ಬಿಬಿಎಂಪಿ
ವಾಹನ ನೀತಿ 2.0 ಶೀಘ್ರಗತಿಯಲ್ಲಿ ಜಾರಿಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಬೆಂಗಳೂರಿನಲ್ಲಿ ವಾಹನ ನಿಲುಗಡೆ ನೀತಿ 2.0 ಅನ್ನು ಪರಿಣಾಮಕಾರಿಯಾಗಿ ಸಾಧ್ಯವಾದಷ್ಟು ಬೇಗ ಜಾರಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.ವಸತಿ ಪ್ರದೇಶದಲ್ಲಿಅಕ್ರಮವಾಗಿ ವಾಹನ ನಿಲುಗಡೆ ಮಾಡುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ನಾಗಭೂಷಣರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ. ಪಾರ್ಕಿಂಗ್ ನೀತಿಯನ್ನು ಹೇಗೆ ಅನುಷ್ಠಾನಗೊಳಿಸಲಾಗುವುದು ಎಂಬ ವಿಧಾನದ ಬಗ್ಗೆ ವಿಸ್ತೃತವಾದ ಯೋಜನಾ ವರದಿಯನ್ನು ಜೂನ್ 20ರೊಳಗೆ ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.
2020ರ ಡಿಸೆಂಬರ್ 2ರಿಂದಲೂ ಪಾರ್ಕಿಂಗ್ ನೀತಿ ಚಾಲ್ತಿಯಲ್ಲಿದೆ. ಅದರಂತೆ ಬಿಬಿಎಂಪಿ ವಾಹನ ನಿಲುಗಡೆ ಪ್ರದೇಶ, ವಾಹನ ನಿಲುಗಡೆ ಶುಲ್ಕ, ಬೀದಿ ಬದಿ ಪಾರ್ಕಿಂಗ್ ವ್ಯವಸ್ಥೆ ಉತ್ತಮಗೊಳಿಸುವುದು, ಪೈಲಟ್ ಪರ್ಮಿಟ್ ವ್ಯವಸ್ಥೆ ಆರಂಭಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಈ ಕೆಲಸವನ್ನು ಬಿಬಿಎಂಪಿ ಮಾಡಿಲ್ಲ. ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ನಿಷ್ಕ್ರಿಯತೆಯಿಂದಾಗಿ ಸಾರ್ವಜನಿಕರು ಅನಗತ್ಯ ತೊಂದರೆ ಎದುರಿಸುವಂತಾಗಿದೆ. ಪ್ರಕರಣದಲ್ಲಿ ಅರ್ಜಿದಾರರೂ ಸಹ ಅಂತಹ ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆದೇಶಿಸಿದೆ. ಬಿಲ್ಡಿಂಗ್ ಬೈಲಾ ಪ್ರಕಾರ ನಿರ್ಮಾಣವಾಗುವ ಪ್ರತಿಯೊಂದು ವಸತಿ ಸಮುಚ್ಛಯದಲ್ಲೂ ಪಾರ್ಕಿಂಗ್ ಜಾಗ ಒದಗಿಸಬೇಕಾಗುತ್ತದೆ. ಬೆಂಗಳೂರಿನ ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ ಮಾಮೂಲಾಗಿದೆ. ಅದೇ ಕಾರಣಕ್ಕೆ ಕೆಲವು ಖಾಲಿ ಇರುವ ನಿವೇಶನದಾರರು ಪಾರ್ಕಿಂಗ್‌ಗೆ ಅವಕಾಶ ನೀಡುವ ವಿನೂತನ ಐಡಿಯಾ ಮಾಡಿಕೊಂಡು ಅದರಿಂದ ಹಣ ಮಾಡುತ್ತಿದ್ದಾರೆ. ಇಂತಹ ಕ್ರಮಗಳಿಗೆ ಬಿಬಿಎಂಪಿ ಕಡಿವಾಣ ಹಾಕಬೇಕು” ಎಂದ ನ್ಯಾಯಾಲಯ ಹೇಳಿದೆ.
