Connect with us

ರಾಜಕೀಯ

ರಾಜ್ಯದಲ್ಲಿ ಮುಂಬರುವ ಬೇಸಿಗೆ ವೇಳೆ ವಿದ್ಯುತ್‌ ಸಮಸ್ಯೆ ಇರುವುದಿಲ್ಲ: ಸಚಿವ ಕೆಜೆ ಜಾರ್ಜ್‌

Published

on

ರಾಜ್ಯದಲ್ಲಿ ಮುಂಬರುವ ಬೇಸಿಗೆ ವೇಳೆ ವಿದ್ಯುತ್‌ ಸಮಸ್ಯೆ ಇರುವುದಿಲ್ಲ: ಸಚಿವ ಕೆಜೆ ಜಾರ್ಜ್
ರಾಜ್ಯದಲ್ಲಿ ಮುಂಬರುವ ಬೇಸಿಗೆ ವೇಳೆ ವಿದ್ಯುತ್‌ ಸಮಸ್ಯೆ ಇರುವುದಿಲ್ಲ: ಸಚಿವ ಕೆಜೆ ಜಾರ್ಜ್

ಬೆಂಗಳೂರು: ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಸುಮಾರು 14,000 ಮೆ.ವ್ಯಾ ಮತ್ತು ನೀರಾವರಿ ಪಂಪ್‌ಸೆಟ್‌ ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಸುಮಾರು 4,500 ಮೆ.ವ್ಯಾ ಇದ್ದು, ಬೇಸಿಗೆ ಕಾಲಕ್ಕೆ ವಿದ್ಯುತ್ ಬೇಡಿಕೆ 16,500 ಮೆ.ವ್ಯಾ ಏರಿಕೆ ಸಾಧ್ಯತೆ ಇದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾ ನಿಂದ 16,500 ಮೆ.ವ್ಯಾ. ತಲುಪುವ ನಿರೀಕ್ಷೆಯಿದೆ. ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ಇಂಧನ ಇಲಾಖೆ ಸಜ್ಜಾಗಿದೆ. ಬೇಸಿಗೆಯಲ್ಲಿ ರೈತರ ನೀರಾವರಿ ಪಂಪ್ ಸೆಟ್‌ಗಳಿಗೆ (ಐಪಿ) ಏಳು ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು. ಇದರಂತೆ ಇಂಧನ ಮಾರುಕಟ್ಟೆಯಿಂದ ವಿದ್ಯುತ್ ಸಂಗ್ರಹಣೆ ಮತ್ತು ಪಂಜಾಬ್ (300ಮೆ.ವ್ಯಾ) ಉತ್ತರ ಪ್ರದೇಶದಿಂದ (100-600ಮೆ.ವ್ಯಾ.) ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದರೂ ವಿದ್ಯುತ್ ವ್ಯತ್ಯಯವಾಗಿಲ್ಲ. ವಿದ್ಯುತ್ ಬೇಡಿಕೆಯು 300 ಮಿಲಿಯನ್ ಯೂನಿಟ್‌ಗೆ ಏರುವ ನಿರೀಕ್ಷೆಯಿದೆ. ಈ ಬೇಡಿಕೆಯನ್ನು ಪೂರೈಸಲು ಅಧಿಕಾರಿಗಳು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು, ಮುಂದಿನ ಬೇಸಿಗೆಯ ಸಿದ್ಧತೆಯ ವಿವರಗಳನ್ನು ಹಂಚಿಕೊಂಡರು.

ವಿದ್ಯುತ್ ಕಾಯ್ದೆಯ ಸೆಕ್ಷನ್ 11 ರ ಅನುಷ್ಠಾನದೊಂದಿಗೆ 2,200MW ವಿದ್ಯುತ್ ನ್ನು ಪಡೆಯುತ್ತೇವೆ. ಖಾಸಗಿ ವಿದ್ಯುತ್ ಉತ್ಪಾದಕರಿಂದ 1,200MW, ಉತ್ತರ ಪ್ರದೇಶದಿಂದ 600MW, ಪಂಜಾಬ್‌ನಿಂದ 300MW ಮತ್ತು ವಿಜಯಪುರದ ಕುಡ್ಗಿ ವಿದ್ಯುತ್ ಸ್ಥಾವರದಿಂದ 150MW ಪಡೆದುಕೊಳ್ಳಲಾಗಿದೆ.

