Connect with us

ದೇಶ

ತ್ರಿಪುರಾ: ಸಿಂಹಗಳಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ್ದ ಹಿರಿಯ ಐಎಫ್ಎಸ್ ಅಧಿಕಾರಿ ಅಮಾನತು!

Published

on

ಅಗರ್ತಲಾ: ಮೃಗಾಲಯದಲ ಸಿಂಹ ಮತ್ತು ಸಿಂಹಿಣಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ ಹಿರಿಯ ಐಎಫ್ ಎಸ್ ಅಧಿಕಾರಿಯನ್ನು ಸರ್ಕಾರ ಇದೀಗ ಅಮಾನತುಗೊಳಿಸಿದೆ. ನಾಮಕರಣದ ವಿವಾದದ ನಡುವೆ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬಿನ್ ಲಾಲ್ ಅಗರ್ವಾಲ್ ರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ನಲ್ಲಿ ದೂರಿನ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಮೃಗಾಲಯದಲ್ಲಿ ಇದ್ದ ಸಿಂಹಕ್ಕೆ ಅಕ್ಬರ್ ಎಂದು ಹಾಗೂ ಸಿಂಹಿಣಿಗೆ ಸೀತಾ ಎಂದು ನಾಮಕರಣ ಮಾಡಿದ್ದ ವಿಚಾರ ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ತ್ರಿಪುರಾ ಸರ್ಕಾರ ತನ್ನ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯನ್ನು ಅಮಾನತು ಮಾಡಿದೆ. ಈ ವಿವಾದ ಸಂಬಂಧ ವಿಶ್ವ ಹಿಂದೂ ಪರಿಷತ್ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ದೂರು ಸಲ್ಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಬೀನ್ ಲಾಲ್ ಅಗರ್ವಾಲ್ ಅವರನ್ನು ಅಮಾನತು ಮಾಡಲಾಗಿದೆ. ಈ ರೀತಿಯ ಹೆಸರು ಇಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಂದೂ ಪರ ಸಂಘಟನೆ ಆರೋಪ ಮಾಡಿತ್ತು. ಸಿಂಹ ಹಾಗೂ ಸಿಂಹಿಣಿಯನ್ನು ಫೆಬ್ರವರಿ 12 ರಂದೇ ತ್ರಿಪುರಾದ ಸೆಪಾಹಿಜಲ ಮೃಗಾಲಯದಿಂದ ಸಿಲಿಗುರಿಯ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ವನ್ಯಜೀವಿಗಳ ವಿನಿಮಯ ಕಾರ್ಯಕ್ರಮದ ಅಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸಿಂಹ ಹಾಗೂ ಸಿಂಹಿಣಿಯನ್ನು ತ್ರಿಪುರಾದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಲ್ಲಿ ಇರುವ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಕರೆ ತಂದ ಬಳಿಕ ಈ ವಿವಾದ ಭುಗಿಲೆದ್ದಿತ್ತು. 1994ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಅಗರ್ವಾಲ್ ಅವರು ತ್ರಿಪುರ ಮುಖ್ಯ ವೈಲ್ಡ್ ಲೈಫ್ ವಾರ್ಡನ್ ಆಗಿದ್ದರು. ಫೆಬ್ರವರಿ 12 ರಂದು ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ತ್ರಿಪುರಾ ಮೃಗಾಲಯದಿಂದ ಉತ್ತರ ಬಂಗಾಳಕ್ಕೆ ಸಿಂಹಗಳನ್ನು ಸ್ಥಳಾಂತರಿಸಲಾಯಿತು.

Continue Reading

ಕ್ರೀಡೆ

ವಾಂಖೆಡೆನಲ್ಲಿ RCB ದಬ್ಬಾಳಿಕೆ: ಚಿನ್ನಸ್ವಾಮಿ ಕಾದಿದೆ!

Published

on

By

ಮುಂಬೈ: Indian Premier League 2026ರ ಪಂದ್ಯದಲ್ಲಿ Royal Challengers Bengaluru ತಂಡವು Mumbai Indians ವಿರುದ್ಧ 18 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ RCB ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿದೆ.

