ಕ್ರೀಡೆ
ಸಚಿನ್ ರೆಕಾರ್ಡ್ ಮುರಿದು ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಮುಂಬಯಿ : ಆಧನಿಕ ಕ್ರಿಕೆಟ್ನ ಸರ್ವಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆ ಮುರಿದ್ದಾರೆ. ಅವರೀಗ ಏಕ ದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಅವರು ತಮ್ಮ 50ನೇ ಶತಕ ಬಾರಿಸಿದ್ದಾರೆ. ವಿಶ್ವ ಕಪ್ ಟೂರ್ನಿಯಲ್ಲೇ ಅವರು ಸಚಿನ್ ದಾಖಲೆಯ ಮುರಿದು ಗರಿಷ್ಠ ಏಕದಿನ ಶತಕಗಳ ದಾಖಲೆ ಬರೆದ ಅವರು ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು. ವಿರಾಟ್ ಕೊಹ್ಲಿ ಹಾಲಿ ಅವೃತ್ತಿಯ ಲೀಗ್ ಹಂತದಲ್ಲಿ ಸಚಿನ್ ಅವರ 49ನೇ ಶತಕದ ದಾಖಲೆಯನ್ನು ಮುರಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆ ಶತಕ ಬಾರಿಸಿದ್ದರು. ಆ ಪಂದ್ಯ ಕೋಲ್ಕೊತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಆ ಪಂದ್ಯ ನಡೆದಿತ್ತು.
ಅಂದ ಹಾಗೆ ವಿರಾಟ್ ಕೊಹ್ಲಿ ಸಚಿನ್ ಅವರ ತವರು ಮೈದಾನ ಮುಂಂಬಯಿಯ ವಾಂಖೆಡೆಯಲ್ಲೇ ರೆಕಾರ್ಡ್ ಮುರಿದಿರುವುದು ಕಾಕತಾಳಿಯ. ಅಪ್ಪಟ ಕ್ರಿಕೆಟ್ ಪ್ರೇಮಿಗಳ ನಾಡು ಮುಂಬಯಿಯಲ್ಲಿ ದಾಖಲೆ ಮುರಿದಿರುವುದು ಇನ್ನೊಂದು ವಿಶೇಷ ಸಂಗತಿ. ದಾಖಲೆ ಮುರಿದ ತಕ್ಷಣ ವಿರಾಟ್ ಗ್ಯಾಲರಿಯಲ್ಲಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ತಲಬಾಗಿ ನಮಿಸಿದರು. ಇಡೀ ಮೈದಾನನವೇ ಅವರಿಗೆ ಎದ್ದು ನಿಂತು ಚಪ್ಪಾಳೆ ಹೊಡೆಯಿತು. ಪತ್ನಿ ಅನುಷ್ಕಾ ಫ್ಲೈಯಿಂಗ್ ಕಿಸ್ ಕೊಟ್ಟರು. ಫುಟ್ಬಾಲ್ ದಂತಕತೆ ಡೇವಿಡ್ ಬೇಕ್ಹಮ್ ಸೇರಿದಂತೆ ಎಲ್ಲರೂ ಶಹಬ್ಬಾಸ್ಗಿರಿಕೊಟ್ಟರು. ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಕ್ರಿಕೆಟ್ ದೇವರು ಸ ಚಿನ್ ತೆಂಡೂಲ್ಕರ್ ಅವರ ವಿಶ್ವ ಕಪ್ನಲ್ಲಿ ಸೃಷ್ಟಿಸಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಅವರೀಗ ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಈ ಹಾದಿಯಲ್ಲಿ ಅವರು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ ಎಂಬುದೇ ವಿಶೇಷ.
ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸಿದ ತಕ್ಷಣ ಅವರು ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 2023ರ ವಿಶ್ವ ಕಪ್ನಲ್ಲಿ ಒಟ್ಟು 8 ಬಾರಿ 50 ಪ್ಲಸ್ ಸ್ಕೋರ್ ಬಾರಿಸಿದಂತಾಗಿದೆ. ಇದರೊಂದಿಗೆ ಅವರು ಏಳು ಫಿಪ್ಟಿ ಫ್ಲಸ್ ಸ್ಕೋರ್ ಬಾರಿಸಿದ ಸಚಿನ್ ಅವರು ದಾಖಲೆಯನ್ನು ಮುರಿದಿದ್ದಾರೆ. 2019ರ ವಿಶ್ವ ಕಪ್ನಲ್ಲಿ ಏಳು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಮಾಡಿದ್ದರು. 2019ರಲ್ಲಿ ಆರು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಬಾರಿಸಿದ ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ.
