Connect with us

ರಾಜ್ಯ

ಹೊಸಕೋಟೆ: ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ, ಎಫ್​ಐಆರ್ ದಾಖಲು

Published

on

ಹೊಸಕೋಟೆ: ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ, ಎಫ್​ಐಆರ್ ದಾಖಲು

ಬೆಂಗಳೂರಿನ ಬೆಯ್ಯಪ್ಪನಹಳ್ಳಿ ಪೊಲೀಸರು ಭ್ರೂಣಹತ್ಯೆ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದರು. ಭ್ರೂಣ ಪತ್ತೆ ಹಾಗೂ ಹತ್ಯೆಗಳು ಮಂಡ್ಯದಲ್ಲಿ ನಡೆಯುತ್ತಿತ್ತು. ಇದೀಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿರುವ ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಎಫ್​ಐಆರ್ ದಾಖಲಾಗಿದೆ. ಮಂಡ್ಯದಲ್ಲಿ ನಡೆಯುತ್ತಿದ್ದ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು ಬೆಂಗಳೂರು ನಗರದ ಬೆಯ್ಯಪ್ಪನಹಳ್ಳಿ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳುತ್ತಿದ್ದಾರೆ. ಇದೀಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿರುವ ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಎಫ್​ಐಆರ್ ದಾಖಲಾಗಿದೆ.ಭ್ರೂಣ ಹತ್ಯೆ ಪ್ರಕರಣ ಸಂಬಂಧ ತಿರುಮಲಶೆಟ್ಟಿಹಳ್ಳಿ ಎಸ್​​ಪಿಜಿ ಆಸ್ಪತ್ರೆಯ ವೈದ್ಯ ಸೇರಿದಂತೆ ಐವರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಶ್ರೀನಿವಾಸ್ ಮೊದಲ ಆರೋಪಿಯಾಗಿದ್ದು (ಎ1), ಎ2 ನರ್ಸ್​ ಅನಿತಾ, ಎ3 ನರ್ಸ್​​ ನೇತ್ರಾ, ಎ4 ರೇವತಿ, ಎ5 ರಾಧಿಕಾ ವಿರುದ್ಧ ಎಫ್​ಐಆರ್ ದಾಖಲಾಗಿದೆ.ಮೆಡಿಕಲ್​ ಆ್ಯಕ್ಟ್​ 1994, ಯುಎಸ್​​ 23/1, 2, 3, ಮೆಡಿಕಲ್ ಟರ್ಮಿನೇಷನ್ ಆಪ್ ಪ್ರೆಗ್ನೆಸಿ ಆ್ಯಕ್ಟ್ 1971 ಅಡಿ US 3, 4, IPC ಸೆಕ್ಷನ್​ 1860ರ ಅಡಿ, 312, 314, 315, 316ರ ಅಡಿ ಕೇಸ್​​ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ವೈದ್ಯ ಮತ್ತು ನರ್ಸ್​ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಎಸ್​ಪಿಜಿ ಆಸ್ವತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ ಪ್ರಕರಣ ಸಂಬಂಧ ಆಸ್ಪತ್ರೆಯ ದಾಖಲೆಗಳು ಸಾಕಷ್ಟು ಅನುಮಾನ ಮೂಡಿಸುತ್ತಿದೆ. ಸ್ಕ್ಯಾನಿಂಗ್​ನಲ್ಲಿ ದೊಡ್ಡ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಒಂದು ವರ್ಷದಲ್ಲಿ 1500 ಕ್ಕೂ ಅಧಿಕ ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿದ್ದು, ಈ ಪೈಕಿ 400 ಕ್ಕೂ ಅಧಿಕ ಮಹಿಳೆಯರ ಹೆರಿಗೆ ಮಾಹಿತಿ ‌ಅಲಭ್ಯವಾಗಿದೆ. 400 ಕ್ಕೂ ಅಧಿಕ ಮಹಿಳೆಯರು ಎಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ ಅಂತ ಮಾಹಿತಿ ಸಿಗುತ್ತಿಲ್ಲ. ನಾಪತ್ತೆಯಾದ 400 ಕ್ಕೂ‌ ಅಧಿಕ ಮಹಿಳೆಯರ ಮಾಹಿತಿಗಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೇರೆಡೆ ಹೆರಿಗೆ ಮಾಡಿಸಿಕೊಂಡಿದ್ದಾರಾ ಅಥವಾ ಗರ್ಭಪಾತ ಮಾಡಿದ್ದಾರಾ ಎಂಬ ವಿಚಾರವಾಗಿ ತಮಿಖೆ ನಡೆಸುತ್ತಿದ್ದಾರೆ.ಈಗಾಗಲೆ ಸ್ಕ್ಯಾನಿಂಗ್ ಮಾಡಿಸಿರುವ ಮಹಿಳೆಯರ ದಾಖಲೆ ಪಡೆದುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ನಾಪತ್ತೆಯಾಗಿರುವ ವೈದ್ಯ ಶ್ರೀನಿವಾಸ್ ಬಂಧನದ ನಂತರ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Continue Reading

