ದೇಶ
ಸೌರ ಶಕ್ತಿ ಉತ್ಪಾದನೆಯಲ್ಲಿ ಹೊಸ ದಾಖಲೆ ನಿರ್ಮಿಸಿಲಿದೆ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ
ದೆಹಲಿ ಮತ್ತು ಲಕ್ನೋಗೆ ಸಂಪರ್ಕ ಕಲ್ಪಿಸುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಇದೀಗ ಹೊಸ ಹೆದ್ದಾರಿಯಲ್ಲಿ ಉತ್ತರಪ್ರದೇಶ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಿದೆ.ಕೇಂದ್ರ ಸರ್ಕಾರವು ಆರ್ಥಿಕ ಅಭಿವೃದ್ದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳ ನಡುವಿನ ಸಾರಿಗೆ ಸಂಪರ್ಕವನ್ನು ವಿಶ್ವದರ್ಜೆಗೆ ಪರಿವರ್ತನೆಗೊಳಿಸುತ್ತಿದ್ದು, ಸುಸ್ಥಿರ ಮತ್ತು ಮರುಬಳಕೆ ಮಾಡಬಹುದಾದ ತಂತ್ರಜ್ಞಾನಗಳೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಸಹ ಹಲವಾರು ವಿಶೇಷತೆಗಳೊಂದಿಗೆ ಸಾರಿಗೆ ಸಂಪರ್ಕದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದು ದೇಶದಲ್ಲಿಯೇ ಮೊದಲ ಸೌರ ಶಕ್ತಿ ಪ್ರೇರಿತ ಹೆದ್ದಾರಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ನಲ್ಲಿ ಉತ್ತರ ಪ್ರದೇಶ ಸರ್ಕಾರವು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಯೋಜನೆ ಅಡಿ ಡಿವೈಡರ್ ಮದ್ಯದಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಗುತ್ತಿದ್ದು, ಈ ಮೂಲಕ ಹೆದ್ದಾರಿಯಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೂ ವಿದ್ಯುತ್ ಪೂರೈಕೆ ಮಾಡುವ ಯೋಜನೆ ಸಿದ್ದಪಡಿಸಲಾಗುತ್ತಿದೆ.ಹೊಸ ಯೋಜನೆಯೊಂದಿಗೆ 550 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಹೊಂದಲಾಗಿದ್ದು, ಇದು ಹೆದ್ದಾರಿಯಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಭವಿಷ್ಯದಲ್ಲಿ ಹೆಚ್ಚಲಿರುವ ಎಲೆಕ್ಟ್ರಿಕ್ ವಾಹನಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸಹಕಾರಿಯಾಗಲಿದೆ. ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿರುವುದರಿಂದ ಈಗಾಗಲೇ ವಿದ್ಯುತ್ ಉತ್ಪಾದನೆಗೆ ಬೇಡಿಕೆ ಹೆಚ್ಚುತ್ತಿದ್ದು, ಭವಿಷ್ಯದಲ್ಲಿನ ಇವಿ ವಾಹನಗಳ ಬೇಡಿಕೆ ಪೂರೈಸಲು ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಳ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರವು ಮಹತ್ವದ ಯೋಜನೆಗೆ ಚಾಲನೆ ನೀಡಿದ್ದು, ಶೀಘ್ರದಲ್ಲಿಯೇ ಹೊಸ ಎಕ್ಸ್‌ಪ್ರೆಸ್‌ವೇ ಗಳಲ್ಲಿ ಸೌರ ಶಕ್ತಿ ಉತ್ಪಾದನೆ ಹೆಚ್ಚಳವಾಗುವ ನೀರಿಕ್ಷೆಗಳಿವೆ.ಇನ್ನು ದೆಹಲಿ ಮತ್ತು ಲಕ್ನೋಗೆ ಸೇರ ಸಂಪರ್ಕ ಕಲ್ಪಿಸುವ 296 ಕಿ.ಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಕಳೆದ ವರ್ಷವಷ್ಟೇ ರೂ. 