ಚುನಾವಣೆ
ಪೆರಂಬೂರ್ ಕಣಕ್ಕೆ ನಟ ವಿಜಯ್ ಎಂಟ್ರಿ: ತಮಿಳುನಾಡು ರಾಜಕೀಯದಲ್ಲಿ ಸಂಚಲನ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ನಟ Vijay ನೇತೃತ್ವದ Tamilaga Vettri Kazhagam (TVK) ಪಕ್ಷದ ರಾಜಕೀಯ ಪ್ರವೇಶ ರಾಜ್ಯ ರಾಜಕೀಯ ಸಮೀಕರಣಗಳಲ್ಲಿ ಭಾರೀ ಬದಲಾವಣೆ ತಂದಿದೆ. ವಿಶೇಷವಾಗಿ, ವಿಜಯ್ ಅವರು ಪೆರಂಬೂರ್ ವಿಧಾನಸಭಾ ಕ್ಷೇತ್ರವನ್ನು ತಮ್ಮ ಚೊಚ್ಚಲ ಚುನಾವಣಾ ಕಣವಾಗಿ ಆರಿಸಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
Perambur ಕ್ಷೇತ್ರವು ಸಾಂಪ್ರದಾಯಿಕವಾಗಿ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದರೂ, ಈ ಬಾರಿ ವಿಜಯ್ ಪ್ರವೇಶದಿಂದಾಗಿ ಹೈ-ಪ್ರೊಫೈಲ್ ಕಣವಾಗಿ ಪರಿಣಮಿಸಿದೆ. Dravida Munnetra Kazhagam (DMK) ಮತ್ತು All India Anna Dravida Munnetra Kazhagam (AIADMK) ಪಕ್ಷಗಳಿಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ.
ಈ ಕ್ಷೇತ್ರದಲ್ಲಿ ಡಿಎಂಕೆ ಒಂಬತ್ತು ಬಾರಿ ಗೆಲುವು ಸಾಧಿಸಿದ್ದು, ಸತ್ಯವಾಣಿ ಮುತ್ತು ಮತ್ತು ಪರಿಥಿ ಇಲಂವಝುತಿ ಅವರಂತಹ ನಾಯಕರಿಂದ ರಾಜಕೀಯ ಇತಿಹಾಸ ರೂಪುಗೊಂಡಿದೆ. 2016ರಲ್ಲಿ ಎಐಎಡಿಎಂಕೆ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರೂ, 2019ರ ಉಪಚುನಾವಣೆ ಮತ್ತು 2021ರ ಚುನಾವಣೆಯಲ್ಲಿ ಡಿಎಂಕೆ ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು.
ಸುಮಾರು 2.22 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪೆರಂಬೂರ್ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ. ಯುವಕರು ಮತ್ತು ಕಾರ್ಮಿಕ ವರ್ಗದ ಪ್ರಭಾವ ಹೆಚ್ಚಿರುವ ಈ ಪ್ರದೇಶದಲ್ಲಿ ಉದ್ಯೋಗ, ಹಣದುಬ್ಬರ ನಿಯಂತ್ರಣ, ವಸತಿ ಮತ್ತು ಮೂಲಸೌಕರ್ಯ ಪ್ರಮುಖ ಚುನಾವಣಾ ವಿಷಯಗಳಾಗಿವೆ.
ವಿಜಯ್ ಅವರ ಯುವಜನಪ್ರಿಯತೆ ಈ ಬಾರಿ ದ್ರಾವಿಡ ಪಕ್ಷಗಳ ದೀರ್ಘಕಾಲದ ಹಿಡಿತವನ್ನು ಸವಾಲು ಮಾಡಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪೆರಂಬೂರ್ ಕಣ ಇದೀಗ ಸಾಮಾನ್ಯ ಚುನಾವಣೆ ಮಾತ್ರವಲ್ಲ, ಹೊಸ ರಾಜಕೀಯ ಶಕ್ತಿಯ ಪರೀಕ್ಷೆಯಾಗಿ ಪರಿಣಮಿಸಿದೆ.
