿದೆ.

ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲೇ ಸರ್ಕಾರಕ್ಕೆ ಒಟ್ಟು ₹10,599.29 ಕೋಟಿ ಅಬಕಾರಿ ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14.39ರಷ್ಟು ಹೆಚ್ಚಳವಾಗಿದೆ.

ಬಿಯರ್ ಮಾರಾಟದಿಂದ ಮಾತ್ರ ₹1,914.81 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ₹312.67 ಕೋಟಿ ಹೆಚ್ಚುವರಿ ಆದಾಯ ದಾಖಲಾಗಿದೆ. ಭಾರತೀಯ ಮದ್ಯ (IML) ಮಾರಾಟದಿಂದ ₹8,394.32 ಕೋಟಿ ಆದಾಯ ಹರಿದುಬಂದಿದೆ.

ಹೊಸ ತೆರಿಗೆ ವ್ಯವಸ್ಥೆಯಿಂದ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆ ಇಳಿಕೆಯಾಗಿರುವುದು ಗ್ರಾಹಕರ ಖರೀದಿ ಹೆಚ್ಚಲು ಕಾರಣವಾಗಿದೆ. ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ದಾಸ್ತಾನು ವೇಗವಾಗಿ ಖಾಲಿಯಾಗಿದೆ.

ರಾಜ್ಯ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹45,000 ಕೋಟಿ ಅಬಕಾರಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಬಳಕೆಯಾಗದೆ ಉಳಿದಿರುವ 483 ಚಿಲ್ಲರೆ ಮದ್ಯದ ಅಂಗಡಿ (CL-2A) ಹಾಗೂ 96 ಬಾರ್ (CL-9A) ಪರವಾನಗಿಗಳನ್ನು ಇದೇ ತಿಂಗಳ ಕೊನೆಯಲ್ಲಿ ಆನ್‌ಲೈನ್ ಹರಾಜು ಮೂಲಕ ವಿತರಿಸಲು ಇಲಾಖೆ ಯೋಜನೆ ರೂಪಿಸಿದೆ. ಈ ಪರವಾನಗಿಗಳನ್ನು ಐದು ವರ್ಷಗಳ ಅವಧಿಗೆ ನೀಡಲಾಗಲಿದ್ದು, ಇದರಿಂದ ಸರ್ಕಾರದ ಆದಾಯ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಹಣಕಾಸು ಇಲಾಖೆ ಅಧಿಕಾರಿಗಳ ಪ್ರಕಾರ, ಹೊಸ AIB ತೆರಿಗೆ ನೀತಿಯ ಉದ್ದೇಶ ಹೆಚ್ಚಿನ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಿ, ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಗೆ ಉತ್ತೇಜನ ನೀಡುವುದಾಗಿದೆ.

Continue Reading

ಅಪರಾಧ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೆ ರೌಡಿಗಳ ದಾಳಿ: ಫ್ಲೈ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

Published

on

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ಸರ್ವಿಸ್ ರಸ್ತೆಗಳಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಕೆಎಸ್‌ಆರ್‌ಟಿಸಿಯ ಪ್ರತಿಷ್ಠಿತ ಫ್ಲೈ ಬಸ್ (Fly Bus) ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಂದೇ ವಾರದಲ್ಲಿ ಇದೇ ಹೆದ್ದಾರಿಯಲ್ಲಿ ನಡೆದ ಮೂರನೇ ದಾಳಿಯ ಪ್ರಕರಣ ಇದಾಗಿದ್ದು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಪೊಲೀಸ್ ಮಾಹಿತಿಯ ಪ್ರಕಾರ, ಎರಡು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುತ್ತಿದ್ದ ಫ್ಲೈ ಬಸ್ ಮಂಡ್ಯ ನಗರದಲ್ಲಿ ಪ್ರಯಾಣಿಕರನ್ನು ಇಳಿಸಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಕೆಲವರು ನಿಯಮ ಉಲ್ಲಂಘಿಸಿ ಒನ್‌ವೇ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಬಂದು ಬಸ್‌ಗೆ ಅಡ್ಡಗಟ್ಟಿದ್ದಾರೆ.

