ಚುನಾವಣೆ

ಏಕ್ ಸಾಲ್ ಕಾ ಪಿಎಂ ಇದು ಇಂಡಿಯಾ ಮೈತ್ರಿಕೂಟದ ಅಧಿಕಾರ ಹಂಚಿಕೆ ಸೂತ್ರ

ಹೊಸದಿಲ್ಲಿ: ಬಿಜೆಪಿ ಸೋಲಿಸಲು ಮೈತ್ರಿ ಮಾಡಿಕೊಂಡಿರುವ ಇಂಡಿಯಾ ಒಕ್ಕೂಟ ಚುನಾವನೆ ಬಳಿಕ ಅಧಿಕಾರದ ಹಂಚಿಕೆಯ ಬಗ್ಗೆಯೂ ಒಂದು ತೀರ್ಮಾನಕ್ಕೆ ಬಂದಿದೆ,
ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಒಂದು ವೇಳೆ ಇಂಡಿಯಾ ಮೈತ್ರಿ ಕೂಟ ಗೆದ್ದರೆ ಪ್ರಧಾನ ಮಂತ್ರಿ ಹುದ್ದೆ ಯಾರಿಗೆ? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊAಡಿದೆ, ಲಭ್ಯ ಇರುವ ಮೂಲಗಳ ಪ್ರಕಾರ, ಒಂದೊAದು ವರ್ಷ ಪಿಎಂ ಹುದ್ದೆ ಹಂಚಿಕೆಯಾಗಲಿದೆಯAತೆ, ಐದು ವರ್ಷದ ಅವಧಿಯಲ್ಲಿ ಮೈತ್ರಿ ಪಕ್ಷಗಳು ಪಿಎಂ ಹುದ್ದೆಯನ್ನು ಈ ರೀತಿ ನಿಭಾಯಿಸಲಿವೆ ಎಂದು ಮೂಲಗಳು ತಿಳಿಸಿವೆ,
ಆರಂಭದಲ್ಲಿ ಇಂಡಿಯಾ ಮೈತ್ರಿ ಕೂಟದಲ್ಲಿ ಒಗ್ಗಟ್ಟು ಇತ್ತು, ನಂತರ ನಿತೀಶ್ ಕುಮಾರ್ ಹಾಗೂ ಮಮತಾ ಬ್ಯಾನರ್ಜಿ ಅವರು ಸೀಟು ಹಂಚಿಕೆಯ ವಿಚಾರವಾಗಿ ಮುನಿಸಿಕೊಂಡರು, ನಿತೀಶ್ ಕುಮಾರ್ ಮೈತ್ರಿ ತೊರೆದು ಬಿಜೆಪಿ ಜೊತೆ ಕೈಜೋಡಿಸಿದರು, ಇತ್ತ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರವನ್ನೂ ಮಮತಾ ಬಿಟ್ಟು ಕೊಡಲಿಲ್ಲ, ಪ್ರಾರಂಭದಲ್ಲಿ ಮೈತ್ರಿ ಕೂಟದಿಂದ ಪಿಎಂ ಹುದ್ದೆಗೆ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ಘೋಷಣೆಯಾಗಿತ್ತು, ಇದಕ್ಕೆ ನಿತೀಶ್ ಕುಮಾರ್ ಹಾಗೂ ಮಮತಾ ಅವರು ಸಮ್ಮತಿ ತೋರಿದ್ದರು,

Trending

Exit mobile version