ದೇಶ
200 ಕೋಟಿ ಆಸ್ತಿ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಉದ್ಯಮಿ!

ಗುಜರಾತ್ : ಉದ್ಯಮಿಯೊಬ್ಬರು ಸನ್ಯಾಸತ್ವ ಸ್ವೀಕರಿಸಲು ತಮ್ಮ 200 ಕೋಟಿ ರೂಪಾಯಿ ಮೌಲ್ಯದ ಗಳಿಕೆಯನ್ನು ದಾನ ಮಾಡಲು ನಿರ್ಧರಿಸಿದ್ದಾರೆ, ಗುಜರಾತ್‌ನ ಸಬರ್ಕಾಂಥ ಪ್ರದೇಶದ ಉದ್ಯಮಿ ಭವೇಶ್ ಭಾಯ್ ಮತ್ತು ಅವರ ಪತ್ನಿ ತಮ್ಮ ಎಲ್ಲಾ ಆಸ್ತಿ-ಪಾಸ್ತಿಗಳನ್ನು ದಾನ ಮಾಡಲು ಮುಂದಾಗಿದ್ದಾರೆ, ತಮ್ಮ ಎಲ್ಲ ಸಂಪತ್ತುಗಳನ್ನು ತ್ಯಜಿಸಿ ಜೈನ ಧರ್ಮದ ಪ್ರಕಾರ ದೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ,
ಸುಸ್ಧಿರ ಕುಟುಂಬದಿAದ ಬಂದಿರುವ ಭವೇಶ್ ಬಾಯ್ ಬಾಲ್ಯದಿಂದಲೂ ಸುಖಕರ ಜೀವನ ನಡೆಸಿದವರು, ಗುಜರಾತ್‌ನ ಹಿಮ್ಮತನಗರದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಬ್ಯುಸಿನೆಸ್ ಕಡೆ ಹೆಚ್ಚಿನ ಒಲವಿತ್ತು ಇದೀಗ ಎಲ್ಲ ಕೆಲಸಗಳಿಂದ ದೂರ ಸರಿದು ಜೈನ ಧರ್ಮದಲ್ಲಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ,
ಈ ಹಿಂದೆ ಕುಟುಂಬದ ಅನೇಕ ಸದಸ್ಯರು ಜೈನ್ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದರು, 2022ರಲ್ಲಿ ಇವರಿಬ್ಬರ ಮಕ್ಕಳು ಕೂಡ ಜೈನ್ ದೀಕ್ಷೆ ಪಡೆದುಕೊಂಡಿದ್ದಾರೆ, 16 ವರ್ಷದ ಪುತ್ರ ಹಾಗೂ 19 ವರ್ಷದ ಮಗಳು ಜೈನ ದೀಕ್ಷೆ ಪಡೆದುಕೊಂಡಿದ್ದಾರೆ, ಇದೀಗ ಮಕ್ಕಳಂತೆ ತಾವೂ ಕೂಡ ಅದೇ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ,