ಕ್ರೀಡೆ
ಮುಂಬೈ ಐಪಿಎಲ್ ತಂಡದಲ್ಲಿ ಬಿರುಕು

ಮುಂಬೈ: ಮುಂಬೈ ಇಂಡಿಯನ್ಸ್ ತಂಡದಿAದ ರೋಹಿತ್ ಶರ್ಮಾ ಅವರನ್ನು ಕೆಳಗೆ ಇಳಿಸಿದ್ದು ಅವರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ, ರೋಹಿತ್ ಶರ್ಮಾ ಅವರ ಸ್ಧಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ತಂದು ಕೂರಿಸಿದ್ದು, ರೋಹಿತ್ ಬೆಂಬಲಿಗರ ಕಣ್ಣು ಮತ್ತಷ್ಟು ಕೆಂಪಾಗಿಸಿದೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬಣಗಳು ಸೃಷ್ಟಿಯಾಗಿವೆ, ಇತ್ತ ರೋಹಿತ್ ಅಭಿಮಾನಿಗಳು ಸಹ ಹಾರ್ದಿಕ್ ಪಾಂಡ್ಯ ಮೇಲೆ ಆಕ್ರೋಶಗೊಂಡಿದ್ದಾರೆ, ಈಚೆಗೆ ಗುಜರಾತ್ ತಂಡದ ವಿರುದ್ಧ ಮುಂಬೈ ಸೋತ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡ ಪರದೆಗೆ ರೋಹಿತ್ ಅಭಿಮಾನಿಗಳು ಚಪ್ಪಲಿ, ಶೂ ಎಸೆದಿದ್ದಾರೆ,
ಮೊನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ತಂಡ ಸೋತಿತು, ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾನ ನಡೆಸಿಕೊಂಡ ರೀತಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು, ಈ ಬಗ್ಗೆ ಅಭಿಮಾನಿಗಳು ಅವರ ಅವರ ರೀತಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ, ಪಂದ್ಯದ ಬಳಿಕ ಟಿವಿ ನೋಡ್ತಿದ್ದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಮುಖ ತೋರಿಸುತ್ತಿದ್ದಂತೆ ಚಪ್ಪಲಿ ಎಸೆದು ಆಕ್ರೋಶ ಹೊರ ಹಾಕಿದ್ದಾರೆ, ಈ ವಿಡಿಯೋ ಸೋಷಿಯಲ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ,