Connect with us

ರಾಜಕೀಯ

ಫೇಸ್ಬುಕ್ ನಲ್ಲಿ ಕವನ ಬರೆದೋನು ಮುಸ್ಲಿಂ, ದೂರು ಕೊಟ್ಟವನೂ ಮುಸ್ಲಿಂ, ಶಾಸಕನೂ ಮುಸ್ಲಿಂ’: ಎಚ್ ಡಿ ಕುಮಾರಸ್ವಾಮಿ

Published

on

ಬೆಂಗಳೂರು: ಯಾವನೋ ಒಬ್ಬ ಮತಾಂಧ ಐಎಎಸ್ ಅಧಿಕಾರಿ, ತಾನು ಹೇಳಿದ್ದು ಸರಿ ಅಂತಾನೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ನಂತರ ಎಂಟು ತಿಂಗಳಲ್ಲಿ ದುಡ್ಡು ವಸೂಲಿಗೆ ಇಳಿದುಬಿಟ್ಟಿದ್ದಾರೆ. ಮುಖ್ಯಮಂತ್ರಿ, ಹಾಗೂ ಡಿಸಿಎಂ ಮಧ್ಯ ಜಗಳ ಇದೆ. ಅದಕ್ಕೇ ಇಂಥಾ ಪರಿಸ್ಥಿತಿ ಇದೆ. ಅಪರಾಧಿಗಳ ಮೇಲೆ ಏನೂ ಕ್ರಮ ಕೈಗೊಳ್ತಿಲ್ಲಎಂದು ಮಾಜಿ ಸಿಎಂ ಎಚ್.ಡಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಕೀಲರ ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್​ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರದ ಐಜೂರು ಸರ್ಕಲ್ ಬಳಿ ವಕೀಲರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಪೊಲೀಸರು ಅಪರಾಧಿಗೆ ಸಾಥ್ ನೀಡುವ ಕೆಲಸ ಮಾಡಿದ್ದಾರೆ. ಅದೇನೋ ಏನೋ ಈ ಕಾಂಗ್ರೆಸ್ ಬಂದಾಗಿನಿಂದ ಹಿಂಗೆ ಆಗುತ್ತಿದೆ. ಯಾವನೋ ಒಬ್ಬ ಮತಾಂಧ ಐಎಎಸ್ ಅಧಿಕಾರಿ… ತಾನು ಹೇಳಿದ್ದು ಸರಿ ಅಂತಾನೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ನಂತರ ಎಂಟು ತಿಂಗಳಲ್ಲಿ ದುಡ್ಡು ವಸೂಲಿಗೆ ಇಳಿದುಬಿಟ್ಟಿದ್ದಾರೆ. ಮುಖ್ಯಮಂತ್ರಿ ಹಾಗೂ ಡಿಸಿಎಂ ಮಧ್ಯ ಜಗಳ ಇದೆ. ಅದಕ್ಕೇ ಇಂಥಾ ಪರಿಸ್ಥಿತಿ ಇದೆ. ಅಪರಾಧಿಗಳ ಮೇಲೆ ಏನೂ ಕ್ರಮ ಕೈಗೊಳ್ತಿಲ್ಲ ಎಂದು ಹೇಳಿದ್ದಾರೆ. ಆಡಳಿತ ನೀವು ನಡೆಸ್ತಿದ್ದೀರೋ ಅಥವಾ ಯಾರು ನಡೆಸುತ್ತಿದ್ದಾರೆ? ಯಾವನೋ ಶಾಸಕ ಅಥವಾ ಜಿಲ್ಲಾ‌ ಮಂತ್ರಿ‌ ನಡೆಸ್ತಿದ್ದಾನಾ? ನೀವು ಅವರ ಕೈಕೆಳಗೆ ಕೆಲಸ ಮಾಡ್ತೀರೋ ಅಥವಾ ಜನರ‌ನ್ನ ರಕ್ಷಿಸ್ತೀರೋ? ಇಂಥ ಕಟ್ಟಡ ಕಟ್ಟಿಸಿದ್ದು ರೌಡಿಗಳ ಜತೆ ಕೆಲಸ ಮಾಡೋಕಲ್ಲ ಎಂದರು.

ಇಂತಹ ಕೆಲಸ ಮಾಡೋಕೆ ನಾನು ಜಿಲ್ಲಾ ಕೇಂದ್ರ ಮಾಡಿದ್ನಾ? ಜಿಲ್ಲಾ ಕೇಂದ್ರ ಬೆಂಗಳೂರಿಗೆ ತಗೊಂಡ್ ಹೋಗಿಬಿಡ್ತಾನಂತೆ. ಅದೇನೋ ಬ್ರ್ಯಾಂಡ್ ಬೆಂಗಳೂರು ಮಾಡ್ತಾನಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ಲೇವಡಿ ಮಾಡಿದರು. ಮೊದಲು ಹಿರಿಯ ವಕೀಲರ ಬಳಿ ಘಟನೆಯ ಮಾಹಿತಿ ಪಡೆದ ಹೆಚ್​ಡಿಕೆ, ಪ್ರಕರಣದ ಒಟ್ಟು ಸಾರಾಂಶ ಏನು? ಯಾಕೆ‌ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಿತು ಎಂದು ತಿಳಿದುಕೊಂಡರು. ಬಳಿಕ ಮಾತನಾಡಿ, ರಾಮನಗರದಲ್ಲಿ ನಡೆದಿರುವ ಘಟನೆ ಚಿಕ್ಕದು. ಆದರೆ, ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಬಹಳ ಗಂಭೀರವಾದ ವಿಚಾರ. ಇದನ್ನು ಸಣ್ಣ ಮಟ್ಟದಲ್ಲೇ ಚಿವುಟಿ ಹಾಕಬಹುದಿತ್ತು. ರಾಜ್ಯದಲ್ಲಿ ಯಾವ ರೀತಿ ಆಡಳಿತ‌ ಇದೆ? ನಾನು ಪಕ್ಷದ ಬಗ್ಗೆ ಹೇಳಲ್ಲ, ಜನರಿಗೆ ರಕ್ಷಣೆ ಕೊಡುವಂತಹದ್ದು ಆಡಳಿತಾಧಿಕಾರಿಗಳ ಕರ್ತವ್ಯ. ಮಾಧ್ಯಮಗಳಲ್ಲಿ ನೋಡಿ ನಾನು ಅಧಿಕಾರಿಗಳಿಗೆ ಕೇಳಿದೆ. ಅದೇನಿಲ್ಲ, ಅಂಥಾ ಪ್ರಕರಣ‌ ಏನಿಲ್ಲ ಅದನ್ನು ಸರಿ ಪಡಸ್ತೀವಿ ಅಂದಿದ್ರು. ಎಸ್​ಪಿಗೂ ಈ ಬಗ್ಗೆ ಗಮನಕ್ಕೆ ತರಲಾಗಿತ್ತು. ಈ ವಿಚಾರ ಅಧಿವೇಶನದಲ್ಲಿ ಮಾತಾಡ್ತಾರೆ. ಇಂಥಾ ವಿಚಾರಗಳನ್ನು ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರೈತರ ಮೇಲೆ ಗೋಲಿಬಾರ್ ಆದ ಮೇಲೆ ದೇವೇಗೌಡರು ಪಾದಯಾತ್ರೆ ಮಾಡಿದ ಇತಿಹಾಸ ಇದೆ. ಮಂಡ್ಯದಲ್ಲೂ ಒಂದು ಘಟನೆ ನಡೆದಿತ್ತು. ಅವತ್ತೂ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೆ, ಯಾಕಿಷ್ಟು ಪೊಲೀಸರನ್ನು ಕರೆಸಿದ್ದರು ಎಂಬುದಾಗಿ. ಪಾಪ ಆ ಕಾನಸ್ಟೇಬಲ್​​ಗಳಿಗೆ ಊಟ ಇರಲ್ಲ, ಮತ್ತೊಂದಿಲ್ಲ. ಅವರ ಕಷ್ಟನೂ ಇವರಿಗೆ ಗೊತ್ತಾಗಲ್ಲ. ಇಷ್ಟು ಜನ ಪೊಲೀಸರನ್ನು ನೋಡಿ ಆಶ್ಚರ್ಯ ಆಯ್ತು. ನಾನು ರಾಮನಗರಲ್ಲಿದ್ದಾಗ ಇಂಥಾ ಪರಿಸ್ಥಿತಿ ಇರಲಿಲ್ಲ. ಅವನ್ಯಾರೋ ರಫಿಕ್ ಅನ್ನೋನು ದೂರು ಕೊಟ್ಟಿದ್ದಾನೆ. ದೂರು ದಾಖಲಾಗಿದೆ, ಯಾರೋ ರಾಮನಗರ ಉಳಿಸೋಕೆ ಪ್ರಗತಿಪರರು ಪ್ರತಿಭಟನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು, ಅವನ್ಯಾರೋ ರಫಿಕ್ ಅನ್ನೋನು ದೂರು ಕೊಟ್ಟಿದ್ದಾನೆ. ಫೇಸ್ಬುಕ್ ನಲ್ಲಿ ಕವನ ಬರೆದೋನು ಮುಸ್ಲಿಂ, ದೂರು ಕೊಟ್ಟವನೂ ಮುಸ್ಲಿಂ, ಶಾಸಕನೂ ಮುಸ್ಲಿಂ ಆಗಿದ್ದಾನೆ’’ ಎಂದ ಕುಮಾರಸ್ವಾಮಿ, ರಾಮನಗರದಲ್ಲಿ ಸದ್ಯಕ್ಕೆ ನಡೆದಿರುವ ಘಟನೆ ಚಿಕ್ಕದ್ದು. ಸಣ್ಣ ಮಟ್ಟ ದಲ್ಲೇ ಚಿವುಟಿ ಹಾಕಬಹದಿತ್ತು. ಆದರೆ ವಕೀಲರೊಬ್ಬರು ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದು ಬಹಳ ಗಂಭೀರವಾದದ್ದು. ರಾಜ್ಯದಲ್ಲಿ ಯಾವ ರೀತಿ ಆಡಳಿತ‌ ಇದೆ. ನಾನು ಪಕ್ಷದ ಬಗ್ಗೆ ಹೇಳಲ್ಲ, ಜನರಿಗೆ ರಕ್ಷಣೆ ಕೊಡುವಂತಹದ್ದು ಆಡಳಿತಾಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