14,850 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದು ಡಿಎನ್‌ಡಿ ಫ್ಲೈವೇಯಲ್ಲಿ 9 ಕಿಮೀ, ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ 24 ಕಿಮೀ, ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ 165 ಕಿಮೀ ಮತ್ತು ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ 135 ಕಿಮೀ ಕ್ರಮಿಸುತ್ತದೆ.ಹೊಸ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ದೆಹಲಿ ಸೇರಿದಂತೆ ಇತರೆ ರಾಜ್ಯಗಳಿಗೆ ಜನರನ್ನು ಸುಲಭ ಸಂಪರ್ಕಿಸಲು ಸಹಕಾರಿಯಾಗಿದ್ದು, ಇದು ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ ಜಿಲ್ಲೆಗಳ ಜನರಿಗೆ ಹೆಚ್ಚು ಅನುಕೂಲವಾಗಿದೆ. ಜೊತೆಗೆ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಕೈಗಾರಿಕೆಗಳ ಅಭಿವೃದ್ದಿಗೂ ಸಹಕಾರಿಯಾಗಲಿದ್ದು, ಹೊಸ ಹೆದ್ದಾರಿಯನ್ನು ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ ನಿರ್ಮಾಣ ಮಾಡಿದೆ.ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ಕೇವಲ 28 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿದ್ದು, ಹಲವಾರು ವಿಶೇಷತೆಗಳೊಂದಿಗೆ ನಿರ್ಮಾಣವಾಗಿದೆ. ಸುಸ್ಥಿರ ಮತ್ತು ಮರುಬಳಕೆ ಮಾಡಬಹುದಾದ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಎಕ್ಸ್‌ಪ್ರೆಸ್‌ವೇ ಮಾರ್ಗವು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗಲಿದೆ.
ದೇಶ
Amarnath Yatra 2026: ಬಾಬಾ ಬರ್ಫಾನಿ ದರ್ಶನಕ್ಕೆ ಸಜ್ಜಾಗಿ: ಅಮರನಾಥ ಯಾತ್ರೆ ಸಂಪೂರ್ಣ ಮಾಹಿತಿ
ಬೆಂಗಳೂರು: ದಕ್ಷಿಣ ಕಾಶ್ಮೀರದಲ್ಲಿರುವ ಪ್ರಸಿದ್ಧ ಪವಿತ್ರ ತಾಣವಾದ Amarnath Temple ಗೆ ನಡೆಯುವ Amarnath Yatra 2026 ಯ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ವರ್ಷ ಯಾತ್ರೆ ಜುಲೈ 3ರಂದು ಆರಂಭವಾಗಿ ಆಗಸ್ಟ್ 28ರವರೆಗೆ, ಒಟ್ಟು 57 ದಿನಗಳ ಕಾಲ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ Manoj Sinha ಅವರು ಏಪ್ರಿಲ್ 12ರಂದು ಯಾತ್ರೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸಿದ್ದಾರೆ. ಭಕ್ತರು ಏಪ್ರಿಲ್ 15ರಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ದೇಶಾದ್ಯಂತ State Bank of India, Punjab National Bank, Yes Bank ಹಾಗೂ Axis Bank ಶಾಖೆಗಳಲ್ಲಿ ಮುಂಗಡ ನೋಂದಣಿ ಸೌಲಭ್ಯ ಲಭ್ಯವಿದೆ.
ಯಾತ್ರೆ ಪ್ರಾರಂಭಕ್ಕೂ ಮುನ್ನ ಜೂನ್ 19ರಂದು ಜೇಷ್ಠ ಪೌರ್ಣಮಿಯಂದು ಮೊದಲ ಪೂಜೆ ನೆರವೇರಿಸಲಾಗುತ್ತದೆ. ಭಕ್ತರು ಎರಡು ಮಾರ್ಗಗಳಲ್ಲಿ ಯಾತ್ರೆ ಕೈಗೊಳ್ಳಬಹುದು – ಅನಂತನಾಗ್ ಜಿಲ್ಲೆಯ ನುನ್ವಾನ್-ಪಹಲ್ಗಾಮ್ (48 ಕಿ.ಮೀ) ಸಾಂಪ್ರದಾಯಿಕ ಮಾರ್ಗ ಮತ್ತು ಗಂಡೇರ್ಬಾಲ್ ಜಿಲ್ಲೆಯ ಕಡಿದಾದ ಬಾಲ್ಟಾಲ್ (14 ಕಿ.ಮೀ) ಮಾರ್ಗ.