ದೇಶ

ಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್‌ಗಳಿಗೆ ಶಾಕ್

Published

on

By

ಗದಗ ಜಿಲ್ಲೆಯ ಮುದ್ರಣ ಉದ್ಯಮದ ಮೇಲೆ ಜಾಗತಿಕ ಬೆಳವಣಿಗೆಗಳ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದ್ದು, Iran War ಕರಿನೆರಳು ಮುದ್ರಣಕಾಶಿಯ ಮೇಲೂ ಆವರಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಪ್ರಿಂಟಿಂಗ್ ಪ್ರೆಸ್‌ಗಳು ಹಾಗೂ ಪ್ರಕಾಶಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ನೂರಾರು ಪ್ರಿಂಟಿಂಗ್ ಪ್ರೆಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕಾಗದ, ಇಂಕ್, ಪ್ಲೇಟ್ ಸೇರಿದಂತೆ ಅನೇಕ Petroleum Products ಆಧಾರಿತ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಉತ್ಪಾದನಾ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ಈಗಾಗಲೇ ಕಚ್ಚಾ ವಸ್ತುಗಳ ಮೇಲೆ GST ಶೇ.18ರಷ್ಟು ವಿಧಿಸಿರುವುದರಿಂದ ಸಂಕಷ್ಟದಲ್ಲಿದ್ದ ಮುದ್ರಣ ಕ್ಷೇತ್ರಕ್ಕೆ ಯುದ್ಧದ ಪರಿಣಾಮ ಮತ್ತಷ್ಟು ಹೊಡೆತ ನೀಡಿದೆ. ಒಂದು ಕ್ವಿಂಟಾಲ್ ಕಾಗದಕ್ಕೆ 8ರಿಂದ 10 ಸಾವಿರ ರೂಪಾಯಿ ಹೆಚ್ಚಳವಾಗಿದ್ದು, ಮುಂಗಡ ಬುಕ್ಕಿಂಗ್ ಮಾಡಿದರೂ ಸರಕು ವಿತರಣೆಯಲ್ಲಿ ವಿಳಂಬ ಉಂಟಾಗಿದೆ.

ಪಂಚಾಂಗ, ಕ್ಯಾಲೆಂಡರ್ ಹಾಗೂ ಪಠ್ಯಪುಸ್ತಕ ಮುದ್ರಣ ಮಾಡುವ ಪ್ರೆಸ್‌ಗಳಿಗೆ ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಕಚ್ಚಾವಸ್ತುಗಳ ಬೆಲೆ ಶೇ.20ರಿಂದ 40ರ ವರೆಗೆ ಏರಿಕೆಯಾಗಿದೆ.

ಮುದ್ರಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿನಿತ್ ಕುಮಾರ್ ಅವರ ಪ್ರಕಾರ, “ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿದರೆ ಮಾತ್ರ ಉದ್ಯಮ ಉಳಿಯುತ್ತದೆ, ಇಲ್ಲವಾದರೆ ಬಂದ್ ಭೀತಿ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.

ಮಧ್ಯಪ್ರಾಚ್ಯದಿಂದ ಆಮದಾಗುವ ಕಚ್ಚಾ ವಸ್ತುಗಳ ಕೊರತೆಯೊಂದಿಗೆ, ಕೂಲಿ ಕಾರ್ಮಿಕರಿಗೆ ಕೆಲಸವೂ ಕಡಿಮೆಯಾಗಿದ್ದು, ಮುದ್ರಣ ಉದ್ಯಮದಲ್ಲಿ ಭಾರೀ ಅನಿಶ್ಚಿತತೆ ಮೂಡಿದೆ.

Continue Reading

ದೇಶ

“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್‌ ಟಾಂಗ್‌, ದಾವಣಗೆರೆ ರಾಜಕೀಯ ಕುತೂಹಲ

Published

on

By

ದಾವಣಗೆರೆ ದಕ್ಷಿಣ ಉಪಚುನಾವಣೆ ರಾಜಕೀಯ ಕಣ ದಿನೇದಿನೇ ರಂಗೇರುತ್ತಿದ್ದು, ಸಚಿವ ಜಮೀರ್‌ ಅಹ್ಮದ್‌ ಖಾನ್ ಅವರ ಆಗಮನದಿಂದ ಹೊಸ ತಿರುವು ಪಡೆದುಕೊಂಡಿದೆ. ಹಲವು ದಿನಗಳಿಂದ ಮುಂದುವರಿದಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಅವರು ಕೊನೆಗೂ ದಾವಣಗೆರೆಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ.

