Connect with us

ಬೆಂಗಳೂರು

ಗಣರಾಜ್ಯೋತ್ಸವ ವಿಶೇಷ, ಬೆಂಗಳೂರು ವಿಜಯನಗರದಲ್ಲಿ 215 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಲಿದೆ ತಿರಂಗಾ

Published

on

ಗಣರಾಜ್ಯೋತ್ಸವ ವಿಶೇಷ, ಬೆಂಗಳೂರು ವಿಜಯನಗರದಲ್ಲಿ 215 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಲಿದೆ ತಿರಂಗಾ

ಬೆಂಗಳೂರು: ಭಾರತದ ಉದ್ದಗಲಕ್ಕೂ ಗಣರಾಜ್ಯೋತ್ಸವಕ್ಕೆ ತಯಾರಿ ನಡೆದಿದೆ. ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಸಂಭ್ರಮಕ್ಕೆ ತುಸು ಹೆಚ್ಚು ಮೆರಗು ನೀಡಲಿದೆ ವಿಜಯನಗರದಲ್ಲಿ ಸ್ಥಾಪನೆಯಾಗುತ್ತಿರುವ ಅತಿ ಎತ್ತರದ ಧ್ವಜಸ್ತಂಭ.

ವಿಜಯನಗರದಲ್ಲಿ 215 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪನೆಯಾಗುತ್ತಿದೆ. ಬೆಂಗಳೂರಿನಲ್ಲಿ ಇದು ಈ ಸಲ ಗಣರಾಜ್ಯೋತ್ಸವದ ಆಕರ್ಷಣೆಯಾಗಿರಲಿದೆ. ಈ ಅತಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸುವ ಯೋಜನೆಯ ಗುತ್ತಿಗೆದಾರ ಹೇಮಂತ್ ಎಚ್‌ಜಿ ಈ ಕುರಿತು ಮಾಹಿತಿ ನೀಡಿದರು ಎಂದು ಟೈಮ್ಸ್ ನೌ ವರದಿ ಮಾಡಿದೆ.ವಿಜಯನಗರ ಶಾಸಕ, ಮಾಜಿ ಸಚಿವ ಎಂ.ಕೃಷ್ಣಪ್ಪ ಅವರು ಈ ಧ್ವಜ ಸ್ತಂಭಕ್ಕೆ ಹಣಕಾಸು ನೆರವು ನೀಡಿದ್ದಾರೆ. ಇದನ್ನು ಚಂದ್ರಾಲೇಔಟ್‌ನಲ್ಲಿ ಸ್ಥಾಪಿಸಲಾಗುತ್ತಿದೆ. ಇದು 210 ಅಡಿ ಎತ್ತರ ಇರಲಿದ್ದು, ಅದರ ಮೇಲೆ 5 ಅಡಿ ಅಶೋಕ ಚಕ್ರದ ಲಾಂಛನ ಇರಲಿದೆ. ಕಳೆದ ಡಿಸೆಂಬರ್‌ನಲ್ಲಿ 19 ಟನ್ ತೂಕದ ಕಂಬ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಕ್ರೇನ್ ಬಳಸಿ ಎತ್ತರದ ರಚನೆಯನ್ನು ನಿರ್ಮಿಸಲಾಯಿತು. ಜನವರಿ 25 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅತಿ ಎತ್ತರದ ಧ್ವಜ ಸ್ತಂಭ ನಿರ್ಮಾಣದ ಯೋಜನಾ ವೆಚ್ಚ 1 ಕೋಟಿ ರೂಪಾಯಿ. ಕಳೆದ ವರ್ಷ ನವೆಂಬರ್ 30 ರಂದು ಈ ಯೋಜನೆಗೆ ಚಾಲನೆ ನೀಡಲಾಯಿತು. ಕಂಬದ ಮೇಲೆ ಅಳವಡಿಸುವ ರಾಷ್ಟ್ರ ಲಾಂಛನವಾಗಿರುವ 4 ತಲೆಯ ಸಿಂಹವನ್ನು ವಿಜಯನಗರ ನಿವಾಸಿಗಳಷ್ಟೇ ಅಲ್ಲ, ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳವರಿಗೂ ಕಾಣಿಸಲಿದೆ, ರಾಷ್ಟ್ರಧ್ವಜ ಸಂಹಿತೆಗೆ ಅನುಗುಣವಾಗಿ ತಿರಂಗಾವನ್ನು ಇಲ್ಲಿ ಹಾರಾಡಿಸಲಾಗುತ್ತದೆ. ಪ್ರತಿ ಎರಡು ತಿಂಗಳಿಗೆ ಒಮ್ಮೆ ಧ್ವಜವನ್ನು ಬದಲಾಯಿಸಲಾಗುತ್ತದೆ. ಧ್ವಜಾರೋಹಣ ಮತ್ತು ಅವರೋಹಣ ಕಾರ್ಯವಿಧಾನ ಕೈಗಳಿಂದ ಮಾಡಬಹುದು. ಅದೇ ರೀತಿ ಯಾಂತ್ರಿಕವಾಗಿ ಮಾಡುವುದಕ್ಕೆ ಮೋಟಾರನ್ನು ಕೂಡ ಅಳವಡಿಸಲಾಗಿದೆ. ಇದಕ್ಕಾಗಿ 8-ಎಂಎಂ ಸ್ಟೀಲ್ ವೈರ್, 3 ಎಚ್‌ಪಿ ಮೋಟಾರ್‌ ಅನ್ನು ಜೋಡಿಸಲಾಗಿದೆ. ಯೋಜನೆ ಪೂರ್ಣಗೊಂಡ ನಂತರ ವಾರ್ಷಿಕ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು.

