ದೇಶ
ತಪ್ಪೊಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಪ್ರಜ್ವಲ್ ಗೆ ಸಂಕಷ್ಟ – ಎರಡು ಆಯಾಮಗಳಲ್ಲಿ ತನಿಖೆ!

ಬೆಂಗಳೂರು: ಲೈಂಗಿಕ ಹಗರಣದಲ್ಲಿ ದೇಶ ಬಿಟ್ಟು ತಲೆಮರೆಸಿಕೊಂಡಿದ್ದ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನನ್ನೂ ಕೊನೆಗೂ ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಇಂದು ವಿಚಾರಣೆಗೆ ಒಳಪಡಿಸಲಿದ್ದಾರೆ,
ಪ್ರಮುಖ ಎರಡು ಆಯಾಮಗಳಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ, ಒಂದು ವೇಳೆ ಪ್ರಜ್ವಲ್ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿ ತನ್ನನ್ನು ರಾಜಕೀಯವಾಗಿ ಮುಗಿಸಲು ಈ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿಕೊಂಡರೆ, ಎಸ್‌ಐಟಿ ಅಧಿಕಾರಿಗಳ ವಿಚಾರಣೆ ಆಯಾಮ ಬದಲಾಗಲಿದೆ, ಈ ರೀತಿ ಹೇಳಿಕೆ ನೀಡಿದರೆ ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆ ಹಾಗೂ ಈಗಾಗಲೇ ವೈರಲ್ ಆಗಿರುವ ವಿಡಿಯೋಗಳಲ್ಲಿನ ಪ್ರಜ್ವಲ್ ಧ್ವನಿಯನ್ನು ಪರೀಶಿಲಿಸಲು ಮುಂದಾಗಬಹುದು,
ಮತ್ತೊAದಡೆ ಪ್ರಜ್ವಲ್ ತನ್ನ ತಪ್ಪು ಒಪ್ಪಿಕೊಂಡರೆ ಎಸ್‌ಐಟಿ ತನಿಖೆ ದಾರಿ ಸುಲಭವಾಗಬಹುದು, ಈಗಾಗಲೇ ದೂರು ನೀಡಿರವು ಮಹಿಳೆಯರ ಹೇಳಿಕೆಗಳು ಹಾಗೂ ಪ್ರಜ್ವಲ್ ರೇವಣ್ಣ ಮೊಬೈಲ್ ವಶಕ್ಕೆ ಪಡೆದು ಅದರಲ್ಲಿ ಸಾಕ್ಷಿಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು, ಇದರ ಜೊತೆಗೆ ಲೈಂಗಿಕ ದೌರ್ಜನ್ಯ ವೇಳೆ ತಾನು ವಿಡಿಯೋ ರೆಕಾರ್ಡ್ ಮಾಡಲು ತಾನು ಬಳಸಿದ್ದ ಮೊಬೈಲ್‌ಗಾಗಿ ಎಸ್‌ಐಟಿ ತಂಡ ಹುಡುಕಾಟ ನಡೆಸಲಿದ್ದು, ವಿಡಿಯೋ ರೆಕಾರ್ಡ್ ಮಾಡಿದ್ದ ಮೊಬೈಲ್ ನೀಡುವಂತೆ ಪ್ರಜ್ವಲ್ ರೇವಣ್ಣಗೆ ಅಧಿಕಾರಿಗಳು ತಾಕೀತು ಮಾಡಲಿದ್ದಾರೆ,