Connect with us

ಚುನಾವಣೆ

ಒಳಪೆಟ್ಟಿನ ಆತಂಕವಿಲ್ಲ, 5 ಲಕ್ಷ ಲೀಡ್​ನಲ್ಲಿ ಗೆಲ್ಲುತ್ತೇನೆ : ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ

Published

on

ಬೆಂಗಳೂರು: ಮೂರನೇ ಬಾರಿಗೆ ಲೋಕಸಭೆ ಪ್ರವೇಶಕ್ಕೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಕಳೆದ ಎರಡು ಸಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು.

ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದರು. ನಂತರ 10.00 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿದ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರಾಜು ಹಾಗೂ ಜೆಡಿಎಸ್ ನಾಯಕ ಜವರಾಯಿಗೌಡ ಜೊತೆ ಶೋಭಾ ಕರಂದ್ಲಾಜೆ ಆಗಮಿಸಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ”ನಮ್ಮ ಕ್ಷೇತ್ರದಲ್ಲಿ 32 ಲಕ್ಷ ಮತದಾರರಿದ್ದಾರೆ, 3335 ಬೂತ್ ಇವೆ, ಇಷ್ಟು ದೊಡ್ಡ ಕ್ಷೇತ್ರದಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸದಾನಂದಗೌಡರು ದೊಡ್ಡ ಅಂತರದಿಂದ ಗೆದ್ದಿದ್ದರು. ಈಗ ಬೈರತಿ ಬಸವರಾಜ್, ಗೋಪಾಲಯ್ಯ ಅವರಂತಹ ನಾಯಕರ ಆಗಮನವು ನಮಗೆ ಹೆಚ್ಚಿನ ಶಕ್ತಿ ನೀಡಿದೆ. ಜೆಡಿಎಸ್ ಪಕ್ಷವು ಎನ್​ಡಿಎಗೆ ಸೇರಿರುವುದು ನಮ್ಮ ಬಲ ಹೆಚ್ಚಿಸಿದೆ. ಮೋದಿಯನ್ನು ಮತ್ತೆ ಪ್ರಧಾನಿಯಾಗಿ ನೋಡಲು ಜನತೆ ಬಯಸಿದ್ದಾರೆ. ಮನೆ ಮನೆಗೆ ಹೋಗಿ ಮೋದಿ ಸಾಧನೆ ಜನತೆಗೆ ತಿಳಿಸಬೇಕು, ಮತದಾನದ ಪ್ರಮಾಣ ಹೆಚ್ಚಿಸಬೇಕು ಇದು ನಮ್ಮ ಗುರಿ” ಎಂದರು.

ಸದಾನಂದಗೌಡರು ನಮ್ಮ ಜೊತೆ ಎಲ್ಲಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಪಕ್ಷದಿಂದ ಚಾಮರಾಜನಗರದ ನಿಯೋಜನೆ ಮಾಡಿದ್ದಾರೆ. ಹಾಗಾಗಿ, ಅವರು ಅಲ್ಲಿ ಹೋಗಿದ್ದಾರೆ. ಎಸ್.ಟಿ. ಸೋಮಶೇಖರ್ ನಿರ್ಧಾರ ಇನ್ನೂ ತಿಳಿಸಿಲ್ಲ. ಅವರು ಬಿಜೆಪಿ ಶಾಸಕರು, ಹಾಗಾಗಿ ಬಿಜೆಪಿಗೆ ಕೆಲಸ ಮಾಡಬೇಕು ಎಂದು ಕೇಳುತ್ತೇನೆ. ಮನಸ್ಸು, ದೇಹ ಒಂದೇ ಕಡೆ ಇರಿಸಿಕೊಂಡು ಕೆಲಸ ಮಾಡಿ ಎನ್ನುತ್ತೇನೆ” ಎಂದು ಹೇಳಿದರು.

”ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹಾಗಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ. ನಮ್ಮ ಶಾಸಕರಿಗೆ ಅನುದಾನ ನೀಡ್ತಿಲ್ಲ, ಅವರ ಶಾಸಕರಿಗೂ ಸರಿಯಾಗಿ ಅನುದಾನ ಸಿಕ್ಕಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಪ್ರಮುಖ ನಾಯಕರ ಗೈರು: ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಯಾವ ಯಾವ ನಾಯಕರು ಹಾಜರಿರಬೇಕು ಎನ್ನುವ ನಿರ್ಧಾರವಾಗಿದ್ದು, ಮುಖಂಡರನ್ನು ಹಂಚಿಕೆ ಮಾಡಲಾಗಿದೆ. ಅದರಂತ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಸುವ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಮಾಜಿ ಸಚಿವ ಬೈರತಿ ಬಸವರಾಜ್, ಚಲವಾದಿ ನಾರಾಯಣಸ್ವಾಮಿ ಅವರು ಹಾಜರಿರುವಂತೆ ಪಕ್ಷ ಸೂಚಿಸಿತ್ತು. ಆದರೆ, ಇದರಲ್ಲಿ ಅಶೋಕ್ ಮತ್ತು ಅಶ್ವತ್ಥನಾರಾಯಣ ಆಗಮಿಸಲಿಲ್ಲ, ಅವರ ಬದಲು ಬೈರತಿ ಬಸವರಾಜ್ ಜೊತೆ ಗೋಪಾಲಯ್ಯ, ಮುನಿರಾಜು, ಜವರಾಯಿಗೌಡ ಆಗಮಿಸಿ ಸಾಥ್​ ನೀಡಿದರು. ಸದಾನಂದಗೌಡರಿಗೆ ಚಾಮರಾಜನಗರಕ್ಕೆ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಅವರು ಅಲ್ಲಿಗೆ ಹೋಗಿದ್ದರಿಂದ ಇಂದಿನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ್ದ ಶೋಭಾ ಕರಂದ್ಲಾಜೆ, “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ನನಗೆ ಒಳಪೆಟ್ಟಿನ ಯಾವುದೇ ಆತಂಕವಿಲ್ಲ. ಎಲ್ಲ ನಾಯಕರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಮತ್ತೊಮ್ಮೆ ಮೋದಿಯನ್ನು ದೇಶಕ್ಕಾಗಿ ಜನತೆ ಬಯಸುತ್ತಿದ್ದಾರೆ. ನನಗೆ 5 ಲಕ್ಷಕ್ಕೂ ಅಧಿಕ ಲೀಡ್​ನಿಂದ ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಒಳ್ಳೆಯ ಸಹಕಾರ ಸಿಗುತ್ತಿದೆ. ಒಳಪೆಟ್ಟಿನ ಆತಂಕ ಖಂಡಿತವಾಗಿಯೂ ಇಲ್ಲ. ಎಲ್ಲಾ ಶಾಸಕರು ಪ್ರವಾಸ ಮಾಡುತ್ತಿದ್ದು, ಅವರೇ ನನ್ನನ್ನು ಕರೆದು ಸನ್ಮಾನ ಮಾಡುತ್ತಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ” ಎಂದಿದ್ದರು.

ಚುನಾವಣೆ

TN 2026 ಟೀಸರ್‌ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ

Published

on

By

ಚೆನ್ನೈ: ಮುಂದಿನ ವಾರ ಬಿಡುಗಡೆಯಾಗಲಿರುವ ತಮಿಳು ಸಿನಿಮಾ TN 2026 – ತಂಗೈ ನಚ್ಚಥಿರಂ ಟೀಸರ್ ಏಪ್ರಿಲ್ 2ರಂದು ಬಿಡುಗಡೆಯಾದ ಬಳಿಕ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ನಟ Nataraj (Natti) ಅಭಿನಯಿಸಿರುವ “ಗೋಲ್ಡನ್ ಸ್ಟಾರ್ ಗುಲ್ಕಂದ್ ಕುಮಾರ್” ಎಂಬ ಪಾತ್ರ ರಾಜಕೀಯಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಟೀಸರ್ ವೈರಲ್ ಆದ ತಕ್ಷಣ, Tamilaga Vettri Kazhagam (ಟಿವಿಕೆ) ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ Vijay ಅವರನ್ನು ಗುರಿಯಾಗಿಸಿಕೊಂಡು ಟೀಸರ್ ರೂಪಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

ಟೀಸರ್‌ನಲ್ಲಿ ಗುಲ್ಕಂದ್ ಕುಮಾರ್ ಪಾತ್ರವು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ, ವಿಜಯ್ ಅವರಂತೆಯೇ ‘ಸಾಲ್ಟ್ ಅಂಡ್ ಪೆಪ್ಪರ್’ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಅವರ ನಡಿಗೆ ಮತ್ತು ಜನರತ್ತ ಕೈ ಬೀಸುವ ಶೈಲಿಯನ್ನು ಅನುಕರಿಸಿರುವುದು ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ನಟ Redin Kingsley ಅವರ ಪಾತ್ರವೊಂದು ವೇದಿಕೆಯಲ್ಲಿ “ಹೇ ಮೂವಿ-ಬಾಯ್…” ಎಂದು ಗೇಲಿ ಮಾಡುವ ಸಂಭಾಷಣೆ ಕೂಡ ಟೀಕೆಗೆ ಗುರಿಯಾಗಿದೆ.

ಟೀಸರ್ ಕೊನೆಯಲ್ಲಿ ಕೇಳಿಬರುವ “ಓಂ ಶಕ್ತಿ ಪರಾಶಕ್ತಿ” ಘೋಷಣೆ ಕೂಡ ವಿಜಯ್ ಇತ್ತೀಚೆಗೆ ರಾಜಕೀಯ ವೇದಿಕೆಯಲ್ಲಿ ಬಳಸಿದ ನುಡಿಗಟ್ಟನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ನಾಯಕ Aadhav Arjun, “ಇದು ವಿಜಯ್ ವರ್ಚಸ್ಸಿಗೆ ಧಕ್ಕೆ ತರಲು Dravida Munnetra Kazhagam (ಡಿಎಂಕೆ) ಮತ್ತು ಬಿಜೆಪಿ ಜಂಟಿಯಾಗಿ ನಡೆಸಿದ ಪಿತೂರಿ” ಎಂದು ಆರೋಪಿಸಿದ್ದಾರೆ. ಜನರು ಇಂತಹ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

Umapathy Ramaiah ನಿರ್ದೇಶನದ ಈ ಚಿತ್ರದಲ್ಲಿ Thambi Ramaiah, M. S. Bhaskar, Ilavarasu, Yashika Aannand ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಏಪ್ರಿಲ್ 10ರಂದು ಬಿಡುಗಡೆಯಾಗಲಿರುವ ಈ ಚಿತ್ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

ಚುನಾವಣೆ

“ನಾಲ್ಕು ಮದುವೆಗೆ ಬ್ರೇಕ್” – ಶಾ ಘೋಷಣೆ ಸಂಚಲನ

Published

on

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯ ಕಾವು ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಗೃಹ ಸಚಿವ Amit Shah ಮಹತ್ವದ ಘೋಷಣೆ ಮಾಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಗೋಲ್ಪಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಶಾ, “ಅಕ್ರಮ ನುಸುಳುಕೋರರು ನಾಲ್ಕು ಮದುವೆಯಾಗುವುದನ್ನು ತಡೆಯಲು ಯುಸಿಸಿ ಅಗತ್ಯ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು. ಪ್ರಧಾನಿ Narendra Modi ಮತ್ತು ಅಸ್ಸಾಂ ಮುಖ್ಯಮಂತ್ರಿ Himanta Biswa Sarma ಬುಡಕಟ್ಟು ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿದ್ದಾರೆ ಎಂದರು.

ಬುಡಕಟ್ಟು ಪ್ರದೇಶಗಳಲ್ಲಿ ಯುಸಿಸಿ ಜಾರಿಯಾಗುವುದಿಲ್ಲ ಎಂಬುದನ್ನು ಶಾ ಸ್ಪಷ್ಟಪಡಿಸಿ, ಕಾಂಗ್ರೆಸ್ ಹರಡುತ್ತಿರುವ ಗಾಳಿಸುದ್ದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಬುಡಕಟ್ಟು ಪ್ರದೇಶಗಳನ್ನು ಯುಸಿಸಿಯಿಂದ ಹೊರಗಿಡಲಾಗುತ್ತದೆ” ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “70 ವರ್ಷ ಆಡಳಿತ ನಡೆಸಿದರೂ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿಯಾಗಿಸಲು ಸಾಧ್ಯವಾಗಲಿಲ್ಲ. ಆದರೆ ಮೋದಿ ನಾಯಕತ್ವದಲ್ಲಿ ಅದು ಸಾಧ್ಯವಾಯಿತು” ಎಂದು ಟೀಕಿಸಿದರು.

