Connect with us

crcket

ಇಂದು ವಿಶ್ವಕಪ್‌ ಫೈನಲ್‌ ಸಮರ! ಆಲ್ ದಿ ಬೆಸ್ಟ್ ಟೀಂ ಇಂಡಿಯಾ.

Published

on

ಇಂದು ವಿಶ್ವಕಪ್‌ ಫೈನಲ್‌ ಸಮರ

ದೇಶಕ್ಕೆ ದೇಶವೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಕಾತುರದಿಂದ ಕಾಯುತ್ತಿದೆ. 12 ವರ್ಷಗಳ ಬಳಿಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡವು ಮೂರನೇ ಬಾರಿ ಏಕದಿನ ವಿಶ್ವಕಪ್‌ ಎತ್ತಿಹಿಡಿಯುವ ತವಕದಲ್ಲಿದೆ. ಭಾರತ ಗೆದ್ದು ಬೀಗಲಿ, ವಿಶ್ವಕಪ್‌ ರೋಹಿತ್‌ ಪಡೆಯ ಪಾಲಾಗಲಿ ದೇಶಾದ್ಯಂತ ಶತಕೋಟಿ ಭಾರತೀಯರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಅತ್ತ ಆಸ್ಟ್ರೇಲಿಯಾ ಕೂಡ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್‌ನಲ್ಲಿ ತಾನೇ ಅಧಿಪತಿ ಎಂಬುದನ್ನು ಸಾಬೀತುಪಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೆಲ್ಲ ಕಾರಣಗಳಿಂದಾಗಿ ವಿಶ್ವಕಪ್‌ ಫೈನಲ್‌ ಪಂದ್ಯವು ಕುತೂಹಲ ಕೆರಳಿಸಿದೆ.ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಪಂದ್ಯ ಆರಂಭವಾಗಲಿದ್ದು, ಗಣ್ಯರ ದಂಡೇ ಅಹಮದಾಬಾದ್‌ನಲ್ಲಿ ಬೀಡುಬಿಟ್ಟಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ರಿಚರ್ಡ್ ಮಾರ್ಲ್ಸ್ ಮತ್ತು ಅನೇಕ ರಾಜಕೀಯ ಗಣ್ಯರು ಈ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಅಹಮದಾಬಾದ್‌ನ ಪೊಲೀಸ್ ಕಮಿಷನರ್ ಜ್ಞಾನೇಂದ್ರ ಸಿಂಗ್ ಮಲಿಕ್ ತಿಳಿಸಿದ್ದಾರೆ. ಸ್ಟೇಡಿಯಂನ ಸುತ್ತಮುತ್ತ ಈಗಾಗಲೇ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2011 ಏಪ್ರಿಲ್ 2 ಧೋನಿ‌ ಸಿಡಿಸಿದ್ದ ಆ ಸಿಕ್ಸರ್, 28 ವರ್ಷಗಳ ಕಪ್ ಬರವನ್ನ ನೀಗಿಸಿ ಇತಿಹಾಸವನ್ನ ನಿರ್ಮಿಸಿತ್ತು. ಆ ಸಂಭ್ರಮಕ್ಕೆ ನೋಡ ನೋಡುತ್ತಿದ್ದಂತೆ 12 ವರ್ಷಗಳು ಕಳೆದು ಹೋಗಿದೆ. ಆದರೆ 2011 ರ ಬಳಿಕ ಯಾಕೋ ಏನು ಭಾರತ ತಂಡ ಎಷ್ಟೇ ಉತ್ತಮ ಪ್ರದರ್ಶನ ನೀಡಿದ್ರು ಕಪ್ ಗೆಲ್ಲೋ ಆಸೆ ಮರಿಚೀಕೆ ಹಾಗೇ ಉಳಿದಿತ್ತು. ಆದರೆ ಈಗ ಕಪ್ ಕನಸನ್ನ ಮತ್ತೆ ನನಸು ಮಾಡೋ ಸಂದರ್ಭ ಒದಗಿ ಬಂದಿದ್ದು, ಆ ಒಂದು ಸಂಭ್ರಮದ ಕ್ಷಣಕ್ಕಾಗಿ ಇಡೀ ದೇಶವೇ ಶುಭ ಹಾರೈಕೆಯೊಂದಿಗೆ ತುದಿಗಾಲಲ್ಲಿ ಕಾದು ನಿಂತಿದೆ. ಈಗಾಗಲೇ ವಿಶ್ವ ಕ್ರಿಕೆಟ್‍ನಲ್ಲಿ ಮಹಾದಾಖಲೆ ಮೂಲಕ 5 ಬಾರಿ ಚಾಂಪಿಯನ್ ಆಗಿರುವ ಏಕೈಕ ತಂಡ ಅಂದ್ರೆ ಅದು ಆಸ್ಟ್ರೇಲಿಯಾ ಮಾತ್ರ. ಈಗ ಸದ್ಯ ಆ ಐದು ಬಾರಿ ಚಾಂಪಿಯನ್ ತಂಡವನ್ನ ಮೆಟ್ಟಿ ನಿಲ್ಲಬೇಕಾದ ಸವಾಲು ಎರಡು ಬಾರಿಯ ಚಾಂಪಿಯನ್ ಭಾರತ ತಂಡಕ್ಕೆ ಎದುರಾಗಿದೆ.ಇಂದಿನ ಪಂದ್ಯ ಗೆದ್ದರೆ ಭಾರತ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರ ಆಗಲಿದೆ. ಆಸ್ಟ್ರೇಲಿಯಾ ಹೊರತು ಪಡಿಸಿದರೆ ಉಳಿದ ಯಾವ ದೇಶಗಳು 3 ಅಥವಾ 3ಕ್ಕಿಂತ ಹೆಚ್ಚು ಬಾರಿ ವಿಶ್ವಚಾಂಪಿಯನ್ ಆಗಿಲ್ಲ. ವೆಸ್ಟ್ ಇಂಡೀಸ್, ಮತ್ತು ಭಾರತ ತಂಡ ಎರಡು ಬಾರಿ ಮಾತ್ರ ಕಪ್ ಗೆದ್ದಿದ್ರೆ, ಉಳಿದಂತೆ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ,ತಂಡಗಳು ತಲಾ ಒಂದು ಬಾರಿ ಮಾತ್ರ ಗೆದ್ದಿರೋದು. ಸದ್ಯ ಈ ಬಾರಿ ಭಾರತ ಫೈನಲ್ ಪಂದ್ಯ ಗೆದ್ದರೆ ಅತೀ ಹೆಚ್ಚು ವಿಶ್ವಕಪ್ ಗೆದ್ದ ತಂಡಗಳ ಪೈಕಿ ಎರಡನೇ ಸ್ಥಾನಕ್ಕೆ ತಲುಪಲಿದೆ. ಜೊತೆಗೆ ಮೂರನೇ ಬಾರಿಗೆ ಕಪ್ ಗೆಲ್ಲುವ ಎರಡನೇ ತಂಡ ಅನ್ನೋ ಖ್ಯಾತಿಗೂ ಕೂಡ ಒಳಗಾಗಲಿದೆ. ಈ ಸವಾಲನ್ನ ಸದ್ಯ ಮೆನ್ ಇನ್ ಬ್ಲ್ಯೂ ಹೊಡೆದುರಿಳಿಸಿದ್ರೆ ಮೂರನೇ ಬಾರಿಗೆ ಕೋಟಿ ಕೋಟಿ ಭಾರತೀಯರ ಕನಸು ನನಸಾಗಲಿದೆ.ಒಟ್ಟಾರೆ ಇಡೀ ದೇಶವೇ ಭಾರತದ ಫೈನಲ್ ಪಂದ್ಯ ಜಯಕ್ಕಾಗಿ ಕಾದು ನಿಂತಿದೆ. ಆಲ್ ದಿ ಬೆಸ್ಟ್ ಟೀಂ ಇಂಡಿಯಾ.

