ದೇಶ
6 ಬಾರಿ ExitPoll ಲೆಕ್ಕಾಚಾರ ತಲೆಕೆಳಗಾಗಿತ್ತು.. ಲೋಕಸಭಾ ಚುನಾವಣೆಯ ಭವಿಷ್ಯ ನಿಜವಾಗುತ್ತಾ?
ನವದೆಹಲಿ: ಕಳೆದ 2 ತಿಂಗಳಿಂದ ಇಡೀ ದೇಶಾದ್ಯಂತ ನಡೆಯುತ್ತಿದ್ದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ಬಂದಿದೆ. ಇಂದು ಅತಿ ದೊಡ್ಡ ಚುನಾವಣಾ ಹಬ್ಬದ 7ನೇ ಹಂತದ ಮತದಾನ ಮುಕ್ತಾಯವಾಗುತ್ತಿದೆ. ಜೂನ್ 04ರಂದು 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ.
ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರಗಳು ನಡೆಯುತ್ತಿದ್ದು, ಇಂದು ರಾತ್ರಿ ಬಹು ನಿರೀಕ್ಷಿತ ಎಕ್ಸಿಟ್ ಪೋಲ್ ಭವಿಷ್ಯ ಹೊರಬೀಳುತ್ತಿದೆ. ಇಂದು ಸಂಜೆ 6 ಗಂಟೆಗೆ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಲಿದೆ. ಇದಾದ ಬಳಿಕ ಅಂದ್ರೆ 6.30ರಿಂದ ಚುನಾವಣಾ ಪೂರ್ವ ಫಲಿತಾಂಶ ಹೊರ ಬೀಳುತ್ತಿದೆ. ಸದ್ಯ ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ರಿಸಲ್ಟ್ ಇಡೀ ದೇಶದ ಗಮನ ಸೆಳೆದಿದೆ. ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗ ಎಕ್ಸಿಟ್ ಪೋಲ್ ಎಷ್ಟು ಸರಿ ಅನ್ನೋದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಇಂದಿನ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನಾಯಕರು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಎಕ್ಸಿಟ್ ಪೋಲ್ ಪಕ್ಕಾ ರಿಸಲ್ಟ್ ಅಲ್ಲ. ಹೀಗಾಗಿ ಎಕ್ಸಿಟ್ ಪೋಲ್ ಚರ್ಚೆಯಿಂದ ದೂರ ಉಳಿಯಲು ನಿರ್ಧಾರ ಮಾಡಿದೆ.
ಅಟಲ್ ಸರ್ಕಾರದ ಭವಿಷ್ಯ!
2004ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ NDA ನಾಯಕರು ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. ಆಗ ಇಂಡಿಯಾ ಶೈನಿಂಗ್ ಅನ್ನೋ ಸ್ಲೋಗನ್‌ನಲ್ಲಿ ಚುನಾವಣೆ ಎದುರಿಸಿದ NDAಗೆ ಎಕ್ಸಿಟ್ ಪೋಲ್‌ನಲ್ಲಿ 240-275 ಕ್ಷೇತ್ರವನ್ನು ಗೆಲ್ಲಬಹುದು ಎಂದು ಹೇಳಲಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ NDA ಕೇವಲ 187 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ನೇತೃತ್ವದ UPA ಮಿತ್ರಕೂಟ ಅಧಿಕಾರಕ್ಕೆ ಬಂದು ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆದರು.
