Connect with us

ದೇಶ

ಬೆಂಗಳೂರಿನಿಂದ ಜಯಯಲಿತಾ ಚಿನ್ನಾಭರಣ ಕೊಂಡೊಯ್ಯಲು ತಮಿಳುನಾಡಿನಿಂದ ಬರಲಿದೆ 6 ಟ್ರಕ್ಕು!

Published

on

ಬೆಂಗಳೂರಿನಿಂದ ಜಯಯಲಿತಾ ಚಿನ್ನಾಭರಣ ಕೊಂಡೊಯ್ಯಲು ತಮಿಳುನಾಡಿನಿಂದ ಬರಲಿದೆ 6 ಟ್ರಕ್ಕು!

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ನ್ಯಾಯಾಲಯದಿಂದ ವಿಚಾರಣೆಗೀಡಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣಗಳು ಹಾಗೂ ಬೆಲೆಬಾಳುವ ಸೊತ್ತುಗಳನ್ನು ಮರಳಿ ತಮಿಳುನಾಡಿಗೆ ಕೊಂಡೊಯ್ಯಲು 6 ಟ್ರಕ್ಕುಗಳು ಬರಲಿವೆ!
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ತಮಿಳುನಾಡು ರ‍್ಕಾರಕ್ಕೆ ಹಿಂದಿರುಗಿಸಲು ರ‍್ನಾಟಕ ಹೈಕರ‍್ಟ್ ದಿನಾಂಕ ನಿಗದಿ ಮಾಡಿದೆ. ಆ ದಿನ ಸ್ವತಃ ಬಂದು ಜಯಲಲಿತಾ ಚಿನ್ನಾಭರಣ ಇತ್ಯಾದಿ ಮರಳಿ ಪಡೆಯಲು ತಮಿಳುನಾಡು ಗೃಹ ಕರ‍್ಯರ‍್ಶಿಗೆ ಆದೇಶಿಸಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಭರಣಗಳಿ ಸದ್ಯ ರ‍್ನಾಟಕ ರ‍್ಕಾರದ ವಶದಲ್ಲಿದ್ದು, ಅವುಗಳನ್ನು ಹಿಂಪಡೆಯುವಂತೆ ತಮಿಳುನಾಡು ರ‍್ಕಾರಕ್ಕೆ ನರ‍್ದೇಶನ ನೀಡಲಾಗಿದೆ. ಮರ‍್ಚ್ 6 ಮತ್ತು 7ರಂದು ಖುದ್ದು ಹಾಜರಾಗಿ ಸ್ವೀಕರಿಸುವಂತೆ ತಮಿಳುನಾಡು ರಾಜ್ಯ ಗೃಹ ಕರ‍್ಯರ‍್ಶಿಗೆ ಸೂಚನೆ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ತಗಲಿದ ವೆಚ್ಚಕ್ಕಾಗಿ ತಮಿಳುನಾಡು ರ‍್ಕಾರ ರ‍್ನಾಟಕಕ್ಕೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೂಡ ಕರ‍್ಟ್ ಆದೇಶಿಸಿದೆ.
1996ರಲ್ಲಿ ಜಯಲಲಿತಾ ಆದಾಯ ಮೀರಿ ಆಸ್ತಿ ಸೇರಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ಪ್ರಕರಣ ದಾಖಲಿಸಿತ್ತು. ಜಯಲಲಿತಾ ಅವರ ಬೋಯಸ್ ಗರ‍್ಡನ್ ನಿವಾಸದ ಮೇಲೆ ನಡೆದ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ವಜ್ರಾಭರಣಗಳು, ಬೆಳ್ಳಿ ವಸ್ತುಗಳು, ಕೈಗಡಿಯಾರಗಳು, ಪಾದರಕ್ಷೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಯಲಲಿತಾ ಅವರ ಆಸ್ತಿ ಪ್ರ ಕರಣ ಬೆಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದುದರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ಇಲ್ಲಿನ ಖಜಾನೆಯಲ್ಲಿ ಇಡಲಾಗಿತ್ತು.
2016ರಲ್ಲಿ ಅನಾರೋಗ್ಯದಿಂದ ಜಯಲಲಿತಾ ನಿಧನರಾಗಿದ್ದರು. ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ತಪ್ಪಿತಸ್ಥರೆಂದು ಸುಪ್ರೀಂ ಕರ‍್ಟ್ ತರ‍್ಪು ನೀಡಿತು ಮತ್ತು ಕೆಳ ನ್ಯಾಯಾಲಯದ ತರ‍್ಪನ್ನು ಎತ್ತಿ ಹಿಡಿಯಿತು. ಇದಾದ ಬಳಿಕ ಶಶಿಕಲಾ ಸೇರಿದಂತೆ ಮೂವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು.
ಈ ನಡುವೆ ಸಾಮಾಜಿಕ ಕರ‍್ಯರ‍್ತ ನರಸಿಂಹಮರ‍್ತಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಜಯಲಲಿತಾ ಅವರ ವಸ್ತುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು
ಕಲ್ಯಾಣ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು. ಜಯಲಲಿತಾ ಅವರ ಸೊಸೆ ಜೆ.ದೀಪಾ ಅವರು, ರ‍್ಕಾರ ಜಪ್ತಿ ಮಾಡಿರುವ ಜಯಲಲಿತಾ ಅವರ ಆಸ್ತಿಗಳ ಮೇಲೆ ತನಗೆ ಹಕ್ಕಿದೆ ಮತ್ತು ಅವುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ರ‍್ಜಿ ಸಲ್ಲಿಸಿದರು. ಅವರ ರ‍್ಜಿಯನ್ನು ವಜಾಗೊಳಿಸಲಾಗಿತ್ತು.
ಈ ಎಲ್ಲಾ ಆಭರಣಗಳು ಈಗ ರ‍್ನಾಟಕದ ಖಜಾನೆಯಲ್ಲಿವೆ. ಇತ್ತೀಚೆಗೆ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಯಲಲಿತಾ ಅವರಿಗೆ ಸೇರಿದ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬಂದಾಗ, ಆಭರಣಗಳನ್ನು ಹರಾಜು ಮಾಡುವ ಬದಲು ತಮಿಳುನಾಡು ರ‍್ಕಾರದ ಗೃಹ ಇಲಾಖೆಯ ಮೂಲಕ ತಮಿಳುನಾಡಿಗೆ ರ‍್ಗಾಯಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟು, ತಮಿಳುನಾಡು ರ‍್ಕಾರವು ಕರ‍್ಯರ‍್ಶಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಿ ಆಭರಣಗಳನ್ನು ಸಂಗ್ರಹಿಸಲು ಪೊಲೀಸರೊಂದಿಗೆ ಬರುವಂತೆ ಆದೇಶಿಸಿತು.
ಈ ಪ್ರಕರಣದಲ್ಲಿ ತಮಿಳುನಾಡು ಗೃಹ ಕರ‍್ಯರ‍್ಶಿ ಖುದ್ದು ಹಾಜರಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣವನ್ನು ಮರ‍್ಚ್ 6 ಮತ್ತು 7ರಂದು ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. ಚಿನ್ನಾಭರಣ ಪಡೆಯುವ ದಿನದಂದು ಅಗತ್ಯ ಭದ್ರತಾ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಬೆಂಗಳೂರಿನಿಂದ 6 ಟ್ರಕ್‌ಗಳಲ್ಲಿ ಜಯಲಲಿತಾ ಅವರಿಗೆ ಸೇರಿದ 28 ಕೆಜಿ ಚಿನ್ನ, ವಜ್ರಾಭರಣಗಳು, 800 ಕೆಜಿ ಬೆಳ್ಳಿ ಆಭರಣಗಳು, 11,344 ದುಬಾರಿ ರೇಷ್ಮೆ ಸೀರೆಗಳು ಮತ್ತು 740 ದುಬಾರಿ ಸ್ಯಾಂಡಲ್‌ಗಳನ್ನು ಕೊಂಡೊಯ್ದು ತಮಿಳುನಾಡಿಗೆ ತಲುಪಿಸಲಾಗುತ್ತದೆ.
ಇವುಗಳ ಮೌಲ್ಯ ಹಲವು ಕೋಟಿಗಳಾಗಿರಬಹುದು ಎಂದು ಹೇಳಲಾಗಿದೆ. ಅವುಗಳನ್ನು ತಮಿಳುನಾಡು ರ‍್ಕಾರದ ಖಜಾನೆಯಲ್ಲಿ ಇರಿಸಲಾಗುವುದು ಎಂದು ತಿಳಿದುಬಂದಿದೆ.

ದೇಶ

ಹಾರ್ಮುಜ್ ಸಮಸ್ಯೆ ಪರಿಹಾರಕ್ಕೆ ಭಾರತ ಪ್ರಮುಖ ಪಾತ್ರ?: ಇರಾನ್ ವಿಶ್ವಾಸ

Published

on

By

ಪಾಟ್ನಾ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಭಾರತ ತೆಗೆದುಕೊಂಡಿರುವ ತಟಸ್ಥ ಹಾಗೂ ಸಮತೋಲಿತ ನಿಲುವಿಗೆ Iran ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದ ರಾಜತಾಂತ್ರಿಕ ಧೋರಣೆಯನ್ನು “ಸದೃಢ” ಎಂದು ಕೊಂಡಾಡಿರುವ ಇರಾನ್, ಬಿಕ್ಕಟ್ಟಿನ ಪರಿಹಾರದಲ್ಲಿ ನವದೆಹಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಈ ಕುರಿತು ಪಾಟ್ನಾದಲ್ಲಿ ಮಾತನಾಡಿದ ಇರಾನ್ ಸರ್ವೋಚ್ಚ ನಾಯಕರ ಪ್ರತಿನಿಧಿ Abdul Majid Hakim Ilahi, ಹಾರ್ಮುಜ್ ಜಲಸಂಧಿ ಸಮಸ್ಯೆ ಸೇರಿದಂತೆ ಮಧ್ಯಪ್ರಾಚ್ಯ ಸಂಘರ್ಷದ ಪರಿಹಾರದಲ್ಲಿ ಭಾರತ ಪರಿಣಾಮಕಾರಿ ಪಾತ್ರವಹಿಸಬಹುದು ಎಂದು ಹೇಳಿದ್ದಾರೆ.

India ತನ್ನ ತಟಸ್ಥ ನಿಲುವಿನ ಮೂಲಕ ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ರಾಜತಾಂತ್ರಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಉದ್ವಿಗ್ನ ಪರಿಸ್ಥಿತಿಯಲ್ಲಿಯೂ ಭಾರತ ಸಮತೋಲನ ಕಾಯ್ದುಕೊಂಡಿರುವುದನ್ನು ಇರಾನ್ ಶ್ಲಾಘಿಸಿದೆ.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಪೂರೈಕೆಗೆ ಪ್ರಮುಖ ಮಾರ್ಗವಾಗಿದ್ದು, ಸಂಘರ್ಷದ ನಡುವೆ ಇದನ್ನು ಮುಚ್ಚಲಾಗಿತ್ತು. ಆದರೆ ಭಾರತದ ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. “ಭಾರತೀಯ ಗೆಳೆಯರು ಸುರಕ್ಷಿತ ಕೈಗಳಲ್ಲಿ ಇದ್ದಾರೆ” ಎಂದು ಇರಾನ್ ಭರವಸೆ ನೀಡಿದೆ.

ಯುದ್ಧ ಆರಂಭವಾದ ಬಳಿಕ ಭಾರತದ ಹಲವು ಹಡಗುಗಳು ಯಶಸ್ವಿಯಾಗಿ ಈ ಮಾರ್ಗ ದಾಟಿರುವುದು, ಭಾರತ-ಇರಾನ್ ನಡುವಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.

ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ಅಸ್ಥಿರ ಪರಿಸ್ಥಿತಿಯಲ್ಲಿ ಭಾರತದ ಸಮತೋಲಿತ ರಾಜತಾಂತ್ರಿಕ ನಿಲುವು ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಗಳಿಸುತ್ತಿದ್ದು, ಬಿಕ್ಕಟ್ಟು ಪರಿಹಾರದಲ್ಲಿ ಭಾರತದ ಪಾತ್ರ ಹೆಚ್ಚುವ ಸಾಧ್ಯತೆ ಇದೆ.

Continue Reading

ಚುನಾವಣೆ

‘ಆಪರೇಷನ್ ಸಿಂಧೂರ್’ ವಿವಾದ: ಕಾಂಗ್ರೆಸ್ ವಿರುದ್ಧ ಮೋದಿ ತೀವ್ರ ಆರೋಪ

Published

on

By

ದಿಸ್ಪುರ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಾತಾವರಣ ತೀವ್ರಗೊಂಡಿದ್ದು, ಪ್ರಧಾನಿ Narendra Modi ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಆಪರೇಷನ್ ಸಿಂಧೂರ್’ ವೇಳೆ ಕಾಂಗ್ರೆಸ್ ಪಾಕಿಸ್ತಾನ ಪರ ನಿಲುವು ತೆಗೆದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಬಾರ್ಪೇಟಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ನಿರ್ಣಾಯಕ ಸಮಯದಲ್ಲಿ ವಿರೋಧ ಪಕ್ಷಗಳು ಭಾರತೀಯ ಸಶಸ್ತ್ರ ಪಡೆಗಳ ಮನೋಬಲ ಕುಗ್ಗಿಸುವ ರೀತಿಯಲ್ಲಿ ವರ್ತಿಸಿವೆ ಎಂದು ಟೀಕಿಸಿದರು. “ಆಪರೇಷನ್ ಸಿಂಧೂರ್ ವೇಳೆ ಕಾಂಗ್ರೆಸ್ ನಾಯಕರು ಪಾಕಿಸ್ತಾನ ನೀಡಿದ ನ್ಯಾರೆಟಿವ್‌ನ್ನೇ ಪ್ರತಿಧ್ವನಿಸಿದರು” ಎಂದು ಆರೋಪಿಸಿದರು.

ಇದೇ ವೇಳೆ, ಸರ್ಜಿಕಲ್ ದಾಳಿ ಮತ್ತು ವಾಯುದಾಳಿಗಳ ಸಂದರ್ಭದಲ್ಲೂ ಕಾಂಗ್ರೆಸ್ ಶತ್ರುಗಳ ಕಾರ್ಯಸೂಚಿಗೆ ಬೆಂಬಲ ನೀಡಿದಂತೆ ವರ್ತಿಸಿದೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ ನಾಯಕರ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ದುರ್ಬಲಗೊಳಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನು, ‘ಒನ್ ರ್ಯಾಂಕ್ ಒನ್ ಪೆನ್ಶನ್’ (OROP) ಯೋಜನೆ ಕುರಿತು ಮಾತನಾಡಿದ ಮೋದಿ, ಈ ಯೋಜನೆ ಜಾರಿಗೆ ಕಾಂಗ್ರೆಸ್ ವಿಳಂಬ ಮಾಡಿದ್ದು ಸೈನಿಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ತಮ್ಮ ಸರ್ಕಾರ ಸಶಸ್ತ್ರ ಪಡೆಗಳ ಕಲ್ಯಾಣಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದರು.

ಅಕ್ರಮ ವಲಸೆ ವಿಷಯದಲ್ಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಅಸ್ಸಾಂನಲ್ಲಿ ನುಸುಳುಕೋರರನ್ನು ರಕ್ಷಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿದ್ದು, ಅಸ್ಸಾಂ ರಾಜಕೀಯ ಮತ್ತಷ್ಟು ಕಾವು ಪಡೆದುಕೊಂಡಿದೆ.

