Connect with us

ದೇಶ

ಭಾರತವನ್ನು ವಿಶ್ವಗುರುವನ್ನಾಗಿಸಲು ಕಾಲಾವಕಾಶ ಬೇಕಿದೆ – ಶೋಭಾ ಕರಂದ್ಲಾಜೆ

Published

on

2024ರ ಲೋಕಾಸಭಾ ಚುನಾವಣೆ ಅಭ್ಯರ್ಥಿಯ ಚುನಾವಣೆ ಅಲ್ಲ ಈ ಚುನಾವಣೆ ನಮ್ಮ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ಚುನಾವಣೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಹೇಳಿದರು. ಯಶವಂತಪುರ ಕ್ಷೇತ್ರದ ವೈಟ್ ಪ್ಯಾಲೆಸ್‌ನಲ್ಲಿ 427 ವೈದ್ಯರು, ಎಂಜಿನಿಯರ್, ಲಾಯರ್, ಮಾಜಿ ಸೈನಿಕರು ಇನ್ನೂ ಹಲವಾರು ಪ್ರಬದ್ದರು ಒಳಗೊಂಡಂಥಾ ಸಭೆಯಲ್ಲಿ ಅಭ್ಯರ್ಥಿ ಶೋಭ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತ 2014ರಲ್ಲಿ ಮೊದಲ ಬಾರಿ ಮೋದಿ ಅವರು ಪ್ರಧಾನಿ ಮಂತ್ರಿಯಾಗಿ ತಮ್ಮ ಮೊದಲ ಸಭೆಯಲ್ಲಿ ಭಾರತವನ್ನು ವಿಶ್ವ ಗುರುವನ್ನು ಮಾಡುವ ಸಂಕಲ್ಪ ನನ್ನದು, ಭಾರತವನ್ನು ವಿಶ್ವಗುರು ಮಾಡಲು ನನಗೆ 10 ವರ್ಷಗಳಕ್ಕಿಂತ ಹೆಚ್ಚು ಸಮಯ ಬೇಕು ಎಂದೇ ಅವರು ಸಭೆಯಲ್ಲಿ ಅವರು ತಿಳಿಸಿದ್ದರು. ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ದೇಶದ ಮಾತುಗಳನ್ನು ಪರಿಗಣಿಸಲು ಯಾವ ದೇಶವು ಮುಂದಾಗುತ್ತಿರಲಿಲ್ಲ. ಇಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ದೇಶದ ಮಾತುಗಳನ್ನು ಮೊದಲು ಪರಿಗಣಿಸಲು ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಹಾಗೂ ಅವರ ಜೊತೆ ನಮ್ಮ ಪ್ರಧಾನಿ ಬೆಳಸಿಕೊಂಡಿರುವ ಸಂಬಂಧ ಎಂದರು. ಉಕ್ರೇನ್ ಯುದ್ಧದಲ್ಲಿ ನಮ್ಮ ಭಾರತ ದೇಶದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು ಸುಮಾರು ನಾಲ್ಕು ಗಂಟೆಗಳ ಕಾಲ ಯುದ್ಧವನ್ನು ನಿಲ್ಲಿಸಿ ನಮ್ಮ ಭಾರತ ದೇಶದ ವಿದ್ಯಾರ್ಥಿಗಳನ್ನು ನಾವು ಕರಕೊಂಡು ಬರಬೇಕು ಎಂದು ಇಬ್ಬರ ಪ್ರಧಾನಿಗಳ ಜೊತೆ ಮಾತನಾಡಿ ಯುದ್ಧ ನಿಲ್ಲಿಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಲಾಯಿತು. ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳ ಜೊತೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ವಿದ್ಯಾರ್ಥಿಗಳು ಕೂಡ ನಮ್ಮ ಭಾರತದ ದ್ವಜವನ್ನು ಹಿಡಿದು ಬಸ್ಸಿನಲ್ಲಿ ಭಾರತ್ ಮಾತಾ ಕೀ ಜೈ ಎಂದು ಬಂದರು. ಇಂತಹ ಶಕ್ತಿ ಇಂದು ನಮ್ಮ ಭಾರತ ದೇಶ ಹಾಗೂ ಪ್ರಧಾನಿ ಅವರದ್ದು ಎಂದರು. ಭ್ರಷ್ಟರಹಿತ ಸರ್ಕಾರವನ್ನು ನೀಡಿ ಅವರ ಅಡಳಿತದ ಶಕ್ತಿಯನ್ನು ಪ್ರತಿಯೊಬ್ಬರಿಗೆ ತಿಳಿಸಿದ್ದಾರೆ, ಸುಮಾರು ವರ್ಷಗಳ ಹಿಂದೆ ಜಾಗತಿಕ ಮಟ್ಟದ ಸಭೆಗಳಲ್ಲಿ ಭಾರತ ದೇಶ ಮಾತನಾಡಿದರೆ ಬೇರೆ ದೇಶಗಳು ಇವರು ಅನುದಾನ ಕೇಳುತ್ತಾರೆ ಎಂದು ನಮ್ಮ ದೇಶದ ಪ್ರಧಾನಿಗಳನ್ನು ಅವಮಾನ ಮಾಡುತ್ತಿದ್ದರು. ಈ ಅವಮಾನಗಳು ನಮ್ಮ ಪ್ರಧಾನಿಗೆ ಮಾಡಿದ್ದು ಅಲ್ಲ ನಮ್ಮ ದೇಶಕ್ಕೆ ಮಾಡಿರುವುದು. ಅದರೆ ಈಗ ಪರಿಸ್ಧಿತಿ ಬದಲಾಗಿದೆ ಅದಕ್ಕೆ ಮುಖ್ಯ ಕಾರಣ ಪ್ರಧಾನಿ ಮೋದಿ ಅವರ ತೆಗೆದುಕೊಂಡ ನಿರ್ಧಾರಗಳು ಎಂದರು. ವಿದೇಶದಲ್ಲಿ ಇರುವ ಭಾರತೀಯರನ್ನು ಕೇಳಿ ಅವರು ಇರುವ ದೇಶದಲ್ಲಿ ಇಂದು ಭಾರತೀಯರನ್ನು ಹೇಗೆ ನೋಡುತ್ತಾರೆ ಎಂದು, ಇಂದು ನಾವು ಬಹು ಹೆಮ್ಮೆಯಿಂದ ಈ ವೇದಿಕೆಯಲ್ಲಿ ಹೇಳುತ್ತೇನೆ ಕೇಂದ್ರ ಸರ್ಕಾರ ಇಂದು ನಮ್ಮ ದೇಶದ ಗೋದಿ ಹಾಗೂ ರಾಗಿಯನ್ನು ಇಡೀ ವಿಶ್ವಕ್ಕೆ ಕಳುಹಿಸುತ್ತಿದ್ದೇವೆ. ನಮ್ಮ ದೇಶದ ಪ್ರಾಚೀನ ಆಯುರ್ವೇದದಲ್ಲಿ ಇರುವ ಪ್ರಯೋಜನಗಳನ್ನು ವಿಶ್ವಕ್ಕೆ ಪರಿಚಯ ಮಾಡಿದ್ದೇವೆ. ಯೋಗಭ್ಯಾಸದಲ್ಲಿ ಇರುವ ಲಾಭಗಳನ್ನು ವಿಶ್ವಕ್ಕೆ ಯೋಗ ಡೇ ಮೂಲಕ ತಿಳಿಸಿ ಇಂದು ಅನೇಕ ದೇಶದಲ್ಲಿ ಯೋಗಭ್ಯಾಸವನ್ನು ಮಾಡುತ್ತಿದ್ದಾರೆ. ದೇಶದ ರಕ್ಷಣೆಯಲ್ಲಿ ರಾಜಿಯಿಲ್ಲ ಎಂದು ಭಾರತದಲ್ಲೇ ನಾವು ಬುಲೆಟ್ಸ್, ರೈಫಲ್, ಹಾಗೂ ಹಲವಾರು ಯುದ್ಧಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಭಾರತದಲ್ಲೇ ಉತ್ಪನ್ನ ಮಾಡಿ ವಿದೇಶಗಳಿಗೆ ಮಾರಾಟ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ದೇಶದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ರಾಮ ಮಂದಿರ ನಿರ್ಮಾಣದ ಕೇಸ್ ಕೋರ್ಟ್ನಲ್ಲಿ ಇತ್ತು. ಪ್ರಧಾನಿ ಮೋದಿ ಅವರು ಸರಿಯಾದ ದಾಖಲೆಗಳನ್ನು ಸರ್ಕಾರದಿಂದ ನೀಡಿ ರಾಮ ಮಂದಿರ ನಿರ್ಮಾಣದ ಕೆಲಸಗಳನ್ನು ಯಾವುದೇ ರಕ್ತಪಾತವಿಲ್ಲದೆ ಪೂರ್ಣಗೊಳಿಸಿದರು ಎಂದರು. ಕಾರ್ಯಕ್ರಮದಲ್ಲಿ ನಗರಮಂಡಲಾಧ್ಯಕ್ಷ ಅನಿಲ್ ಚಳಗೇರಿ, ಮಾಜಿ ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ, ರ.ಅಂಜನಪ್ಪ, ರಾಜ್ಯ ಒಬಿಸಿ ಸದಸ್ಯ ಆರ್ ಪಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಕೆಂಗೇರಿ ವಾರ್ಡ್ ಅಧ್ಯಕ್ಷ ಸಂತೋಷ್, ಬಿಜೆಪಿ ಮುಖಂಡರುಗಳಾದ ನವೀನ್, ರಾಮಣ್ಣ,ಜಂಗಾಮ ರಮೇಶ್, ಬಾಲಾಜಿ ಹಾಗೂ ಹಲವಾರು ಸ್ಧಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ದೇಶ

