Connect with us

ಚುನಾವಣೆ

ಅಭಿವೃದ್ದಿಯೇ ಬಿಜೆಪಿಗೆ ಶ್ರೀರಕ್ಷೆ- ಶೋಭಕ್ಕನ ಗೆಲುವು ನೂರಕ್ಕೆ ನೂರು ಖಚಿತ : ರಮೇಶ್

Published

on

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಗೆಲ್ಲುವುದು ಖಚಿತ ಎಂದು ಬೆಂಗಳೂರು ಉತ್ತರ ಜಿಲ್ಲಾ ಒಬಿಸಿ ಉಪಾಧ್ಯಕ್ಷ ಜಂಗಮ್ ರಮೇಶ್ ಹೇಳಿದರು.  ಹೊಸ ಸುದ್ಧಿಯ ವಿಶೇಷ ಸಂದರ್ಶನದಲ್ಲಿ  ಮಾತನಾಡಿದ ಅವರು,  ದೇಶದಲ್ಲಿ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತ, ಶ್ರೀ ರಾಮ ಮಂದಿರ ನಿರ್ಮಾಣ ಹಾಗೂ ಅವರು ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಮುಂಬರುವ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಅಡಳಿತದಲ್ಲಿ ಭಾರತ ದೇಶ ಆರ್ಥಿಕವಾಗಿ ಬೆಳದಿರುವುದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ವಿಷಯ. ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಇಂದು ಭಾರತ ದೇಶದ ಪ್ರಜೆಗಳು ಚುನಾವಣೆಯಲ್ಲಿ ಪುನಃ ಮೋದಿಯನ್ನು ಆಯ್ಕೆ ಮಾಡಲು ತುದಿಗಾಲಿನಲ್ಲಿ ನಿಂತಿರುವುದು ಬಿಜೆಪಿ ಕಾರ್ಯಕರ್ತರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಜಂಗಮಾ ರಮೇಶ್‌ ಹೇಳಿದರು.  ಬೆಂಗಳೂರು ಉತ್ತರ ಲೋಕಾಸಭಾ ಕ್ಷೇತ್ರಕ್ಕೆ ನಮ್ಮ ನೆಚ್ಚಿನ ನಾಯಕಿ ಹಾಗೂ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರು ಆಯ್ಕೆಯಾಗಿರುವುದು ನಮಗೆ ಅತ್ಯಂತ ಸಂತಸದ ವಿಷಯ ಎಂದರು. 

 2008ರಲ್ಲಿ ಶೋಭಾ ಕರಂದ್ಲಾಜೆಯವರು ಯಶವಂತಪುರ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.  ಅವರು ಅಂದು ಮಾಡಿರುವ ಕೆಲಸ ಇಂದಿಗೂ ಕ್ಷೇತ್ರದ ಸಾರ್ವಜನಿಕರ ಮನದಲ್ಲಿದೆ.   ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರು ಯಾವುದೇ ಆಸೆ ಆಕಾಂಕ್ಷೆಯಿಲ್ಲದೇ ಕೆಲಸ ಮಾಡುವ ಮನೋಭಾವದವರಾಗಿದ್ದು, ನಮ್ಮ ಕಾರ್ಯಕರ್ತರೆ ನಮ್ಮ  ಬಿಜೆಪಿ ಪಕ್ಷದ ಶಕ್ತಿಯಾಗಿದ್ದಾರೆ ಎಂದು ಜಂಗಮ್‌ ರಮೇಶ್‌ ಹೇಳಿದರು. ಕಾರ್ಯಕರ್ತರಿಂದಲೇ ಬಿಜೆಪಿ ಇಂದು ಪ್ರಪಂಚದಲ್ಲೇ ಅತೀ ದೊಡ್ಡ ರಾಜಕೀಯ ಪಕ್ಷವೆಂಬ ಹೆಗ್ಗಳಿಗೆ ಪಡೆದಿದೆ. ಪಕ್ಷದಲ್ಲಿ ದೇಶ ಮೊದಲು , ಧರ್ಮಕ್ಕೆ ಮೊದಲ ಆದ್ಯತೆ ಎಂಬ ಸಿದ್ದಾಂತ ಇರುವುದರಿಂದ ನಮ್ಮ ಕಾರ್ಯಕರ್ತರು ಯಾವ ವ್ಯಕ್ತಿಯ ಹಿಂದೆ ನಿಲ್ಲುವುದಿಲ್ಲ.    ಪಕ್ಷದ ನಿರ್ಧಾರ ,  ಪಕ್ಷದ ಸೂಚನೆ ಜೊತೆಗೆ ನಿಲ್ಲುವುದು ಬಿಜೆಪಿ ಪಕ್ಷದ ಸಂಸ್ಕೃತಿಯಾಗಿದೆ ಎಂದರು. 