ದೇಶ

ಅಶೋಕ್ ರೈ ಕಂಬಳಕ್ಕೆ ಸಿದ್ಧ, ಯದುವೀರ್-ಪ್ರತಾಪ್ ಸಿಂಹ ವಿರೋಧ; ದಸರಾದಲ್ಲಿ ಹೊಸ ವಿವಾದ

Published

on

ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಸಿದ್ಧತೆಗಳು ಆರಂಭವಾಗುತ್ತಿದ್ದಂತೆಯೇ ಈ ಬಾರಿ ದಸರಾ ಕಾರ್ಯಕ್ರಮದಲ್ಲಿ ಕಂಬಳ (Kambala) ಆಯೋಜನೆ ಮಾಡುವ ವಿಚಾರ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಪುತ್ತೂರು ಶಾಸಕ ಅಶೋಕ್ ರೈ (Ashok Rai) ಕಂಬಳ ಆಯೋಜನೆಗೆ ಸಿದ್ಧತೆ ಆರಂಭಿಸಿರುವುದಾಗಿ ತಿಳಿಸಿದ್ದರೆ, ಮತ್ತೊಂದೆಡೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮಹೋತ್ಸವದ ಸಿದ್ಧತೆ ಕುರಿತು ಚರ್ಚೆ ನಡೆಯಿತು. ಆಗಸ್ಟ್ 26ರಂದು ಗಜಪಯಣ ಆರಂಭವಾಗಲಿದ್ದು, ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್ 21ರಂದು ವಿಜಯದಶಮಿಯಂದು ಮಧ್ಯಾಹ್ನ 4:10ಕ್ಕೆ ಮೀನಾ ಲಗ್ನದಲ್ಲಿ ಐತಿಹಾಸಿಕ ಜಂಬೂ ಸವಾರಿ ನಡೆಯಲಿದೆ.