ಟಿಕೆಟ್‌ ಹಂಚಿಕೆ ವೇಳೆ ಉಂಟಾದ ಗಲಾಟೆ ಸಂದರ್ಭದಲ್ಲಿ ಎಸ್‌ಎಸ್‌ ಮಲ್ಲಿಕಾರ್ಜುನ್ ಅವರು “ಯಾರ್ರಿ ಜಮೀರ್‌ ದಾವಣಗೆರೆ ಬಗ್ಗೆ ಮಾತನಾಡಲು” ಎಂದು ಹೇಳಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಜಮೀರ್‌ ಅಸಮಾಧಾನಗೊಂಡಿದ್ದರು.

ಆದರೆ ಇದೀಗ ರಾಜಕೀಯ ವಾತಾವರಣ ಬದಲಾಗಿದ್ದು, ಜಮೀರ್‌ ಅವರನ್ನು ಸ್ವತಃ ಮಲ್ಲಿಕಾರ್ಜುನ್‌ ಅವರು ಸ್ವಾಗತಿಸಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್‌, “ನಾವಿಬ್ಬರೂ ಸ್ನೇಹಿತರು. ಯಾವುದೇ ಬೇಸರ ಇಲ್ಲ. ಸಿಟ್ಟಿನಲ್ಲಿ ಹೇಳಿದ ಮಾತು ಅಷ್ಟೇ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಅವರು ಪರೋಕ್ಷವಾಗಿ ಟಾಂಗ್ ಕೊಡುತ್ತಾ, “ನನ್ನ ಕ್ಷೇತ್ರ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನು ಸುಮ್ಮನೆ ಇರ್ತಿನಾ?” ಎಂದು ಪ್ರತಿಕ್ರಿಯೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್‌, “ಈಗ ಎಲ್ಲವೂ ಬಗೆಹರಿದಿದೆ. ನಾವು ಬಹಳ ವರ್ಷಗಳಿಂದ ಸ್ನೇಹಿತರು,” ಎಂದು ಹೇಳಿದರು.

ಈ ಬೆಳವಣಿಗೆ ದಾವಣಗೆರೆ ರಾಜಕೀಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದಂತೆ ಕಾಣುತ್ತಿದೆ.

Continue Reading

ದೇಶ

K. Govindraj ಸೇರಿ ಗಣ್ಯರಿಗೆ ಗೌರವ ಡಾಕ್ಟರೇಟ್ – ಬಿಸಿಯು ಘಟಿಕೋತ್ಸವ ಸಂಭ್ರಮ

Published

on

By

ಬೆಂಗಳೂರು: Bengaluru City University (ಬಿಸಿಯು) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಕುಲಾಧಿಪತಿಗಳಾದ Thawar Chand Gehlot ಚಾಲನೆ ನೀಡಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ Dr. Binay Kumar Das, Defence Research and Development Organisation (ಡಿಆರ್‌ಡಿಒ) ಮಹಾ ನಿರ್ದೇಶಕರು (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್) ಭಾಗವಹಿಸಿದ್ದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ Arjun Janya, ಕ್ರಿಕೆಟರ್ Venkatesh Prasad, ಶಿಕ್ಷಣ ತಜ್ಞ T. K. Narayanappa, ಎಂಎಲ್ಸಿ K. Govindaraj, ಶಿಕ್ಷಣ ಕ್ಷೇತ್ರದ Mohan Alva ಹಾಗೂ ಕೈಗಾರಿಕೋದ್ಯಮಿ Bava Mohammed Farooq ಅವರಿಗೆ ರಾಜ್ಯಪಾಲರು ಗೌರವಿಸಿದರು.

ಉಪ ಚುನಾವಣೆ ಪ್ರಚಾರದ ಹಿನ್ನೆಲೆ, ಉನ್ನತ ಶಿಕ್ಷಣ ಸಚಿವ Dr. C. N. Ashwath Narayan ಗೈರಾಗಿದ್ದರು.

ಘಟಿಕೋತ್ಸವದಲ್ಲಿ 73 ಪ್ರಥಮ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನವಾಗಿದ್ದು, 23 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಲಾಯಿತು.

ವಿಶೇಷವಾಗಿ, ಸ್ನೇಹಾ ಟಿ (ಎಂಎಸ್‌ಸಿ ರಸಾಯನಶಾಸ್ತ್ರ) 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಭಿಷೇಕ್ ಶ್ರೀರಾಮ್ (ಬಿಕಾಂ) 3 ಚಿನ್ನದ ಪದಕ, ದಿವ್ಯಶ್ರೀ ಎಸ್ (ಬಿಬಿಎ) 3 ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.

ಗೌರವ ಡಾಕ್ಟರೇಟ್ ಪಡೆದ ಬಳಿಕ Arjun Janya ಅವರು ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.

Continue Reading

Trending