2.5 ಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಪ್ರಯತ್ನಗಳ ನಡೆಸಲಾಗುತ್ತಿದೆ. ಈ ಹೆಚ್ಚುವರಿ ಪ್ರಮಾಣವು ಕರ್ನಾಟಕ ರಾಜ್ಯ ಜೆನ್‌ಕೋಸ್‌ಗೆ (ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ) ಲಭ್ಯವಾಗಲಿದೆ. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶೀಯ ಕಲ್ಲಿದ್ದಲಿನೊಂದಿಗೆ ಆಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು ಎಂದು ಹೇಳಿದರು.

ಇದಲ್ಲದೆ, 370MW ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರವು ಶೀಘ್ರದಲ್ಲೇ ಉತ್ಪಾದನೆಯನ್ನು ಪ್ರಾರಂಭಿಸಲಿದೆ. 600MW ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೇಶ

ಕಾಂಗ್ರೆಸ್‌ನಲ್ಲಿ ಮಂತ್ರಿಗಿರಿ ಮಹಾಯುದ್ಧ: 20 ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು!

Published

on

ಬೆಂಗಳೂರು: ಮುಖ್ಯಮಂತ್ರಿ D. K. Shivakumar ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೊದಲ ಹಂತದಲ್ಲಿ 13 ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಮಂತ್ರಿಗಿರಿ ಪೈಪೋಟಿ ತೀವ್ರಗೊಂಡಿದೆ. ಸಂಪುಟದಲ್ಲಿ ಇನ್ನೂ ಖಾಲಿ ಇರುವ 20 ಸಚಿವ ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿರುವುದು ಹೈಕಮಾಂಡ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗದ ಹಲವು ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಪ್ರಭಾವಿ ಶಾಸಕರು ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆಯಲು ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಸಚಿವ ಸ್ಥಾನ ಸಿಗದೇ ಹೋದದ್ದು ತಮ್ಮ ರಾಜಕೀಯ ಅನುಭವಕ್ಕೆ ಮಾಡಿದ ಅಗೌರವ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಜಮೀರ್, ರಾಮಲಿಂಗಾ ರೆಡ್ಡಿ ಅಸಮಾಧಾನದ ಬಳಿಕ ಹೊಸ ಸವಾಲು

ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾದ ಅಸಮಾಧಾನದಿಂದ Ramalinga Reddy ರಾಜೀನಾಮೆ ನೀಡಿ ಬಳಿಕ ವಾಪಸ್ ಪಡೆದ ಬೆಳವಣಿಗೆ ಹಾಗೂ Zameer Ahmed Khan ಬೆಂಬಲಿಗರ ಪ್ರತಿಭಟನೆ ಪಕ್ಷದೊಳಗಿನ ಅಸಮಾಧಾನವನ್ನು ಬಹಿರಂಗಪಡಿಸಿತ್ತು. ಇದೀಗ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ವಿಚಾರ ಕಾಂಗ್ರೆಸ್ ನಾಯಕತ್ವಕ್ಕೆ ಮತ್ತಷ್ಟು ಸವಾಲು ತಂದಿದೆ.

ಜಾತಿ, ಜಿಲ್ಲಾ ಕೋಟಾ ಲೆಕ್ಕಾಚಾರ

ಸಚಿವ ಸ್ಥಾನ ಬಯಸಿರುವ ನಾಯಕರು ಜಾತಿ ಸಮೀಕರಣ, ಜಿಲ್ಲಾ ಪ್ರತಿನಿಧಿತ್ವ ಹಾಗೂ ಸಮುದಾಯದ ಪ್ರಾಬಲ್ಯದ ಅಂಶಗಳನ್ನು ಮುಂದಿಟ್ಟು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವರಾಗದ ನಾಯಕರು Mallikarjun Kharge ಅವರ ಮೂಲಕ ಅವಕಾಶ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಡಿ.ಕೆ. ಶಿವಕುಮಾರ್ ಆಪ್ತ ವಲಯದ ಶಾಸಕರು ತಮ್ಮ ಅವಕಾಶದ ಬಗ್ಗೆ ವಿಶ್ವಾಸ ಹೊಂದಿದ್ದರೆ, ಮಾಜಿ ಮುಖ್ಯಮಂತ್ರಿ Siddaramaiah ಬೆಂಬಲಿಗರೂ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.