ಈ ಹಿಂದೆ ರಾಜಭವನದ ಬಳಿಯಿರುವ ರಾಷ್ಟ್ರೀಯ ಸೇನಾ ವಸ್ತುಸಂಗ್ರಹಾಲಯದ ಆವರಣದಲ್ಲಿ 213 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಲಾಗಿತ್ತು. ಅದುವೇ ಇದುವರೆಗೆ ಬೆಂಗಳೂರಿನ ಅತಿ ಎತ್ತರದ ಧ್ವಜ ಸ್ತಂಭ ಎಂಬ ಕೀರ್ತಿಗೆ ಭಾಜನವಾಗಿತ್ತು.

Continue Reading

ದೇಶ

ಕಾಂಗ್ರೆಸ್‌ನಲ್ಲಿ ಭೂಕಂಪ: ನಜೀರ್ ಅಹ್ಮದ್‌ಗೆ ಸುರ್ಜೇವಾಲಾ ಅಲ್ಟಿಮೇಟಂ

Published

on

By

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಳಅಸಮಾಧಾನ ತೀವ್ರಗೊಂಡಿರುವ ನಡುವೆಯೇ, ರಾಜ್ಯ ಉಸ್ತುವಾರಿ Randeep Singh Surjewala ಅವರು ಸಿಎಂ ರಾಜಕೀಯ ಕಾರ್ಯದರ್ಶಿ Naseer Ahmed ಅವರಿಗೆ ಕಠಿಣ ಡೆಡ್‌ಲೈನ್ ನೀಡಿದ್ದಾರೆ.

ಇಂದು (ಏಪ್ರಿಲ್ 13) ಸಂಜೆಯೊಳಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿರುವ ಸುರ್ಜೇವಾಲಾ, ಸಮಯಕ್ಕೆ ರಾಜೀನಾಮೆ ನೀಡದಿದ್ದರೆ ಅವರನ್ನು ಸ್ಥಾನದಿಂದ ವಜಾಗೊಳಿಸಲು ಮುಖ್ಯಮಂತ್ರಿ Siddaramaiah ಅವರಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, “ನಸೀರ್ ಅಹ್ಮದ್ ಇನ್ನೂ ರಾಜೀನಾಮೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಕೊಡಬಹುದು. ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ದಾವಣಗೆರೆ ದಕ್ಷಿಣ ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಕೆಲವು ನಾಯಕರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ನಸೀರ್ ಅಹ್ಮದ್ ಅವರು ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆಂದು ಸಿಎಂ ಹೇಳಿದ್ದಾರೆ.

