Blog

ಸಾರ್ವಜನಿಕ ಚುಂಬನ ಪಾಕ್ ಮಾಜಿ ರಾಷ್ಟ್ರಪತಿ ಹೇಳಿದ್ದೇನು?

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಥಮ ಮಹಿಳೆ ಬುಶ್ರಾ ಬೀಬಿ ಅವರು ಓರ್ವ ವ್ಯಕ್ತಯೊಂಗಿಗೆ ಚುಂಬನದ ಕುರಿತು ಮಾತನಾಡುತ್ತಿರವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಈ ಕುರಿತು ಫ್ಯಾಕ್ಟ್ ಚೆಕ್ ಮಾಡಲಾಗಿದ್ದು ಇದು ಸುಳ್ಳು ಎಂಬುದು ಬಹಿರಂಗವಾಗಿದೆ,
ಮೇ.26ರಂದು ಮೇಹರ್ ಶಾ ಎಂಬಾತ ಟ್ವಟರ್‍ನಲ್ಲಿ ಬುಶ್ರಾ ಬೀಬಿ ಅವರು ಚುಂಬನದ ಕುರಿತು ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಅಲ್ಲದೇ ಉರ್ದು ಭಾಷೆಯಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ, ಈ ವಿಡಿಯೋದ ಅಸಲಿ ಸತ್ಯ ಹೊರಬಿದ್ದಿದ್ದು ಬುಶ್ರಾ ಬೀಬಿಯಂತಿರುವ ಯುಥಿಯಾನ್‍ನ ಮಹಿಳೆಯ ವಿಡಿಯೋ ಇದಾಗಿದೆ, ಬೇರೆ ಮಹಿಳೆಯ ದೇಹದ ಮೇಲೆ ಬುಶ್ರಾ ಬೀಬಿಯ ಮುಖವನ್ನು ಮಾರ್ಫ್ ಮಾಡಿ ವಿಡಿಯೋ ಎಡಿಟ್ ಮಾಡಲಾಗಿದೆ,
ವಿಡಿಯೋ ಆರಂಭದಲ್ಲಿ ಗ್ಲಿಚ್ ಆಗಿರುವುದನ್ನು ನಾವು ಗಮನಿಸಬಹುದು, ಕೆಲವು ಸೆಕೆಂಡ್‍ಗಳ ನಂತರ ಬೀಬಿಯ ಮುಖ ಮಾಯಾವಾಗಿದೆ, ಅಲ್ಲದೇ ವೈರಲ್ ಮಾಡುವ ಉದ್ದೇಶದಿಂದ ಬುಶ್ರಾ ಅವರ ಮುಖವನ್ನು ಮಾರ್ಫ್ ಮಾಡಲಾಗಿದ ಎಂಬುದು ಫ್ಯಾಕ್ಟ್ ಚೆಕ್‍ನಿಂದ ಗೊತ್ತಾಗಿದೆ,

Trending

Exit mobile version