ಈ ಪಂದ್ಯದಲ್ಲಿ Phil Salt 36 ಎಸೆತಗಳಲ್ಲಿ 78 ರನ್ ಸಿಡಿಸಿ ‘ಪ್ಲೇಯರ್ ಆಫ್ ದ ಮ್ಯಾಚ್’ ಪ್ರಶಸ್ತಿ ಪಡೆದರು. ನಾಯಕ Rajat Patidar ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡಕ್ಕೆ ಬಲವಾದ ವೇದಿಕೆ ಒದಗಿಸಿದರು. ಪಾಟಿದಾರ್ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಟೂರ್ನಿಯ ಇತಿಹಾಸದಲ್ಲೇ ವೇಗವಾದ ಫಿಫ್ಟಿ ಸಿಡಿಸಿದ ನಾಯಕ ಎಂಬ ದಾಖಲೆ ನಿರ್ಮಿಸಿದರು.

ಬೌಲಿಂಗ್ ವಿಭಾಗದಲ್ಲಿ Krunal Pandya (1/26) ಮತ್ತು Suyash Sharma (2/47) ಪ್ರಮುಖ ಪಾತ್ರವಹಿಸಿ ಮುಂಬೈ ತಂಡವನ್ನು ನಿಯಂತ್ರಿಸಿದರು.

ಪಂದ್ಯದ ಬಳಿಕ ಮಾತನಾಡಿದ ಪಾಟಿದಾರ್, “ಪ್ರತಿ ಪಂದ್ಯದಲ್ಲೂ 200ಕ್ಕೂ ಹೆಚ್ಚು ರನ್‌ಗಳು ಬರುತ್ತಿವೆ. ಇದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ” ಎಂದು ಹೇಳಿದರು. ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿ, “ನಾನು ಬಾಲ್‌ಗೆ ಪ್ರತಿಕ್ರಿಯಿಸುತ್ತೇನೆ, ಸ್ಪಷ್ಟತೆಯಿಂದ ಆಟ ಆಡುತ್ತೇನೆ” ಎಂದು ತಿಳಿಸಿದ್ದಾರೆ.

ಕೃಣಾಲ್ ಪಾಂಡ್ಯಾ ತಂಡದ ಬ್ಯಾಟಿಂಗ್ ಶಕ್ತಿಯನ್ನು ಮೆಚ್ಚಿ, “ವಿರಾಟ್, ಸಾಲ್ಟ್, ಟಿಮ್ ಎಲ್ಲರೂ ಕೊಡುಗೆ ನೀಡಿದ್ದಾರೆ” ಎಂದರು. ಕೋಚ್ Malolan Rangarajan ರಸಿಖ್‌ರ ಹೋರಾಟ ಮನೋಭಾವವನ್ನು ಶ್ಲಾಘಿಸಿದರು.

ಈ ಗೆಲುವಿನೊಂದಿಗೆ RCB ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಮುಂದಿನ ಚಿನ್ನಸ್ವಾಮಿ ಪಂದ್ಯಕ್ಕಾಗಿ ಕಾತುರವಾಗಿದೆ.

Continue Reading

ದೇಶ

ಕಾಂಗ್ರೆಸ್‌ನಲ್ಲಿ ಭೂಕಂಪ: ನಜೀರ್ ಅಹ್ಮದ್‌ಗೆ ಸುರ್ಜೇವಾಲಾ ಅಲ್ಟಿಮೇಟಂ

Published

on

By

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಳಅಸಮಾಧಾನ ತೀವ್ರಗೊಂಡಿರುವ ನಡುವೆಯೇ, ರಾಜ್ಯ ಉಸ್ತುವಾರಿ Randeep Singh Surjewala ಅವರು ಸಿಎಂ ರಾಜಕೀಯ ಕಾರ್ಯದರ್ಶಿ Naseer Ahmed ಅವರಿಗೆ ಕಠಿಣ ಡೆಡ್‌ಲೈನ್ ನೀಡಿದ್ದಾರೆ.

