ದೇಶ

ಆಸ್ಪತ್ರೆಯಾದ ಬಸ್ : ವಾಹನದಲ್ಲೇ ಆಯ್ತು ಡೆಲಿವರಿ!

ಕೇರಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗಭೀಣಿ ಬಸ್‍ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಕೆಆರ್‍ಆರ್‍ಟಿಸಿ ಬಸ್‍ನಲ್ಲಿ ನಡೆದಿದೆ,
ಪತಿಯೊಂದಿಗೆ ತ್ರಿಶೂರ್‍ನಿಂದ ಕೇರಳಿಕ್ಕೋಡ್‍ಗೆ ಬಸ್‍ನಲ್ಲಿ ಪ್ರಯಾಣಸುತ್ತಿದ್ದ ಮಹಿಳೆಗೆ ಪೆರಮಂಗಲಂ ದಾಟುತ್ತಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ, ತಕ್ಷಣವೇ ಅಲರ್ಟ್ ಆದ ಬಸ್ ಚಾಲಕ ಮಾರ್ಗವನ್ನು ಬದಲಾಯಿಸಿ ಅಮಲಾ ಆಸ್ಪತ್ರೆಯ ಕಡೆಯ ಹೊರಟರು,
ಅಷ್ಟೊತ್ತಿಗಗಲೇ ಮಹಿಳೆ ಹೆರಿಗೆಯ ಹಂತದಲ್ಲಿದ್ದಳು
ಆಸ್ಪತ್ರೆಯನ್ನು ತಲುಪಿದ ನಂತರ ಪ್ರಯಾಣಿಕರನ್ನು ಕೆಳೆಗಿಸಲಾಯಿತು, ಅಮಲಾ ಆಸ್ಪತ್ರೆಯ ವೈದ್ಯರು ದಾದಿಯರು ಬಸ್‍ನೊಳಗೆ ಹೆರಿಗೆ ಮಾಡಿಸಿದ್ದಾರೆ, ಗಭೀಣಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ನಂತರ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,
ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ, ಬಸ್ ಚಾಲಕನ ಸಮಯಪ್ರಜ್ಞಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ,

Trending

Exit mobile version