Connect with us

ಸಿನಿಮಾ

‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ?

Published

on

‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ?

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮೊದಲ ಪಾರ್ಟ್ ಯಶಸ್ಸು ಕಂಡಿರುವುದರಿಂದ ಎರಡನೇ ಪಾರ್ಟ್​ ಮೇಲೆ ನಿರ್ದೇಶಕರು ಹೆಚ್ಚು ಗಮನ ನೀಡಿದ್ದಾರೆ. ಅಲ್ಲು ಅರ್ಜುನ್ ಅವರು ಲುಕ್ ಕೂಡ ಬದಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಅಲ್ಲು ಅರ್ಜುನ್ ಅವರು ಈ ಚಿತ್ರಕ್ಕಾಗಿ ರೆಕಾರ್ಡ್ ಬ್ರೇಕಿಂಗ್ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಪುಷ್ಪ’ ಸಿನಿಮಾ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರ ಸಂಭಾವನೆ ನೂರು ಕೋಟಿ ರೂಪಾಯಿ ಇರಲಿಲ್ಲ. ಯಾವಾಗ ‘ಪುಷ್ಪ’ ಸಿನಿಮಾ ಯಶಸ್ಸು ಕಂಡಿತೋ ಅವರ ಲೆವೆಲ್ ಚೇಂಜ್ ಆಗಿದೆ. ‘ಪುಷ್ಪ’ ಚಿತ್ರ 300 ಕೋಟಿ ಗಳಿಕೆ ಮಾಡಿರುವುದರಿಂದ ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಮೂಲಗಳ ಪ್ರಕಾರ ಅಲ್ಲು ಅರ್ಜುನ್ ಅವರಿಗೆ ಈ ಚಿತ್ರದಿಂದ 330 ಕೋಟಿ ರೂಪಾಯಿ ಸಂಭಾವನೆ ಸಿಗುತ್ತಿದೆ! ಇದು ಅಚ್ಚರಿ ಎನಿಸಿದರೂ ನಿಜ.
ಅಲ್ಲು ಅರ್ಜುನ್ ಸಂಭಾವನೆ ವಿಚಾರ ಹೊಸ ದಾಖಲೆ ಎಂದು ಕರೆಯಲಾಗುತ್ತಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಕೂಡ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಪಡೆದಿಲ್ಲ ಅನ್ನೋದು ಅನೇಕರ ಅಭಿಪ್ರಾಯ. ಸದ್ಯ ರಜನಿಕಾಂತ್ ಅವವರು ಹೊಸ ಸಿನಿಮಾಗೆ 210 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಶಾರುಖ್ ಹಾಗೂ ಸಲ್ಲು ಸಂಭಾವನೆ 150-200 ಕೋಟಿ ರೂಪಾಯಿ ಇದೆ.
ಅಲ್ಲು ಅರ್ಜುನ್ ಅವರು ಈವರೆಗೆ ‘ಪುಷ್ಪ 2’ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ. ಬದಲಿಗೆ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್, ಒಟಿಟಿ, ಸ್ಯಾಟಲೈಟ್ ಹಕ್ಕು, ಆಡಿಯೋ ರೈಟ್ಸ್ ಸೇರಿ ಎಲ್ಲಾ ಬಿಸ್ನೆಸ್​ನಿಂದ್ ಶೇ. 33 ಲಾಭ ಅಲ್ಲು ಅರ್ಜುನ್ ಪಾಲಾಗಲಿದೆ. ಈ ಚಿತ್ರ ಅನಾಯಸವಾಗಿ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಲಿದೆ. ಆ ಬಗ್ಗೆ ತಂಡದವರಿಗೂ ಕಾನ್ಫಿಡೆನ್ಸ್ ಇದೆ. ಹೀಗಾಗಿ, ಅಲ್ಲು ಅರ್ಜುನ್ ಅವರಿಗೆ ಕನಿಷ್ಠ 330 ಕೋಟಿ ರೂಪಾಯಿ ಸಿಗಲಿದೆ.

Continue Reading

ದೇಶ

ರಾಜಮೌಳಿ ಚಿತ್ರದಲ್ಲಿ ಜೂ. ಎನ್‌ಟಿಆರ್ ಪುತ್ರ ಎಂಟ್ರಿ? ‘ವಾರಣಾಸಿ’ ಬಗ್ಗೆ ಭಾರೀ ಚರ್ಚೆ

Published

on

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ S. S. Rajamouli ಅವರ ಸಿನಿಮಾಗಳು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿವೆ. ಅವರ ಹೊಸ ಸಿನಿಮಾ ‘ವಾರಣಾಸಿ’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಇದಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಸಿನಿ ವಲಯದಲ್ಲಿ ಸದ್ದು ಮಾಡುತ್ತಿದೆ.

