ಬೆಂಗಳೂರು
ರಾಜ್ಯವನ್ನು ಇನ್ನೆಷ್ಟು ಕತ್ತಲುಗೊಳಿಸುವಿರಿ ಬಿಜೆಪಿ ರಾಜ್ಯಾಧ್ಯಕ್ಷರ ಟ್ವೀಟ್
ಬೆಂಗಳೂರು: ರಾಜ್ಯ ಸರ್ಕಾರದ ಲೋಡ್ ಶೆಡ್ಡಿಂಗ್ ನಿರ್ಧಾರ ಇದೀಗ ಪ್ರತಿಪಕ್ಷಗಳಿಗೆ ಟೀಕಾಸ್ತçವಾಗಿದ್ದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮೂಲಕ ಲೋಡ್ ಶೆಡ್ಡಿಂಗ್ ನಿರ್ಧಾರವನ್ನು ಖಂಡಿಸಿದ್ದಾರೆ,
ಅಡಳಿತ ಪಕ್ಷದ ಗ್ಯಾರಂಟಿಗಳಲ್ಲೊAದಾಗಿರುವ ಗೃಹ ಜ್ಯೋತಿ ಯೋಜನೆಯನ್ನು ಉದ್ದರಿಸಿ ಟ್ವೀಟ್ ಮಾಡಿರುವ ಅವರು ಲೋಡ್ ಶೆಡ್ಡಿಂಗ್ ನಿರ್ಧಾರ ಬಗ್ಗೆ ೨೦೦ ಯುನಿಟ್ ಫ್ರೀ ಬಳಸೋಕೆ ಮಾತ್ರ ಕರೆಂಟ್ ಇಲ್ಲ ಎಂದು ಹೇಳಿ ಕಾಂಗ್ರೆಸ್ ಸರ್ಕಾರ ಈ ರಾಜ್ಯಕ್ಕೆ ಎಂತಹ ದೌರ್ಭಾಗ್ಯ ತಂದಿದೆಯೆAದರೆ ಮಳೆಗಾಲದಲ್ಲೂ ಲೋಡ್ ಶೆಡ್ಡಿಂಗ್ ಆರಂಭವಾಗಿದೆ,
ಮುಖ್ಯಂತ್ರಿ ಸಿದ್ದರಾಮಯ್ಯನವರೇ ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ಈಗಾಗಲೇ ರಾಜ್ಯದ ಅಭಿವೃದ್ಧಿಯ ಕಣ್ಣು ಕಟ್ಟಿದ್ದೀರಿ, ರಾಜ್ಯವನ್ನು ಇನ್ನೆಷ್ಟು ಕತ್ತಲೆಗೊಳಿಸುವಿರಿ ಎಂದು ಪ್ರಶ್ನಸಿದ್ದಾರೆ,
ಮುಂಗಾರು ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹವಿಲ್ಲದೇ, ಜಲವಿದ್ಯುತ್ ಉತ್ಪಾದನೆ ಕಡಿಮೇಯಾಗಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಗೃಹಸಚಿವ ಡಾ ಜಿ ಪರಮೇಶ್ವರ್ ಮಾಹಿತಿ ನೀಡಿದ್ದರು,