 ಲೋಕಸಭಾ ಚುನಾವಣೆಯಲ್ಲಿ ನಾವು 400 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮೋದಿ ಅವರ ಕೈ ಬಲ ಪಡಿಸಬೇಕೆಂಬುದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಏಕೈಕ ಆಕಾಂಕ್ಷೆಯಾಗಿದೆ ಎಂದು ನುಡಿದ ಜಂಗಮ್‌ ರಮೇಶ್,   ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ ಹಾಗೂ ಯಾರಿಗೂ ತೊಂದರೆ ಕೊಡುವುದಿಲ್ಲ.   ಬೆಂಗಳೂರು ಉತ್ತರ ಕ್ಷೇತ್ರದ ಕಾರ್ಯಕರ್ತರ ಮನೋಭಾವವನ್ನು ಬಹಳ ಸೂಕ್ಷವಾಗಿ ಪರಿಗಣಿಸಿ ಕೇಂದ್ರದ ನಾಯಕರು ಶೋಭಾ ಅವರನ್ನು ಅಭ್ಯಾರ್ಥಿಯಾಗಿ ಆಯ್ಕೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು. 

 ನಮ್ಮ ಪಕ್ಷದ ಮುಖಂಡರು  ಭಾಷೆ ಮತ್ತು ಪ್ರಾಂತ್ಯಕ್ಕಾಗಿ ಮಾತ್ರವಲ್ಲ  ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸೋಲಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್‌  ಸಾಧ್ಯವಾಗುತ್ತಿಲ್ಲ.  ಇದ್ದು ಕಾಂಗ್ರೆಸ್ ಪಕ್ಷದ ಪರಿಸ್ಧಿತಿ ಎಂದು ಲೇವಡಿ ಮಾಡಿದ ಜಂಗಮ್‌ ರಮೇಶ್‌, ಮೋದಿಯವರ ಜನಪ್ರಿಯತೆಯಿಂದಾಗಿ  ಕಾಂಗ್ರೆಸ್‌ ಪಕ್ಷ ಈ ಹೀನಾಯ ಸ್ಥಿತಿ ತಲುಪಿದೆ ಎಂದರು. 

ಯಶವಂತಪುರ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್   ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳಿಗೆ ನಮ್ಮ ಗೌರವ ಇದ್ದೇ ಇದೆ.  ಅವರಿಗೆ ನಮ್ಮ ಪಕ್ಷ ಸಚಿವ ಸ್ಥಾನ ಸೇರಿದಂತೆ ಎಲ್ಲವನ್ನೂ ನೀಡಿತ್ತು.ಮೋದಿ ಮತ್ತು ಅಮಿತ್‌ ಶಾ ಅವರ ಜೊತೆ ವೇದಿಕೆ ಹಂಚಿಕೊಳ್ಳುವ ಭಾಗ್ಯವೂ ಕೂಡ ಸಿಕ್ಕಿತ್ತು. ಎಸ್‌ಟಿಎಸ್‌  ಅವರ ಕಾರ್ಯ ವೈಖರಿಯ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಆದರೆ ಅವರ ಪಕ್ಷ ವಿರೋಧಿ ಧೋರಣೆ ಸರಿಯಲ್ಲ ಎಂದರು.

ಅವರ ಕಾರ್ಯ ವೈಖರಿಯ ಬಗ್ಗೆ ನಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ.  ಆದರೆ ಅವರ ಪಕ್ಷ ವಿರೋಧಿ ಧೋರಣೆ ಸರಿಯಿಲ್ಲ ಎಂದರು. ಅವರು ನಮ್ಮ ಪಕ್ಷವನ್ನು ಸೇರಿದಾಗ ನಾವು  ಅವರು ರಾಜಕೀಯದಲ್ಲಿ ತುಂಬ ಅನಭವಸ್ಥರು ಎಲ್ಲರ ನಾಡಿಮಿಡಿತಗಳನ್ನು ಬಲ್ಲವರು ಎಂದು ಭಾವಿಸಿದ್ದೆವು.  ಆದರೆ ಅವರ ಜೊತೆ ಇರುವ ಕೆಲವರ ಮಾತುಗಳನ್ನು ಪರಿಗಣಿಸಿ ನಿರ್ಧಾರಗಳನ್ನು ತೆಗೆದುಕೊಳ್ಳವುದು ಅಸಮಾಧಾನಕ್ಕೆ ಕಾರಣವಿರಬಹುದು ಎಂದು ನನ್ನ ಅಭಿಪ್ರಾಯ,.ಯಾರೋ ಹೇಳುವ ಮಾತನ್ನು ಕೇಳಿ ಅವರು ತಪ್ಪು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸಿದ್ದೇನೆ.

