Connect with us

ಬೆಂಗಳೂರು

ಸರ್ಕಾರದ ವಿರುದ್ಧ ಮತ್ತೆ ಐಟಿಬಿಟಿ ಕಂಪನಿಗಳು ಬೇಸರ!

Published

on

ಸರ್ಕಾರದ ವಿರುದ್ಧ ಮತ್ತೆ ಐಟಿಬಿಟಿ ಕಂಪನಿಗಳು ಬೇಸರ!

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಐಟಿಬಿಟಿ ಕಂಪನಿಗಳು ಮತ್ತೆ ಬೇಸರ ಹೊರಹಾಕಿದ್ದಾರೆ. ಅಕ್ಟೋಬರ್ 7 ರಂದು ಔಟರ್ ರಿಂಗ್ ರೋಡ್ ಕಂಪನಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಟ್ರಾಫಿಕ್, ವಾಹನ ದಟ್ಟಣೆ ಸೇರಿ ಹಲವು ಸಮಸ್ಯೆಗಳ ಬಗ್ಗೆ ಐಟಿಬಿಟಿ ಕಂಪನಿಗಳು ಹೇಳಿದ್ದವು. 100 ದಿನದೊಳಗೆ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಗಡುವು ನೀಡಿದ್ದರು. ಆದರೆ ಅಧಿಕಾರಿಗಳಿಗೆ ಕೊಟ್ಟ 100 ದಿನಗಳ ಗಡುವು ವಿಫಲವಾಗಿದೆ. 100 ದಿನವಾದರೂ ಪರಿಹಾರ ಸಿಗದಿದ್ದಕ್ಕೆ ಔಟರ್ ರಿಂಗ್ ರೋಡ್ ಕಂಪನಿ ಒಕ್ಕೂಟ ಡಿಕೆ ಶಿವಕುಮಾರ್​ ಅವರಿಗೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ.17 ಕಿಮೀ ಉದ್ದದ ಔಟರ್ ರಿಂಗ್ ರೋಡ್ ರಸ್ತೆಯಲ್ಲಿ 500 ಕಂಪನಿಗಳಿದ್ದು 10 ಲಕ್ಷ ಜನ ನೆಲೆಸಿದ್ದಾರೆ. ಸಮಸ್ಯೆಗಳನ್ನ 100 ದಿನದೊಳಗೆ ಪರಿಹರಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ವಲಯ ಆಯುಕ್ತರಿಗೆ ಗಡುವು ಡಿಕೆ ಶಿವಕುಮಾರ್​ ನೀಡಿದ್ದರು. ಇದೀಗ ನೀಡಿದ್ದ 100 ದಿನದ ಗುಡುವು ಮುಕ್ತಾಯವಾದರು ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.ಸಂಚಾರ ಸಮಯದಲ್ಲಿ ಅಂದರೆ ಪೀಕ್ ಅವರ್​ನಲ್ಲಿ ಬೆಳ್ಳಂದೂರು, ಔಟರ್ ರಿಂಗ್ ರೋಡ್ ಸುತ್ತಮುತ್ತ ಟ್ರಾಫಿಕ್ ಬಿಸಿ ತಟ್ಟುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ಜಾಮ್​ ಉಂಟಾಗುತ್ತದೆ. ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಐಟಿಬಿಟಿ ಮಂದಿ ಸುಸ್ತಾಗಿದ್ದಾರೆ. ಮೆಟ್ರೋ ಕಾಮಗಾರಿ ಕೂಡ ನಡಿಯುತ್ತಿರುವುದರಿಂದ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಹಿಗಾಗಿ ಟ್ರಾಫಿಕ್​ನಿಂದ ಮುಕ್ತಿ ಯಾವಾಗ,ವಾಹನದಟ್ಟಣೆಯಿಂದ ಮುಕ್ತಿ ಕೊಡಿ ಎಂದು ಐಟಿಬಿಟಿ ಕಂಪನಿಗಳ ಅಳಲು ತೊಡಿಕೊಂಡಿವೆ.
ಬೆಂಗಳೂರು ವಿಶ್ವ ಮಟ್ಟದಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಉದ್ಯಮಿಗಳ ಪಾತ್ರವು ಕೂಡ ಇದೆ. ಒಆರ್‌ಆರ್‌ಸಿಎ ಸಂಘದ ಸದಸ್ಯರ ಮನವಿಗೆ ಸರ್ಕಾರ ಸ್ಪಂದಿಸಲಿದೆ. ನಾವು ಕಲೆಕ್ಟಿವ್ ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕರ್ನಾಟಕ ಹೂಡಿಕೆಗೆ ಸೂಕ್ತವಾದ ಸ್ಥಳ ಇದಾಗಿದ್ದು, ಉದ್ಯಮಕ್ಕೆ ಪ್ರೋತ್ಸಾಹಿಸುವ ಸರ್ಕಾರ ರಾಜ್ಯದಲ್ಲಿದೆ. ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದರು.ನೂರಾರು ಐಟಿ‌ಬಿಟಿ ಕಂಪನಿಗಳು‌‌ ನೆಲೆಸಿರುವ ಕಾರಣ ಈ ರಸ್ತೆಯಲ್ಲಿ ಟ್ರಾಫಿಕ್‌‌‌‌ ದಟ್ಟಣೆ ಉಂಟಾಗುತ್ತಿದ್ದು, ಸುಗಮ ಸಂಚಾರಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದರು.