ದೇಶ
ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ: ಮಧುಮೇಹ, ರಕ್ತದೊತ್ತಡ ಪ್ರಕರಣ ಹೆಚ್ಚಳ
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿರುವುದು ಆರೋಗ್ಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಸ್ವಚ್ಛತಾ ಯೋಧರೆಂದು ಗುರುತಿಸಲಾದ ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಂಡಿದ್ದು, ನಿಯಮಿತ ಆರೋಗ್ಯ ತಪಾಸಣೆಗಳನ್ನು ನಡೆಸುತ್ತಿದೆ.
ದಕ್ಷಿಣ ಕಾರ್ಪೋರೇಷನ್ ವ್ಯಾಪ್ತಿಯ 25 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 49 ನಮ್ಮ ಕ್ಲಿನಿಕ್‌ಗಳಲ್ಲಿ ಬುಧವಾರ ಸಮೂಹ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
1,934 ಮಂದಿಗೆ ಆರೋಗ್ಯ ತಪಾಸಣೆ
ಒಟ್ಟು 1,934 ಪೌರಕಾರ್ಮಿಕರು ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 605 ಪುರುಷರು ಮತ್ತು 1,348 ಮಹಿಳೆಯರು ಸೇರಿದ್ದಾರೆ. ತಪಾಸಣಾ ಕಾರ್ಯಕ್ಕಾಗಿ 56 ವೈದ್ಯಾಧಿಕಾರಿಗಳು ಮತ್ತು 168 ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ತಪಾಸಣೆಯಲ್ಲಿ ಪತ್ತೆಯಾದ ಕಾಯಿಲೆಗಳು
ಆರೋಗ್ಯ ತಪಾಸಣೆಯಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳ ವಿವರ ಹೀಗಿದೆ:
- ಮಧುಮೇಹ: 256 ಪ್ರಕರಣ
- ಅಧಿಕ ರಕ್ತದೊತ್ತಡ: 254 ಪ್ರಕರಣ
- ರಕ್ತಹೀನತೆ: 67 ಪ್ರಕರಣ
- ದಂತ ಸಮಸ್ಯೆ: 57 ಪ್ರಕರಣ
- ಜ್ವರ: 43 ಪ್ರಕರಣ
- ಕಣ್ಣಿನ ಸಮಸ್ಯೆ: 39 ಪ್ರಕರಣ
- ಶ್ರವಣ ಸಮಸ್ಯೆ: 16 ಪ್ರಕರಣ
- ಹೃದಯ ಸಮಸ್ಯೆ: 4 ಪ್ರಕರಣ
- ಜನರಲ್ ಓಪಿಡಿ: 1,198
- ಪೌರಕಾರ್ಮಿಕರ ಆರೋಗ್ಯದ ಮೇಲೆ ವಿಶೇಷ ಗಮನ
- ಪೌರಕಾರ್ಮಿಕರು ನಗರ ಸ್ವಚ್ಛತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆ, ಅವರ ಆರೋಗ್ಯ ರಕ್ಷಣೆಗಾಗಿ ಪಾಲಿಕೆ ನಿರಂತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿದೆ. ಮಧುಮೇಹ ಮತ್ತು ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗುತ್ತಿದೆ.
ಬಿಬಿಎಂಪಿ
ಬಿಬಿಎಂಪಿ ಘನತ್ಯಾಜ್ಯ ಆಟೋ ಟಿಪ್ಪರ್‌ಗಳಿಗೆ ನೂತನ ಸಮಯ: ಈಗಿನಿಂದ ಬೆಳಿಗ್ಗೆ 5:30ಕ್ಕೆ ಸ್ಕ್ಯಾನಿಂಗ್ ಆರಂಭ
ಬೆಂಗಳೂರು: ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಧಾರ ಕೈಗೊಂಡಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ಸ್ಕ್ಯಾನಿಂಗ್) ಸಮಯವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಈ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.