2014ರ ಚುನಾವಣಾ ಲೆಕ್ಕಾಚಾರ
2014ರಲ್ಲೂ ಹಲವು ಮತದಾನೋತ್ತರ ಚುನಾವಣಾ ಭವಿಷ್ಯದ ಲೆಕ್ಕಾಚಾರ ತಪ್ಪಾಗಿತ್ತು. ಲೋಕಸಭಾ ಚುನಾವಣೆ ಮುಗಿದ ಮೇಲೆ ಬಿಜೆಪಿ ನೇತೃತ್ವದ NDA ಅಧಿಕಾರಕ್ಕೆ ಬರುತ್ತೆ. ಆದರೆ ಹಲವು ಎಕ್ಸಿಟ್ ಪೋಲ್‌ಗಳಲ್ಲಿ NDA 261ರಿಂದ 289 ಸ್ಥಾನಗಳನ್ನು ಗೆಲ್ಲಲಿದೆ ಎಂದಿತ್ತು. ಆದರೆ ಮತದಾರರ ತೀರ್ಪು ಹೊರ ಬಂದಾಗ NDA 336 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿ ಪಕ್ಷವೇ ಬಹುಮತದ ದಾಖಲೆ ಬರೆದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಕೇವಲ 44 ಕ್ಷೇತ್ರಗಳಿಗೆ ಕುಸಿದಿತ್ತು.
ಉತ್ತರ ಪ್ರದೇಶ ಚುನಾವಣೆ
2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಭವಿಷ್ಯ ಅತಂತ್ರ ರಿಸಲ್ಟ್ ಬರಲಿದೆ ಎನ್ನಲಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 325 ಕ್ಷೇತ್ರಗಳಲ್ಲಿ ಗೆದ್ದು ದಿಗ್ವಿಜಯ ದಾಖಲಿಸಿತ್ತು.
ಬಿಹಾರ ಚುನಾವಣೆ
2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಆಗಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಈ ಬಾರಿ ಬಿಹಾರದಲ್ಲಿ ಯಾರಿಗೂ ಬಹುಮತ ಬರೋದಿಲ್ಲ ಎನ್ನಲಾಗಿತ್ತು. ಆದರೆ ಫಲಿತಾಂಶದಲ್ಲಿ RJD-JDU-ಕಾಂಗ್ರೆಸ್ ಮಿತ್ರಕೂಟ ಸುಲಭವಾಗಿ ಬಹುಮತ ಸಾಧಿಸಿತ್ತು. RJD ಅತಿಹೆಚ್ಚು ಕ್ಷೇತ್ರಗಳನ್ನು ಗೆದ್ದ ಮೊದಲ ಪಕ್ಷವಾಗಿ ಹೊರ ಹೊಮ್ಮಿತ್ತು.
ದೆಹಲಿಯ ಫಲಿತಾಂಶ
2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಲೆಕ್ಕಾಚಾರದಲ್ಲಿ ಎಎಪಿ ಪಕ್ಷಕ್ಕೆ ಬಹುಮತ ಸಿಗಲಿದೆ ಎನ್ನಲಾಗಿತ್ತು. 70 ವಿಧಾನಸಭಾ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚಿನ ಆಮ್ ಆದ್ಮಿ ಪಕ್ಷ 50ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಬಹುದು ಎಂದಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ 70 ರಲ್ಲಿ AAP 67 ಕ್ಷೇತ್ರಗಳಲ್ಲಿ ಗೆದ್ದು ಎಲ್ಲರಿಗೂ ಶಾಕ್ ಕೊಟ್ಟಿತ್ತು. ಆಪ್ ಪಕ್ಷದ ಈ ವಿಕ್ಟರಿಯನ್ನ ಯಾವ ಮತದಾನೋತ್ತರ ಸಮೀಕ್ಷೆಯೂ ನಿರೀಕ್ಷೆ ಮಾಡಿರಲಿಲ್ಲ.
ಛತ್ತೀಸ್‌ಗಢ ಚುನಾವಣೆ
2023ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲೂ ಎಕ್ಸಿಟ್ ಪೋಲ್ ಭವಿಷ್ಯ ನಿರಾಸೆ ತಂದಿತ್ತು. ಮತದಾನೋತ್ತರ ಸಮೀಕ್ಷೆಯಲ್ಲಿ ಛತ್ತೀಸ್‌ಗಢವನ್ನು ಕಾಂಗ್ರೆಸ್ ಗೆಲ್ಲಬಹುದು ಎನ್ನಲಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಗೆದ್ದು ಬೀಗಿತು.
