ಚುನಾವಣೆ

ಮತ್ತೊಮ್ಮೆ ಬಿಜೆಪಿ 303 ಸ್ಧಾನಗಳನ್ನು ಗೆಲ್ಲಬಹುದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್

ನವದೆಹಲಿ: ಈ ಬಾರಿಯೂ ಬಿಜೆಪಿ ನೇತೃತ್ವದ ಎನ್‍ಡಿಎ ಗೆಲುವು ಖಚಿತ ಎಂದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ್ದಾರೆ
ಎಕ್ಸಿಟ್ ಪೋಲ್ ಫಲಿತಾಂಶಗಳ ಬಿಡುಗಡೆ ಮುನ್ನ ಮಾತನಾಡಿದ ಅವರು ಮತ್ತೊಮ್ಮೆ ಬಿಜೆಪಿ 303 ಸ್ಧಾನಗಳನ್ನು ಗೆಲ್ಲಬಹುದು,
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಗೆದ್ದಿರುವ ಸ್ಧಾನಗಳ ಸಂಖ್ಯೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಕೂಡ ಆಗಬಹುದು, ನನ್ನ ಅಂದಾಜಿನ ಪ್ರಕಾರ ಬಿಜೆಪಿ ಹಿಂದಿನ ಅಥವಾ ಸ್ವಲ್ಪ ಹೆಚ್ಚಿನ ಸಂಖ್ಯೆಗಳೊಂದಿಗೆ ಅಧಿಕಾರಕ್ಕೆ ಹಿಂತರುಗಲಿದೆ ಎಂದಿದ್ದಾರೆ
ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಸ್ಧಾನಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಇಲ್ಲ, ಅದರೆ ಭಾರತದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಿಂದ ಪಕ್ಷ ಸಾಕಷ್ಟು ಬೆಂಬಲ ಗಳಿಸಲಿದೆ ಎಂದು ಹೇಳಿದರು,
ನಾವು ಕೆಲವು ಮೂಲಭೂತ ಅಂಶಗಳನ್ನು ನೋಡಬೇಕು, ಅಧಿಕಾರದಲ್ಲಿರುವ ಸರ್ಕಾರ ಮತ್ತು ಅದರ ನಾಯಕನ ವಿರುದ್ಧ ಕೋಪವಿದ್ದರೆ, ಪರ್ಯಾಯವಿದೆಯೇ ಎಂಬುದನ್ನು ಲೆಕ್ಕಿಸಿದೆ,ಜನರು ಅವರ ವಿರುದ್ಧ ಮತ ಹಾಕುವ ಸಾಧ್ಯತೆಯಿದೆ, ಅದರೆ ಇಲ್ಲಿಯವರೆಗೆ ಅಂತಹ ಅಲೆಯನ್ನು ನಾವು ಕಂಡಿಲ್ಲ, ಮೋದಿ ವಿರುದ್ಧ ವ್ಯಾಪಕವಾದ ನಿರಾಶೆ, ಈಡೇರದ ಅಕಾಂಕ್ಷೆಗಳು ಇರಬಹುದು, ಅದರೆ ವ್ಯಾಪಕವಾದ ಕೋಪವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

Trending

Exit mobile version