ಪಿಒಕೆ ಪ್ರತಿಭಟನೆಗಳಿಂದ ಗಮನ ಬೇರೆಡೆ ಸೆಳೆಯಲು ಪಾಕ್ ತಂತ್ರ?

Published

on

ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿ ಹೊಸ ವಿವಾದಕ್ಕೆ ಕಾರಣವಾಗಿದೆ. ಖೋಸ್ಟ್, ಕುನಾರ್ ಹಾಗೂ ಪಕ್ತಿಕಾ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಮೂಲಗಳು ತಿಳಿಸಿವೆ.

Afghanistan ಸರ್ಕಾರದ ವಕ್ತಾರ ಹಾಗೂ ತಾಲಿಬಾನ್ ಮುಖ್ಯ ವಕ್ತಾರ Zabihullah Mujahid ಅವರ ಪ್ರಕಾರ, ಪಾಕಿಸ್ತಾನವು ಅಫ್ಘಾನ್ ವಾಯುಪ್ರದೇಶ ಉಲ್ಲಂಘಿಸಿ ಬಾಂಬ್ ದಾಳಿ ನಡೆಸಿದ್ದು, ನಾಗರಿಕರ ಮೇಲೆ ದಾಳಿ ನಡೆಸಿರುವುದು ಮಾನವೀಯ ಅಪರಾಧ ಹಾಗೂ ಆಕ್ರಮಣಕಾರಿ ಕೃತ್ಯವಾಗಿದೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಇತ್ತೀಚಿನ ಗಡಿ ಉದ್ವಿಗ್ನತೆ ನಡುವೆ ನಡೆದ ಈ ಬೆಳವಣಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಒಂದು ದಿನದ ಹಿಂದಷ್ಟೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ India ಪ್ರತಿನಿಧಿಗಳು ಅಫ್ಘಾನ್ ಗಡಿಭಾಗದಲ್ಲಿ ಪಾಕಿಸ್ತಾನದ ಕ್ರಮಗಳನ್ನು ಟೀಕಿಸಿದ್ದರು. ನಾಗರಿಕರ ಸಾವುನೋವು ಹಾಗೂ ವ್ಯಾಪಾರ ನಿರ್ಬಂಧಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು.

ಇದರ ನಡುವೆಯೇ ಪಾಕ್ ಆಕ್ರಮಿತ ಕಾಶ್ಮೀರ (POK) ಪ್ರದೇಶದಲ್ಲಿಯೂ ಸರ್ಕಾರ ಮತ್ತು ಸೇನೆಯ ವಿರುದ್ಧ ಜನರ ಅಸಮಾಧಾನ ಹೆಚ್ಚುತ್ತಿರುವ ವರದಿಗಳು ಹೊರಬರುತ್ತಿವೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಬಲಪ್ರಯೋಗ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ವಿಶ್ಲೇಷಕರ ಅಭಿಪ್ರಾಯದಂತೆ, ಪಿಒಕೆ ಪ್ರದೇಶದಲ್ಲಿನ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಅಫ್ಘಾನಿಸ್ತಾನದ ಮೇಲೆ ನಡೆದ ದಾಳಿ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಈ ಸಂಬಂಧ ಪಾಕಿಸ್ತಾನದಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.