ಕ್ರೀಡೆ
IPL 2026ಕ್ಕೆ BCCI ಹೊಸ ನಿಯಮ: ಬೌಂಡರಿ ಬಳಿ ‘ಎಕ್ಸ್ಟ್ರಾ’ ಆಟಗಾರರಿಗೆ ಎಂಟ್ರಿ ಬ್ಯಾನ್!
ಮುಂಬೈ: Indian Premier League (IPL 2026) ಮುನ್ನ ಪಂದ್ಯಗಳ ಶಿಸ್ತು ಕಾಪಾಡಲು Board of Control for Cricket in India ಮಹತ್ವದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮೈದಾನದಲ್ಲಿ ಕಂಡುಬರುವ ಗೊಂದಲ ಮತ್ತು ಅನಗತ್ಯ ಆಟಗಾರರ ಓಡಾಟವನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ನಿಯಮದ ಪ್ರಕಾರ, ಪಂದ್ಯಕ್ಕೆ ಮುನ್ನ ತಂಡದ ಪಟ್ಟಿಯಲ್ಲಿ ಹೆಸರು ಪಡೆದಿರುವ 16 ಆಟಗಾರರು (ಪ್ಲೇಯಿಂಗ್ 11 + 5 ಬದಲಿ) ಮಾತ್ರ ಮೈದಾನಕ್ಕೆ ಪ್ರವೇಶಿಸಬಹುದು. ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ಸಾಗಿಸುವುದು ಈ ಆಟಗಾರರ ಜವಾಬ್ದಾರಿ ಆಗಿರುತ್ತದೆ.
ಇದಕ್ಕೂ ಮೊದಲು ಎಕ್ಸ್ಟ್ರಾ ಸ್ಕ್ವಾಡ್ ಸದಸ್ಯರು ಸಹ ಮೈದಾನಕ್ಕೆ ಬಂದು ಸಹಾಯ ಮಾಡುತ್ತಿದ್ದರು. ಆದರೆ ಇನ್ನುಮುಂದೆ ಅವರಿಗೆ ಮೈದಾನ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಅವರು ಕಡ್ಡಾಯವಾಗಿ ಡಗೌಟ್‌ನಲ್ಲಿಯೇ ಇರಬೇಕು.
ಇದಲ್ಲದೆ, ಬೌಂಡರಿ ಲೈನ್ ಬಳಿ ಇರುವ ಆಟಗಾರರ ಸಂಖ್ಯೆಯನ್ನೂ ನಿಯಂತ್ರಿಸಲಾಗಿದೆ. ಯಾವುದೇ ಸಮಯದಲ್ಲಿ ಕೇವಲ 5 ಆಟಗಾರರಿಗೆ ಮಾತ್ರ ಬೌಂಡರಿ ಬಳಿ ಇರಲು ಅವಕಾಶವಿದೆ. ಅವರು ‘ಬಿಬ್ಸ್’ ಧರಿಸಿಕೊಂಡು ಚೆಂಡು ಸಂಗ್ರಹಿಸುವುದು ಅಥವಾ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿರಬೇಕು.
ಈ ನಿಯಮಗಳ ಮುಖ್ಯ ಉದ್ದೇಶ ಮೈದಾನದಲ್ಲಿ ಶಿಸ್ತು ಕಾಪಾಡುವುದು, ಅನಗತ್ಯ ಸಮಯ ವ್ಯಯ ತಡೆಯುವುದು ಹಾಗೂ ಟಿವಿ ಪ್ರಸಾರದ ಗುಣಮಟ್ಟವನ್ನು ಉತ್ತಮಗೊಳಿಸುವುದಾಗಿದೆ.
ಒಟ್ಟಿನಲ್ಲಿ, IPL 2026ನಲ್ಲಿ ಈ ಹೊಸ ನಿಯಮಗಳು ಪಂದ್ಯಗಳ ರೂಪವನ್ನು ಬದಲಾಯಿಸುವ ಸಾಧ್ಯತೆ ಇದ್ದು, ತಂಡಗಳು ತಮ್ಮ ತಂತ್ರವನ್ನು ಬದಲಾಯಿಸಬೇಕಾಗಬಹುದು.