ಸಭೆಯಲ್ಲಿ ಕಂಬಳ ಆಯೋಜನೆ ವಿಚಾರವೂ ಪ್ರಸ್ತಾಪವಾಗಿದ್ದು, ಅಂತಿಮ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅಶೋಕ್ ರೈ ಅವರ ಪ್ರಕಾರ, ಕಂಬಳ ಆಯೋಜನೆಗೆ ಸುಮಾರು ₹5 ರಿಂದ ₹6 ಕೋಟಿ ವೆಚ್ಚವಾಗಲಿದ್ದು, ಜುಲೈ 15ರಿಂದಲೇ ಸಿದ್ಧತೆ ಆರಂಭಿಸಲು ಯೋಜಿಸಲಾಗಿದೆ. ಕಂಬಳದ ಮೂಲಕ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಆದರೆ, ಯದುವೀರ್ ಒಡೆಯರ್ ದಸರಾದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ದಸರಾ, ಕಂಬಳ ಮತ್ತು ಇತರೆ ಜಾತ್ರೆಗಳಿಗೆ ತಮ್ಮದೇ ಆದ ವೈಶಿಷ್ಟ್ಯವಿದ್ದು, ಪ್ರತಿಯೊಂದು ಆಚರಣೆಯೂ ತನ್ನ ಸಾಂಪ್ರದಾಯಿಕ ಸ್ವರೂಪದಲ್ಲೇ ನಡೆಯಬೇಕು ಎಂದು ಹೇಳಿದ್ದಾರೆ. ಕಂಬಳದ ಬಗ್ಗೆ ವಿರೋಧವಿಲ್ಲದಿದ್ದರೂ ದಸರಾದ ಮೂಲ ಪರಂಪರೆಯಲ್ಲಿ ಬದಲಾವಣೆ ಬೇಡ ಎಂಬುದು ಅವರ ನಿಲುವಾಗಿದೆ.

Continue Reading

ದೇಶ

ತಮಿಳುನಾಡು ಸರ್ಕಾರದ ಹೊಸ ಆದೇಶ: ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ನಿಷೇಧ

Published

on

ಚೆನ್ನೈ: ತಮಿಳುನಾಡು (Tamil Nadu) ಸರ್ಕಾರವು ಸರ್ಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯದ ಸರ್ಕಾರಿ ಶಾಲೆಗಳು (Government Schools) ಹಾಗೂ ತರಗತಿ ಕೊಠಡಿಗಳಲ್ಲಿ (Classrooms) ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಖಾಸಗಿ ವ್ಯಕ್ತಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ (Raj Mohan) ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳಿಗೆ ಮಾತ್ರ ಶಾಲಾ ಆವರಣ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಉಳಿದ ಯಾವುದೇ ರಾಜಕೀಯ ಚಟುವಟಿಕೆ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಆವರಣವನ್ನು ಬಳಸಲು ಅವಕಾಶ ಇರುವುದಿಲ್ಲ.

ಹೊಸ ನಿಯಮಗಳ ಅನ್ವಯ, ಶಾಲಾ ತರಗತಿ ಕೊಠಡಿಗಳನ್ನು ಯಾವುದೇ ರಾಜಕೀಯ ನಾಯಕರು ಅಥವಾ ನಿರ್ದಿಷ್ಟ ವ್ಯಕ್ತಿಗಳ ಸನ್ಮಾನ, ಹೊಗಳಿಕೆ, ಪ್ರಶಂಸಾ ಕಾರ್ಯಕ್ರಮಗಳು ಅಥವಾ ಹುಟ್ಟುಹಬ್ಬದ ಆಚರಣೆಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ವಿದ್ಯಾರ್ಥಿಗಳ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂಬುದನ್ನು ಸರ್ಕಾರ ಪುನರುಚ್ಚರಿಸಿದೆ.

ಇದಲ್ಲದೆ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಂಡು, ಶಿಕ್ಷಣ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ. ಈ ಆದೇಶದ ಅನುಷ್ಠಾನಕ್ಕಾಗಿ ಪಾಲಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಸರ್ಕಾರದ ಈ ಕ್ರಮವು ಶಾಲಾ ಆವರಣದಲ್ಲಿ ರಾಜಕೀಯ ಪ್ರಭಾವವನ್ನು ತಡೆಯುವ ಜೊತೆಗೆ, ವಿದ್ಯಾರ್ಥಿಗಳಿಗೆ ಶಾಂತ ಹಾಗೂ ತಟಸ್ಥ ಶೈಕ್ಷಣಿಕ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ.

Continue Reading

ದೇಶ

GBA ಚುನಾವಣೆ, ಒತ್ತುವರಿ ತೆರವು, ಮೋಡ ಬಿತ್ತನೆ: CM ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ

Published

on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಹೊಸ ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಆಗಸ್ಟ್ ತಿಂಗಳೊಳಗೆ ನಡೆಸುವ ವಿಚಾರದಲ್ಲಿ ಕೆಲವು ತಾಂತ್ರಿಕ ಸವಾಲುಗಳಿದ್ದು, ಸರ್ಕಾರವು ಸುಪ್ರೀಂ ಕೋರ್ಟ್ (Supreme Court) ನೀಡುವ ನಿರ್ದೇಶನಗಳಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯ ಪಾಲಿಕೆ ಚುನಾವಣೆಗಳಿಗೆ ಸರ್ಕಾರ ಅಗತ್ಯ ಸಿದ್ಧತೆ ನಡೆಸಿದೆ. ಆದರೆ ಚುನಾವಣಾ ಆಯೋಗ (Election Commission) ರಾಜ್ಯಾದ್ಯಂತ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯದಿಂದಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬ ಉಂಟಾಗಿದೆ ಎಂದು ವಿವರಿಸಿದರು.

ಸುಪ್ರೀಂ ಕೋರ್ಟ್ ಈ ಹಿಂದೆ ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಗಡುವನ್ನು ಡಿಸೆಂಬರ್‌ವರೆಗೆ ವಿಸ್ತರಿಸುವಂತೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿಎಂ, “ನಾನು ಈ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಅಧಿಕಾರಿಗಳು ಮತ್ತು ನ್ಯಾಯಾಲಯದ ಪ್ರಕ್ರಿಯೆಯಂತೆ ಮುಂದಿನ ಕ್ರಮ ನಡೆಯಲಿದೆ” ಎಂದು ಹೇಳಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು. ನಗರದಲ್ಲಿ ಸುಮಾರು 60,000 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಅವರಲ್ಲಿ 30,000 ಮಂದಿಗೆ ತಳ್ಳುಗಾಡಿ ಹಾಗೂ ವ್ಯಾಪಾರಕ್ಕೆ ಅಗತ್ಯ ವಾಹನಗಳನ್ನು ವಿತರಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ರಸ್ತೆಗಳಲ್ಲಿ ಶಾಶ್ವತ ಶೆಡ್ ಅಥವಾ ಟೆಂಟ್‌ಗಳನ್ನು ನಿರ್ಮಿಸಲು ಸುಪ್ರೀಂ ಕೋರ್ಟ್ ನಿರ್ಬಂಧವಿದ್ದು, ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸಬೇಕು ಎಂದು ಸಿಎಂ ಸ್ಪಷ್ಟಪಡಿಸಿದರು. ಜೊತೆಗೆ, ಮೋಡ ಬಿತ್ತನೆ, ಬೆಳಗಾವಿಗೆ ವಿಶೇಷ ಪ್ಯಾಕೇಜ್ ಹಾಗೂ ಮುಜರಾಯಿ ದೇವಸ್ಥಾನಗಳ ಹುಂಡಿ ಹಣದ ಭದ್ರತೆ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.

Continue Reading

Trending