ಗಡಿಭಾಗದ ಉದ್ವಿಗ್ನ ಪರಿಸ್ಥಿತಿ ದಕ್ಷಿಣ ಏಷ್ಯಾದ ಭದ್ರತಾ ಸನ್ನಿವೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಾಗತಿಕ ಸಮುದಾಯದ ಗಮನ ಈ ಬೆಳವಣಿಗೆಯತ್ತ ನೆಟ್ಟಿದೆ.

Continue Reading

ದೇಶ

ನೆಹರೂ 64 ವರ್ಷದ ದಾಖಲೆ ಹಿಂದಿಕ್ಕಿದ ಮೋದಿ; ಸಂಪುಟ ಸಭೆಯಲ್ಲಿ ಸಂಭ್ರಮ

Published

on

ನವದೆಹಲಿ: ಪ್ರಧಾನಿ Narendra Modi ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಬುಧವಾರ ನಡೆದ Union Cabinet of India ಸಭೆಯಲ್ಲಿ ಪ್ರಧಾನಿ ಮೋದಿ ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಲಾಯಿತು. ಈ ವೇಳೆ ಸಚಿವ ಸಂಪುಟದ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಗೌರವ ಸೂಚಿಸಿ ಅಭಿನಂದನೆ ಸಲ್ಲಿಸಿದರು.

ಪ್ರಧಾನಿ ಮೋದಿ ಅವರು 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜೂನ್ 10ರಂದು ಅವರು ನಿರಂತರವಾಗಿ 4,399 ದಿನಗಳ ಆಡಳಿತಾವಧಿಯನ್ನು ಪೂರೈಸುವ ಮೂಲಕ ಭಾರತದ ಮೊದಲ ಪ್ರಧಾನಿ Jawaharlal Nehru ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ನೆಹರೂ ಅವರು 1952ರ ಮೇ 13ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ದೇಶವನ್ನು ಮುನ್ನಡೆಸಿದ್ದರು. ಕಳೆದ 64 ವರ್ಷಗಳಿಂದ ಅಚ್ಚಳಿಯದೇ ಉಳಿದಿದ್ದ ಈ ದಾಖಲೆಯನ್ನು ಇದೀಗ ಮೋದಿ ಮುರಿದಿದ್ದಾರೆ.

ಈ ಸಾಧನೆಯೊಂದಿಗೆ ಮೋದಿ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ನಿರಂತರವಾಗಿ ಅಧಿಕಾರದಲ್ಲಿದ್ದ ಪ್ರಧಾನಿಯಾಗಿ ಹೊಸ ಅಧ್ಯಾಯ ಬರೆದಿದ್ದಾರೆ. ಆಡಳಿತ, ಅಭಿವೃದ್ಧಿ ಹಾಗೂ ನಾಯಕತ್ವದ ವಿಚಾರದಲ್ಲಿ ಈ ಸಾಧನೆ ಮಹತ್ವದ್ದಾಗಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾದ ಅಭಿನಂದನಾ ನಿರ್ಣಯವು ಮೋದಿ ಅವರ ದೀರ್ಘ ರಾಜಕೀಯ ಪಯಣ ಹಾಗೂ ನಾಯಕತ್ವಕ್ಕೆ ಸಲ್ಲಿಸಿದ ಗೌರವದ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Continue Reading