ದೇಶ
“ನ್ಯಾಯ ಸಿಗುವವರೆಗೂ ಕೂದಲು ಬಾಚಲ್ಲ!” – ತಾಯಿಯ ಶಪಥ ರಾಜಕೀಯಕ್ಕೆ
ಕೋಲ್ಕತ: RG Kar Medical College and Hospital ನಲ್ಲಿ ನಡೆದ ಅತ್ಯಾಚಾರ-ಕೊಲೆ ಪ್ರಕರಣ ಮತ್ತೆ ರಾಜಕೀಯ ಕಾವು ಪಡೆದಿದೆ. ಮೃತ ಟ್ರೈನಿ ವೈದ್ಯೆಯ ತಾಯಿ ರತ್ನ ದೇಬ್ನಾಥ್, ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತಾ ಇದೀಗ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿರುವುದು ಸಂಚಲನ ಮೂಡಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ Mamata Banerjee ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಕರಣದ ದಿಕ್ಕು ತಪ್ಪಿಸಲು ಸರ್ಕಾರವೇ ಪ್ರಯತ್ನಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ನಾನು ಕೂದಲು ಬಾಚಿಕೊಳ್ಳುವುದಿಲ್ಲ” ಎಂದು ಅವರು ಶಪಥ ಮಾಡಿದ್ದಾರೆ.
2024ರ ಆಗಸ್ಟ್ 9ರಂದು ಕೋಲ್ಕತದ ವೈದ್ಯಕೀಯ ಕಾಲೇಜಿನಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಾವಿರಾರು ವೈದ್ಯರು ಮತ್ತು ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು.
ಈ ಪ್ರಕರಣದ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ತನಿಖೆಯನ್ನು Central Bureau of Investigation (CBI) ಗೆ ವರ್ಗಾಯಿಸಿತ್ತು. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಹಲವರನ್ನು ಬಂಧಿಸಲಾಗಿದೆ.
ಇದೀಗ ರತ್ನ ದೇಬ್ನಾಥ್ ಅವರು Bharatiya Janata Party ಪರವಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ನೇರ ಪೈಪೋಟಿಗೆ ಇಳಿದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ 294 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಫಲಿತಾಂಶ ಮೇ 4ರಂದು ಹೊರಬೀಳಲಿದೆ. ಈ ನಡುವೆ, ನ್ಯಾಯಕ್ಕಾಗಿ ತಾಯಿಯ ಹೋರಾಟ ರಾಜಕೀಯ ಅಂಗಳಕ್ಕೂ ವಿಸ್ತರಿಸಿದ್ದು, ಇದು ಮತದಾರರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಕ್ರೀಡೆ
ಕೊಹ್ಲಿ ಹೋಲಿಕೆಗೆ ಬಾಬರ್ ಅಜಮ್ ಕಿಡಿ: ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ
ಕರಾಚಿ: ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ Babar Azam ಮತ್ತೆ ಸುದ್ದಿಯಲ್ಲಿದ್ದಾರೆ. Pakistan Super League (PSL 2026) ವೇಳೆ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು ವೈರಲ್ ಆಗಿದೆ.
ಪೇಶಾವರ್ ಝಲ್ಮಿ ತಂಡದ ನಾಯಕನಾಗಿರುವ ಬಾಬರ್, ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧದ ಪಂದ್ಯದಲ್ಲಿ 43 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಪಂದ್ಯವನ್ನು ಕೊನೆಗೊಳಿಸದೆ ಔಟ್ ಆದ ಬಗ್ಗೆ ಪ್ರಶ್ನೆ ಕೇಳಲಾಯಿತು. ವಿಶೇಷವಾಗಿ, ಅವರನ್ನು Virat Kohli ಜತೆ ಹೋಲಿಸಿ ಪ್ರಶ್ನೆ ಕೇಳಿದಾಗ ಬಾಬರ್ ಅಸಮಾಧಾನ ವ್ಯಕ್ತಪಡಿಸಿದರು.