 ಅಸಮಾಧಾನದ ಮಾತುಗಳು ಬಂದಾಗ ನಮ್ಮ ಕ್ಷೇತ್ರದ ಶಾಸಕರು ನಮ್ಮ ಪಕ್ಷದ ಮುಖಂಡರಗಳ ಜೊತೆ ಮಾತನಾಡಬೇಕಿತ್ತು ಎಂದರು. ನಮ್ಮ ಶಾಸಕರು ಕೆಲವೇ ದಿನಗಳಲ್ಲಿ ಬಿಜೆಪಿಯಲ್ಲಿ ಉಸಿರು ಕಟ್ಟಿದ ವಾತಾವರಣ ಎಂದಿರುವುದು   ಸರಿಯೇ ಎಂದು ಪ್ರಶ್ನಿಸಿದರು.  ಜನರು ದಡ್ಡರು ಎಂದು ಯಾವ  ನಾಯಕರುಗಳು ಭಾವಿಸಬಾರದು. ಶೋಭಾ ಅವರಿಗೆ ಚಿಕ್ಕಮಂಗಳೂರಿನಲ್ಲಿ ಗೋ ಬ್ಯಾಕ್ ಘೋಷಣೆ ಬರಲು ಮುಖ್ಯ ಕಾರಣ ನಮ್ಮ ಪಕ್ಷದ ಆಂತರಿಕ ಸಮಸ್ಯೆಯೇ ಹೊರತು ಬೇರೆ ಕಾರಣ ಆ ಕ್ಷೇತ್ರದಲ್ಲಿ ಅಲ್ಲ.  ನಮ್ಮ ಮುಖಂಡರಗಳೇ ಮಾಡಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಶೋಭಾ ಕರಂದ್ಲಾಜೆ ಅವರ  ಕಾರ್ಯ ವೈಖರಿ ಸರಿಯಿಲ್ಲ ಎಂದಿದ್ದರೆ ಯಾವುದೇ ಕಾರಣಕ್ಕೂ ಹೈಕಮಾಂಡ್ ಅವರಿಗೆ ಟಿಕೆಟ್ ಘೋಷಣೆ ಮಾಡುತ್ತಿರಲಿಲ್ಲ.    ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 10 ರಿಂದ 15 ಲಕ್ಷ ಮತಗಳನ್ನು ಶೋಭಾ ಪಡೆಯುತ್ತಾರೆ. 

ಯಶವಂತಪುರ ಕ್ಷೇತ್ರದಲ್ಲಿ ಶಾಸಕರಾದ ಎಸ್ ಟಿ ಸೋಮಶೇಖರ್ ಅವರು ಕ್ಷೇತ್ರದಲ್ಲಿ ನಮ್ಮ ಪಕ್ಷದ ವಿರೋಧವಾಗಿ ಮಾತನಾಡಿದರೂ ಸ್ಧಳೀಯ ಮುಖಂಡರುಗಳು ಹಾಗೂ ಜವಾಬ್ದಾರಿ ಇರುವ ನಾಯಕರುಗಳು ಮಾತನಾಡುವುದಿಲ್ಲ ಇದಕ್ಕೆ ಮುಖ್ಯ ಕಾರಣ ಸ್ಧಳೀಯ ನಾಯಕರುಗಳು ವೈಫಲ್ಯ ಎಂದೇ ಹೇಳಬೇಕು. ಬಿಜೆಪಿ ಕಾರ್ಯಕರ್ತರನ್ನು ಕಾಪಾಡಿಕೊಳ್ಳುವುದು ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ನಾಯಕರ ಮುಖ್ಯ ಕೆಲಸ ಎಂದರು

ಚುನಾವಣೆ

ಎಐಎಡಿಎಂಕೆ vs ಡಿಎಂಕೆ: ಸೀಟ್ ಶೇರಿಂಗ್‌ನಲ್ಲಿ ಭಾರಿ ಪೈಪೋಟಿ

Published

on

By

ಚೆನ್ನೈ: ತಮಿಳುನಾಡು ರಾಜಕೀಯವು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿದ್ದು, ದ್ರಾವಿಡ ಪಕ್ಷಗಳೇ ಇಲ್ಲಿ ಪ್ರಭಾವ ಬೀರುತ್ತವೆ. ಮುಖ್ಯವಾಗಿ Dravida Munnetra Kazhagam ಮತ್ತು All India Anna Dravida Munnetra Kazhagam ನಡುವಿನ ಪೈಪೋಟಿಯೇ ರಾಜ್ಯ ರಾಜಕೀಯದ ದಿಕ್ಕನ್ನು ನಿರ್ಧರಿಸುತ್ತದೆ.

ರಾಷ್ಟ್ರೀಯ ಪಕ್ಷಗಳಾದ Bharatiya Janata Party ಮತ್ತು Indian National Congress ಇಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಇಳಿಯುವುದು ಸಾಮಾನ್ಯವಾಗಿದೆ. 234 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ ಕೇವಲ 27 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಇದರ ಉದಾಹರಣೆ.

ಎನ್‌ಡಿಎ ಮೈತ್ರಿಯಲ್ಲಿ Edappadi K. Palaniswami ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು, ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ. ಇದರ ವಿರುದ್ಧವಾಗಿ, ಇಂಡಿಯಾ ಮೈತ್ರಿಯಲ್ಲಿ M. K. Stalin ಅಥವಾ ಅವರ ಪುತ್ರ Udhayanidhi Stalin ಪ್ರಮುಖ ಮುಖಗಳಾಗಿ ಕಾಣಿಸಿಕೊಂಡಿದ್ದಾರೆ.

ಸೀಟ್ ಹಂಚಿಕೆಯಲ್ಲಿ ಎಐಎಡಿಎಂಕೆ 166 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ 27, ಪಿಎಂಕೆ 18 ಸೇರಿದಂತೆ ಇತರ ಮೈತ್ರಿ ಪಕ್ಷಗಳು ತಮ್ಮ ಪಾಲಿನ ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಇನ್ನೊಂದೆಡೆ, ಡಿಎಂಕೆ 164 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ಇದಲ್ಲದೆ, ನಟ Vijay ಅವರ ಟಿವಿಕೆ ಹಾಗೂ Seeman ಅವರ ನಾಮ್ ತಮಿಳರ್ ಕಚ್ಚಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಚುನಾವಣೆಗೆ ಹೊಸ ರಂಗ ನೀಡಿದೆ.

ತಮಿಳುನಾಡಿನ ಮತದಾರರು ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಆಡಳಿತ ಬದಲಿಸುವ ಪ್ರವೃತ್ತಿ ಹೊಂದಿದ್ದು, ಈ ಬಾರಿ ಅದೇ ಟ್ರೆಂಡ್ ಮುಂದುವರಿಯುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Continue Reading

ಚುನಾವಣೆ

“ಟ್ರಂಪ್ ಅನುಮತಿ ಇಲ್ಲದೆ ತೈಲ ಖರೀದಿ ಸಾಧ್ಯವಿಲ್ಲ”: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Published

on

By

ಅಸ್ಸಾಂ ರಾಜ್ಯದ ಗೋಲಾಘಾಟ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಉಲ್ಲೇಖಿಸಿದ ಅವರು, “ಟ್ರಂಪ್ ಅನುಮತಿ ಇಲ್ಲದೆ ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.

ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಟ್ರಂಪ್ ಬಹಿರಂಗವಾಗಿ ಮೋದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಭಾರತದ ಇಂಧನ ಭದ್ರತೆ ಮತ್ತು ಪ್ರಮುಖ ಮಾಹಿತಿಯನ್ನು ಅಮೆರಿಕದ ಕೈಗೆ ಒಪ್ಪಿಸಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು.

ಇದೇ ವೇಳೆ ಅವರು ಎಪ್ಸ್ಟೀನ್ ಫೈಲ್ ಕುರಿತು ಉಲ್ಲೇಖಿಸಿ, ಟ್ರಂಪ್ ಬಳಿ ಮೋದಿ ಬಗ್ಗೆ ಮಾಹಿತಿಯಿದೆ ಎಂದು ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ, ಉದ್ಯಮಿ ಅದಾನಿ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿರುವುದನ್ನೂ ಅವರು ಪ್ರಸ್ತಾಪಿಸಿದರು.