ಇದಕ್ಕೂ ಮೊದಲು ಸುರ್ಜೇವಾಲಾ ಅವರು ಸಚಿವ Zameer Ahmed Khan, Abdul Jabbar ಹಾಗೂ ನಸೀರ್ ಅಹ್ಮದ್ ವಿರುದ್ಧ ವರದಿ ಸಲ್ಲಿಸಿದ್ದರು. ಈಗಾಗಲೇ ಅಬ್ದುಲ್ ಜಬ್ಬಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅದನ್ನು D. K. Shivakumar ಅಂಗೀಕರಿಸಿದ್ದಾರೆ.

ಈ ಬೆಳವಣಿಗೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕ್ರಮಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Continue Reading

ದೇಶ

ಸಚಿವ ಸ್ಥಾನ ಕೇಳೋದು ತಪ್ಪಲ್ಲ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

Published

on

By

ಬೆಂಗಳೂರು: ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ G. Parameshwara ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಅದೇನು ಗ್ಯಾಂಬ್ಲಿಂಗ್ ಅಲ್ಲ, ಶಾಸಕರು ತಮ್ಮ ಅರ್ಹತೆಯ ಆಧಾರದಲ್ಲಿ ಕೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ಎರಡು ಮೂರು ಬಾರಿ ಗೆದ್ದಿರುವ ಶಾಸಕರು ಸಚಿವರಾಗಲು ಸಮರ್ಥರು. ಹೀಗಾಗಿ ಸಚಿವ ಸ್ಥಾನಕ್ಕಾಗಿ ಕೇಳುವುದು ಸಹಜ. ಆದರೆ ಅಂತಿಮ ನಿರ್ಧಾರ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಕೈಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಷ ಪುನಾರಚನೆ ಕುರಿತು ಮಾತನಾಡಿದ ಪರಮೇಶ್ವರ್, “ನಾಯಕತ್ವ ವಿಚಾರವಾಗಲಿ, ಸಚಿವ ಸಂಪುಟ ಪುನಾರಚನೆ ಆಗಲಿ, ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಹಿರಂಗವಾಗಿ ಕೇಳುವುದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈಗ ಪುನಾರಚನೆ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ” ಎಂದು ಹೇಳಿದರು.

ಇನ್ನೂ ದಾವಣಗೆರೆ ಕ್ಷೇತ್ರದಲ್ಲಿ Abdul Jabbar ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಅವರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿದರು. D. K. Shivakumar ಹೊಸ ಸಮಿತಿ ರಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪುನಾರಚನೆ ನಡೆದರೆ ಹಿರಿಯರು ಸ್ಥಾನ ಬಿಟ್ಟುಕೊಡಬೇಕಾದರೆ ನಾವು ಒಪ್ಪಲೇಬೇಕು. ಹೈಕಮಾಂಡ್ ತೀರ್ಮಾನಕ್ಕೆ ಯಾರೂ ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

Continue Reading

ದೇಶ

ಬೆಂಗಳೂರು ಬಿಸಿ ಏರಿಕೆ: 38 ಡಿಗ್ರಿ ತಲುಪುವ ಸಾಧ್ಯತೆ

Published

on

By

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ Bengaluru ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನ ಏರಿಕೆ ಕಂಡುಬರುತ್ತಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಬಿಸಿಲಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು India Meteorological Department (IMD) ಎಚ್ಚರಿಕೆ ನೀಡಿದೆ.

ಈಗಾಗಲೇ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸನಿಹ ತಲುಪಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಸದ್ಯ ತಾಪಮಾನ 35 ಡಿಗ್ರಿ ಸುತ್ತಮುತ್ತ ದಾಖಲಾಗುತ್ತಿದ್ದು, ಮುಂದಿನ ಐದು ದಿನಗಳಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೀವ್ರ ಬಿಸಿಲು ಇರುವುದರಿಂದ ಅನಗತ್ಯ ಹೊರಗಡೆ ಓಡಾಟವನ್ನು ತಪ್ಪಿಸಿ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಸೂಚಿಸಲಾಗಿದೆ.

ಇನ್ನೂ ಉತ್ತರ ಒಳನಾಡಿನ ಬೀದರ್, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನ 42 ರಿಂದ 44 ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ 2 ಡಿಗ್ರಿ ಏರಿಕೆ ಸಾಧ್ಯತೆ ಇದೆ.

ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲೂ 2 ರಿಂದ 3 ಡಿಗ್ರಿವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು IMD ತಿಳಿಸಿದೆ.

Continue Reading

Trending