ಪರಿಷತ್ ಚುನಾವಣೆ ಬಳಿಕವೇ ಸಂಪುಟ ವಿಸ್ತರಣೆ?

ಪ್ರಸ್ತುತ ಲೆಕ್ಕಾಚಾರದ ಪ್ರಕಾರ, ಒಂದು ಸಚಿವ ಸ್ಥಾನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಮಂದಿ ಆಕಾಂಕ್ಷಿಗಳಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ 18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಮಾಡದಿರಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ರಾಜ್ಯ ಉಸ್ತುವಾರಿ Randeep Singh Surjewala ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಸಚಿವರ ಖಾತೆ ಹಂಚಿಕೆ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದರ ನಡುವೆ ಉಳಿದ 20 ಸಚಿವ ಸ್ಥಾನಗಳನ್ನು ಸಮತೋಲನದಿಂದ ಭರ್ತಿ ಮಾಡುವುದು ಕಾಂಗ್ರೆಸ್ ನಾಯಕತ್ವಕ್ಕೆ ಅತ್ಯಂತ ಕಠಿಣ ಪರೀಕ್ಷೆಯಾಗಿ ಪರಿಣಮಿಸಿದೆ.

Continue Reading

ದೇಶ

ರಾಮಲಿಂಗಾರೆಡ್ಡಿ ಬಳಿಕ ಮುನಿಯಪ್ಪ ಬಂಡಾಯ! ಕಾಂಗ್ರೆಸ್ ಹೈಕಮಾಂಡ್ ತುರ್ತು ಸಭೆ

Published

on

ದೇವನಹಳ್ಳಿ, ಜೂನ್ 5: ನೂತನ ಮುಖ್ಯಮಂತ್ರಿ D. K. Shivakumar ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆಯ ಬೆನ್ನಲ್ಲೇ ಅಸಮಾಧಾನದ ಹೊಗೆ ದಟ್ಟವಾಗುತ್ತಿದೆ. ಹಿರಿಯ ನಾಯಕ Ramalinga Reddy ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ ಆಹಾರ ಸಚಿವ K. H. Muniyappa ಕೂಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ವರಿಷ್ಠರು, ಸರ್ಕಾರದ ಆರಂಭದಲ್ಲೇ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ದೇವನಹಳ್ಳಿ ಬಳಿಯ Kempegowda International Airport ಸಮೀಪದ ವಿಐಪಿ ಲಾಂಜ್ ಹಾಗೂ ತಾಜ್ ಹೋಟೆಲ್‌ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್ ನಾಯಕ Rahul Gandhi, ಎಐಸಿಸಿ ಉಸ್ತುವಾರಿ Randeep Singh Surjewala, ಮಾಜಿ ಮುಖ್ಯಮಂತ್ರಿ Siddaramaiah ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದು, ಅಸಮಾಧಾನಗೊಂಡಿರುವ ನಾಯಕರನ್ನು ಮನವೊಲಿಸುವ ಪ್ರಯತ್ನ ನಡೆದಿದೆ.

ಖಾತೆ ಹಂಚಿಕೆಯಲ್ಲಿ ತಮ್ಮ ಹಿರಿತನಕ್ಕೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಬೇಸರಗೊಂಡಿರುವ ಕೆ.ಎಚ್. ಮುನಿಯಪ್ಪ, ತಮಗೆ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆಯನ್ನು ನೀಡುವಂತೆ ವರಿಷ್ಠರ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹಠ ಹಿಡಿದಿರುವುದು ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟುಮಾಡಿದೆ.

ಇದಕ್ಕೂ ಮುನ್ನ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದರಿಂದ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಒಳಗೆ ಭಿನ್ನಮತದ ಧ್ವನಿ ಜೋರಾಗಿದೆ.

ಈ ಬೆಳವಣಿಗೆಗಳು ಕಾಂಗ್ರೆಸ್ ಸರ್ಕಾರಕ್ಕೆ ಆರಂಭದಲ್ಲೇ ರಾಜಕೀಯ ಸವಾಲುಗಳನ್ನು ತಂದೊಡ್ಡಿದ್ದು, ಹೈಕಮಾಂಡ್ ನಡೆಸುತ್ತಿರುವ ಈ ಹೈವೋಲ್ಟೇಜ್ ಸಭೆಯ ಫಲಿತಾಂಶದ ಮೇಲೆ ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.