ಈ ಮೊದಲು ಬೆಳಿಗ್ಗೆ 6:00 ರಿಂದ 7:30 ರವರೆಗೆ ನಡೆಯುತ್ತಿದ್ದ ಮಸ್ಟರಿಂಗ್ ಸಮಯವನ್ನು ಈಗ ಬೆಳಿಗ್ಗೆ 5:30 ರಿಂದ 6:30 ರವರೆಗೆ ಮುಂಚಿತಗೊಳಿಸಲಾಗಿದೆ.

🧹 ಬದಲಾವಣೆ ಉದ್ದೇಶ ಏನು?
- ನಿವಾಸಿಗಳು ತಮ್ಮ ತ್ಯಾಜ್ಯವನ್ನು ಕೆಲಸಕ್ಕೆ ಹೊರಡುವ ಮೊದಲು ನೀಡಲು ಅನುಕೂಲ.
- ಜನರ ದೈನಂದಿನ ಕಾರ್ಯವೈಖರಿಯೊಂದಿಗೆ ತ್ಯಾಜ್ಯ ಸಂಗ್ರಹಣೆ ಜೋಡಣೆ.
- ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಕಪ್ಪು ಚುಕ್ಕಿ (Black Spot) ರೂಪುಗೊಳ್ಳುವಿಕೆ ತಡೆಯುವುದು.
🤝 ಸಾರ್ವಜನಿಕರ ಸಹಕಾರಕ್ಕೆ ಕರೆ:
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಈ ಹೊಸ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಗರದ ನಾಗರಿಕರಿಂದ ಸಹಕಾರ ಕೋರಿದ್ದಾರೆ.
-
ಚುನಾವಣೆ20 hours agoಉಪಚುನಾವಣೆ ಕ್ಷಣಗಣನೆ: ದಾವಣಗೆರೆ-ಬಾಗಲಕೋಟೆಅಂತಿಮ ಸಿದ್ದತೆ ಹೇಗಿದೆ!
-
ಚುನಾವಣೆ5 hours agoತಮಿಳುನಾಡು ರಾಜಕೀಯಕ್ಕೆ ವಿಜಯ್ ಎಂಟ್ರಿ: ‘ಟಿವಿಕೆ’ ಭವಿಷ್ಯ ಏನು?
-
ದೇಶ20 hours agoಟ್ರಂಪ್ ಶಾಕ್ ಘೋಷಣೆ: ಇರಾನ್ನಲ್ಲಿ ಆಡಳಿತ ಬದಲಾವಣೆ!
-
ದೇಶ4 hours agoAAP ಒಳಗಲ್ಲಾಟ: ರಾಘವ್ ಚಡ್ಡಾ sidelined ಆಗಿರುವ ಹಿನ್ನಲೆ ಏನು?
-
ದೇಶ8 hours agoಬಿಕಿನಿ ಬ್ಲೌಸ್ ಜೊತೆ ಸೀರೆ: ಆಕಾಂಕ್ಷಾ ಪುರಿಗೆ ಟ್ರೋಲ್ ಮಳೆ!
-
ದೇಶ8 hours agoಪಾಕ್ PM ಪೋಸ್ಟ್ ಗೊಂದಲ: ‘ಡ್ರಾಫ್ಟ್’ ಬಿಟ್ಟು ಬಿಟ್ಟ ತಪ್ಪು ವೈರಲ್!
-
ದೇಶ9 hours agoBeauty Tips : ಟ್ಯಾನಿಂಗ್ ಸಮಸ್ಯೆಗೆ ಮನೆಮದ್ದು: ಅರಿಶಿನದ ಅದ್ಭುತ ಪ್ರಯೋಜನ
-
ಚುನಾವಣೆ23 hours agoWest Bengal Election 2026 : ದೇಶದ ಗಮನ ಸೆಳೆದ ಭವಾನಿಪುರ ಚುನಾವಣೆ