Continue Reading

crcket

ಕ್ಯಾಪ್ಟನ್ಸಿಯಲ್ಲಿ ವಿಶೇಷ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

Published

on

By

ಕ್ಯಾಪ್ಟನ್ಸಿಯಲ್ಲಿ ವಿಶೇಷ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

2022ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಂತರ ಭಾರತದ ಟಿ20 ಕ್ರಿಕೆಟ್‌ ತಂಡದಿಂದ ಹೊರಗುಳಿದಿದ್ದ ಅನುಭವಿ ಆರಂಭಿಕ ಬ್ಯಾಟರ್‌ ರೋಹಿತ್‌ ಶರ್ಮಾ ಇದೀಗ ಕಮ್‌ಬ್ಯಾಕ್‌ ಮಾಡಿದ್ದಾರೆ. ಪ್ರವಾಸಿ ಅಫಘಾನಿಸ್ತಾನ ಎದುರು ನಡೆಯುತ್ತಿರುವ ಮೊತ್ತ ಮೊದಲ ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ರೋಹಿತ್‌ ಜೊತೆಗೆ ಕ್ಯಾಪ್ಟನ್ಸಿ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಗುರುವಾರ (ಜ.11) ಮೊಹಾಲಿಯ ಪಿಸಿಎ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ಕಣಕ್ಕಿಳಿಯುವ ಮೂಲಕ ರೋಹಿತ್‌ ಶರ್ಮಾ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.
ಮೊಹಾಲಿ: ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಬರೋಬ್ಬರಿ 14 ತಿಂಗಳ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಪ್ರವಾಸಿ ಅಫಘಾನಿಸ್ತಾನ ಎದುರು ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿ ಮೊಹಾಲಿಯ ಪಿಸಿಎ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಗುರುವಾರ (ಜ.11) ನಡೆದು, ಈ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್‌ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಈಗ 36 ವರ್ಷ, 256 ದಿನಗಳ ವಯಸ್ಸಿನ ಹಿರಿಯ ಬ್ಯಾಟರ್‌ ಪಾಲಾಗಿದೆ. ಈ ಮೂಲಕ ಹಿರಿಯ ಓಪನರ್‌ ಶಿಖರ್‌ ಧವನ್‌ ಅವರ ಹೆಸರಲ್ಲಿದ್ದ ದಾಖಲೆಯನ್ನು ರೋಹಿತ್ ಅಳಿಸಿಹಾಕಿದ್ದಾರೆ.

Continue Reading

crcket

ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಮುಹಮ್ಮದ್ ಶಮಿ

Published

on

By

ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಮುಹಮ್ಮದ್ ಶಮಿ

ದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರಿಗೆ ಇಂದು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮುಹಮ್ಮದ್ ಶಮಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಕಬಳಿಸುವ ಮೂಲಕ ಶಮಿ ತಮ್ಮ ಏಕದಿನ ವಿಶ್ವಕಪ್ 2023 ಯಾತ್ರೆ ಅನ್ನು ಯಶಸ್ವಿಯಾಗಿ ಮುಗಿಸಿದ್ದರು.

“ಈ ಪ್ರಶಸ್ತಿಯು ನನ್ನ ಕನಸಾಗಿತ್ತು. ಹಲವಾರು ಮಂದಿ ತಮ್ಮ ಜೀವಿತಾವಧಿ ಮುಗಿಸಿದರೂ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನನ್ನನ್ನು ನಾಮಕರಣ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಾರಂಭಕ್ಕೂ ಮುನ್ನ ಮುಹಮ್ಮದ್ ಶಮಿ ಸಂತಸ ವ್ಯಕ್ತಪಡಿಸಿದರು. ಮುಹಮ್ಮದ್ ಶಮಿ ಅವರು ವಿಶ್ವಕಪ್ ಕ್ರೀಡಾಕೂಟದ ಆರಂಭಿಕ ನಾಲ್ಕು ಪಂದ್ಯಗಳಿಂದ ಆಡುವ ಹನ್ನೊಂದು ಮಂದಿ ತಂಡದಿಂದ ಹೊರಗಿದ್ದರು. ಆದರೆ, ಹಾರ್ದಿಕ್ ಪಾಂಡ್ಯ ಗಾಯಾಳುವಾಗಿದ್ದರಿಂದ ಶಮಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆತಿತ್ತು. ತಮ್ಮ ಮೊದಲ ಪಂದ್ಯದಲ್ಲೇ ನ್ಯೂಝಿಲೆಂಡ್ ತಂಡದ ವಿರುದ್ಧ 5 ವಿಕೆಟ್ ಗಳನ್ನು ಕಿತ್ತು ಶಮಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಅಲ್ಲಿಂದಾಚೆಗೆ ಶಮಿ ದಾಖಲೆಯ ಓಟ ಓಡಿದರು. ಕೇವಲ ಏಳು ಪಂದ್ಯಗಳಿಂದ 24 ವಿಕೆಟ್ ಗಳನ್ನು ಪಡೆದು ಮಿಂಚಿದ್ದರು.

Continue Reading

crcket

35 ವರ್ಷಗಳ ಬಳಿಕ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕಲರವ..

Published

on

By

35 ವರ್ಷಗಳ ಬಳಿಕ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕಲರವ; ಆಜಾದ್ ಮೈದಾನದಲ್ಲಿ ಲೆಜೆಂಡ್ಸ್‌ ಲೀಗ್

ಭಾರತದ ಮುಕುಟ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿತ್ತು. ಆದರೆ ಭಯೋತ್ಪಾದನೆಯಿಂದಾಗಿ ಅದನ್ನು ನಿಲ್ಲಿಸಲಾಯಿತು. ಇದೀಗ ಬರೋಬ್ಬರಿ 35 ವರ್ಷಗಳ ಬಳಿಕ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ ಮತ್ತೆ ಮರುಕಳಿಸಿದೆ. ಹೀಗಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.35 ವರ್ಷಗಳ ನಂತರ ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿದೆ. ಈಗಾಗಲೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡು ಪಂದ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಾಗಂತ ಪಂದ್ಯವನ್ನು ವೀಕ್ಷಿಸಲು ಬಂದ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಜಮ್ಮುವಿನಲ್ಲಿ ಕ್ರಿಕೆಟ್ ಬೆಳವಣಿಗೆಗೆ ಈ ಪಂದ್ಯಗಳು ಇದು ಪ್ರಮುಖ ಪಾತ್ರ ವಹಿಸುತ್ತದೆ. ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಮುಂದೆ ಮತ್ತಷ್ಟು ಪಂದ್ಯಗಳು ನಡೆಯಲಿವೆ.ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣವನ್ನು 1966ರಲ್ಲಿ ನಿರ್ಮಿಸಲಾಯಿತು. 1988ರ ಡಿಸೆಂಬರ್ 19ರಂದು ಆ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ನಡೆದಿದೆ. ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಆ ಬಳಿಕ ಭಯೋತ್ಪಾದನೆಯಿಂದಾಗಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಈ ಮೈದಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ.ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಬಳಿಕ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವಲ್ಲಿ ಮತ್ತು ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂ ಒಂದು ಹೆಜ್ಜೆ ಮುಂದಿಟ್ಟಿದೆ. ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಈ ಮೈದಾನದಲ್ಲಿ ಆಯೋಜಿಸಲಾಗಿದೆ. ಇನ್ನೆರಡು ಪಂದ್ಯಗಳು ನಡೆಯಬೇಕಿದೆ.ನವೆಂಬರ್ 27ರ ಸೋಮವಾರ ನಡೆಯದ ಮೊದಲ ಪಂದ್ಯದಲ್ಲಿ ಮಣಿಪಾಲ್ ಟೈಗರ್ಸ್ ಮತ್ತು ಸರ್ದಾನ್ ಸೂಪರ್ ಸ್ಟಾರ್ಸ್ ಮುಖಾಮುಖಿಯಾದವು. ರಾಸ್ ಟೇಲರ್ ಬಳಗವು ಹರ್ಭಜನ್ ಸಿಂಗ್ ಅವರ ಮಣಿಪಾಲವನ್ನು ಐದು ವಿಕೆಟ್ ಗಳಿಂದ ಸೋಲಿಸಿತು. ನವೆಂಬರ್ 29ರ ಬುಧವಾರ ನಡೆಯಬೇಕಿದ್ದ ಭಿಲ್ವಾರ ಕಿಂಗ್ಸ್ ಮತ್ತು ಸರ್ದಾನ್ ಸೂಪರ್ ಸ್ಟಾರ್ಸ್ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು.ನವೆಂಬರ್ 30ರ ಗುರುವಾರ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ತಂಡಗಳ ನಡುವೆ ಪಂದ್ಯ ನಡೆಯಯುತ್ತಿದೆ. ಕೊನೆಯ ಪಂದ್ಯದಲ್ಲಿ ಭಿಲ್ವಾರ ಕಿಂಗ್ಸ್ ಮತ್ತು ಅರ್ಬನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಡಿಸೆಂಬರ್ 1ರ ಶುಕ್ರವಾರ ಪಂದ್ಯ ನಡೆಯಲಿದೆ.100ಕ್ಕೂ ಹೆಚ್ಚು ಮಾಜಿ ಕ್ರಿಕೆಟಿಗರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರಾದ ಗಂಭೀರ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಶೇನ್ ವ್ಯಾಟ್ಸನ್, ರಾಬಿನ್ ಉತ್ತಪ್ಪ, ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ಮೊರ್ನೆ ಮೊರ್ಕೆಲ್ ಮುಂತಾದ ತಾರೆಯರು ಇದ್ದಾರೆ.

Continue Reading

Trending