ಯಾತ್ರೆಗೆ ವಯೋಮಿತಿ ನಿಗದಿ ಮಾಡಲಾಗಿದ್ದು, 13ರಿಂದ 70 ವರ್ಷಗಳೊಳಗಿನವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಹಿಮಾಲಯದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಈ ಗುಹೆಯಲ್ಲಿ ಪ್ರಕೃತಿಯಿಂದ ರೂಪುಗೊಳ್ಳುವ ಹಿಮಲಿಂಗವು ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರು “ಬಾಬಾ ಬರ್ಫಾನಿ” ದರ್ಶನಕ್ಕಾಗಿ ಕಠಿಣ ಹಾದಿಯನ್ನು ಕ್ರಮಿಸುತ್ತಾರೆ. ಈ ಯಾತ್ರೆ ಧಾರ್ಮಿಕ ನಂಬಿಕೆಯ ಜೊತೆಗೆ ಭಾರತೀಯರ ಅಚಲ ಭಕ್ತಿಯ ಪ್ರತೀಕವಾಗಿದೆ.
ದೇಶ
ಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!
ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿದ್ದ Abdul Jabbar ಅವರ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ D. K. Shivakumar ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.
ಜಬ್ಬಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದಲೇ ವಿಸರ್ಜಿಸಲಾಗಿದೆ ಎಂದು ಶಿವಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸ ಸಮಿತಿಯನ್ನು ಶೀಘ್ರದಲ್ಲೇ ರಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ತೀವ್ರಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆ ಆರಂಭವಾದ ಅಸಮಾಧಾನ, ಚುನಾವಣೆಯ ನಂತರವೂ ಮುಂದುವರಿದಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಬಂಡಾಯ ಹೆಚ್ಚಾಗಿದ್ದು, ಅಲ್ಪಸಂಖ್ಯಾತ ಘಟಕದ ಮೇಲೂ ಪರಿಣಾಮ ಬೀರಿದೆ.
ಶನಿವಾರವೇ ಅಬ್ದುಲ್ ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ ಇನ್ನಷ್ಟೇ ಬಾಕಿ ಇದ್ದರೂ, ಕಾಂಗ್ರೆಸ್‌ನಲ್ಲಿ ಉಂಟಾದ ಒಳಜಗಳ ಪಕ್ಷಕ್ಕೆ ತಲೆನೋವಾಗುವ ಸಾಧ್ಯತೆ ಇದೆ. ಹೊಸ ಸಮಿತಿಯ ರಚನೆ ಮೂಲಕ ಅಸಮಾಧಾನ ಶಮನಗೊಳಿಸಲು ನಾಯಕತ್ವ ಮುಂದಾಗಿದೆ.
ಚುನಾವಣೆ
ದಾವಣಗೆರೆ ಟಿಕೆಟ್ ವಿವಾದ: ಮುಸ್ಲಿಂ ಸಮುದಾಯಕ್ಕೆ ಅನ್ಯಾಯವೇ?
ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಒಳಜಗಳ ಮತ್ತೆ ಭುಗಿಲೆದ್ದಿದೆ. ಈ ನಡುವೆ Rizwan Arshad ನೀಡಿದ ಹೇಳಿಕೆ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ವಾಸ್ತವದಲ್ಲಿ ಕೆಲ ನಾಯಕರು ಕೇವಲ ಒಬ್ಬ ಅಭ್ಯರ್ಥಿಯ ಪರ ಮಾತ್ರ ಒತ್ತಾಯ ಮಾಡಿದ ಕಾರಣದಿಂದ ಟಿಕೆಟ್ ಕೈತಪ್ಪಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ Abdul Jabbar ಅವರ ಹೆಸರನ್ನೇ ಮುಂದಿಟ್ಟು, ಪರ್ಯಾಯ ಹೆಸರುಗಳನ್ನು ಸೂಚಿಸದಿರುವುದೇ ಪ್ರಮುಖ ಕಾರಣ ಎಂದರು.
“ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳಿದಾಗ ಮೂರ್ನಾಲ್ಕು ಹೆಸರುಗಳನ್ನು ನೀಡಬೇಕಿತ್ತು. ಆದರೆ, ಒಂದೇ ಹೆಸರಿಗಾಗಿ ಹಠ ಹಿಡಿದ ಪರಿಣಾಮ ಅವಕಾಶ ಕಳೆದುಕೊಂಡೆವು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಸಚಿವ Zameer Ahmed Khan ಅವರ ನಡೆಗೂ ಪರೋಕ್ಷವಾಗಿ ಟೀಕೆ ವ್ಯಕ್ತಪಡಿಸಿದ ರಿಜ್ವಾನ್ ಅರ್ಷದ್, ಸಮುದಾಯದ ಹಿತಕ್ಕಾಗಿ ಅಲ್ಲ, ವ್ಯಕ್ತಿಗಾಗಿಯೇ ಕೆಲವರು ರಾಜಕೀಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಇನ್ನೂ, ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆಯಾದ ಬಳಿಕ, ಬೆಂಬಲ ನೀಡಿದವರನ್ನು ‘ಸಮುದಾಯ ದ್ರೋಹಿಗಳು’ ಎಂದು ಕರೆಯುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಯಾಸಿರ್ ಪಠಾಣ್ ಸೇರಿದಂತೆ ಕೆಲವರು ಪರ್ಯಾಯ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರೂ ಅದಕ್ಕೆ ಮಹತ್ವ ನೀಡಲಾಗಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ, ಕಾಂಗ್ರೆಸ್ ಪಕ್ಷದ ಒಳಜಗಳವೇ ದಾವಣಗೆರೆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೈತಪ್ಪಲು ಕಾರಣವಾಗಿದೆ ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
-
ದೇಶ23 hours agoKumar Bangarappa : ಶಹನಾಯಿ ನಾದಕ್ಕೆ ಮನಸೋತ ಕುಮಾರ್ ಬಂಗಾರಪ್ಪ: ಕಲಾವಿದ ರಾಮಪ್ಪಗೆ ಭಾರಿ ಮೆಚ್ಚುಗೆ
-
ದೇಶ16 hours agoಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!
-
ದೇಶ17 hours agoಸೌದಿ ರಕ್ಷಣೆಗೆ ಪಾಕ್ ಸೇನೆ: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹೆಚ್ಚಳ
-
ದೇಶ22 hours agoಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ
-
ಚುನಾವಣೆ17 hours agoದಾವಣಗೆರೆ ಟಿಕೆಟ್ ವಿವಾದ: ಮುಸ್ಲಿಂ ಸಮುದಾಯಕ್ಕೆ ಅನ್ಯಾಯವೇ?
-
ದೇಶ23 hours agoಪಾಪ ನಿವಾರಣೆಗಾಗಿ ವರುಥಿನಿ ಏಕಾದಶಿ ವ್ರತ: ಯಾವಾಗ, ಹೇಗೆ?
-
ದೇಶ17 hours ago8 ದಶಕಗಳ ಗಾನಯಾನ ಅಂತ್ಯ: ಆಶಾ ಭೋಸ್ಲೆ ಇನ್ನು ಇಲ್ಲ
-
ದೇಶ16 hours agoAmarnath Yatra 2026: ಬಾಬಾ ಬರ್ಫಾನಿ ದರ್ಶನಕ್ಕೆ ಸಜ್ಜಾಗಿ: ಅಮರನಾಥ ಯಾತ್ರೆ ಸಂಪೂರ್ಣ ಮಾಹಿತಿ