ಸ್ಟಾರ್ ನಟ Jr. NTR ಅವರ ಪುತ್ರ ಭಾರ್ಗವ್ ರಾಮ್ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ Mahesh Babu ಅವರ ಬಾಲ್ಯದ ಪಾತ್ರದಲ್ಲಿ ಭಾರ್ಗವ್ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಾಜಮೌಳಿ ಅವರ ಸಿನಿಮಾಗಳಲ್ಲಿ ನಾಯಕನ ಬಾಲ್ಯದ ಕಥೆಗೆ ವಿಶೇಷ ಮಹತ್ವವಿರುತ್ತದೆ. ಇದೇ ಶೈಲಿಯನ್ನು ‘ವಾರಣಾಸಿ’ ಸಿನಿಮಾದಲ್ಲಿಯೂ ಮುಂದುವರಿಸಲಾಗುತ್ತಿದ್ದು, ಫ್ಲ್ಯಾಶ್‌ಬ್ಯಾಕ್ ಸನ್ನಿವೇಶದಲ್ಲಿ ಬಾಲ್ಯದ ಪಾತ್ರ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಆಸಕ್ತಿಯ ಸಂಗತಿ ಎಂದರೆ, Jr. NTR ಕೂಡ ಬಾಲನಟನಾಗಿಯೇ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದರು. ‘ರಾಮಾಯಣಂ’ ಚಿತ್ರದಲ್ಲಿ ಅಭಿನಯಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈಗ ಅವರ ಪುತ್ರವೂ ಅದೇ ಹಾದಿಯಲ್ಲಿ ಸಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಸಿನಿಮಾದಲ್ಲಿ ನಟಿಸಲು ಅನೇಕ ದೊಡ್ಡ ನಟರು ಆಸಕ್ತಿ ತೋರಿಸುತ್ತಿದ್ದು, ಸಂಭಾವನೆ ಇಲ್ಲದಿದ್ದರೂ ಪಾತ್ರಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ನಿರ್ದೇಶನ ಮತ್ತು ಮಹೇಶ್ ಬಾಬು ನಟನೆಯ ಸಂಯೋಜನೆಯಿಂದ ‘ವಾರಣಾಸಿ’ ಈಗಾಗಲೇ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಒಟ್ಟಾರೆ, ಭಾರ್ಗವ್ ರಾಮ್ ಅವರ ಎಂಟ್ರಿ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಈ ಸುದ್ದಿ ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಸಂತಸದ ಅಲೆ ಮೂಡಿಸಿದೆ.

Continue Reading

ದೇಶ

‘ಬಡೇ ಸಾಬ್’ ಪಾತ್ರದ ಹಿಂದಿನ ಸತ್ಯ: ದಾವೂದ್ ಕುರಿತ ಚರ್ಚೆ

Published

on

ಬೆಂಗಳೂರು: ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ Dawood Ibrahim ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಬಿಡುಗಡೆಯಾದ Dhurandhar 2 ಚಿತ್ರದ ಭಾರೀ ಯಶಸ್ಸಿನ ಬೆನ್ನಲ್ಲೇ ದಾವೂದ್ ಇಬ್ರಾಹಿಂ ಕುರಿತ ಚರ್ಚೆ ಮತ್ತೆ ಜೋರಾಗಿದೆ.

1990ರ ದಶಕದ 1993 Bombay bombings ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ ದಾವೂದ್, ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದನು. ಅಂದಿನಿಂದಲೇ ತನ್ನ ‘ಡಿ-ಗ್ಯಾಂಗ್’ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಿರ್ವಹಿಸುತ್ತಿದ್ದಾನೆ ಎಂಬ ಆರೋಪಗಳಿವೆ.

ಸದ್ಯದ ಮಾಹಿತಿಗಳ ಪ್ರಕಾರ, ದಾವೂದ್ ಪಾಕಿಸ್ತಾನದ Karachi ನಗರದಲ್ಲಿನ ಕ್ಲಿಫ್ಟನ್ ಪ್ರದೇಶದ 13ನೇ ರಸ್ತೆಯ ‘ವೈಟ್ ಹೌಸ್’ ಎಂಬ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಈ ಪ್ರದೇಶವು ಪಾಕಿಸ್ತಾನದ ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.

ಇನ್ನೂ ಕೆಲವು ವರದಿಗಳ ಪ್ರಕಾರ, ಕರಾಚಿಯ ಡಿಫೆನ್ಸ್ ಹೌಸಿಂಗ್ ಏರಿಯಾ (DHA) ಹಾಗೂ ಖಯ್ಯುಮಾಬಾದ್ ಪ್ರದೇಶದಲ್ಲಿಯೂ ದಾವೂದ್ ನಿವಾಸ ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳಿಗೂ ಇದೇ ರೀತಿಯ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

‘ಧುರಂಧರ್ 2’ ಸಿನಿಮಾದಲ್ಲಿ ‘ಬಡೇ ಸಾಬ್’ ಎಂಬ ಪಾತ್ರದ ಮೂಲಕ ದಾವೂದ್ ಇಬ್ರಾಹಿಂನಂತೆ ಕಾಣುವ ಪಾತ್ರವನ್ನು ಚಿತ್ರಿಸಲಾಗಿದೆ. ನೈಜ ಘಟನೆಗಳನ್ನು ಆಧರಿಸಿದ ಕಥಾಹಂದರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಈ ಪಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ.

ಆದಾಗ್ಯೂ, ದಾವೂದ್ ಇಬ್ರಾಹಿಂ ನಿಖರವಾಗಿ ಎಲ್ಲಿದ್ದಾನೆ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ ಸಿನಿಮಾ ಮತ್ತು ಗುಪ್ತಚರ ಮಾಹಿತಿಗಳ ಹಿನ್ನೆಲೆ, ದಾವೂದ್ ಕುರಿತ ಚರ್ಚೆ ಮತ್ತೆ ಜಾಗತಿಕ ಮಟ್ಟದಲ್ಲಿ ತೀವ್ರವಾಗಿದೆ

Continue Reading

ದೇಶ

ಲಾಸ್ ಏಂಜಲೀಸ್‌ನಲ್ಲಿ ‘ರಾಮಾಯಣ’ ಟೀಸರ್ ಸದ್ದು: ರಣಬೀರ್ ಲುಕ್‌ಗೆ ಭಾರೀ ಚಪ್ಪಾಳೆ

Published

on

Continue Reading

Trending