ಅರ್ಧ ಶತಕ ಬಾರಿಸಿದ ತಕ್ಷಣ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ ತಕ್ಷಣ ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ್ದ ಫಿಫ್ಟಿ ಪ್ಲಸ್ ಸ್ಕೋರ್ ದಾಖಲೆಯನ್ನು ಮುರಿದಿದ್ದಾರೆ. 264 ಅರ್ಧ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. 216 ಅರ್ಧ ಶತಕಗಳನ್ನು ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ನಾಲ್ಕನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ 211 ಅರ್ಧ ಶತಕಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಕ್ರೀಡೆ
ದೇವಾಂಗ ಯೂನಿಯನ್ ಶತಮಾನೋತ್ಸವ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಯಂಗ್ ಓರಿಯನ್ಸ್ ಚಾಂಪಿಯನ್
ಬೆಂಗಳೂರು: ದೇವಾಂಗ ಯೂನಿಯನ್ ಶತಮಾನೋತ್ಸವ ಹಾಗೂ ಪ್ರೊ. ಎನ್.ಸಿ. ಪರಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಪುರುಷರ ಫ್ಲಡ್‌ಲೈಟ್ ಬ್ಯಾಸ್ಕೆಟ್‌ಬಾಲ್ ಟೂರ್ನಿ-2026 ರೋಚಕ ಪಂದ್ಯಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜೂನ್ 7ರಂದು ದೇವಾಂಗ ಯೂನಿಯನ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ Young Orion’s SC ತಂಡವು GST & Customs ತಂಡವನ್ನು 84-71 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸೆಮಿಫೈನಲ್ ಫಲಿತಾಂಶ
ಮೊದಲ ಸೆಮಿಫೈನಲ್‌ನಲ್ಲಿ Young Orion’s SC ತಂಡವು DYES ಬೆಂಗಳೂರು ವಿರುದ್ಧ 80-72 ಅಂಕಗಳ ಗೆಲುವು ಸಾಧಿಸಿತು. ಯಂಗ್ ಓರಿಯನ್ಸ್ ಪರ ಅರ್ಜುನ್ ಯಾದವ್ 22 ಹಾಗೂ ಶಶಾಂಕ್ 14 ಅಂಕಗಳನ್ನು ಗಳಿಸಿದರೆ, DYES ಪರ ಮನೋಜ್ 24 ಹಾಗೂ ಬತೇಶ್ 16 ಅಂಕಗಳನ್ನು ದಾಖಲಿಸಿದರು. ಅರ್ಧಾವಧಿಯಲ್ಲಿ ಯಂಗ್ ಓರಿಯನ್ಸ್ 41-40 ಅಂಕಗಳಿಂದ ಮುನ್ನಡೆಯಲ್ಲಿತ್ತು.
ಎರಡನೇ ಸೆಮಿಫೈನಲ್‌ನಲ್ಲಿ GST & Customs ತಂಡವು Bank of Baroda ವಿರುದ್ಧ 71-63 ಅಂಕಗಳಿಂದ ಗೆಲುವು ದಾಖಲಿಸಿತು. GST & Customs ಪರ ಧೀರಜ್ ರೆಡ್ಡಿ 25 ಹಾಗೂ ಪ್ರತ್ಯಾಂಶು ತೋಮರ್ 12 ಅಂಕಗಳನ್ನು ಗಳಿಸಿದರು.
