ಸಿನಿಮಾ
ಚೆನ್ನೈ ರಸ್ತೆಯಲ್ಲಿ ಸಂಚಲನ ಮೂಡಿಸಿದ ಹೈ ಟೆಕ್ ರೋಬೊ ಕಾರ್ ಬುಜ್ಜಿ!

ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ ಸೇರಿ ಅನೇಕ ದೊಡ್ಡ ದೊಡ್ಡ ತಾರಾಗಣ ಹೊಂದಿರುವ ಬಹು ನಿರೀಕ್ಷಿತ ಕಲ್ಕಿ 2898 ಎಡಿ ಚಿತ್ರದಲ್ಲಿ ಇನ್ನೊಂದು ಅಚ್ಚರಿ ಕಾದಿದೆ,
ವಿಶೇಷವಾಗಿ ಕಲ್ಕಿ ಚಿತ್ರಕ್ಕಾಗಿ ತಯಾರಿಸಲ್ಪಟ್ಟ ಹೈಟೆಕ್ ರೋಬೊ ಕಾರ್ ಬುಜ್ಜಿ ಚೆನ್ನೈ ರಸ್ತೆಯಲ್ಲಿ ಸಂಚರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ, ಈ ಕಾರು ಈಗ ಸ್ಟಾರ್ ನಟರ ಮಟ್ಟಕ್ಕೆ ಫೇಮಸ್ ಆಗಿದ್ದು ಕಾರಿನ ಡಿಸೈನ್, ಲುಕ್ಗೆ ಜನ ಫಿದಾ ಆಗಿದ್ದಾರೆ,
ಭಾರತೀಯ ಸಿನಿಮಾ ರಂಗದಲ್ಲೇ ಮೊದಲ ಬಾರಿಗೆ ಮ್ಯಾನ್ಮೇಡ್ ಸೂಪರ್ಕಾರ್ ಬುಜ್ಜಿಯನ್ನು ಪರಿಚಯಿಸಲಾಗುತ್ತಿದ್ದು ಚಿತ್ರದ ರಿಲೀಸ್ಗೆ ಕೆಲವು ವಾರಗಳಷ್ಟೇ ಬಾಕಿ ಉಳಿದಿದೆ, ಹೀಗಾಗಿ ಬುಜ್ಜಿ ಮೂಲಕ ಚಿತ್ರದ ಪ್ರಮೋಷನ್ ಕೂಡ ನಡೆಸಲಾಗುತ್ತಿದೆ, ಈ ಮೊದಲು ಹೈದರಾಬಾದ್ನಲ್ಲಿ ನಟ ಪ್ರಭಾಸ್ ಈ ಕಾರು ಚಲಾಯಿಸಿ ಸೆನ್ಸೇಶನ ಕ್ರಿಯೇಟ್ ಮಾಡಿದ್ದರು, ಈಗ ಚೆನ್ನೈನಲ್ಲಿ ಹುಚ್ಚಿಬ್ಬಿಸಿದ್ದು ಕಾರಿನ ತಯಾರಕರು ಭಾರತದಾದ್ಯಾಂತ ಈ ಕಾರಿನ ಟೂರ್ ನಡೆಸಲು ಚಿಂತನೆ ನಡೆಸಿದ್ದಾರೆ