Continue Reading

ದೇಶ

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್?: AI ರೇಸ್‌ನಲ್ಲಿ ಟೆಕ್ ದೈತ್ಯರ ಹೊಸ ಹೆಜ್ಜೆ

Published

on

By

ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ವೇಗದ ಬೆಳವಣಿಗೆಯೊಂದಿಗೆ, ಡೇಟಾ ಸೆಂಟರ್‌ಗಳ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳು ಭೂಮಿಯ ಮಿತಿಗಳನ್ನು ಮೀರಿ ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುತ್ತಿವೆ.

Google ಸಿಇಒ Sundar Pichai ಅವರು 2027ರೊಳಗೆ ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದು, ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಉಪಗ್ರಹಗಳ ಮೂಲಕ ಸಣ್ಣ ಸರ್ವರ್‌ಗಳನ್ನು ಕಕ್ಷೆಗೆ ಕಳುಹಿಸಿ ಕಾರ್ಯಕ್ಷಮತೆ ಪರೀಕ್ಷಿಸಲು ಕಂಪನಿ ಮುಂದಾಗಿದೆ.

ಇದರ ಹಿಂದೆ ಇರುವ ಪ್ರಮುಖ ಕಾರಣ ಭೂಮಿಯ ಮೇಲಿನ ವಿದ್ಯುತ್ ಮತ್ತು ನೀರಿನ ಕೊರತೆ. AI ಡೇಟಾ ಪ್ರಕ್ರಿಯೆಗೆ ಅಪಾರ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. 2030ರೊಳಗೆ ಜಾಗತಿಕ ಡೇಟಾ ಸೆಂಟರ್‌ಗಳ ವಿದ್ಯುತ್ ಬಳಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತಿವೆ.

ಇದೇ ಹಿನ್ನೆಲೆಯಲ್ಲಿ Elon Musk ಮತ್ತು Jeff Bezos ಕೂಡ ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ ನಿರ್ಮಾಣದತ್ತ ಗಮನ ಹರಿಸಿದ್ದಾರೆ. ಸೂರ್ಯನ ಬೆಳಕಿನ ನಿರಂತರ ಲಭ್ಯತೆ ಇರುವ ಕಕ್ಷೆಯಲ್ಲಿ ಸೌರಶಕ್ತಿಯಿಂದ ಸರ್ವರ್‌ಗಳನ್ನು ಕಾರ್ಯಗತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಆದರೆ, ಈ ಯೋಜನೆ ಸುಲಭದಲ್ಲ. ಬಾಹ್ಯಾಕಾಶದಲ್ಲಿನ ಕಾಸ್ಮಿಕ್ ಕಿರಣಗಳು, ತೀವ್ರ ಉಷ್ಣತೆ ಮತ್ತು ನಿರ್ವಹಣಾ ಸವಾಲುಗಳು ದೊಡ್ಡ ಅಡೆತಡೆಗಳಾಗಿವೆ.

ಇದಕ್ಕೆ ಪರ್ಯಾಯವಾಗಿ, Perplexity AI ಸಿಇಒ Aravind Srinivas ಆನ್-ಡಿವೈಸ್ AI ಮಾದರಿಯನ್ನು ಸೂಚಿಸಿದ್ದಾರೆ.

ಒಟ್ಟಿನಲ್ಲಿ, AI ಯುಗದಲ್ಲಿ ಡೇಟಾ ನಿರ್ವಹಣೆಗಾಗಿ ಭೂಮಿಯಿಂದ ಬಾಹ್ಯಾಕಾಶದವರೆಗೆ ತಂತ್ರಜ್ಞಾನದ ಹೊಸ ಅಧ್ಯಾಯ ಆರಂಭವಾಗುತ್ತಿದೆ.

Continue Reading

Trending