Continue Reading

ದೇಶ

ಹೊಸ ಪಕ್ಷ, ಹೊಸ ಹೋರಾಟ! ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಕ್ರಾಂತಿ

Published

on

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ K. Annamalai ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ತೊರೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ನಡೆಸಿದ ಅಣ್ಣಾಮಲೈ, ತಮ್ಮ ಹೊಸ ರಾಜಕೀಯ ವೇದಿಕೆಗೆ ‘We The People’ (ನಾವು ಜನರು) ಎಂದು ಹೆಸರು ಇಡಲಾಗುವುದು ಎಂದು ಘೋಷಿಸಿದರು. ಈ ಪಕ್ಷವು ಸಂಪೂರ್ಣವಾಗಿ ನಾಗರಿಕ ಕೇಂದ್ರಿತ ರಾಜಕೀಯ ಮಾದರಿಯನ್ನು ಅನುಸರಿಸಲಿದೆ ಎಂದು ಅವರು ತಿಳಿಸಿದರು.

“ಕಳೆದ 18 ತಿಂಗಳುಗಳಿಂದ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳಿದ್ದವು. 2025ರ ಡಿಸೆಂಬರ್‌ನಲ್ಲೇ ಪಕ್ಷ ಬಿಡುವ ನಿರ್ಧಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೆ. ಆದರೆ ಚುನಾವಣೆಯವರೆಗೆ ಜವಾಬ್ದಾರಿ ನಿರ್ವಹಿಸುವಂತೆ ಕೋರಿದ್ದರಿಂದ ಮುಂದುವರಿದಿದ್ದೆ,” ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿಕೊಂಡ ಅವರು, “ಅಧಿಕಾರ ಮತ್ತು ಹುದ್ದೆಗಳು ಯಾರಿಗೂ ಶಾಶ್ವತವಲ್ಲ. ರಾಜಕೀಯದಲ್ಲಿ ಒಂದೇ ಕುಟುಂಬ ಅಥವಾ ವ್ಯಕ್ತಿಗೆ ನಿರಂತರವಾಗಿ ಅಧಿಕಾರ ಸಿಗಬಾರದು. ಸಾಮಾನ್ಯ ಕುಟುಂಬಗಳಿಂದ ಬಂದವರಿಗೂ ಅವಕಾಶ ಸಿಗಬೇಕು,” ಎಂದು ವಂಶಾಡಳಿತ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.

ಹೊಸ ಪಕ್ಷವು ಸ್ಥಳೀಯ ಸಂಸ್ಥೆಗಳಿಂದ ವಿಧಾನಸಭೆ ಚುನಾವಣೆಯವರೆಗೆ ಎಲ್ಲಾ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜನಪರ ಆಡಳಿತವೇ ತಮ್ಮ ರಾಜಕೀಯ ಚಳವಳಿಯ ಮುಖ್ಯ ಗುರಿಯಾಗಿದೆ ಎಂದರು.

ಬಿಜೆಪಿಯಿಂದ ಹೊರಬಂದಿದ್ದರೂ ಪ್ರಧಾನಿ Narendra Modi ಅವರ ಮೇಲಿನ ಗೌರವ ಕಡಿಮೆಯಾಗಿಲ್ಲ ಎಂದು ಹೇಳಿದ ಅಣ್ಣಾಮಲೈ, “ಸಿದ್ಧಾಂತ ಮತ್ತು ಕಾರ್ಯವೈಖರಿಯಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ಮೋದಿ ಅವರ ನಾಯಕತ್ವದ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಸ್ಪಷ್ಟಪಡಿಸಿದರು.

ಅಣ್ಣಾಮಲೈ ಅವರ ಆಪ್ತ ವಲಯವು ಈ ಹೊಸ ರಾಜಕೀಯ ಪರಿಕಲ್ಪನೆಯನ್ನು ‘ದ್ರಾವಿಡ 2.0’ ಎಂದು ಬಣ್ಣಿಸುತ್ತಿದ್ದು, ಪ್ರಾದೇಶಿಕ ತಮಿಳು ಅಸ್ಮಿತೆ ಹಾಗೂ ರಾಷ್ಟ್ರೀಯ ದೃಷ್ಟಿಕೋನವನ್ನು ಒಟ್ಟುಗೂಡಿಸುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

Continue Reading

Trending