ದೇಶ

ವಂದೇ ಭಾರತ್ ಸ್ಪೀಪರ್ ರೈಲಿನ 8 ಕುತೂಹಲಕಾರಿ ಸಂಗಿತಿಗಳನ್ನು ತಿಳಿಯಿರಿ

ವಂದೇ ಭಾರತ್ ಸ್ಪೀಪರ್ ರೈಲಿನ 8 ಕುತೂಹಲಕಾರಿ ಸಂಗಿತಿಗಳನ್ನು ತಿಳಿಯಿರಿ

ವಂದೇ ಭಾರತ್ ಸ್ಲೀಪರ್ ರೈಲು ಭಾರತದ ಪ್ರಮುಖ ರೈಲು ಪ್ರಯಾಣ ವ್ಯವಸ್ಥೆಯಲ್ಲಿ ಒಂದಾಗಿದೆ. ಇದರಿಂದಾಗಿ ದೀರ್ಘಾವಧಿಯ ರಾತ್ರಿಯ ರೈಲು ಪ್ರಯಾಣ ಸುಗಮವಾಗಿದೆ. ಈಗ ಭಾರತೀಯ ರೈಲ್ವೇಯು ಈ ಸ್ಲೀಪರ್ ರೈಲನ್ನು ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಪರಿಚಯಿಸಲು ಸಿದ್ಧವಾಗಿದೆ. ಇದು ಫೆಬ್ರವರಿ 2024 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದ,

ವಂದೇ ಭಾರತ್ ಸ್ಲೀಪರ್ ರೈಲು “ವಿಶ್ವ ದರ್ಜೆಯ”, ರೈಲು ಎಂದು ಭಾರತೀಯ ರೈಲ್ವೆ ಹೇಳಿದೆ. ಈ ರೈಲಿನಲ್ಲಿ ಉತ್ತಮ ಸೇವೆ ಇರಲಿದ್ದು, ಅಂತಿಮವಾಗಿ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ಜನರಿಗೆ ಪ್ರಯಾಣದ ಅನುಭವವನ್ನೇ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ರೈಲುಗಳನ್ನು ಆರಂಭಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಯೋಜನೆಯ ಕುರಿತು ಕೆಲವು ಪ್ರಮುಖ, ಕುತೂಹಲಕಾರಿ ಸಂಗತಿಗಳು ಇಲ್ಲಿವೆ, ಮುಂದೆ ಓದಿ..

ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನೆ ಈ ಪ್ರೀಮಿಯಂ ರೈಲಿನ ಉತ್ಪಾದನೆಯು ಅಕ್ಟೋಬರ್‌ನಲ್ಲಿ ಬಿಇಎಂಎಲ್ ಲಿಮಿಟೆಡ್‌ನ ಬೆಂಗಳೂರು ಸಂಕೀರ್ಣದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಭಾರತೀಯ ರೈಲ್ವೆಯ ಕೋಚ್ ಫ್ಯಾಕ್ಟರಿ ಐಸಿಎಫ್ ಸಹಯೋಗದೊಂದಿಗೆ ಬಿಇಎಂಎಲ್ ಈ ರೈಲನ್ನು ತಯಾರಿಸುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲು ಕಾಂಪೋಸಿಷನ್ ಶೀಘ್ರವೇ ಆರಂಭವಾಗಲಿರುವ ವಂದೇ ಭಾರತ್ ಸ್ಲೀಪರ್ ರೈಲು ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದೆ. 11 ಎಸಿ 3-ಟೈರ್ ಕೋಚ್‌ಗಳು, 4 ಎಸಿ 2-ಟೈರ್ ಕೋಚ್‌ಗಳು ಮತ್ತು 1 ಎಸಿ 1 ನೇ ಕೋಚ್ ಇರಲಿದೆ. ಹೆಚ್ಚುವರಿಯಾಗಿ, ರೈಲು 823 ಬರ್ತ್‌ಗಳನ್ನು ಹೊಂದಿರುತ್ತದೆ.

ವಂದೇ ಭಾರತ್ ಸ್ಲೀಪರ್ ರೈಲಿನ ವೇಗ ವಂದೇ ಭಾರತ್ ಸ್ಲೀಪರ್ ರೈಲು ಕೂಡ ಎಸಿ ಚೇರ್ ಕಾರ್ ವರ್ಜನ್‌ನಂತೆಯೇ 160 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸೆಮಿ- ಹೈ ಸ್ಪೀಡ್ ರೈಲು ಸೆಟ್ ಆಗಿದೆ. ಈ ರೈಲು ವೇಗವಾಗಿರುವ ಕಾರಣದಿಂದಾಗಿ ಪ್ರಯಾಣದ ಸಮಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ವಂದೇ ಭಾರತ್ ಸ್ಲೀಪರ್ ರೈಲಿನ ಹೊರಭಾಗ ಸ್ಲೀಪರ್ ರೈಲಿನ ಹೊರಭಾಗವು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಹೋಲುತ್ತದೆ. ಇದು ಏರೋಡೈನಾಮಿಕ್ ಆಗಿರುತ್ತದೆ. ನೋಡುವಾಗ ಕೊಂಚ ಬುಲೆಟ್ ಟ್ರೈನ್‌ಗಳಂತೆಯೇ ಕಾಣುತ್ತದೆ. ಹಾಗೆಯೇ ಪ್ರತಿ ಕೊನೆಯಲ್ಲಿ ಡ್ರೈವಿಂಗ್ ಕ್ಯಾಬಿನ್ ಅನ್ನು ಹೊಂದಿರುತ್ತದೆ.