“ಈ ಹೋಲಿಕೆಗಳನ್ನು ಇಲ್ಲಿ ಮುಗಿಸಿಬಿಡಿ. ನಿಮ್ಮಲ್ಲೇ ಇಟ್ಟುಕೊಳ್ಳಿ. ಪಂದ್ಯವನ್ನು ಫಿನಿಶ್ ಮಾಡಿಲ್ಲ ಎಂಬುದು ತಪ್ಪು ಕಲ್ಪನೆ” ಎಂದು ಅವರು ಸ್ಪಷ್ಟವಾಗಿ ಹೇಳಿದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬಾಬರ್ ಅಜಮ್ ಅವರನ್ನು ಪಾಕಿಸ್ತಾನದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾದರೂ, ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಈ PSL ಸೀಸನ್‌ನಲ್ಲಿ ಅವರು ಎರಡು ಪಂದ್ಯಗಳಲ್ಲಿ 82 ರನ್ ಗಳಿಸಿದ್ದರೂ, ಸ್ಟ್ರೈಕ್ ರೇಟ್ ಮತ್ತು ಬೌಂಡರಿಗಳ ಕೊರತೆ ಚರ್ಚೆಗೆ ಕಾರಣವಾಗಿದೆ.
ಒಟ್ಟಿನಲ್ಲಿ, ಕೊಹ್ಲಿ ಹೋಲಿಕೆ ಪ್ರಶ್ನೆ ಮತ್ತೆ ಬಾಬರ್ ಮೇಲೆ ಒತ್ತಡ ಹೆಚ್ಚಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
-
ದೇಶ11 hours agoಇಸ್ಲಾಮಾಬಾದ್ನಲ್ಲಿ ಅಮೆರಿಕಾ-ಇರಾನ್ ಶಾಂತಿ ಮಾತುಕತೆ: 2 ದಿನ ಸಾರ್ವಜನಿಕ ರಜೆ ಘೋಷಣೆ
-
ಚುನಾವಣೆ15 hours agoತಮಿಳುನಾಡು ರಾಜಕೀಯಕ್ಕೆ ವಿಜಯ್ ಎಂಟ್ರಿ: ‘ಟಿವಿಕೆ’ ಭವಿಷ್ಯ ಏನು?
-
ದೇಶ19 hours agoBeauty Tips : ಟ್ಯಾನಿಂಗ್ ಸಮಸ್ಯೆಗೆ ಮನೆಮದ್ದು: ಅರಿಶಿನದ ಅದ್ಭುತ ಪ್ರಯೋಜನ
-
ದೇಶ15 hours agoAAP ಒಳಗಲ್ಲಾಟ: ರಾಘವ್ ಚಡ್ಡಾ sidelined ಆಗಿರುವ ಹಿನ್ನಲೆ ಏನು?
-
ಕ್ರೀಡೆ11 hours agoಕೊಹ್ಲಿ ಹೋಲಿಕೆಗೆ ಬಾಬರ್ ಅಜಮ್ ಕಿಡಿ: ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ
-
ದೇಶ19 hours agoಬಿಕಿನಿ ಬ್ಲೌಸ್ ಜೊತೆ ಸೀರೆ: ಆಕಾಂಕ್ಷಾ ಪುರಿಗೆ ಟ್ರೋಲ್ ಮಳೆ!
-
ದೇಶ11 hours agoಪಾಕಿಸ್ತಾನ ಮಧ್ಯಸ್ಥಿಕೆ ವಿರುದ್ಧ ಇಸ್ರೇಲ್ ಆಕ್ಷೇಪ: ಅಮೆರಿಕಾ-ಇರಾನ್ ಮಾತುಕತೆಗೆ ಹೊಸ ತಿರುವು
-
ದೇಶ11 hours ago“ನ್ಯಾಯ ಸಿಗುವವರೆಗೂ ಕೂದಲು ಬಾಚಲ್ಲ!” – ತಾಯಿಯ ಶಪಥ ರಾಜಕೀಯಕ್ಕೆ
