ದೇಶ
3 ವರ್ಷದ ಮಗುವಿನ ವಿರುದ್ಧ ವಿದ್ಯುತ್ ಕಳ್ಳತನ ಕೇಸ್!

ಇಸ್ಲಾಮಾಬಾದ್: ಪಾಕಿಸ್ಧಾನದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳೆಕಿಗೆ ಬಂದಿದೆ, ಮೂರು ವರ್ಷದ ಮಗುವಿನ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣವನ್ನು ದಾಖಲಿಸಿರುವ ಘಟನೆ ಖೈಬರ್ ಷಖ್ತುಂಖ್ವಾ ಪ್ರಾಂತ್ಯ ನಡೆದಿದೆ,
ಪೇಶಾವರ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಮತ್ತು ನೀರು ಹಾಗೂ ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ ದೂರುಗಳ ಮೇರೆಗೆ ವಿದ್ಯುತ್ ಕಳ್ಳತನ ಆರೋಪ ಮೇಲೆ ಅಪ್ರಾಪ್ತ ಬಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಮಗುವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ ನಂತರ ನ್ಯಾಯಾಧೀಶರು ಪ್ರಕರಣವನ್ನು ವಜಾಗೊಳಿಸಿದ್ದಾರೆ,
ಈ ಪ್ರಕರಣದ ಮೂಲಕ ಅಪಾದಿತ ವಿದ್ಯುತ್ ಕಳ್ಳತನದಿಂದಾಗಿ ರಾಷ್ಟ್ರೀಯ ಖಜಾನೆಗೆ 438 ಶತಕೋಟಿ(ಪಾಕ್ ರೂಪಾಯಿ) ನಷ್ಟ ಅನುಭವಿಸಿರುವ ಅಘಾತಕಾರಿ ಸಂಗತಿ ಬಹಿರಂಗವಾಗಿದೆ, ಇನ್ನೂ ಸರ್ಕಾರಿ ಇಲಾಖೆಗಳು ಸರಿಯಾಗಿ ಬಿಲ್ ಪಾವತಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ,