ದೇಶ
ರಾಜ್ಯದಲ್ಲಿ ಮಾರಾಟವಾಗೋ ಪ್ರೋಟೀನ್ ಪೌಡರ್ಗೆ ಕೇಂದ್ರದ ಅನುಮತಿ ಕಡ್ಡಾಯ!

ನವದೆಹಲಿ: ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ನ್ಯಾಷನಲ್ ಆಫ್ ನ್ಯೂಟ್ರಿಷನ್ ಮಾಡಿದ್ದ ವರದಿಯಲ್ಲಿ ಪ್ರೊಟೀನ್ ಸೇವನೆಯಿಂದಾಗುವ ತೊಂದರೆಗಳನ್ನು ವರದಿ ಮಾಡಿತ್ತು ಇದರ ಬೆನ್ನಲ್ಲೇ ಪ್ರೊಟೀನ್ ಫುಡ್ ಲೈಸನ್ಸ್ಗಳನ್ನು ನವೀಕರಣಕ್ಕೆ ಸೂಚನೆ ನೀಡಿದೆ,
ಇತ್ತೀಚೆಗಿನ ದಿನಗಳಲ್ಲಿ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಸ್ಯಾಯುಗಳ ಬೆಳವಣಿಗೆಯನ್ನು ಬೆಂಬಲಿಸಲು ಪ್ರೊಟೀನ್ಗಳನ್ನು ಅಧಿಕವಾಗಿ ಸೇವನೆ ಮಾಡಲಾಗುತ್ತಿದೆ, ಇದಲ್ಲದೆ ಹೆಚ್ಚಿನ ಪ್ರಮಾಣದ ಪ್ರೊಟೀನ್ನ ದೀರ್ಘಾವಧಿಯ ಸೇವನೆ ಮಾಡುವುದರಿಂದ ಮೂಳೆಗಳು ಸವೆತ ಮತ್ತು ಮೂತ್ರಪಿಂಡಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ಮಾಡಿದೆ,
ಭಾರತದಲ್ಲಿ ಸುಮಾರು 36 ಕಂಪನಿಗಳು ಪ್ರೊಟೀನ್ ಪುಡಿಗಳನ್ನು ತಯಾರಿಸಲಾಗುತ್ತಿದೆ ಅದರಲ್ಲಿ ಶೇಕಡಾ 70 ರಷ್ಟು ಕಂಪನಿ ಬೇರೆ ಲೇಬಲ್ಗಳನ್ನು ಹಾಕಲಾಗುತ್ತಿದ್ದು ಶೇಕಡ 14 ರಷ್ಟು ಪ್ರೊಟೀನ್ ಕಂಪನಿಗಳು ಕೆಮಿಕಲ್ ಹಾಕಿ ತಯಾರಿಕೆ ಮಾಡಲಾಗುತ್ತಿದೆ, ಇನ್ನೂ ಉಳಿದ ಶೇಕಡ 8 ರಷ್ಟು ಕಂಪನಿ ಕೀಟನಾಶಕಗಳನ್ನು ಹಾಕಿ ತಯಾರಿ ಮಾಡಲಾಗುತ್ತಿದೆ ಎಂದು ವರದಿಯಾಗಿದೆ,
ಈ ಕಾರಣದಿಂದ ಪ್ರೊಟೀನ್ಗಳ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಆಹಾರ ಮತ್ತು ಗುಣಮಟ್ಟ ಸುರಕ್ಷತೆ ಇಲಾಖೆ ರಾಜ್ಯ ಪರವಾನಿಗೆಯನ್ನು ಪಡೆದಿರುವ ಉದ್ದಿಮೆದಾರರಿಗೆ ಕೇಂದ್ರ ಪರವಾನಿಗೆಯನ್ನಾಗಿ ಬದಲಾಯಿಸಲು ಸೂಚನೆ ನೀಡಿದೆ