ವಂದೇ ಭಾರತ್ ಸ್ಲೀಪರ್ ರೈಲು ಒಳಾಂಗಣ ರೈಲಿನ ಒಳಭಾಗವನ್ನು ನೀವು ನೋಡಿದರೆ ವಾವ್ ಎಂದು ಹೇಳುವುದು ಖಂಡಿತವಾಗಿದೆ. ಬಿಇಎಂಎಲ್ ಪ್ರಕಾರ, ಹೊಸ ರೈಲು “ಅತ್ಯುತ್ತಮ ದರ್ಜೆಯ ಒಳಾಂಗಣಗಳನ್ನು” ಹೊಂದಿರುತ್ತದೆ. ವಿದೇಶಗಳಲ್ಲಿ ಓಡುವ ಸೂಪರ್ ರೈಲುಗಳಿಂದ ಸ್ಫೂರ್ತಿ ಪಡೆದ ರೈಲು ಇದಾಗಿರುವ ಕಾರಣ, ಹಿಂದೆಂದೂ ನೋಡಿರದ ಒಳಾಂಗಣವನ್ನು ನಿರೀಕ್ಷಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಸೌಕರ್ಯಗಳು ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಉತ್ತಮ ಪ್ರಯಾಣಿಕರ ಸೌಲಭ್ಯಗಳು, ಮಾಡ್ಯುಲರ್ ಪ್ಯಾಂಟ್ರಿ, ಉತ್ತಮವಾಗಿ ವಿನ್ಯಾಸಗೊಳಿಸಲಾದ ವಾಸನೆ-ಮುಕ್ತ ಶೌಚಾಲಯ ಸೌಲಭ್ಯಗಳು, ಸೆನ್ಸರ್ ಇರುವ ಇಂಟರ್ ಕಮ್ಯುನಿಕೇಶನ್ ಡೋರ್‌ಗಳು, ಸ್ವಯಂಚಾಲಿತವಾಗಿ ತೆರೆಯುವ ಪ್ರಯಾಣಿಕರ ಬಾಗಿಲುಗಳು, 1 ನೇ ಎಸಿ ಕ್ಯಾರೇಜ್‌ನಲ್ಲಿ ಬಿಸಿನೀರಿನ ಶವರ್‌ಗಳು, ಶಾಂತ ಆಂತರಿಕ ವಾತಾವರಣಕ್ಕಾಗಿ ಶಬ್ದ ನಿರೋಧನವನ್ನು ಅಳವಡಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ವಂದೇ ಭಾರತ್ ಸ್ಲೀಪರ್ ರೈಲುಗಳು ಸುಗಮ ಮತ್ತು ಅಡೆತಡೆಯಿಲ್ಲದ ಪ್ರಯಾಣವನ್ನು ಒದಗಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ರೈಲಿನ ಸುಧಾರಿತ ಬೋಗಿ ವಿನ್ಯಾಸವು ಒಟ್ಟಾರೆಯಾಗಿ ಪ್ರಯಾಣ ಸೌಕರ್ಯವನ್ನು ಅಧಿಕ ಮಾಡುತ್ತದೆ. ಯಾವುದೇ ಅಪಘಾತವನ್ನು ತಡೆಯಲು ಸುರಕ್ಷಿತ ಫೀಚರ್‌ಗಳನ್ನು ಕೂಡಾ ಅಳವಡಿಸಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲು ಸುರಕ್ಷತೆ ವಂದೇ ಭಾರತ್ ಸ್ಲೀಪರ್ ರೈಲು ದೇಶೀಯವಾಗಿ ರಚಿಸಲಾದ ಕವಚ್ ವ್ಯವಸ್ಥೆಯನ್ನು ಹೊಂದಿದೆ. ಇದು ರೈಲನ್ನು ಅಪಘಾತದಿಂದ ತಡೆಯುವ ವ್ಯವಸ್ಥೆಯಾಗಿದೆ. ಆರಂಭದಲ್ಲಿ, ಬಿಇಎಂಎಲ್ ಭಾರತೀಯ ರೈಲ್ವೆಗಾಗಿ 10 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಉತ್ಪಾದಿಸುತ್ತದೆ. ರೈಲಿನ ನಿರ್ಮಾಣದ ಜವಾಬ್ದಾರಿಯನ್ನು ಬಿಇಎಂಎಲ್ ಹೊಂದಿದ್ದರೂ, ಐಸಿಎಫ್‌ ಪ್ರೊಪಲ್ಷನ್ ಸಿಸ್ಟಮ್‌ಗಳನ್ನು ಒದಗಿಸುತ್ತಿದೆ.

 

Trending

Exit mobile version