ದೇಶ

12 ವರ್ಷಗಳ ಆಡಳಿತದಲ್ಲಿ ಭಾರತಕ್ಕೆ ಜಾಗತಿಕ ಗುರುತು: ಮೋದಿ ಪರಿಣಾಮ

Published

on

ನವದೆಹಲಿ: ಪ್ರಧಾನಿ Narendra Modi ಅವರ 12 ವರ್ಷಗಳ ಆಡಳಿತಾವಧಿಯನ್ನು ಆಧುನಿಕ ಭಾರತದ ಅಭಿವೃದ್ಧಿ ಮತ್ತು ಪರಿವರ್ತನೆಯ ಪ್ರಮುಖ ಘಟ್ಟವೆಂದು ಬಿಜೆಪಿ ವಲಯ ಹಾಗೂ ಬೆಂಬಲಿಗರು ವರ್ಣಿಸಿದ್ದಾರೆ. ಈ ಅವಧಿಯಲ್ಲಿ ಭಾರತವು ಆರ್ಥಿಕತೆ, ಮೂಲಸೌಕರ್ಯ, ರಕ್ಷಣಾ, ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ ಎಂದು ಹೇಳಲಾಗಿದೆ.

ಆರ್ಥಿಕ ಕ್ಷೇತ್ರದಲ್ಲಿ ದೇಶದ ನೈಜ ಜಿಡಿಪಿ ಹಾಗೂ ನಾಮಮಾತ್ರ ಜಿಡಿಪಿ ಗಣನೀಯವಾಗಿ ಏರಿಕೆಯಾಗಿದೆ. ಸೇವಾ ವಲಯ ಮತ್ತು MSME ಕ್ಷೇತ್ರಗಳು ದೇಶದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿವೆ. GST ಜಾರಿಗೆ ನಂತರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿದ್ದು, ಆದಾಯದಲ್ಲಿಯೂ ಏರಿಕೆ ಕಂಡುಬಂದಿದೆ.

ಮೂಲಸೌಕರ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಮೆಟ್ರೋ ಜಾಲ ವೃದ್ಧಿ, ರೈಲು ವಿದ್ಯುದ್ದೀಕರಣ ಮತ್ತು ಗ್ರಾಮೀಣ ವಿದ್ಯುತ್ ಯೋಜನೆಗಳು ದೇಶದ ಚಿತ್ರಣವನ್ನು ಬದಲಿಸಿದ ಪ್ರಮುಖ ಅಂಶಗಳಾಗಿವೆ. ಜೊತೆಗೆ “ಡಿಜಿಟಲ್ ಇಂಡಿಯಾ” ಯೋಜನೆಯಡಿ UPI, ಆಧಾರ್, DigiLocker ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಜನಜೀವನವನ್ನು ಸುಲಭಗೊಳಿಸಿವೆ.

ರಕ್ಷಣಾ ಕ್ಷೇತ್ರದಲ್ಲೂ ಭಾರತವು ಸ್ವಾವಲಂಬನೆ ಕಡೆಗೆ ದೊಡ್ಡ ಹೆಜ್ಜೆ ಇಟ್ಟಿದ್ದು, ದೇಶೀಯ ಉತ್ಪಾದನೆ ಹಾಗೂ ರಫ್ತು ಎರಡೂ ಹೆಚ್ಚಾಗಿದೆ. ಸೌರಶಕ್ತಿ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿನ ಲಸಿಕಾ ಅಭಿಯಾನ ಹಾಗೂ ವಿದೇಶಿ ಸಹಾಯ ಕಾರ್ಯಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿವೆ ಎಂದು ಬಿಜೆಪಿ ಬೆಂಬಲಿತ ಮೂಲಗಳು ಹೇಳಿವೆ.

ಇದೇ ವೇಳೆ, Bharatiya Janata Party ದೇಶದಾದ್ಯಂತ ಈ ಸಾಧನೆಗಳನ್ನು ಜನರಿಗೆ ತಲುಪಿಸಲು ವಿಶೇಷ ಅಭಿಯಾನ ನಡೆಸುತ್ತಿದೆ. ವಿರೋಧ ಪಕ್ಷಗಳು ಸರ್ಕಾರದ ನೀತಿಗಳ ಕುರಿತು ಟೀಕೆ ಮಾಡುತ್ತಿವೆ.

ಒಟ್ಟಾರೆ, ಮೋದಿ ಆಡಳಿತವು ಭಾರತವನ್ನು ಆಧುನಿಕ, ಡಿಜಿಟಲ್ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ರಾಷ್ಟ್ರವಾಗಿ ರೂಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Continue Reading

Trending