ದೇಶ
ರಾಮಲಲ್ಲಾನ ದರ್ಶನ ಪಡೆಯಲು ಬರುತ್ತಿದ್ದಾರೆ ಪಾಕಿಸ್ತಾನಿ ಭಕ್ತರು

ಅಯೋಧ್ಯೆ: ಅಯೋಧ್ಯೆಯಲ್ಲಿ ವಿರಾಜಮಾನನಾಗಿರು ರಾಮಲಲ್ಲಾನ ದರ್ಶನ ಪಡೆಯಲು ಶುಕ್ರವಾರ ಪಾಕಿಸ್ತಾನದಿಂದ 200 ಮಂದಿ ಸಿಂಧಿ ಸಮುದಾಯದ ಭಕ್ತರು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ,
ಮಾಧ್ಯಮ ವರದಿಗಳ ಪ್ರಕಾರ ಪಾಕಿಸ್ತಾನ ಸಿಂಧ್ ಪ್ರಾಂತ್ಯದ ತಂಡವು ಭಾರತದಲ್ಲಿ ಒಂದು ತಿಂಗಳ ಧಾರ್ಮಿಕ ಪ್ರವಾಸದಲ್ಲಿದೆ, ಇಂದು ಈ ತಂಡ ಪ್ರಯಾಗರಾಜ್ನಿಂದ ರಸ್ತೆ ಮೂಲಕ ಅಯೋಧ್ಯೆಗೆ ಪ್ರಯಾಣಿಸಲಿದೆ, ಈ ತಂಡದಲ್ಲಿ ಹೆಚ್ಚುವರಿಯಾಗಿ ಭಾರತದಿಂದ 150 ಸಿಂಧಿ ಸಮುದಾಯದ ಸದಸ್ಯರ ನಿಯೋಗವೂ ಆಗಮಿಸಲಿದೆ,
ಪಾಕಿಸ್ತಾನದಿಂದ ಆಗಮಿಸುತ್ತಿರುವ ಪ್ರವಾಸಿಗರನ್ನು ಸ್ವಾಗತಿಸಲು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ, ಶ್ರೀರಾಮ ಜನ್ಮಭೂವಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ರಾಮ್ ಕಿ ಪೈಡಿಯಲ್ಲಿ ನಿಯೋಗವನ್ನು ಸ್ವಾಗತಿಸಲಿದ್ದಾರೆ, ಅಯೋಧ್ಯೆಗೆ ಭೇಟಿ ನೀಡಿದ ನಂತರ ನಿಯೋಗವು ಶುಕ್ರವಾರ ರಾತ್ರಿ ಲಕ್ನೋಗೆ ತೆರಳಲಿದ್ದು ಅಲ್ಲಿಂದ ಅವರು ರಾಯ್ಪುರಕ್ಕೆ ತೆರಳಲಿದ್ದಾರೆ,