ಈ ನಡುವೆ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ಸನ್ನಾಹಗಳು ಜೋರಾಗಿದ್ದು, ಅಸ್ಸಾಂ ಸೇರಿದಂತೆ ಹಲವೆಡೆ ರಾಜಕೀಯ ತಾಪಮಾನ ಏರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಪ್ರಚಾರ ತೀವ್ರಗೊಳಿಸಿದ್ದು, ಬಿಜೆಪಿ ಕೂಡ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ತೀವ್ರ ಪ್ರಚಾರ ನಡೆಸುತ್ತಿದೆ.

ಒಟ್ಟಿನಲ್ಲಿ, ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ.

Continue Reading

ಚುನಾವಣೆ

TN 2026 ಟೀಸರ್‌ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ

Published

on

By

ಚೆನ್ನೈ: ಮುಂದಿನ ವಾರ ಬಿಡುಗಡೆಯಾಗಲಿರುವ ತಮಿಳು ಸಿನಿಮಾ TN 2026 – ತಂಗೈ ನಚ್ಚಥಿರಂ ಟೀಸರ್ ಏಪ್ರಿಲ್ 2ರಂದು ಬಿಡುಗಡೆಯಾದ ಬಳಿಕ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ನಟ Nataraj (Natti) ಅಭಿನಯಿಸಿರುವ “ಗೋಲ್ಡನ್ ಸ್ಟಾರ್ ಗುಲ್ಕಂದ್ ಕುಮಾರ್” ಎಂಬ ಪಾತ್ರ ರಾಜಕೀಯಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಟೀಸರ್ ವೈರಲ್ ಆದ ತಕ್ಷಣ, Tamilaga Vettri Kazhagam (ಟಿವಿಕೆ) ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ Vijay ಅವರನ್ನು ಗುರಿಯಾಗಿಸಿಕೊಂಡು ಟೀಸರ್ ರೂಪಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

ಟೀಸರ್‌ನಲ್ಲಿ ಗುಲ್ಕಂದ್ ಕುಮಾರ್ ಪಾತ್ರವು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ, ವಿಜಯ್ ಅವರಂತೆಯೇ ‘ಸಾಲ್ಟ್ ಅಂಡ್ ಪೆಪ್ಪರ್’ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಅವರ ನಡಿಗೆ ಮತ್ತು ಜನರತ್ತ ಕೈ ಬೀಸುವ ಶೈಲಿಯನ್ನು ಅನುಕರಿಸಿರುವುದು ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ನಟ Redin Kingsley ಅವರ ಪಾತ್ರವೊಂದು ವೇದಿಕೆಯಲ್ಲಿ “ಹೇ ಮೂವಿ-ಬಾಯ್…” ಎಂದು ಗೇಲಿ ಮಾಡುವ ಸಂಭಾಷಣೆ ಕೂಡ ಟೀಕೆಗೆ ಗುರಿಯಾಗಿದೆ.

ಟೀಸರ್ ಕೊನೆಯಲ್ಲಿ ಕೇಳಿಬರುವ “ಓಂ ಶಕ್ತಿ ಪರಾಶಕ್ತಿ” ಘೋಷಣೆ ಕೂಡ ವಿಜಯ್ ಇತ್ತೀಚೆಗೆ ರಾಜಕೀಯ ವೇದಿಕೆಯಲ್ಲಿ ಬಳಸಿದ ನುಡಿಗಟ್ಟನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ನಾಯಕ Aadhav Arjun, “ಇದು ವಿಜಯ್ ವರ್ಚಸ್ಸಿಗೆ ಧಕ್ಕೆ ತರಲು Dravida Munnetra Kazhagam (ಡಿಎಂಕೆ) ಮತ್ತು ಬಿಜೆಪಿ ಜಂಟಿಯಾಗಿ ನಡೆಸಿದ ಪಿತೂರಿ” ಎಂದು ಆರೋಪಿಸಿದ್ದಾರೆ. ಜನರು ಇಂತಹ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

Umapathy Ramaiah ನಿರ್ದೇಶನದ ಈ ಚಿತ್ರದಲ್ಲಿ Thambi Ramaiah, M. S. Bhaskar, Ilavarasu, Yashika Aannand ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಏಪ್ರಿಲ್ 10ರಂದು ಬಿಡುಗಡೆಯಾಗಲಿರುವ ಈ ಚಿತ್ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

Trending