ಫೈನಲ್‌ನಲ್ಲಿ ಯಂಗ್ ಓರಿಯನ್ಸ್ ಪ್ರಾಬಲ್ಯ
ಅಂತಿಮ ಪಂದ್ಯದಲ್ಲಿ ಯಂಗ್ ಓರಿಯನ್ಸ್ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಸುಮಂತ್ 20 ಹಾಗೂ ಅಭಿಷೇಕ್ ಗೌಡ 16 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. GST & Customs ಪರ ಧೀರಜ್ ರೆಡ್ಡಿ 23 ಹಾಗೂ ಪ್ರತ್ಯಾಂಶು ತೋಮರ್ 22 ಅಂಕಗಳನ್ನು ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಅರ್ಧಾವಧಿಯಲ್ಲಿ 46-35 ಅಂಕಗಳ ಮುನ್ನಡೆ ಸಾಧಿಸಿದ್ದ ಯಂಗ್ ಓರಿಯನ್ಸ್, ಅಂತಿಮವಾಗಿ 84-71 ಅಂಕಗಳ ಅಂತರದಿಂದ ಜಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಹುಮಾನ ವಿತರಣೆ
ಚಾಂಪಿಯನ್ ಆಗಿ ಹೊರಹೊಮ್ಮಿದ Young Orion’s SC ತಂಡಕ್ಕೆ ₹75,000 ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್-ಅಪ್ GST & Customs ತಂಡಕ್ಕೆ ₹50,000 ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಯುವ ಆಟಗಾರರಿಗೆ ಕೆ. ಗೋವಿಂದರಾಜ್ ಪ್ರೋತ್ಸಾಹ
ಪಂದ್ಯಾವಳಿ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ K. Govindaraj ಅವರು ಯುವ ಆಟಗಾರರನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು, ಸಮರ್ಪಣೆ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು ವಿವರಿಸಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಯುವ ಕ್ರೀಡಾಪಟುಗಳು ಕಠಿಣ ಪರಿಶ್ರಮದೊಂದಿಗೆ ಮುಂದುವರಿಯಬೇಕು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ದೇವಾಂಗ ಯೂನಿಯನ್ ಅಧ್ಯಕ್ಷ Jayaram, ಕಾರ್ಯದರ್ಶಿ Vardharaju ಹಾಗೂ ದೇವಾಂಗ ಯೂನಿಯನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳ ಭಾಗವಹಿಸುವಿಕೆಯಿಂದ ಈ ಟೂರ್ನಿ ಯಶಸ್ವಿಯಾಗಿ ನೆರವೇರಿದ್ದು, ಯುವ ಬ್ಯಾಸ್ಕೆಟ್‌ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿತ್ತು.
ಕ್ರೀಡೆ
ಕೆಎಲ್ ರಾಹುಲ್‌ಗೆ ‘ಆಸ್ಕರ್’ ಟೀಕೆ! ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ವಿವಾದ
ಮುಲ್ಲನ್‌ಪುರ, ಜೂ.6: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ K. L. Rahul ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೆಂಡು ಬ್ಯಾಟ್‌ಗೆ ತಗುಲಿದ್ದರೂ ಕ್ರೀಸ್‌ನಲ್ಲೇ ಉಳಿದ ರಾಹುಲ್ ವಿರುದ್ಧ ಕೆಲ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ಬೌಲರ್ Zia-ur-Rehman Sharifi ಎಸೆದ ಚೆಂಡನ್ನು ರಾಹುಲ್ ಆಡಲು ಯತ್ನಿಸಿದಾಗ ಅದು ಬ್ಯಾಟ್‌ಗೆ ಸವರಿ ವಿಕೆಟ್‌ಕೀಪರ್ ಕೈ ಸೇರಿತು. ಅಫ್ಘಾನ್ ಆಟಗಾರರು ಔಟ್‌ಗಾಗಿ ಬಲವಾಗಿ ಮನವಿ ಮಾಡಿದರೂ ಅಂಪೈರ್ ಔಟ್ ನೀಡಲಿಲ್ಲ.
ಅಫ್ಘಾನಿಸ್ತಾನ ತಂಡಕ್ಕೆ ಡಿಆರ್‌ಎಸ್ ಅವಕಾಶವಿದ್ದರೂ ನಾಯಕ Hashmatullah Shahidi ರಿವ್ಯೂ ಪಡೆಯಲಿಲ್ಲ. ಬಳಿಕ ಟಿವಿ ಮರುಪ್ರಸಾರದಲ್ಲಿ ಚೆಂಡು ಸ್ಪಷ್ಟವಾಗಿ ಬ್ಯಾಟ್‌ಗೆ ತಗುಲಿರುವುದು ಕಂಡುಬಂದಿದ್ದು, ರಿವ್ಯೂ ಪಡೆಯದಿರುವುದಕ್ಕೆ ಅಫ್ಘಾನ್ ತಂಡ ಬೇಸರ ವ್ಯಕ್ತಪಡಿಸಿತು.
ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಇಂಗ್ಲೆಂಡ್ ಮಾಜಿ ಸ್ಪಿನ್ನರ್ Graeme Swann, “ಕೆಎಲ್ ರಾಹುಲ್, ಇಲ್ಲಿಗೆ ಬನ್ನಿ… ನಿಮ್ಮ ಆಸ್ಕರ್ ಇಲ್ಲಿದೆ” ಎಂದು ವ್ಯಂಗ್ಯವಾಡಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೀವದಾನವನ್ನು ಸದುಪಯೋಗಪಡಿಸಿಕೊಂಡ ರಾಹುಲ್
ಆರಂಭಿಕ ವಿಕೆಟ್‌ಗೆ Yashasvi Jaiswal ಜೊತೆಗೆ 41 ರನ್‌ಗಳ ಜೊತೆಯಾಟವಾಡಿದ ರಾಹುಲ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 9,000 ಪ್ರಥಮ ದರ್ಜೆ ರನ್‌ಗಳ ಮೈಲಿಗಲ್ಲನ್ನೂ ದಾಟಿದರು. ಬಳಿಕ ಅರ್ಧಶತಕದ ಗಡಿಯನ್ನು ಸಹ ಯಶಸ್ವಿಯಾಗಿ ತಲುಪಿದರು.
ಇನ್ನೊಂದೆಡೆ ಜೈಸ್ವಾಲ್ 24 ರನ್ ಗಳಿಸಿ ನಿರಾಸೆ ಮೂಡಿಸಿದರು. ಭೋಜನ ವಿರಾಮದ ಬಳಿಕ ಭಾರತ ತಂಡ 100 ರನ್‌ಗಳ ಗಡಿ ದಾಟಿ ಉತ್ತಮ ಸ್ಥಿತಿಯಲ್ಲಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ
ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ Shubman Gill ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದೇ ವೇಳೆ ಯುವ ಸ್ಪಿನ್ನರ್ Manav Suthar ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರಿಗೆ Kuldeep Yadav ಕ್ಯಾಪ್ ಪ್ರದಾನ ಮಾಡಿದರು.
ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಮೆಚ್ಚುಗೆ ಪಡೆದಿದ್ದರೂ, ಕ್ರೀಡಾಸ್ಫೂರ್ತಿಗೆ ಸಂಬಂಧಿಸಿದ ಚರ್ಚೆ ಪಂದ್ಯದ ಮೊದಲ ದಿನದ ಪ್ರಮುಖ ವಿಷಯವಾಗಿ ಪರಿಣಮಿಸಿದೆ.
ಕ್ರೀಡೆ
ಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
ಮುಂಬೈ: ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಶಸ್ತಿ ಗೆಲುವಿನ ಸಂಭ್ರಮ ಇನ್ನೂ ಮುಂದುವರಿದಿರುವಾಗ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ದಿಗ್ಗಜ AB de Villiers ಮುಂಬೈನ ಸ್ಥಳೀಯ ಮೈದಾನವೊಂದರಲ್ಲಿ ಸಾಮಾನ್ಯ ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.
‘ಮಿಸ್ಟರ್ 360’ ಎಂದೇ ಖ್ಯಾತರಾಗಿರುವ ಎಬಿ ಡಿ ವಿಲಿಯರ್ಸ್, ಐಪಿಎಲ್ 2026ರಲ್ಲಿ ಆರ್‌ಸಿಬಿಯ ಎರಡನೇ ಟ್ರೋಫಿ ಗೆಲುವನ್ನು ನೇರವಾಗಿ ವೀಕ್ಷಿಸಲು ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಮುಂಬೈನ ಸ್ಥಳೀಯ ಮೈದಾನದಲ್ಲಿ ಕಾಣಿಸಿಕೊಂಡ ಅವರು, ಅಭಿಮಾನಿಗಳೊಂದಿಗೆ ಬೆರೆತು ಕ್ರಿಕೆಟ್ ಆಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಸ್ಥಳೀಯ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಿದ ಡಿ ವಿಲಿಯರ್ಸ್ ತಮ್ಮ ವಿಶಿಷ್ಟ ಶೈಲಿಯ ಹಲವು ಆಕರ್ಷಕ ಶಾಟ್‌ಗಳನ್ನು ಬಾರಿಸಿ ಅಭಿಮಾನಿಗಳಿಗೆ ಮನರಂಜನೆ ನೀಡಿದರು. ವಿಶ್ವದರ್ಜೆಯ ಕ್ರಿಕೆಟಿಗನಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಸಾಮಾನ್ಯ ಆಟಗಾರರೊಂದಿಗೆ ಬೆರೆತು ಆಡಿದ ಅವರ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ ಅವರು, ಕ್ರಿಕೆಟ್ ಬಗ್ಗೆ ಮಾತನಾಡಿ ಯುವ ಆಟಗಾರರಿಗೆ ಪ್ರೋತ್ಸಾಹ ತುಂಬಿದರು. ಈ ಅಪರೂಪದ ಕ್ಷಣವನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಆರ್‌ಸಿಬಿ ಪರ ದಶಕಕ್ಕೂ ಹೆಚ್ಚು ಕಾಲ ಆಡಿರುವ ಡಿ ವಿಲಿಯರ್ಸ್, Virat Kohli ಜೊತೆಗೂಡಿ ಅನೇಕ ಸ್ಮರಣೀಯ ಗೆಲುವುಗಳಿಗೆ ಕಾರಣರಾಗಿದ್ದರು. ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ವಿನಮ್ರ ವ್ಯಕ್ತಿತ್ವ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಮುಂಬೈನ ಗಲ್ಲಿ ಕ್ರಿಕೆಟ್‌ನಲ್ಲಿ ಭಾಗವಹಿಸಿದ ಈ ಸಣ್ಣ ಘಟನೆ, ಎಬಿ ಡಿ ವಿಲಿಯರ್ಸ್ ಮೇಲಿರುವ ಅಭಿಮಾನಿಗಳ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕ್ರಿಕೆಟ್ ಲೋಕದ ದಿಗ್ಗಜ ಆಟಗಾರನೊಬ್ಬ ಸಾಮಾನ್ಯ ಅಭಿಮಾನಿಗಳೊಂದಿಗೆ ಬೆರೆತು ಆಡಿದ ಈ ಕ್ಷಣ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ನೆನಪಾಗಿ ಉಳಿಯಲಿದೆ.
-
ಕ್ರೀಡೆ23 minutes agoದೇವಾಂಗ ಯೂನಿಯನ್ ಶತಮಾನೋತ್ಸವ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಯಂಗ್ ಓರಿಯನ್ಸ್ ಚಾಂಪಿಯನ್
-
ದೇಶ44 minutes agoಭೂಮಿಯತ್ತ ಧಾವಿಸುತ್ತಿದೆ ಭಾರಿ ಸೌರ ಬಿರುಗಾಳಿ; NASA ಹೈ ಅಲರ್ಟ್
-
ದೇಶ1 hour agoದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಇನ್ನಿಲ್ಲ; ಸಿಎಂ, ರಾಹುಲ್ ಗಾಂಧಿ ಸಂತಾಪ
-
ದೇಶ52 minutes agoಫಿಲಿಪೈನ್ಸ್ನಲ್ಲಿ 7.8 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಘೋಷಣೆ
-
ದೇಶ3 minutes agoಕರ್ನಾಟಕ ರಾಜಕೀಯಕ್ಕೆ ಬಿಹಾರದ VIP ಪಕ್ಷ ಎಂಟ್ರಿ; 2028 ಚುನಾವಣೆಗೆ ಭರ್ಜರಿ ಸಿದ್ಧತೆ
-
ದೇಶ14 minutes ago‘ಯಾವುದೇ ಕಾರಣಕ್ಕೂ ಈಗ ಬರಬೇಡಿ’; ಕೊಟ್ಟಿಯೂರಿನಿಂದ ಕನ್ನಡಿಗರ ಮನವಿ
-
ದೇಶ30 minutes agoಕಾಂಗ್ರೆಸ್ನಲ್ಲಿ ಮಂತ್ರಿಗಿರಿ ಮಹಾಯುದ್ಧ: 20 ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು!
