ಕ್ರೀಡೆ

ಭಾರತ ತಂಡವನ್ನು ಮುನ್ನಡೆಸಿದ ಮೊತ್ತ ಮೊದಲ ವೇಗದ ಬೌಲರ್ : ಬುಮ್ರಾ

ಬೆಂಗಳೂರು: ಗಾಯದ ಸಮಸ್ಯೆ ಕಾರಣ ಬರೋಬ್ಬರಿ ೧೧ ತಿಂಗಳು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತ ತಂಡದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಇದೀಗ ಕಮ್ ಬ್ಯಾಕ್ ಮಾಡಲಿದ್ದಾರೆ, ಐರ್ಲೆಂಡ್ ವಿರುದ್ಧದ ೩ ಪಂದ್ಯಗಳ ಟಿ ೨೦ ಕ್ರಿಕೆಟ್ ಸರಣಿ ಮೂಲಕ ಅಂತಾರಾಷ್ಟಿçÃಯ ಕ್ರಿಕೆಟ್‌ಗೆ ಮರಳುತ್ತಿರುವ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ, ಈ ಮೂಲಕ ಭಾರತ ತಂಡವನ್ನು ಮುನ್ನಡೆಸಿದ ಮೊತ್ತ ಮೊದಲ ವೇಗದ ಬೌಲರ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ, ಇದುವರೆಗೂ ಭಾರತ ತಂಡವನ್ನು ೧೦ ಕ್ಯಾಪ್ಟನ್ಸ್ ಮುನ್ನಡೆಸಿದ್ದಾರೆ, ಇದರಲ್ಲಿ ೯ ಮಂದಿ ಬ್ಯಾಟರ್ ಆಗಿದ್ದು, ಹಾರ್ದಿಕ್ ಪಾಂಡ್ಯ ಏಕೈಕ ಆಲ್ ರೌಂಡರ್ ಆಗಿದ್ದಾರೆ, ಈಗ ಬುಮ್ರಾ ಭಾರತ ಟಿ೨೦ ತಂಡವನ್ನು ಮುನ್ನಡೆಸಿದ ಮೊದಲ ವೇಗಿ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ

Trending

Exit mobile version