ಇಂದು (ಏಪ್ರಿಲ್ 13) ಸಂಜೆಯೊಳಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿರುವ ಸುರ್ಜೇವಾಲಾ, ಸಮಯಕ್ಕೆ ರಾಜೀನಾಮೆ ನೀಡದಿದ್ದರೆ ಅವರನ್ನು ಸ್ಥಾನದಿಂದ ವಜಾಗೊಳಿಸಲು ಮುಖ್ಯಮಂತ್ರಿ Siddaramaiah ಅವರಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, “ನಸೀರ್ ಅಹ್ಮದ್ ಇನ್ನೂ ರಾಜೀನಾಮೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಕೊಡಬಹುದು. ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ದಾವಣಗೆರೆ ದಕ್ಷಿಣ ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಕೆಲವು ನಾಯಕರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ನಸೀರ್ ಅಹ್ಮದ್ ಅವರು ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆಂದು ಸಿಎಂ ಹೇಳಿದ್ದಾರೆ.

ಇದಕ್ಕೂ ಮೊದಲು ಸುರ್ಜೇವಾಲಾ ಅವರು ಸಚಿವ Zameer Ahmed Khan, Abdul Jabbar ಹಾಗೂ ನಸೀರ್ ಅಹ್ಮದ್ ವಿರುದ್ಧ ವರದಿ ಸಲ್ಲಿಸಿದ್ದರು. ಈಗಾಗಲೇ ಅಬ್ದುಲ್ ಜಬ್ಬಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅದನ್ನು D. K. Shivakumar ಅಂಗೀಕರಿಸಿದ್ದಾರೆ.

ಈ ಬೆಳವಣಿಗೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕ್ರಮಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Continue Reading

ದೇಶ

ಸಚಿವ ಸ್ಥಾನ ಕೇಳೋದು ತಪ್ಪಲ್ಲ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

Published

on

By

ಬೆಂಗಳೂರು: ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ G. Parameshwara ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಅದೇನು ಗ್ಯಾಂಬ್ಲಿಂಗ್ ಅಲ್ಲ, ಶಾಸಕರು ತಮ್ಮ ಅರ್ಹತೆಯ ಆಧಾರದಲ್ಲಿ ಕೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ಎರಡು ಮೂರು ಬಾರಿ ಗೆದ್ದಿರುವ ಶಾಸಕರು ಸಚಿವರಾಗಲು ಸಮರ್ಥರು. ಹೀಗಾಗಿ ಸಚಿವ ಸ್ಥಾನಕ್ಕಾಗಿ ಕೇಳುವುದು ಸಹಜ. ಆದರೆ ಅಂತಿಮ ನಿರ್ಧಾರ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಕೈಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಷ ಪುನಾರಚನೆ ಕುರಿತು ಮಾತನಾಡಿದ ಪರಮೇಶ್ವರ್, “ನಾಯಕತ್ವ ವಿಚಾರವಾಗಲಿ, ಸಚಿವ ಸಂಪುಟ ಪುನಾರಚನೆ ಆಗಲಿ, ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಹಿರಂಗವಾಗಿ ಕೇಳುವುದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈಗ ಪುನಾರಚನೆ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ” ಎಂದು ಹೇಳಿದರು.

ಇನ್ನೂ ದಾವಣಗೆರೆ ಕ್ಷೇತ್ರದಲ್ಲಿ Abdul Jabbar ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಅವರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿದರು. D. K. Shivakumar ಹೊಸ ಸಮಿತಿ ರಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪುನಾರಚನೆ ನಡೆದರೆ ಹಿರಿಯರು ಸ್ಥಾನ ಬಿಟ್ಟುಕೊಡಬೇಕಾದರೆ ನಾವು ಒಪ್ಪಲೇಬೇಕು. ಹೈಕಮಾಂಡ್ ತೀರ್ಮಾನಕ್ಕೆ ಯಾರೂ ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

Continue Reading

Trending