Continue Reading

ದೇಶ

ಬೆಂಗಳೂರು ಬಿಸಿ ಏರಿಕೆ: 38 ಡಿಗ್ರಿ ತಲುಪುವ ಸಾಧ್ಯತೆ

Published

on

By

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ Bengaluru ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನ ಏರಿಕೆ ಕಂಡುಬರುತ್ತಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಬಿಸಿಲಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು India Meteorological Department (IMD) ಎಚ್ಚರಿಕೆ ನೀಡಿದೆ.

ಈಗಾಗಲೇ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸನಿಹ ತಲುಪಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಸದ್ಯ ತಾಪಮಾನ 35 ಡಿಗ್ರಿ ಸುತ್ತಮುತ್ತ ದಾಖಲಾಗುತ್ತಿದ್ದು, ಮುಂದಿನ ಐದು ದಿನಗಳಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೀವ್ರ ಬಿಸಿಲು ಇರುವುದರಿಂದ ಅನಗತ್ಯ ಹೊರಗಡೆ ಓಡಾಟವನ್ನು ತಪ್ಪಿಸಿ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಸೂಚಿಸಲಾಗಿದೆ.

ಇನ್ನೂ ಉತ್ತರ ಒಳನಾಡಿನ ಬೀದರ್, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನ 42 ರಿಂದ 44 ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ 2 ಡಿಗ್ರಿ ಏರಿಕೆ ಸಾಧ್ಯತೆ ಇದೆ.

ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲೂ 2 ರಿಂದ 3 ಡಿಗ್ರಿವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು IMD ತಿಳಿಸಿದೆ.

Continue Reading

ದೇಶ

ಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!

Published

on

By

ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿದ್ದ Abdul Jabbar ಅವರ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ D. K. Shivakumar ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ಜಬ್ಬಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದಲೇ ವಿಸರ್ಜಿಸಲಾಗಿದೆ ಎಂದು ಶಿವಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸ ಸಮಿತಿಯನ್ನು ಶೀಘ್ರದಲ್ಲೇ ರಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ತೀವ್ರಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆ ಆರಂಭವಾದ ಅಸಮಾಧಾನ, ಚುನಾವಣೆಯ ನಂತರವೂ ಮುಂದುವರಿದಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಬಂಡಾಯ ಹೆಚ್ಚಾಗಿದ್ದು, ಅಲ್ಪಸಂಖ್ಯಾತ ಘಟಕದ ಮೇಲೂ ಪರಿಣಾಮ ಬೀರಿದೆ.

ಶನಿವಾರವೇ ಅಬ್ದುಲ್ ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ ಇನ್ನಷ್ಟೇ ಬಾಕಿ ಇದ್ದರೂ, ಕಾಂಗ್ರೆಸ್‌ನಲ್ಲಿ ಉಂಟಾದ ಒಳಜಗಳ ಪಕ್ಷಕ್ಕೆ ತಲೆನೋವಾಗುವ ಸಾಧ್ಯತೆ ಇದೆ. ಹೊಸ ಸಮಿತಿಯ ರಚನೆ ಮೂಲಕ ಅಸಮಾಧಾನ ಶಮನಗೊಳಿಸಲು ನಾಯಕತ್ವ ಮುಂದಾಗಿದೆ.

Continue Reading

ದೇಶ

ಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ

Published

on

By

ಬೆಂಗಳೂರು: ಐಷಾರಾಮಿ ಜೀವನಶೈಲಿ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಗೆ ಹೆಸರಾದ Bengaluru ನಗರದಲ್ಲಿ ಕೇವಲ 500 ರೂ.ಗಳಲ್ಲಿ ದಿನ ಕಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಯುವತಿ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕಾ ಮಂಡಲ್ ಎಂಬ ಮಹಿಳೆ, ಸೀಮಿತ ಬಜೆಟ್‌ನಲ್ಲಿ ನಗರ ಜೀವನ ಹೇಗಿರುತ್ತದೆ ಎಂಬುದನ್ನು ಪರೀಕ್ಷಿಸಲು ಮುಂದಾಗಿದ್ದರು. ದಿನವನ್ನು ಇಡ್ಲಿ ಉಪಹಾರದಿಂದ ಆರಂಭಿಸಿದ ಅವರು, ಕ್ಯಾಬ್ ಬದಲು ಮೆಟ್ರೋ ಪ್ರಯಾಣವನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಖರ್ಚನ್ನು ಕಡಿಮೆ ಮಾಡಲು ಸಹಾಯವಾಯಿತು.

ಹಗಲಿನಲ್ಲಿ ಚಹಾ ತೆಗೆದುಕೊಂಡು ಸಣ್ಣ ವಿರಾಮ ಮಾಡಿಕೊಂಡ ಅವರು, ಮಧ್ಯಾಹ್ನ ಊಟದ ವೇಳೆಗೆ ಸವಾಲು ಎದುರಿಸಿದರು. ಆಹಾರದ ಬೆಲೆಗಳು ಹೆಚ್ಚಿರುವುದರಿಂದ, 120 ರೂ. ಒಳಗೆ ಊಟ ಮುಗಿಸುವ ಗುರಿ ಇಟ್ಟುಕೊಂಡು ಖರ್ಚನ್ನು ನಿಯಂತ್ರಿಸಿದರು.

ಸಂಜೆ ವೇಳೆ ವಡಾ ಪಾವ್ ಮತ್ತು ಚಹಾ ಸೇವಿಸಿ ದಿನವನ್ನು ಮುಗಿಸಿದ ಪ್ರಿಯಾಂಕಾ, ಅಚ್ಚರಿಯ ರೀತಿಯಲ್ಲಿ ತಮ್ಮ ಬಜೆಟ್‌ನಿಂದ ಸುಮಾರು 200 ರೂ. ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಡಿಮೆ ಹಣದಲ್ಲೂ ಸರಿಯಾದ ಯೋಜನೆ ಇದ್ದರೆ ದಿನವನ್ನು ನಿರ್ವಹಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ಬಳಿಕ, ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು Indira Canteen ನಲ್ಲಿ ಕಡಿಮೆ ದರದಲ್ಲಿ ಊಟ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇದು ಒಬ್ಬರಿಗೆ ಮಾತ್ರ ಸಾಧ್ಯ, ಕುಟುಂಬದೊಂದಿಗೆ ಬದುಕುವುದು ಬೆಂಗಳೂರಿನಲ್ಲಿ ಕಷ್ಟಕರ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಈ ಪ್ರಯೋಗ ನಗರ ಜೀವನದ ಖರ್ಚು ಹಾಗೂ ಬಜೆಟ್ ನಿರ್ವಹಣೆ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

Trending