Assam ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಎರಡು ಅವಧಿಗೆ ಮುಖ್ಯಮಂತ್ರಿ ಆಗಿರುವ ಹಿಮಂತ ಬಿಸ್ವಾ ಶರ್ಮಾ ಮತ್ತೆ ಅಧಿಕಾರಕ್ಕೇರಲು ಯತ್ನಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ಮರುಪಡೆಯಲು ಹೋರಾಟ ನಡೆಸುತ್ತಿದೆ.

ಒಟ್ಟಿನಲ್ಲಿ, ಯುಸಿಸಿ ವಿಚಾರ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿದ್ದು, ಅಸ್ಸಾಂ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Continue Reading

ಚುನಾವಣೆ

‘ಸಿಂಗಂ’ ಅಣ್ಣಾಮಲೈ ನಡೆಗೆ ಅಭಿಮಾನಿಗಳ ಸಲಾಂ

Published

on

By

ಕಣ್ಣೂರು: ತಮಿಳುನಾಡಿನಲ್ಲಿ ಬಿಜೆಪಿ ಪ್ರಚಾರಕ್ಕೆ ಸಂಪೂರ್ಣ ಶಕ್ತಿ ಹಾಕುವುದಾಗಿ K. Annamalai ಘೋಷಿಸಿದ್ದು, ಅವರ ಪಕ್ಷನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಹೈಕಮಾಂಡ್ ನೀಡಿದ ಜವಾಬ್ದಾರಿಯಂತೆ ರಾಜ್ಯದ ಮೂಲೆಮೂಲೆಗೂ ತೆರಳಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, “ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ನನ್ನ ಕರ್ತವ್ಯ. 7ರಿಂದ 23ರವರೆಗೆ ತಮಿಳುನಾಡಿನಾದ್ಯಂತ ಪ್ರಚಾರ ನಡೆಸುತ್ತೇನೆ” ಎಂದು ಸ್ಪಷ್ಟಪಡಿಸಿದರು. ಪುದುಚೇರಿ ಮತ್ತು ಕೇರಳದಲ್ಲಿಯೂ ಪ್ರಚಾರದ ಹೊಣೆಗಾರಿಕೆ ನೀಡಲಾಗಿದೆ ಎಂದೂ ಹೇಳಿದರು.

ಟಿಕೆಟ್ ಸಿಗದಿದ್ದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೇ ಪಕ್ಷದ ಪರವಾಗಿ ನಿಂತಿರುವ ಅಣ್ಣಾಮಲೈ ನಡೆ, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. Bharatiya Janata Party ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರದಿದ್ದರೂ, ಪ್ರಚಾರಕ್ಕೆ ಸಜ್ಜಾಗಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ.

ಅಣ್ಣಾಮಲೈ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಅವರನ್ನು “ಸಿಂಗಂ” ಎಂದು ಕೊಂಡಾಡುತ್ತಿದ್ದು, ಪಕ್ಷನಿಷ್ಠೆ ಮತ್ತು ಶಿಸ್ತಿನ ಉದಾಹರಣೆಯಾಗಿ ಗುರುತಿಸಿದ್ದಾರೆ. ಇತ್ತೀಚಿನ ರಾಜಕೀಯದಲ್ಲಿ ಟಿಕೆಟ್ ಸಿಗದಿದ್ದರೆ ಪಕ್ಷಾಂತರ ಮಾಡುವ ಪ್ರವೃತ್ತಿ ಹೆಚ್ಚಿರುವ ನಡುವೆಯೇ, ಅವರ ನಿಲುವು ವಿಭಿನ್ನವಾಗಿ ಕಾಣುತ್ತಿದೆ.

ಒಟ್ಟಿನಲ್ಲಿ, ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರೂ ಪಕ್ಷವನ್ನು ಬಲಪಡಿಸುವತ್ತ ಅಣ್ಣಾಮಲೈ ಗಮನ ಹರಿಸಿರುವುದು ತಮಿಳುನಾಡಿನಲ್ಲಿ ಬಿಜೆಪಿ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Continue Reading

Trending