ಬಸ್ ಚಾಲಕ ವಿನೋದ್ ಹಾಗೂ ನಿರ್ವಾಹಕ ಈರಣ್ಣ ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದರೂ ಆರೋಪಿಗಳು ಬೆದರಿಕೆ ಹಾಕಿ ಹಲ್ಲೆ ಮುಂದುವರಿಸಿದ್ದಾರೆ ಎಂದು ದೂರಲಾಗಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಮನಾರ್ಹವಾಗಿ, ಕಳೆದ ಒಂದು ವಾರದಲ್ಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವ್ಯಾಪ್ತಿಯಲ್ಲಿ ಇದು ಮೂರನೇ ಹಲ್ಲೆ ಪ್ರಕರಣವಾಗಿದೆ. ಈ ಹಿಂದೆ ಮಂಡ್ಯ ಸಮೀಪ ಮೆಡಿಸನ್ ಟ್ರಕ್ ಮೇಲೆ ಗುಂಡಿನ ದಾಳಿ ಹಾಗೂ ಮದ್ದೂರು ಬಳಿ ಕಾರು ತಡೆದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆಗಳು ವರದಿಯಾಗಿದ್ದವು.

ಸರಣಿ ಘಟನೆಗಳಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಹೆದ್ದಾರಿಯಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

Continue Reading

ದೇಶ

ರಸ್ತೆ ಮಧ್ಯೆ ಹೆಡೆ ಎತ್ತಿ ನಿಂತ ನಾಗರಹಾವು: ಪ್ಯಾಲೇಸ್ ರಸ್ತೆಯಲ್ಲಿ ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತ

Published

on

ಬೆಂಗಳೂರು: ನಗರದ ಪ್ಯಾಲೇಸ್ ರಸ್ತೆಯಲ್ಲಿ ನಾಗರಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ರಸ್ತೆಯ ಮಧ್ಯಭಾಗಕ್ಕೆ ಬಂದ ನಾಗರಹಾವು ಇದ್ದಕ್ಕಿದ್ದಂತೆ ಹೆಡೆ ಬಿಚ್ಚಿ ನಿಂತಿದ್ದು, ಇದನ್ನು ಕಂಡ ವಾಹನ ಸವಾರರು ಹಾಗೂ ಸ್ಥಳೀಯರು ಬೆಚ್ಚಿಬಿದ್ದರು.

ರಸ್ತೆಯ ನಡುಭಾಗದಲ್ಲೇ ಹಾವು ಕೆಲಕಾಲ ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಕಾರು, ಬೈಕ್ ಹಾಗೂ ಇತರೆ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ, ಪ್ಯಾಲೇಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹಾವು ಅಲ್ಲೇ ಇದ್ದ ಕಾರಣ ಸ್ಥಳದಲ್ಲಿ ಜನರು ಜಮಾಯಿಸಿ ಕುತೂಹಲದಿಂದ ವೀಕ್ಷಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಹಾವು ರಕ್ಷಣೆಯಲ್ಲಿ ಪರಿಣತಿ ಹೊಂದಿದ ಸಿಬ್ಬಂದಿಯ ಸಹಾಯದಿಂದ ನಾಗರಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಲಾಯಿತು. ಈ ವೇಳೆ ಸಾರ್ವಜನಿಕರು ಹಾವಿನ ಸಮೀಪ ಹೋಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು.

ಹಾವು ರಕ್ಷಣೆಯಾದ ನಂತರ ಪ್ಯಾಲೇಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಪುನಃ ಆರಂಭಿಸಲಾಯಿತು. ಕೆಲಕಾಲ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿವಾರಣೆಯಾಗಿದ್ದು, ಸಂಚಾರ ಎಂದಿನಂತೆ ಸುಗಮವಾಯಿತು.

ಮಳೆಗಾಲದ ಸಮಯದಲ್ಲಿ ಹಾವುಗಳು ತಮ್ಮ ವಾಸಸ್ಥಳಗಳಿಂದ ಹೊರಬಂದು ನಗರ ಪ್ರದೇಶಗಳಿಗೆ ಪ್ರವೇಶಿಸುವ ಘಟನೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾವು ಕಂಡುಬಂದರೆ ಅದನ್ನು ಹಿಡಿಯಲು ಅಥವಾ ಹತ್ತಿರ ಹೋಗಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆ, ಹಾವು ರಕ್ಷಣಾ ಸಿಬ್ಬಂದಿ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

Continue Reading

Trending